ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Team india: ನಾಳೆ ಭಾರತ ಟೆಸ್ಟ್‌ ತಂಡದ ನೂತನ ನಾಯಕನ ಆಯ್ಕೆ?

ಬಹುತೇಕ ಗಿಲ್‌ ನಾಯಕನಾಗುವುದು ಖಚಿತವಾಗಿದೆ. ಸ್ಥಿರ ಪ್ರದರ್ಶನ, ಗುಜರಾತ್‌ ನಾಯಕರಾಗಿ ಅವರ ಪರಿಣಾಮಕಾರಿ ನಿರ್ವಹಣೆ ಬಿಸಿಸಿಐ ಗಮನ ಸೆಳೆದಿದೆ. ನಾಯಕನ ಜತೆಗೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಜಾಗ ತುಂಬಬಲ್ಲ ಬ್ಯಾಟರ್‌ಗಳ ಹುಡುಕಾಟವನ್ನೂ ಬಿಸಿಸಿಐ ನಡೆಸಿದೆ.

ನಾಳೆ ಭಾರತ ಟೆಸ್ಟ್‌ ತಂಡದ ನೂತನ ನಾಯಕನ ಆಯ್ಕೆ?

Profile Abhilash BC May 22, 2025 8:37 AM

ಮುಂಬಯಿ: ಮುಂದಿನ ತಿಂಗಳು ನಡೆಯುವ ಇಂಗ್ಲೆಂಡ್‌ ಟೆಸ್ಟ್‌(india england test series_ ಪ್ರವಾಸಕ್ಕೆ ಭಾರತ ತಂಡದ ನೂತನ ನಾಯಕ, ಆಟಗಾರರ(Team India) ಪಟ್ಟಿಯನ್ನು ಬಿಸಿಸಿಐ(BCCI) ಮೇ 23, 24ಕ್ಕೆ ಪ್ರಕಟಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ನಾಯಕತ್ವ ರೇಸ್‌ನಲ್ಲಿ ಶುಭಮನ್‌ ಗಿಲ್‌, ಜಸ್‌ಪ್ರೀತ್‌ ಬುಮ್ರಾ, ರಿಷಭ್‌ ಪಂತ್‌ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.

ಪದೇಪದೇ ಗಾಯಗೊಳ್ಳುವುದರಿಂದ ತಂಡದಲ್ಲಿ ಅಸ್ಥಿರತೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಬುಮ್ರಾಗೆ ನಾಯಕತ್ವ ನೀಡದಿರಲು ಬಿಸಿಸಿಐ ನಿರ್ಧರಿಸಿದರೂ ಅಚ್ಚರಿಯಿಲ್ಲ. ಬಹುತೇಕ ಗಿಲ್‌ ನಾಯಕನಾಗುವುದು ಖಚಿತವಾಗಿದೆ. ಸ್ಥಿರ ಪ್ರದರ್ಶನ, ಗುಜರಾತ್‌ ನಾಯಕರಾಗಿ ಅವರ ಪರಿಣಾಮಕಾರಿ ನಿರ್ವಹಣೆ ಬಿಸಿಸಿಐ ಗಮನ ಸೆಳೆದಿದೆ. ನಾಯಕನ ಜತೆಗೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಜಾಗ ತುಂಬಬಲ್ಲ ಬ್ಯಾಟರ್‌ಗಳ ಹುಡುಕಾಟವನ್ನೂ ಬಿಸಿಸಿಐ ನಡೆಸಿದೆ. ಕನ್ನಡಿಗರಾದ ಕೆ.ಎಲ್‌ ರಾಹುಲ್‌ ಮತ್ತು ಕರುಣ್‌ ನಾಯರ್‌ ಕೂಡ ಪ್ರಧಾನ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ.

ಕರುಣ್‌ ಕೂಡ 3 ಅಥವಾ 4ನೇ ಕ್ರಮಾಂಕದಲ್ಲಿ ಆಡಲು ಸೂಕ್ತ ಬ್ಯಾಟರ್ ಆಗಿದ್ದಾರೆ. ಹೀಗಾಗಿ ವಿರಾಟ್‌ ಕೊಹ್ಲಿಯಿಂದ ತೆರವಾದ ಸ್ಥಾನಕ್ಕೆ ಇವರು ಸೂಕ್ತ ಆಟಗಾರನಾಗಬಲ್ಲರು. 2016ರಲ್ಲಿ ಕರುಣ್‌ ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ನಲ್ಲಿ ತ್ರಿಶತಕ ಗಳಿಸಿದ್ದರು. ಆದರೆ 2017ರ ನಂತರ ಅವರಿಗೆ ಮತ್ತೆ ಟೆಸ್ಟ್‌ ತಂಡದಲ್ಲಿ ಆಡುವ ಅವಕಾಶ ಸಿಕ್ಕಿಲ್ಲ.

ಇದನ್ನೂ ಓದಿ IPL 2025: ʼನಮಗೆ ಅನ್ಯಾಯವಾಗಿದೆʼ- ನಿಯಮ ಬದಲಿಸಿದ ಬಿಸಿಸಿಐ ವಿರುದ್ಧ ತಿರುಗಿಬಿದ್ದ ಕೆಕೆಆರ್‌ ಸಿಇಒ!

ಭಾರತದ ಇಂಗ್ಲೆಂಡ್ ಪ್ರವಾಸವು ಜೂನ್ 20 ರಂದು ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ಆರಂಭಿಕ ಟೆಸ್ಟ್‌ನೊಂದಿಗೆ ಆರಂಭವಾಗಲಿದೆ. ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್ ಟ್ರಾಫರ್ಡ್ ಮತ್ತು ಕೆನ್ನಿಂಗ್ಟನ್ ಓವಲ್ ಉಳಿದ ನಾಲ್ಕು ಟೆಸ್ಟ್‌ಗಳನ್ನು ಆಯೋಜಿಸಲಿವೆ. ಈಗಾಗಲೇ ಇಂಗ್ಲೆಂಡ್‌ ಲಯನ್ಸ್‌ ವಿರುದ್ಧ ಆರಂಭಗೊಳ್ಳಲಿರುವ 2 ಪಂದ್ಯಗಳ ಸರಣಿಗೆ ಭಾರತ ‘ಎ’ ತಂಡ(India Squad) ಪ್ರಕಟಗೊಂಡಿದೆ. ಅಭಿಮನ್ಯು ಈಶ್ವರನ್‌(Abhimanyu Easwaran ) ನಾಯಕರಾಗಿದ್ದಾರೆ.