Bigg Boss 19: ಬಿಗ್ ಬಾಸ್ ಅಭಿಮಾನಿಗಳಿಗೆ ಗುಡ್‌ನ್ಯೂಸ್; ಸೀಸನ್ 19 ಹೋಸ್ಟ್ ಮಾಡೋದು ಇವರೇ!
ಹಿಂದಿ ಬಿಗ್‌ಬಾಸ್ ಸೀಸನ್ 18 ಯಶಸ್ವಿಯಾಗಿ ಜನ ಮನ ಗೆದ್ದಿದೆ. ಮುಂದಿನ ಸೀಸನ್ ಯಾವಾಗ ಎಂದು ಕಾಯುತ್ತಿದ್ದ ಬಿಗ್ ಬಾಸ್ ಅಭಿಮಾನಿಗಳಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಇತ್ತೀಚೆಗಷ್ಟೇ ಕಲರ್ಸ್ ಟಿವಿ ವಾಹಿನಿ ಮತ್ತು ಕಾರ್ಯಕ್ರಮದ ನಿರ್ಮಾಣ ಸಂಸ್ಥೆ ಬನಿಜಯ್ ಏಷ್ಯಾ ನಡುವೆ ವೈಮನಸ್ಸು ಏರ್ಪಟ್ಟಿದ್ದು ಬಿಗ್ ಬಾಸ್ ಸೀಸನ್ ರದ್ದಾಗುತ್ತೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಕಳೆದ ಸೀಸನ್ ಅಂತ್ಯದ ವೇಳೆಗೆ ಸಲ್ಮಾನ್ ಖಾನ್ ಮುಂದಿನ ಬಾರಿ ಬಿಗ್ ಬಾಸ್ ಹೋಸ್ಟ್ ಮಾಡುವುದಿಲ್ಲ ಎಂಬ ಮಾತು ಕೇಳಿಬಂದಿತ್ತು.


ನವದೆಹಲಿ: ಬಿಗ್ ರಿಯಾಲಿಟಿ ಶೋ ನಲ್ಲಿ ಒಂದಾದ ಹಿಂದಿ ಬಿಗ್ ಬಾಸ್ ಸೀಸನ್ 18 ಯಶಸ್ವಿಯಾಗಿ ಜನ ಮನ ಗೆದ್ದಿದೆ. ಮುಂದಿನ ಸೀಸನ್ ಯಾವಾಗ ಎಂದು ಕಾಯುತ್ತಿದ್ದ ಬಿಗ್ ಬಾಸ್ ಅಭಿಮಾನಿಗಳಿಗೆ ಇದೀಗ ಶುಭ ಸುದ್ದಿ ಸಿಕ್ಕಿದೆ. ಇತ್ತೀಚೆ ಗಷ್ಟೇ ಕಲರ್ಸ್ ಟಿವಿ ವಾಹಿನಿ ಮತ್ತು ಕಾರ್ಯಕ್ರಮದ ನಿರ್ಮಾಣ ಸಂಸ್ಥೆ ಬನಿಜಯ್ ಏಷ್ಯಾ ನಡುವೆ ವೈಮನಸ್ಸು ಏರ್ಪಟ್ಟಿದ್ದು ಬಿಗ್ ಬಾಸ್ ಸೀಸನ್ ರದ್ದಾಗುತ್ತೆ ಎಂಬ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ಕಳೆದ ಸೀಸನ್ ಅಂತ್ಯದ ವೇಳೆಗೆ ಸಲ್ಮಾನ್ ಖಾನ್ ಮುಂದಿನ ಬಾರಿ ಬಿಗ್ ಬಾಸ್ ಹೋಸ್ಟ್ ಮಾಡುವುದಿಲ್ಲ ಎಂಬ ಮಾತು ಕೇಳಿಬಂದಿತ್ತು. ಇದೀಗ 19ನೇ ಸೀಸನ್ (Bigg Boss19) ಬಗ್ಗೆ ಉಂಟಾದ ಎಲ್ಲ ಗೊಂದಲಕ್ಕೂ ತೆರೆ ಬಿದ್ದಿದೆ.
ನಟ ಸಲ್ಮಾನ್ ಖಾನ್ ಅವರು ಸಿನಿಮಾ ಮಾತ್ರವಲ್ಲದೆ ಬಿಗ್ ಬಾಸ್ ಶೋ ನಲ್ಲಿ ಕೂಡ ಹೆಚ್ಚು ಫೇಮ್ ಗಿಟ್ಟಿಸಿ ಕೊಂಡಿದ್ದಾರೆ. ಸಲ್ಮಾನ್ ಖಾನ್ ಬರ್ತಾರೆ ಅನ್ನುವ ಕಾರಣಕ್ಕೆ ಬಿಗ್ ಬಾಸ್ ವೀಕ್ಷಿಸುವ ಜನರೂ ಇದ್ದಾರೆ. ಇದೀಗ ಬಿಗ್ ಬಾಸ್ 19ನೇ ಆವೃತ್ತಿಗೂ ಸಲ್ಮಾನ್ ಖಾನ್ ಅವರನ್ನೇ ಹೋಸ್ಟ್ ಮಾಡಲು ಕಾರ್ಯಕ್ರಮ ಆಯೋಜಕರು ನಿರ್ಧಾರ ಕೈಗೊಂಡಿದ್ದಾರೆ. ಬಿಗ್ ಬಾಸ್ ಸೀಸನ್ 19 ಶೀಘ್ರವಾಗಿ ಆರಂಭವಾಗಲಿದ್ದು ಇದನ್ನು ಎಂಡೆಮೋಲ್ ಶೈನ್ ಇಂಡಿಯಾ ನಿರ್ಮಿಸಲಿದೆ ಎನ್ನಲಾಗಿದೆ..
