Manorama: ರಾಷ್ಟ್ರ ಪ್ರಶಸ್ತಿ ಗಳಿಸಿದ್ರೂ ಈ ನಟಿಯ ವೈಯಕ್ತಿಕ ಬದುಕಲ್ಲಿ ಆಗಿದ್ದು ಬಹು ದೊಡ್ಡ ದುರಂತ
ಮನೋರಮಾ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಗೌರವಾನ್ವಿತ ನಟಿಯರಲ್ಲಿ ಒಬ್ಬರು. 2002ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದ ಮನೋರಮಾ ತಮಿಳು ಮಾತ್ರವಲ್ಲದೆ ಮಲಯಾಳಂ, ಹಿಂದಿ, ತೆಲಗು ಚಿತ್ರಗಳಲ್ಲೂ ನಟನೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಹಾಸ್ಯ ಕಲಾವಿದೆಯಾಗಿ ಜನರನ್ನು ಮನರಂಜಿಸಿದ್ದ ಮನೋರಮಾ ಅವರ ವೈಯಕ್ತಿಕ ಜೀವನ ಬಹಳ ಕಷ್ಟದಿಂದ ಕೂಡಿತ್ತು.

Manorama


ಎಸ್ಎಸ್ಆರ್ ನಾಟಕ ಕಂಪನಿಯಲ್ಲಿ ಕಲಾವಿದರಾಗಿ ನಟಿಸುತ್ತಿದ್ದ ಮನೋರಮಾ 1958ರಲ್ಲಿ 'ಮಾಲಾಯಿತ್ತಾ ಮಾಂಗೈ' ತಮಿಳು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. 1963ರಲ್ಲಿ ʼಕೊಂಜುಮ್ ಕುಮಾರಿʼ ಎಂಬ ತಮಿಳು ಚಿತ್ರದ ಮೂಲಕ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡರು.

ಪ್ರೀತಿಸಿ ಮದುವೆಯಾದ ನಟಿ ಮನೋರಮಾ ಅವರನ್ನು ಮಗು ಜನಿಸಿದ 11ನೇ ದಿನವೇ ಕ್ಷುಲ್ಲಕ ಕಾರಣಕ್ಕಾಗಿ ಪತಿ ಬಿಟ್ಟು ಹೋದರು. ತನ್ನ ಬದುಕಿನಲ್ಲಿ ಇಂತಹ ಏಳು ಬೀಳು ಕಂಡರೂ ನಟಿ ಯಶಸ್ವಿ ಆಗಿ, ತಮ್ಮ ನಟನೆಯ ಮೂಲಕ ಖ್ಯಾತಿ ಗಳಿಸಿದರು.

ಮನೋರಮಾ ತಮ್ಮ ನಟನಾ ಕೌಶಲ್ಯಕ್ಕಾಗಿ ರಾಷ್ಟ್ರ ಪ್ರಶಸ್ತಿ, ಪದ್ಮಶ್ರೀ ಮತ್ತು ಡಾಕ್ಟರೇಟ್ನಂತಹ ಹಲವು ಪ್ರತಿಷ್ಠಿತ ಪುರಸ್ಕಾರಗಳನ್ನು ಗಿಟ್ಟಿಸಿಕೊಂಡಿದ್ದಾರೆ. ಅವರು ಸಾವಿರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಗಿನ್ನೆಸ್ ವಿಶ್ವ ದಾಖಲೆಯನ್ನೂ ಮಾಡಿದ್ದಾರೆ. ಎಂಜಿಆರ್, ಶಿವಾಜಿ, ರಜನಿಕಾಂತ್, ಕಮಲ್ ಹಾಸನ್, ವಿಜಯ್ ಮತ್ತು ಅಜಿತ್ ಸೇರಿದಂತೆ ಅನೇಕ ಪ್ರಮುಖ ನಟರೊಂದಿಗೆ ನಟಿಸಿದ ಅವರು 4 ಭಾಷೆಗಳಲ್ಲಿ ಒಟ್ಟು 1,500 ಚಿತ್ರಗಳಲ್ಲಿ ನಟಿಸಿದ್ದಾರೆ.

ಹಾಸ್ಯ ಕಲಾವಿದೆಯಾಗಿ ಜನರನ್ನು ಮನರಂಜಿಸಿದ್ದ ಮನೋರಮಾ ಅವರ ವೈಯಕ್ತಿಕ ಜೀವನ ಸಂತೋಷದ್ದಾಗ ರಲಿಲ್ಲ. ತಂದೆ ಇಲ್ಲದೆ ತಾಯಿಯ ಆಶ್ರಯದಲ್ಲೇ ಬೆಳೆದ ಮನೋರಮಾ ಅವರು ರಾಮನಾಥನ್ ಅವರನ್ನು ಪ್ರೀತಿಸಿ ಮದುವೆಯಾದರು. ನಾಟಕ ಕಂಪನಿಯಲ್ಲಿ ಪ್ರಮುಖ ಹುದ್ದೆಯಲ್ಲಿದ್ದ ರಾಮನಾಥನ್ ಅವರ ತಾಯಿಗೆ ಈ ಮದುವೆ ಇಷ್ಟವಿಲ್ಲದ ಕಾರಣ ಅವರು ಮನೆ ಬಿಟ್ಟು ಹೋದರು.

ಮನೋರಮಾ ಪ್ರೀತಿಸಿ ಮದುವೆಯಾಗಿದ್ದು, ಮಗು ಕೂಡ ಜನಿಸಿತ್ತು. ಆದರೆ ಮಗುವನ್ನು ನೋಡಲು ಎಂದಿಗೂ ಬರದ ರಾಮನಾಥನ್, ಮಗು ಹುಟ್ಟಿದ 11ನೇ ದಿನ ತನ್ನ ಹೆಂಡತಿ ಮತ್ತು ಮಗುವಿನಿಂದ ದೂರ ಆದರು. ಮಗು ಜನಿಸಿದಾಗ ಅವರ ಜೀವಕ್ಕೆ ಅಪಾಯವಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರಂತೆ. ಹೀಗಾಗಿ ಎಸ್.ಎಂ. ರಾಮನಾಥನ್ ಮನೋರಮಾ ಮತ್ತು ಮಗುವನ್ನು ಬಿಟ್ಟು ಹೋಗಿದ್ದರು. ಹೀಗೆ ಜೀವನದಲ್ಲಿ ಸೋತರೂ ತೆರೆ ಮೇಲೆ ಮಿಂಚಿದ್ದ ಮನೋರಮಾ 2015ರಲ್ಲಿ ತಮ್ಮ 78ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.