Stars Cannes Fashion: ಕಾನ್ಸ್ ರೆಡ್ ಕಾರ್ಪೆಟ್ ಅಂತಿಮ ತೆರೆಗೂ ಮುನ್ನ ಅನಾವರಣಗೊಂಡ ತಾರೆಯರ ಫ್ಯಾಷನ್ವೇರ್ಗಳಿವು
ಕಾನ್ಸ್ ಫಿಲ್ಮ್ ಫೆಸ್ಟಿವಲ್ ಸಿನಿಮಾಗಳ ಕುರಿತ ಚರ್ಚೆ, ಪ್ರದರ್ಶನ ಹಾಗೂ ಪ್ರಚಾರಕ್ಕಿಂತ ಸೆಲೆಬ್ರೆಟಿಗಳ ವೇರಬಲ್ ಹಾಗೂ ನಾನ್ ವೇರಬಲ್ ಫ್ಯಾಷನ್ವೇರ್ಗಳ ಅನಾವರಣಕ್ಕೆ ವೇದಿಕೆ ಮೀಸಲಾಗಿದ್ದಂತಿತ್ತು. ಹೌದು, ಸಮಾರಂಭದ ಕೊನೆಯ ಹಂತದಲ್ಲೂ ಭಾಗವಹಿಸಿದ ಕೆಲವು ಸೆಲೆಬ್ರೆಟಿಗಳು ಕೂಡ ಉತ್ಸಾಹದಿಂದಲೇ ನಾನಾ ಲುಕ್ಗಳಲ್ಲಿ ಕಾಣಿಸಿಕೊಂಡರು. ಅವರೆಲ್ಲರ ಫ್ಯಾಷನ್ ಲುಕ್ ಕುರಿತಂತೆ ಇಲ್ಲಿದೆ ಒಂದಿಷ್ಟು ಡಿಟೇಲ್ಸ್.

ನಟಿಯರಾದ ಅಲಿಯಾ ಭಟ್, ಖುಷಿ ಕಪೂರ್, ಆಮಿ ಜಾಕ್ಸನ್, ಮಾಡೆಲ್ ನತಾಶ ಪೂನಾವಾಲ ಹಾಗೂ ನಟಿ ಅದಿತಿ ರಾವ್ ಹೈದರಿ.


ಕಾನ್ಸ್ನಲ್ಲಿ ಅಲಿಯಾ ಭಟ್ ಡೆಬ್ಯೂ
ಕಾನ್ಸ್ ರೆಡ್ ಕಾರ್ಪೆಟ್ಗೆ ಕೊನೆಗೂ ಆಗಮಿಸಿದ ಬಾಲಿವುಡ್ ನಟಿ ಅಲಿಯಾ ಭಟ್ ಅವರದ್ದು ಡೆಬ್ಯೂ ಎಂಟ್ರಿಯಾಗಿತ್ತು. ಭಾಗವಹಿಸಿದ್ದ ಎರಡೂ ಬಾರಿಯೂ ವಿಭಿನ್ನ ಡಿಸೈನ್ ಗೌನ್ಗಳನ್ನು ಧರಿಸಿದ್ದರು. ಮೊದಲ ದಿನ ಧರಿಸಿದ್ದ ಗೌನ್ ಪ್ರತಿಷ್ಠಿತ ಇಂಟರ್ನ್ಯಾಷನಲ್ ಬ್ರ್ಯಾಂಡ್ನದ್ದಾಗಿತ್ತು. ಅವರ ಲಾಂಗ್ ಆಫ್ ಶೋಲ್ಡರ್ನ ಹಾಫ್ ಕ್ರೀಮ್ ಗೌನ್ ಮೇಲೆಲ್ಲಾ ರಫಲ್ ವಿನ್ಯಾಸದೊಂದಿಗೆ ಎನಮೆಲ್ ಫ್ಲವರ್ಸ್ ಡಿಸೈನ್ ಮೂಡಿತ್ತು. ಮತ್ತೊಮ್ಮೆ ಧರಿಸಿದ ಬ್ಲ್ಯಾಕ್ ಅರ್ಮಾನಿ ಗೌನ್ ನೈಟ್ ಪಾರ್ಟಿಯಲ್ಲಿ ಅವರನ್ನು ಹೈಲೈಟ್ ಮಾಡಿತು.

