ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Obscene Videos: ಹಣಕ್ಕಾಗಿ ತುಂಡುಡುಗೆ ತೊಟ್ಟು ಅಶ್ಲೀಲ ವಿಡಿಯೊ ಮಾಡುತ್ತಿದ್ದ ವೈದ್ಯ; ಪತ್ನಿಯಿಂದಲೇ ಪತಿಯ ಮುಖವಾಡ ಬಯಲು

ಉತ್ತರ ಪ್ರದೇಶದ ಸರ್ಕಾರಿ ವೈದ್ಯ ಡಾ. ವರುಣೇಶ್ ದುಬೆ ಮಹಿಳೆಯಂತೆ ವೇಷ ಧರಿಸಿ ಅಶ್ಲೀಲ ವಿಡಿಯೊಗಳನ್ನು ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಆಘಾತಕಾರಿ ಆರೋಪ ಕೇಳಿ ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆತನ ಫೋಟೊಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ.

ಬಿಕಿನಿ ತೊಟ್ಟು ಅರೆನಗ್ನ  ಫೋಟೋಶೂಟ್ ಮಾಡಿಸಿಕೊಂಡ ವೈದ್ಯ!

ಸರ್ಕಾರಿ ವೈದ್ಯ ಡಾ. ವರುಣೇಶ್ ದುಬೆ

Profile Sushmitha Jain May 24, 2025 10:15 PM

ಲಖನೌ: ಉತ್ತರ ಪ್ರದೇಶದ (Uttar Pradesh) ಸರ್ಕಾರಿ ವೈದ್ಯ ಡಾ. ವರುಣೇಶ್ ದುಬೆ (Varunesh Dubey) ಮಹಿಳೆಯಂತೆ ವೇಷ ಧರಿಸಿ ಅಶ್ಲೀಲ ವಿಡಿಯೊಗಳನ್ನು (Pornographic Videos) ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದ ಆಘಾತಕಾರಿ ಆರೋಪ ಕೇಳಿಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆತನ ಫೋಟೊಗಳು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿವೆ. ಡಾ. ದುಬೆಯ ಪತ್ನಿ ಸಿಂಪಿ ಪಾಂಡೆ, ಆತ ಸರ್ಕಾರಿ ನಿವಾಸದಲ್ಲಿ ಇತರ ಪುರುಷರೊಂದಿಗೆ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸುತ್ತಿದ್ದ ಎಂದು ಆರೋಪಿಸಿದ್ದಾರೆ. ಆದರೆ, ಡಾ. ದುಬೆ ಈ ಆರೋಪಗಳನ್ನು ತಳ್ಳಿ ಹಾಕಿ, ತನ್ನ ಆಸ್ತಿಯನ್ನು ಕಬಳಿಸಲು ಪತ್ನಿಯು ಡೀಪ್‌ಫೇಕ್ ವಿಡಿಯೊಗಳ ಮೂಲಕ ಮಾನಹಾನಿಗೆ ಯತ್ನಿಸುತ್ತಿದ್ದಾಳೆ ಎಂದು ಆರೋಪಿಸಿದ್ದಾನೆ. ಸಂತ ಕಬೀರ್ ನಗರ ಜಿಲ್ಲೆಯ ಸಮುದಾಯ ಆರೋಗ್ಯ ಕೇಂದ್ರದ ಮೇಲ್ವಿಚಾರಕನಾಗಿದ್ದ ಡಾ.ದುಬೆ ಸಿಂಪಿ ಪಾಂಡೆಯೊಂದಿಗೆ ಪ್ರೇಮ ವಿವಾಹವಾಗಿದ್ದ.

ಪತ್ನಿ ಆರೋಪ

ಸಿಂಪಿ ಪಾಂಡೆ, ತನ್ನ ಗಂಡ ಗೋರಖ್‌ಪುರದ ಮನೆಯಲ್ಲಿ ತನ್ನನ್ನು ಬಿಟ್ಟು, ಸರ್ಕಾರಿ ನಿವಾಸದಲ್ಲಿ ಅಶ್ಲೀಲ ಚಟುವಟಿಕೆಗಳಲ್ಲಿ ತೊಡಗಿದ್ದಾನೆ ಎಂದು ಆರೋಪಿಸಿದ್ದಾರೆ. ಈ ವಿಡಿಯೊಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಿ ಹಣ ಗಳಿಸುತ್ತಿದ್ದ ಎಂದು ಅವರು ದೂರಿದ್ದಾರೆ. “ಮೊಬೈಲ್‌ ನೋಡಿದಾಗ ಗಂಡನ ಅಶ್ಲೀಲ ವಿಡಿಯೊಗಳು ಕಾಣಿಸಿಕೊಂಡವು. ಈ ವಿಡಿಯೊಗಳನ್ನು ಆತನ ಸರ್ಕಾರಿ ನಿವಾಸದಲ್ಲಿ ಚಿತ್ರೀಕರಿಸಲಾಗಿತ್ತು. ಈ ಬಗ್ಗೆ ಗಂಡನೊಂದಿಗೆ ಮಾತನಾಡಲು ಯತ್ನಿಸಿದಾಗ, ಆತ ನನ್ನನ್ನು ಮತ್ತು ನನ್ನ ಸಹೋದರನನ್ನು ಥಳಿಸಿದ” ಎಂದು ಅವರು ತಿಳಿಸಿದ್ದಾರೆ.

