Karnataka BJP: ರಾಜ್ಯದಲ್ಲಿ ಕಾಣಿಸಿಕೊಂಡ ತ್ರಿಶಂಕು ರಾಜಕಾರಣ
ರಾಜ್ಯ ಬಿಜೆಪಿಯಿಂದ ಉಚ್ಚಾಟಿತರ ‘ತ್ರಿಶಂಕು ರಾಜಕಾರಣ’ ಇನ್ನೂ ಮೂರು ವರ್ಷಗಳ ಕಾಲ ಮುಂದು ವರಿಯುವ ಸಾಧ್ಯತೆ ನಿಚ್ಚಳವಾಗಿದೆ. ರಾಜ್ಯ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮೂವರು ಹಿರಿಯ ನಾಯಕರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಬಾಗಿಲುಗಳು ಬಂದ್ ಆಗಿದ್ದು, ಅವರು ಇನ್ನೂ ಮೂರು ವರ್ಷ ಗಳಿಗೂ ಹೆಚ್ಚು ಕಾಲ ರಾಜಕೀಯ ಅತಂತ್ರದ ಕಾಲಕಳೆಯುವುದು ಅನಿ ವಾರ್ಯವಾಗಿದೆ.


ಶಿವಕುಮಾರ್ ಬೆಳ್ಳಿತಟ್ಟೆ
ಯತ್ನಾಳ್, ಈಶ್ವರಪ್ಪ, ರಘುಪತಿ ಭಟ್‌ಗೆ ಬಾಗಿಲು ಬಂದ್
ಇನ್ನೂ ಮೂರು ವರ್ಷ ಮುಕ್ತಿ ಇಲ್ಲ
ರಾಜ್ಯ ಬಿಜೆಪಿಯಿಂದ ಉಚ್ಚಾಟಿತರ ‘ತ್ರಿಶಂಕು ರಾಜಕಾರಣ’ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿದೆ. ರಾಜ್ಯ ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಮೂವರು ಹಿರಿಯ ನಾಯಕರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಬಾಗಿಲುಗಳು ಬಂದ್ ಆಗಿದ್ದು, ಅವರು ಇನ್ನೂ ಮೂರು ವರ್ಷಗಳಿಗೂ ಹೆಚ್ಚು ಕಾಲ ರಾಜಕೀಯ ಅತಂತ್ರದ ಕಾಲಕಳೆಯುವುದು ಅನಿ ವಾರ್ಯವಾಗಿದೆ. ಅಂದರೆ ಕೇಂದ್ರ ಮಾಜಿ ಸಚಿವ, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ, ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಹಾಗೂ ಮಾಜಿ ಶಾಸಕ ರಘುಪತಿ ಭಟ್ ಅವರು ಸದ್ಯ ಸಕ್ರಿಯ ರಾಜಕಾರಣದಲ್ಲಿದ್ದರೂ ನಿಗದಿತ ಪಕ್ಷದ ಮಾನ್ಯತೆ ಇಲ್ಲದೆ ಪಕ್ಷೇತರಂತಾಗಿದ್ದಾರೆ. ಅಂದರೆ ಸದ್ಯದ ಸ್ಥಿತಿಯಲ್ಲಿ ಈ ಮೂವರು ಬಿಜೆಪಿಗೂ ವಾಪಸ್ಸಾಗದೆ, ಅತ್ತ ಕಾಂಗ್ರೆಸ್ ಗೂ ಸೇರದೆ ತ್ರಿಶಂಕು ರಾಜಕಾರಣದಲ್ಲಿ ಮುಂದುವರಿಯಬೇಕಾದ ಅನಿವಾರ್ಯವಿದೆ.
ಆದರೂ ಅವರು ಪಕ್ಷೇತರರಂತೆ ವರ್ತಿಸದೆ ಬಿಜೆಪಿ ನಾಯಕರನ್ನೂ ಮೀರಿಸುವಂತೆ ಹೇಳಿಕೆಗಳನ್ನು ನೀಡುತ್ತಿದ್ದು, ಇದು ಕೆಲವೊಮ್ಮೆ ಬಿಜೆಪಿಗೆ "ಇಷ್ಟವಾದರೂ ಪಕ್ಷದ ನಾಯಕರಿಗೆ ಮುಜುಗರ ಆಗುತ್ತಿರುವುದು ದಿಟ. ಇದಕ್ಕೆ ಉದಾಹರಣೆ ಎಂದರೆ, ಯತ್ನಾಳ್ ಮತ್ತು ಈಶ್ವರಪ್ಪ ಅವರು ಭಾರತ- ಪಾಕಿಸ್ತಾನ ಯುದ್ಧದ ವಿಚಾರವಾಗಿ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು ಹಾಗೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟೀಕಿಸಿದ ವೈಖರಿ.
