Beauty Trend: ಅತ್ಯಾಕರ್ಷಕ ಮೇಕಪ್ಗೆ ಲಿಪ್ ಪೆನ್ಸಿಲ್ ಸಾಥ್
Beauty Trend: ಬಣ್ಣ ಬಣ್ಣದ ಲಿಪ್ ಲೈನರ್ಗಳು ತುಟಿಯ ಅಂದವನ್ನು ಹೆಚ್ಚಿಸುತ್ತವೆ. ಸರಿಯಾದ ಆಕಾರ ನೀಡುತ್ತವೆ. ಜತೆಗೆ ಅತ್ಯಾಕರ್ಷಕವಾಗಿ ಬಿಂಬಿಸುತ್ತವೆ ಎನ್ನುವ ಮೇಕಪ್ ಆರ್ಟಿಸ್ಟ್ಗಳು ಈ ಕುರಿತಂತೆ ಒಂದಿಷ್ಟು ವಿವರ ನೀಡಿದ್ದಾರೆ. 12ಕ್ಕೂ ಹೆಚ್ಚು ವರ್ಣದ ಲಿಪ್ ಲೈನರ್ಗಳು ಬ್ಯೂಟಿ ಟ್ರೆಂಡ್ಗೆ ಸೇರಿಕೊಂಡಿವೆ. ಈ ಬಗ್ಗೆ ಮಾಹಿತಿ ಇಲ್ಲಿದೆ.

ಚಿತ್ರಕೃಪೆ: ಪಿಕ್ಸೆಲ್


ಮೇಕಪನ್ನು ಅತ್ಯಾಕರ್ಷಕವಾಗಿಸುವ ಕಲರ್ಫುಲ್ ಲಿಪ್ ಪೆನ್ಸಿಲ್ಗಳು ಬ್ಯೂಟಿ ಲೋಕಕ್ಕೆ ಕಾಲಿಟ್ಟಿದ್ದು, ವೆರೈಟಿ ಶೇಡ್ನಲ್ಲಿ ದೊರೆಯುತ್ತಿವೆ. ಹೌದು, ಇದೀಗ ಮೊದಲಿನಂತೆ ಒಂದೆರೆಡು ಬಣ್ಣದ ಲಿಪ್ ಲೈನರ್ಗಳು ಟ್ರೆಂಡ್ನಲ್ಲಿಲ್ಲ, ಬದಲಿಗೆ 12 ಕ್ಕೂ ಹೆಚ್ಚು ವರ್ಣದ ಲಿಪ್ ಲೈನರ್ಗಳು ಬ್ಯೂಟಿ ಟ್ರೆಂಡ್ಗೆ ಸೇರಿಕೊಂಡಿವೆ. ಅಲ್ಲದೇ ತುಟಿಯ ಸೌಂದರ್ಯವನ್ನು ಹೆಚ್ಚಿಸಲು ಹಾಗೂ ಪ್ರಯೋಗಾತ್ಮಕ ಲಿಪ್ ಮೇಕಪ್ಗೆ ಸಾಥ್ ನೀಡುತ್ತಿವೆ.

ಚಾಲ್ತಿಯಲ್ಲಿರುವ ಲಿಪ್ ಲೈನರ್ಸ್
ಈ ಮೊದಲಿನಿಂದಲೂ ಪಿಂಕ್ ಮಿಕ್ಸ್ ರೆಡ್, ಹೆಚ್ಚೆಂದೆರೆ ವೈಲೆಟ್, ಮಿಕ್ಸ್ ಡಾರ್ಕ್ ಶೇಡ್ಡ್ಸ್ ಮಾತ್ರ ಲಭ್ಯವಿದ್ದವು. ಇದೀಗ ಇವುಗಳಲ್ಲೂ ಬದಲಾವಣೆಗಳಾಗಿವೆ. ಊಹೆಗೂ ಮೀರಿದ ಶೇಡ್ನ ಲಿಪ್ ಲೈನರ್ಗಳು ಬಂದಿವೆ. ತಿಳಿ ಮಾತ್ರವಲ್ಲ, ಡಾರ್ಕ್ ವರ್ಣಗಳು ಡಬ್ಬಲ್ ಶೇಡ್ ಲುಕ್ ನೀಡುವಂತವು ಆಗಮಿಸಿವೆ. ಮಾಡೆಲಿಂಗ್ ಹಾಗೂ ಫ್ಯಾಷನ್ ಜಗತ್ತಿನಲ್ಲಿ ಮಾತ್ರವಲ್ಲ, ಪ್ರಯೋಗಾತ್ಮಕ ಲಿಪ್ ಮೇಕಪ್ ಮಾಡಲು ಬಯಸುವ ಸೌಂದರ್ಯ ಪ್ರಿಯರನ್ನು ಸೆಳೆದಿವೆ. ಉದಾಹರಣೆಗೆ, ನೀಲಿ, ಕರೆಂಟ್ ಬ್ಲ್ಯೂ, ವೈನ್ ರೆಡ್, ನಿಯಾನ್ ಶೇಡ್ಸ್ ಹೀಗೆ ಸಾಕಷ್ಟು ವೈಬ್ರೆಂಟ್ ಕಲರ್ನವು ಈ ಸೀಸನ್ನ ಕಲರ್ಫುಲ್ ಲಿಪ್ ಪೆನ್ಸಿಲ್ ಲಿಸ್ಟ್ಗೆ ಸೇರಿವೆ.

