Seetha Rama Serial: ಮುಕ್ತಾಯಗೊಂಡ ಸೀತಾ ರಾಮ ಧಾರಾವಾಹಿ: ಈ ದಿನಾಂಕದಂದು ಕೊನೆ
Seetha Rama Kannada Serial end soon: ಈಗಾಗಲೇ ಸೀತಾ ರಾಮ ಧಾರಾವಾಹಿಯ ಕೊನೆಯ ದಿನದ ಶೂಟ್ ಪೂರ್ಣಗೊಂಡಿದೆ. ಕೊನೇ ದಿನದ ಶೂಟಿಂಗ್‌ನಲ್ಲಿ ಇಡೀ ತಂಡ ಭಾಗಿಯಾಗಿದೆ. ಆ ಭಾವುಕ ಕ್ಷಣಗಳ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಲಾವಿದರು ಹಂಚಿಕೊಂಡಿದ್ದಾರೆ.

Seetha rama Serial

ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರುವ ಸೀತಾ ರಾಮ ಧಾರಾವಾಹಿ (Seetha Rama serial) ಕೆಲವೇ ದಿನಗಳಲ್ಲಿ ಕೊನೆಯಾಗಲಿದೆ. ಎಲ್ಲರಿಗೂ ಒಂದೊಂದೆ ಸತ್ಯ ಗೊತ್ತಾಗುತ್ತಿದ್ದು, ಧಾರಾವಾಹಿ ಮುಕ್ತಾಯದ ಸೂಚನೆ ನೀಡಿದೆ. ಕಥಾ ನಾಯಕಿ ಸೀತಾಗೆ ಇಷ್ಟುದಿನ ಮುಚ್ಚಿಟ್ಟಿದ್ದ ಬಹುದೊಡ್ಡ ಸತ್ಯ ಗೊತ್ತಾಗಿ ಹೋಗಿದೆ. ಇಷ್ಟುದಿನ ತನ್ನ ಜೊತೆ ಇದ್ದಿದ್ದು ನನ್ನ ಮಗಳು ಸಿಹಿ ಅಲ್ಲ.. ಆಕೆ ಮಗಳಂತೆ ಕಾಣುವ ಸುಬ್ಬಿ ಎಂಬುದು ತಿಳಿದಾಗಿದೆ. ಇನ್ನೇನು ಕೆಲವೇ ಎಪಿಸೋಡ್ನಲ್ಲಿ ಇದೆಲ್ಲ ಭಾರ್ಗವಿಯ ಕೃತ್ಯ ಎಂಬುದು ಗೊತ್ತಾಗಬೇಕಿದೆಯಷ್ಟೆ.
ಈಗಾಗಲೇ ಸೀತಾ ರಾಮ ಧಾರಾವಾಹಿಯ ಕೊನೆಯ ದಿನದ ಶೂಟ್ ಪೂರ್ಣಗೊಂಡಿದೆ. ಎರಡು ಮೂರು ವಾರಗಳಲ್ಲಿ ಧಾರಾವಾಹಿ ಕೊನೆಗೊಳ್ಳಲಿದೆ. ಮರಾಠಿ ಧಾರಾವಾಹಿ ‘ಮುಜಿ ತುಜಿ ರೇಶಿಮಗಾಡ’ ಧಾರಾವಾಹಿಯ ರಿಮೇಕ್ ಆಗಿ ಸೀತಾ ರಾಮ ಧಾರಾವಾಹಿ ಮೂಡಿ ಬಂತು. 2023ರ ಜುಲೈ 17ರಂದು ಈ ಧಾರಾವಾಹಿ ಪ್ರಸಾರ ಆರಂಭಿಸಿತು. ಸುಮಾರು ಎರಡು ವರ್ಷಗಳ ಕಾಲ ಪ್ರಸಾರ ಕಂಡ ಈ ಧಾರಾವಾಹಿಗೆ ಇನ್ನು ಕೆಲವೇ ದಿನಗಳಲ್ಲಿ ಕೊನೆಯ ಎಪಿಸೋಡ್ ಪ್ರಸಾರ ಕಾಣಲಿದೆ. ಈ ಧಾರಾವಾಹಿ ಈ ವರೆಗೆ 465 ಎಪಿಸೋಡ್ಗಳನ್ನು ಪ್ರಸಾರ ಕಂಡಿದೆ.