ಇದನ್ನೂ ಓದಿ: Ramanand Sharma Column: ಹುಷಾರಾಗಿರಿ ! ಕನ್ನಡಿಗರ ಅಸ್ಮಿತೆ ಜಾಗೃತವಾಗಿದೆ
ಹಾಗೆಂದ ಮಾತ್ರಕ್ಕೆ ಈ ಉಚ್ಚಾಟಿತರು ಆದಷ್ಟು ಬೇಗ ಬಿಜೆಪಿಗೆ ವಾಪಸ್ ಬಂದು ಬಿಡುತ್ತಾರೆ ಎಂದಾಗಲಿ, ಇವರ ವಿರುದ್ಧದ ಕ್ರಮಗಳು ರದ್ದಾಗುತ್ತವೆ ಎನ್ನುವುದಾಗಲಿ ಸುಲಭವಲ್ಲ ಎನ್ನುತ್ತಾರೆ ಮುಖಂಡರು.
ಏನಿದು ತ್ರಿಶಂಕು ರಾಜಕಾರಣ ?
ಪಕ್ಷ ವಿರೋಧಿ ಚಟಿವಟಿಕೆಗಳನ್ನು ನಡೆಸಿದವರು ಪಕ್ಷದಿಂದ ಉಚ್ಚಾಟನೆಯಾಗುವುದು ಸಾಮಾನ್ಯ. ಇದು ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ ಪಕ್ಷಗಳಲ್ಲೂ ನಡೆದಿದೆ. ಆದರೆ ಉಚ್ಚಾಟನೆ ಗೊಂಡವರು ಕೆಲಕಾಲ ನಂತರ ವಿರುದ್ಧ ಬಹಿರಂಗವಾಗಿ ನಿರಂತರ ಟೀಕೆ, ಹೇಳಿಕೆಗಳನ್ನು ಮಾಡುತ್ತಾ ಪಕ್ಷಕ್ಕೆ ಮುಜುಗರ ಮಾಡಿದ್ದ ಕಾರಣಕ್ಕೆ ಉಚ್ಚಾಟನೆಗೊಂಡಿದ್ದಾರೆ. ಇನ್ನು ಕೆ.ಎಸ್.ಈಶ್ವರಪ್ಪ ಕಳೆದ ಚುನಾವಣೆಯಲ್ಲಿ ಪಕ್ಷದ ಟಿಕೇಟ್ ಸಿಕ್ಕಿಲ್ಲ ಎಂದು ಸಿಟ್ಟಾಗಿ ಪಕ್ಷಕ್ಕೆ ವಿರುದ್ಧವಾಗಿ ಪುತ್ರ ಕಾಂತೇಶ್ ಅವರನ್ನು ಶಿವಮೊಗ್ಗದಲ್ಲಿ ಕಣಕ್ಕಿಳಿಸಿದ ಪರಿಣಾಮ ಪಕ್ಷದಿಂದ ಉಚ್ಚಾಟನೆಯಾಗಿದ್ದರು.