ಗ್ಲಾಮರಸ್ ಪ್ರಯೋಗಾತ್ಮಕ ಲುಕ್ ನೀಡುವ ಲಿಪ್ ಲೈನರ್ಸ್
ಇನ್ನು, ಕೆಲವು ಲಿಪ್ ಪೆನ್ಸಿಲ್ಗಳು ಡಬ್ಬಲ್ ಶೇಡ್ನಲ್ಲಿರುತ್ತವೆ. ಮಿಕ್ಸ್ ಅಂಡ್ ಮ್ಯಾಚ್ ಗ್ಲಾಮರಸ್ ಶೇಡ್ನ ಈ ಲಿಪ್ ಲೈನರ್ಗಳಿಂದ ನಿಮ್ಮ ತುಟಿಗಳು ಫ್ಯಾಷನ್ ಲುಕ್ ಪಡೆಯುವುದಂತೂ ಗ್ಯಾರಂಟಿ ಎನ್ನುತ್ತಾರೆ ಮೇಕಪ್ ಆರ್ಟಿಸ್ಟ್ಸ್. ಇನ್ನು ಇವು ಪೆನ್ಸಿಲ್ನಿಂದ ಸ್ಕೆಚ್ ಪೆನ್ ಶೈಲಿಗೆ ಬಡ್ತಿ ಪಡೆದಿವೆ ಎನ್ನುತ್ತಾರೆ.

ಹೊಸ ಬಣ್ಣಗಳನ್ನು ಟ್ರೈ ಮಾಡಿ ನೋಡಿ
ಇಂದು ಬ್ಯೂಟಿ ಲೋಕದಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಹೊಸ ಕಲರ್ನ ಲಿಪ್ ಲೈನರ್ಗಳು ಬಂದಿದ್ದು, ಅವುಗಳಲ್ಲಿ ಪರ್ಪಲ್, ಪೀಕಾಕ್ ಗ್ರೀನ್, ನಿಯಾನ್ ಶೇಡ್ಗಳು ಬಂದಿವೆ. ಇವು ಏನಿದ್ದರೂ ಪ್ರಯೋಗಾತ್ಮಕ ಶೇಡ್ ಬಳಕೆ ಮಾಡುವವರಿಗೆ ಹೊಂದುತ್ತವೆ ಎನ್ನುತ್ತಾರೆ ಮೇಕಪ್ ಎಕ್ಸ್ಪರ್ಟ್ಸ್.

ಲಿಪ್ ಲೈನರ್ಸ್ ಪ್ರಿಯರಿಗೆ ಟಿಪ್ಸ್
- ಉತ್ತಮ ಗುಣಮಟ್ಟದ ಲಿಪ್ಲೈನರ್ಗಳನ್ನು ಬಳಸಿ. ಇವು ಹೆಚ್ಚು ಕಾಲ ರಂಗನ್ನು ಉಳಿಸುತ್ತವೆ.
- ತುಟಿಗಳ ಬಾರ್ಡರ್ನಲ್ಲಿ ಲಿಪ್ ಲೈನರ್ನಿಂದ ತೆಳುವಾದ ಲೈನ್ ಹಾಕಿ. ಲಿಪ್ಸ್ಟಿಕ್ ಹಚ್ಚಿ.
- ಬಾರ್ಡರ್ನಿಂದ ಲೈನ್ ಹೊರ ಬಂದಲ್ಲಿ, ನಿಮ್ಮ ಬಳಿಯಿರುವ ಮಾಯಿಶ್ಚರೈಸರ್ನಲ್ಲಿ ಹತ್ತಿ ಅದ್ದಿ ಒರೆಸಿ.
- ತಿಳಿಯಾಗಿಸಲು ಕೊಂಚ ಬಫ್ನಲ್ಲಿ ಪೌಡರ್ ಸಿಂಪಡಿಸಿ.
- ಗಾಢವಾಗಿದ್ದಲ್ಲಿ ಪೌಡರ್ ಬಫ್ನಿಂದ ಒಮ್ಮೆ ಡ್ರೈ ಮಾಡಿ.
- ಡಾರ್ಕ್ ಕಲರ್ ಆಗಿದ್ದಲ್ಲಿ, ಟಿಶ್ಯೂ ಪೇಪರ್ ಒತ್ತಿ ಹಿಡಿದು ಡ್ರೈ ಮಾಡಬಹುದು.
- ಲಿಪ್ ಲೈನ್ ಹಾಕಿ ನಂತರ ಲಿಪ್ಸ್ಟಿಕ್ ಹಚ್ಚುವವರ ತುಟಿಗಳ ಬಣ್ಣ ಬೇಗ ಮಾಸದು ಮಾತ್ರವಲ್ಲ ಆಕರ್ಷಕವಾಗಿ ಕಾಣುವುದು.