ಸೀತಾ ರಾಮ ಸೀರಿಯಲ್‌ನ ಕೊನೇ ದಿನದ ಶೂಟಿಂಗ್‌ನಲ್ಲಿ ಇಡೀ ತಂಡ ಭಾಗಿಯಾಗಿದೆ. ಆ ಭಾವುಕ ಕ್ಷಣಗಳ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಲಾವಿದರು ಹಂಚಿಕೊಂಡಿದ್ದಾರೆ. ಸೀತಾ ಪಾತ್ರ ಮಾಡಿದ್ದ ನಟಿ ವೈಷ್ಣವಿ ಗೌಡ ಅವರು ಕೂಡ ಕೆಲವೊಂದು ಸ್ಪೆಷಲ್ ಫೋಟೋಗಳನ್ನು ಹಂಚಿಕೊಂಡು, ತಮ್ಮ ಮನದಾಳದ ಮಾತುಗಳನ್ನು ಹೇಳಿಕೊಂಡಿದ್ದಾರೆ.
"ಈ ಅಂತ್ಯವು ಉತ್ತಮವೊಂದರ ಆರಂಭ ಮಾತ್ರ. ನನ್ನ ವೃತ್ತಿಜೀವನದ ಅತ್ಯಂತ ಸ್ಮರಣೀಯ ಪ್ರಾಜೆಕ್ಟ್‌ಗಳಲ್ಲಿ ಇದು ಒಂದಾಗಿದೆ. ಇದನ್ನು ಮಾಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು. ಸೀತಾ ಎಂದು ಸಹಿ ಹಾಕುತ್ತಿದ್ದೇನೆ. ಆದರೆ ಶೀಘ್ರದಲ್ಲೇ ಅದ್ಭುತವಾದ ಯೋಜನೆಯೊಂದಿಗೆ ನಿಮ್ಮನ್ನು ಭೇಟಿಯಾಗುತ್ತೇನೆ ಎಂದು ಭರವಸೆ ನೀಡುತ್ತೇನೆ" ಎಂದು ವೈಷ್ಣವಿ ಗೌಡ ಹೇಳಿಕೊಂಡಿದ್ದಾರೆ.
Rakesh Poojary: ರಾಕೇಶ್ ಪೂಜಾರಿಗೆ ವಿಶೇಷ ಗೌರವ ಸಲ್ಲಿಸಿದ ಭರ್ಜರಿ ಬ್ಯಾಚುಲರ್ಸ್ ತಂಡ
ಕೊನೆಯ ದಿನದ ಶೂಟಿಂಗ್‌ನಲ್ಲಿ ನಟ ಗಗನ್ ಚಿನ್ನಪ್ಪ, ವೈಷ್ಣವಿ ಗೌಡ, ಪದ್ಮಕಲಾ ಡಿ ಎಸ್, ಕಲಾಗಂಗೋತ್ರಿ ಮಂಜು, ಮುಖ್ಯಮಂತ್ರಿ ಚಂದ್ರು, ಸಿಂಧು ರಾವ್, ಪೂಜಾ ಲೋಕೇಶ್, ಜಯದೇವ್ ಮೋಹನ್, ಅಶೋಕ್ ಶರ್ಮಾ, ರೀತು ಸಿಂಗ್ ನೇಪಾಳ, ಪೂರ್ಣಚಂದ್ರ ಮುಂತಾದವರು ಭಾಗವಹಿಸಿದ್ದರು. ಇದರ ಫೋಟೋ ಕೂಡ ವೈರಲ್ ಆಗುತ್ತಿದೆ.
ಅಂದಹಾಗೆ ಸೀತಾ ರಾಮ ಧಾರಾವಾಹಿ ಈ ಮೊದಲು ಪ್ರೈಮ್ ಟೈಮ್ನಲ್ಲಿ ಪ್ರಸಾರ ಕಾಣುತ್ತಿತ್ತು. ಇತ್ತೀಚೆಗೆ ನಾನಿನ್ನ ಬಿಡಲಾರೆ ಧಾರಾವಾಹಿ ಪ್ರಸಾರ ಆರಂಭ ಆಗುತ್ತಿದ್ದಂತೆ ಸೀತಾ ರಾಮ ಸಮಯವನ್ನು ಸಂಜೆ 5.30ಕ್ಕೆ ಬದಲಾವಣೆ ಮಾಡಲಾಯಿತು. ಇದರಿಂದ ಜನಪ್ರಿಯತೆ ಕಡಿಮೆ ಆಯಿತು.