Champions Trophy 2025: ವೀಕ್ಷಣೆಯಲ್ಲಿ ದಾಖಲೆ ಬರೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ
ಮಾರ್ಚ್ 9 ರಂದು ಯುಎಇಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದಿದ್ದ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ನಾಲ್ಕು ವಿಕೆಟ್‌ಗಳಿಂದ ಗೆದ್ದು ಮೂರನೇ ಬಾರಿಗೆ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು.


ದುಬೈ: ಇತ್ತೀಚೆಗೆ ಪಾಕಿಸ್ತಾನ ಮತ್ತು ಯುಎಇಯಲ್ಲಿ ನಡೆದಿದ್ದ ಐಸಿಸಿ(ICC) ಚಾಂಪಿಯನ್ಸ್ ಟ್ರೋಫಿ(Champions Trophy 2025) ಕ್ರಿಕೆಟ್ ಪಂದ್ಯಾವಳಿಯ ವೀಕ್ಷಣೆಯಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಜಾಗತಿಕ ಮಟ್ಟದಲ್ಲಿ ಪಂದ್ಯಾವಳಿಯನ್ನು ಒಟ್ಟು 36,800 ಕೋಟಿ ನಿಮಿಷಗಳ ಕಾಲ ವೀಕ್ಷಿಸಿದ್ದಾರೆ. ಇದು ಈವರೆಗಿನ ಚಾಂಪಿಯನ್ಸ್ ಟ್ರೋಫಿ ಇತಿಹಾಸದ ಸಾರ್ವಕಾಲಿಕ ದಾಖಲೆಯಾಗಿದೆ ಐಸಿಸಿ ತಿಳಿಸಿದೆ.
ಐಸಿಸಿ ಹಂಚಿಕೊಂಡ ದತ್ತಾಂಶದಲ್ಲಿ, ಫೈನಲ್ ಪಂದ್ಯವು ಜಾಗತಿಕವಾಗಿ 65.3 ಬಿಲಿಯನ್ ನೇರ ವೀಕ್ಷಣೆ ನಿಮಿಷಗಳನ್ನು ಕಂಡಿದ್ದು, ಭಾರತ ಮತ್ತು ಪಾಕಿಸ್ತಾನ ನಡುವಿನ 2017 ರ ಫೈನಲ್‌ನಲ್ಲಿ ಸ್ಥಾಪಿಸಲಾದ ಹಿಂದಿನ ದಾಖಲೆಯನ್ನು(ಶೇ. 52.1) ಮುರಿದಿದೆ. ಜಾಗತಿಕ ಪ್ರಸಾರದಲ್ಲಿ ಪಂದ್ಯಾವಳಿಯು ಒಟ್ಟು 358 ಬಿಲಿಯನ್ ಜಾಗತಿಕ ವೀಕ್ಷಣೆ ನಿಮಿಷಗಳನ್ನು ಕಂಡಿದೆ. 2017 ರ ಆವೃತ್ತಿಗೆ ಹೋಲಿಸಿದರೆ ವೀಕ್ಷಕರ ವಿಷಯದಲ್ಲಿ ಶೇ. 19 ರಷ್ಟು ಹೆಚ್ಚಳದೊಂದಿಗೆ ಪಂದ್ಯಾವಳಿಯು ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಚಾಂಪಿಯನ್ಸ್ ಟ್ರೋಫಿಯಾಗಿದೆ ಎಂದು ಐಸಿಸಿ ಹಂಚಿಕೊಂಡಿದೆ.
Records broken 👀
— ICC (@ICC) May 21, 2025
ICC Men's #ChampionsTrophy 2025 hit viewership highs like never before 📈https://t.co/sR6MSnrGrT pic.twitter.com/pC6dQIGzFb
ಮಾರ್ಚ್ 9 ರಂದು ಯುಎಇಯ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದಿದ್ದ ಫೈನಲ್‌ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ನಾಲ್ಕು ವಿಕೆಟ್‌ಗಳಿಂದ ಗೆದ್ದು ಮೂರನೇ ಬಾರಿಗೆ ಟ್ರೋಫಿ ಗೆದ್ದ ಸಾಧನೆ ಮಾಡಿತ್ತು.
ಭಾರತದಲ್ಲಿ ಅತಿ ಹೆಚ್ಚು ವೀಕ್ಷಣೆ ಹೊಂದಿದ ಐಸಿಸಿ ಪಂದ್ಯಗಳೆಂದರೆ 2023ರ ಐಸಿಸಿ ಏಕದಿನ ವಿಶ್ವಕಪ್‌ನ ಭಾರತ-ಕಿವೀಸ್ ಸೆಮಿಫೈನಲ್ ಮತ್ತು ಭಾರತ-ಆಸ್ಟ್ರೇಲಿಯ ನಡುವಣ ಫೈನಲ್ ಪಂದ್ಯಗಳು.