ಖುಷಿ ಕಪೂರ್ ಫ್ಲೋರಲ್ ಗೌನ್
ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸಹೋದರಿ ಖುಷಿ ಕಪೂರ್, ಅನಿತಾ ದೊಂಗ್ರೆ ಅವರ ಡಿಸೈನರ್ ಪೇಂಟೆಡ್ ಗೌನ್ ಧರಿಸಿದ್ದರು. ಪಾಸ್ಟೆಲ್ ಶೇಡ್ನ ಈ ಆಫ್ ಶೋಲ್ಡರ್ ಗೌನನ್ನು ರಾಜಸ್ಥಾನದ ಪಿಚ್ವಾಯಿ ಕಲಾವಿದರು ಹ್ಯಾಂಡ್ ಪೇಟಿಂಗ್ನಿಂದ ಸಿಂಗಾರಗೊಳಿಸಿದ್ದರು.

ಆಮಿ ಜಾಕ್ಸನ್ ಪೋಲ್ಕಾ ಡಾಟ್ಸ್ ಡಿಸೈನರ್ವೇರ್
ನಟಿ ಆಮಿ ಜಾಕ್ಸನ್, ರೆಟ್ರೊ ಲುಕ್ ನೀಡುವ ಪೋಲ್ಕಾ ಡಾಟ್ಸ್ ಇರುವಂತಹ ಬಾಡಿಕಾನ್ ಆಫ್ ಶೋಲ್ಡರ್ ಗೌನ್ ಧರಿಸಿ, ಹಾಲಿವುಡ್ ನಟಿಯಂತೆ ಪೋಸ್ ನೀಡಿದ್ದು, ಎಲ್ಲರ ಗಮನ ಸೆಳೆಯಿತು.

ಮಾಡೆಲ್ ನತಾಶ ಪೂನಾವಾಲರ ಜಗಮಗಿಸುವ ಗೌನ್
ಸದಾ ಒಂದಲ್ಲ ಒಂದು ಪ್ರಯೋಗಾತ್ಮಕ ಡಿಸೈನರ್ವೇರ್ ಮೂಲಕ ಗಮನ ಸೆಳೆಯುವ ಸೂಪರ್ ಮಾಡೆಲ್ ನತಾಶ ಪೂನಾವಾಲ ಆರಂಭದಲ್ಲಿಯೇ ಡಿಯೋರ್ ಬ್ರ್ಯಾಂಡ್ನ ಬ್ಲ್ಯಾಕ್ ಗೌನ್ ಹಾಗೂ ಗೋಲ್ಡನ್ ಜಾಕೆಟ್ ಧರಿಸಿ ಕಾಣಿಸಿಕೊಂಡಿದ್ದರು. ಕೊನೆಯ ಹಂತದಲ್ಲಿ, ಬೀಚ್ ಸೈಡ್ ಸ್ಟ್ರೀಟ್ನಲ್ಲಿ, ಕಂಪ್ಲೀಟ್ ಗೋಲ್ಡನ್ ಶೇಡ್ನ ರಿಂಕಲ್ ಶಿಮ್ಮರ್ ಡಿಸೈನ್ ಗೌನ್ನಲ್ಲಿ ಕಾಣಿಸಿಕೊಂಡರು.

ಅದಿತಿ ರಾವ್ ಹೈದರಿ ಕ್ಯಾಶುವಲ್ ಲುಕ್
ಆರಂಭದಲ್ಲಿ ಸೀರೆ & ಗೌನ್ ಎರಡರಲ್ಲೂ ಕಾಣಿಸಿಕೊಂಡಿದ್ದ ಅದಿತಿ ರಾವ್, ಕಾನ್ ಸ್ಟ್ರೀಟ್ನಲ್ಲಿ ತೀರಾ ಕ್ಯಾಶುವಲ್ ಎಂದೆನಿಸುವ ಗಿಂಗ್ನಂ ಶೈಲಿಯ ಫುಲ್ ಸ್ಲೀವ್ ಶರ್ಟ್ ಹಾಗೂ ಪ್ಯಾಚ್ ವರ್ಕ್ ಇರುವಂತಹ ಹಾರೆಮ್ ಹಾಗೂ ಜಾಗರ್ಸ್ ಶೈಲಿ ಮಿಕ್ಸ್ ಮಾಡಿ ವಿನ್ಯಾಸ ಮಾಡಿದಂತಹ ಖಾಕಿ ಪ್ಯಾಂಟ್ನಲ್ಲಿ ಸಿಂಪಲ್ಲಾಗಿ ಕಾಣಿಸಿಕೊಂಡರು.