ಇದೇ ರೀತಿ ನೈರುತ್ಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಯಾವು ದಾದರೂ ಒಂದು ಪಕ್ಷ ಸೇರಿಕೊಂಡು ಅತಂತ್ರ ಸ್ಥಿತಿಯಿಂದ ತಪ್ಪಿಸಿಕೊಳ್ಳುತ್ತಾರೆ ಅಥವಾ ಸೇರಿದ ಪಕ್ಷದಿಂದ ಲಾಭ ಪಡೆದುಕೊಳ್ಳುತ್ತಾರೆ. ಆದರೆ ರಾಜ್ಯದಲ್ಲಿ ಇತ್ತೀಚಿಗೆ ಬಿಜೆಪಿಯಿಂದ ಉಚ್ಚಾಟನೆ ಗೊಂಡ ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್.ಈಶ್ವರಪ್ಪ ಹಾಗೂ ರಘುಪತಿ ಭಟ್ ಸೇರಿದಂತೆ ಕೆಲವು ರಾಜಕಾರಣದ ಸ್ಥಿತಿ ಭಿನ್ನವಾಗಿದೆ. ಯತ್ನಾಳ್ ಅವರ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಉಚ್ಚಾಟನೆಗೊಂಡಿದ್ದರು. ಈಗ ಇವರು ಇತ್ತ ಬಿಜೆಪಿಗೆ ವಾಪಸ್ ಸೇರೋಣ ಎಂದರೆ, ಈಗಿನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರೇ ಮುಂದುವರಿಯುವ ಸಾಧ್ಯತೆ ಇರುವ ಕಾರಣ ಸದ್ಯಕ್ಕೆ ಇವರು ಬಿಜೆಪಿಗೆ ವಾಪಸ್ಸಾಗುವ ದಾರಿ ಕಾಣುತ್ತಿಲ್ಲ. ಇನ್ನು ಇವರು ಕಾಂಗ್ರೆಸ್ ವಿರುದ್ಧ ಸದಾ ಟೀಕೆಯಲ್ಲಿ ತೊಡಗಿರುವ ಕಾರಣ ಪಕ್ಷದ ಬಾಗಿಲು ಎಂದಿಗೂ ತೆರವುದಿಲ್ಲ ಎನ್ನುವ ಸ್ಥಿತಿ ಇದೆ ಎನ್ನಲಾಗಿದೆ
ಈಗಿನ ಅಧ್ಯಕ್ಷರೇ ಇರುತ್ತಾರೆ ಏಕೆ ?
ಕೇಂದ್ರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಬದಲಾವಣೆಯಾಗದ ಹೊರತು ರಾಜ್ಯದ ಬಿಜೆಪಿ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಅಸಾಧ್ಯ ಎನ್ನುತ್ತವೆ ಪಕ್ಷದ ಮೂಲಗಳು. ಹಾಗೊಂದು ವೇಳೆ ರಾಷ್ಟ್ರೀಯ ಅಧ್ಯಕ್ಷರು ಬದಲಾವಣೆಯಾದರೂ ರಾಜ್ಯದಲ್ಲಿ ಬದಲಾವಣೆ ಸಾಧ್ಯತೆ ನಿಚ್ಚಳ ವಾಗಿದೆ. ಹೀಗಾಗಿ ಉಚ್ಚಾಟಿತ ನಾಯಕರು ಇನ್ನೂ ದೀರ್ಘ ಕಾಲ ಬಿಜೆಪಿಗೆ ವಾಪಸ್ ಬರುವಂತೆ ಯೂ ಇಲ್ಲ. ಅತ್ತ ಕಾಂಗ್ರೆಸ್ ಸೇರುವಂತೆಯೂ ಇಲ್ಲದ ಸ್ಥಿತಿ ಇದೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, ಈ ಉಚ್ಚಾಟಿತರನ್ನು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕ್ಷೀಣ ಎನ್ನಲಾಗುತ್ತಿದೆ. ಏಕೆಂದರೆ, ರಾಜ್ಯದಲ್ಲಿ ಸದ್ಯಕ್ಕೆ ಅಗತ್ಯ ಸಂಪನ್ಮೂಲ ಹಾಗೂ ಸಂಘಟನೆ ಯೊಂದಿಗೆ ಪಕ್ಷ ಮುನ್ನಡೆಸುವ ಪರ್ಯಾಯ ನಾಯಕತ್ವ ರಾಷ್ಟ್ರೀಯ ನಾಯಕರಿಗೆ ಸದ್ಯ ಕಾಣ ಸಿಗುತ್ತಿಲ್ಲ. ಹೀಗಾಗಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಮುಂದಿನ ಮೂರು ವರ್ಷಗಳ ವರೆಗೂ ಮರು ನೇಮಕ ಮಾಡುವ ಎಲ್ಲಾ ಸಾಧ್ಯತೆ ಬೆಂಬಲಿಸಿಕೊಂಡು ಬಂದ ಅನೇಕ ಬಿಜೆಪಿ ನಾಯಕರು ಕೂಡ ಈಗ ಮೌನವಾಗಿದ್ದಾರೆ. ಜತೆಗೆ ಸಾಧ್ಯವಾದಷ್ಟು ಅಂತರವನ್ನೂ ಕಾಯ್ದುಕೊಂಡಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿಯಲ್ಲಿ ಇನ್ನೂಕೆಲ ಕಾಲ ಯಾವುದೇ ಮಹತ್ವದ ಬದಲಾವಣೆಗಳನ್ನು ನಿರೀಕ್ಷಿಸಲಾಗದು ಎನ್ನುತ್ತಾರೆ ಪಕ್ಷದ ಹಿರಿಯ ಮುಖಂಡರು.