ನಟ ಸಲ್ಮಾನ್ ಖಾನ್ ಸೀಸನ್ 19ರಲ್ಲಿಯೂ ಕಾಣಿಸಿಕೊಳ್ಳಲಿದ್ದು ಜೂನ್ ಅಂತ್ಯದಲ್ಲಿ ಅವರು ಮೊದಲ ಪ್ರೋಮೋ ಶೂಟ್ ಬಿಡುಗಡೆಯಾಗಲಿದೆ. ಬಿಗ್ ಬಾಸ್ ಥೀಮ್ ಸೇರಿದಂತೆ ಇತರ ರೂಪುರೇಶೆಗಳ ಕುರಿತು ಈಗಾಗಲೇ ಮಹತ್ವದ ಸಭೆ ನಡೆದಿದ್ದು ಜುಲೈನಲ್ಲಿ ಪ್ರಸಾರವಾಗುವ ಸಾಧ್ಯತೆಯಿದೆ ಎನ್ನಲಾಗಿದೆ. ಹಾಗಿದ್ದರೂ ಬಿಗ್ ಬಾಸ್ 19 ರ ಬಗ್ಗೆ ತಯಾರಕರಿಂದ ಅಧಿಕೃತ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಿದೆ.
ಸಿನಿಮಾ ಶೆಡ್ಯುಲ್ ಕಾರಣಗಳಿಂದ ನಟ ಸಲ್ಮಾನ್ ಖಾನ್ ಬಿಗ್ ಬಾಸ್ ಸೀಸನ್ 19 ಹೋಸ್ಟ್ ಮಾಡೊಲ್ಲ ಅನ್ನೋ ಮಾತು ಕೇಳಿಬಂದಿತ್ತು. ಆದರೆ ಇದೀಗ ಆ ಗೊಂದಲಕ್ಕೆ ತೆರೆ ಬಿದ್ದಿದೆ. 2010ರ ನಾಲ್ಕನೇ ಸೀಸನ್ ನಿಂದಲೂ ನಟ ಸಲ್ಮಾನ್ ಖಾನ್ ಬಿಗ್ ಬಾಸ್ ಅನ್ನು ಆಯೋಜಿಸುತ್ತಾ ಬಂದಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲದ ನಿರೂಪಣೆಯೊಂದಿಗೆ, ಸಲ್ಮಾನ್ ಖಾನ್ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಅಭಿಮಾನಿಗಳನ್ನು ರಂಜಿಸಿ ದ್ದಾರೆ. ಅವರ ನಿರೂಪಣಾ ಶೈಲಿಯು ಕಾರ್ಯಕ್ರಮದ ಜನಪ್ರಿಯತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ.
ಇದನ್ನು ಓದಿ: Salman Khan: ಅಂದಾಜ್ ಅಪ್ನಾ ಅಪ್ನಾ ಚಿತ್ರ ರೀ ರಿಲೀಸ್ ಬೆನ್ನಲ್ಲೇ ನಟ ಸಲ್ಮಾನ್ ಖಾನ್ ಹಾಟ್ ಫೋಟೊ ವೈರಲ್!
ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿಯೂ ಕಳೆದ ಸೀಸನ್ ನಲ್ಲಿ ನಟ ಕಿಚ್ಚ ಸುದೀಪ್ ಅವರು ಕೊನೆ ಆವೃತ್ತಿ ಎಂದು ಹೇಳಲಾಗಿದೆ. ಹಿಂದಿ ಬಿಗ್ ಬಾಸ್ ನಂತೆ ಕನ್ನಡದಲ್ಲೂ ಕಿಚ್ಚ ಮತ್ತೆ ಬಿಗ್ ಬಾಸ್ ಗೆ ಎಂಟ್ರಿ ಕೊಡಬಹುದಾ? ಎಂಬ ಚರ್ಚೆ ಸೋಶಿಯಲ್ ಮಿಡಿಯಾದಲ್ಲಿ ನಡೆಯುತ್ತಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುವುದು ಪಕ್ಕವಾಗಿದ್ದರೂ ಈ ಕಾರ್ಯಕ್ರಮ ಯಾವಾಗ ಆರಂಭ ವಾಗುತ್ತದೆ ಎಂಬುದು ಇನ್ನು ದೃಢವಾಗಿಲ್ಲ. ಹೀಗಾಗಿ ಮುಂದಿನ ದಿನದಲ್ಲಿ ಬಿಗ್ ಬಾಸ್ ಬಗ್ಗೆ ಮತ್ತಷ್ಟು ಅಪ್ಡೇಟ್ ಮಾಹಿತಿ ತಿಳಿದುಬರಲಿದೆ.