ಸಿಂಪಿಯ ದೂರಿನ ಮೇರೆಗೆ ಪೊಲೀಸರು ಡಾ. ದುಬೆಯ ಮನೆಯ ಮೇಲೆ ದಾಳಿ ನಡೆಸಿ, ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ದೂರಿನಲ್ಲಿ ಗಂಡ ತನ್ನನ್ನು “ಟ್ರಾನ್ಸ್‌ಜೆಂಡರ್” ಎಂದು ಕರೆದುಕೊಳ್ಳುತ್ತಾನೆ ಎಂದು ಆಕೆ ತಿಳಿಸಿದ್ದಾರೆ ಎಂಬುದಾಗಿ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

“ಆಕೆಯ ಗಂಡ ಟ್ರಾನ್ಸ್‌ಜೆಂಡರ್ ಎಂದು ಹೇಳಿಕೊಳ್ಳುತ್ತಾನೆ. ತನ್ನ ನಿವಾಸಕ್ಕೆ ಪುರುಷರನ್ನು ಕರೆದು ಅಶ್ಲೀಲ ವಿಡಿಯೊ ಚಿತ್ರೀಕರಿಸಿ ಇಂಟರ್‌ನೆಟ್‌ನಲ್ಲಿ ಅಪ್‌ಲೋಡ್ ಮಾಡುತ್ತಾನೆ. ಇದನ್ನು ಪತ್ನಿ ಪ್ರಶ್ನಿಸಿದಾಗ, ಆತ ಆಕೆಯನ್ನು ಮತ್ತು ಆಕೆಯ ಕುಟುಂಬವನ್ನು ಥಳಿಸಿದ್ದಾನೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ,” ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಶೀಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಗಂಡನ ಪ್ರತಿ-ಆರೋಪ

ಕಾರಾಗೃಹ ವೈದ್ಯಾಧಿಕಾರಿಯೂ ಆಗಿರುವ ಡಾ. ದುಬೆ, ಈ ಆರೋಪಗಳನ್ನು ಸುಳ್ಳು ಎಂದು ತಳ್ಳಿಹಾಕಿ, ತನ್ನ ನಿರ್ದೋಷಿತನವನ್ನು ಸಾಬೀತುಪಡಿಸಲು ಕೊನೆಯವರೆಗೂ ಹೋರಾಡುವುದಾಗಿ ಪ್ರತಿಜ್ಞೆ ಮಾಡಿದ್ದಾನೆ. ಪ್ರೇಮವಿವಾಹದಿಂದ ನಾನೇ ತಪ್ಪು ಮಾಡಿದೆ ಎಂದು ದೂಷಿಸಿಕೊಂಡ ಆತ, ತಮ್ಮ ಪತ್ನಿಯು ತನ್ನ ಕೋಟ್ಯಂತರ ರೂ. ಮೌಲ್ಯದ ಆಸ್ತಿಯನ್ನು ಕಬಳಿಸಲು ದರೋಡೆಕೋರ ಷಡ್ಯಂತ್ರ ರೂಪಿಸಿದ್ದಾಳೆ ಎಂದು ಆರೋಪಿಸಿದ್ದಾರೆ.

ಈ ಸುದ್ದಿಯನ್ನು ಓದಿ: Viral News: ಪ್ರೀತಿ, ಮೋಸ, ಮದುವೆ-ತನ್ನ ಜೀವನದಲ್ಲಾದ ಈ ಮೂರು ಅನುಭವವನ್ನು ಬಿಚ್ಚಿಟ್ಟ ಮಹಿಳೆ
“ಆಕೆ ನನ್ನ 85 ವರ್ಷದ ತಂದೆಯನ್ನು ನಿಂದಿಸಿ, ಮಾನಸಿಕವಾಗಿ ಕಿರುಕುಳ ನೀಡಿದ್ದಾಳೆ. ನಾನು ಪ್ರೇಮ ವಿವಾಹಕ್ಕೆ ಒತ್ತಾಯಿಸಿದ್ದು ಅವರು ಸಾಯಲು ಕಾರಣವಾಯಿತು. ಆಕೆ ನಮ್ಮ ಮಗುವನ್ನು ಬಾಲ್ಕನಿಯಿಂದ ಎಸೆಯುವುದಾಗಿ ಬೆದರಿಕೆ ಹಾಕಿದ್ದಾಳೆ. ನನ್ನ ತಂದೆಯ ಸಾವಿನ ನಂತರ ಆಕೆ ನನ್ನ ಫೋನ್‌ನಲ್ಲಿ ಡೀಪ್‌ಫೇಕ್ ವಿಡಿಯೊಗಳನ್ನು ತಯಾರಿಸಿ ನನ್ನ ಮಾನಹಾನಿ ಮಾಡಿದ್ದಾಳೆ” ಎಂದು ದುಬೆ ಆರೋಪಿಸಿದ್ದಾನೆ.

ʼʼಆಕೆಯ ಕೃತ್ಯಗಳು ನನ್ನನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸುತ್ತಿವೆ. ಆದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ, ಕೊನೆಯವರೆಗೂ ಹೋರಾಡುವೆ” ಎಂದು ಆತ ಹೇಳಿದ್ದಾನೆ. ಜತೆಗೆ ತನ್ನ ಮತ್ತು ತನ್ನ ಚಿಕ್ಕಮ್ಮನ ಮೇಲೆ ದಾಳಿ ನಡೆದಿದ್ದು, ತನ್ನ ಫೋನ್ ಕದ್ದಿರುವುದಾಗಿ ಆತ ಆರೋಪಿಸಿದ್ದಾನೆ. ಉಪ ಮುಖ್ಯ ವೈದ್ಯಾಧಿಕಾರಿ ಮಹೇಂದ್ರ ಪ್ರಸಾದ್, ಈ ವಿಷಯವನ್ನು ತನಿಖೆಗೊಳಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.