Viral Video: ಬೆಕ್ಕನ್ನು ಬಳಸಿಕೊಂಡು ಜೈಲಿಗೆ ಮಾದಕವಸ್ತುಗಳ ಕಳ್ಳಸಾಗಾಣಿಕೆ; ವಿಡಿಯೊ ವೈರಲ್
ಕೋಸ್ಟರಿಕಾದ ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಬೆಕ್ಕನ್ನು ಬಳಸಿಕೊಂಡಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಬೆಕ್ಕಿನ ದೇಹಕ್ಕೆ ಮಾದಕ ವಸ್ತುಗಳನ್ನು ಅಂಟಿಸಿ ಜೈಲಿಗೆ ಕಳುಹಿಸಲಾಗಿದೆ. ಇದು ಪೊಲೀಸರ ಗಮನಕ್ಕೆ ಬಂದಿದ್ದು, ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.


ನವದೆಹಲಿ: ಮಾದಕವಸ್ತುಗಳು ಸಮಾಜಕ್ಕೆ ಶಾಪದಂತೆ ಅಂಟಿಕೊಂಡಿದೆ. ಅಕ್ರ ಕಳ್ಳ ಸಾಗಾಣಿಕೆ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತವೆ. ಇದೀಗ ಇಲ್ಲೊಂದು ಪ್ರಕರಣದಲ್ಲಿ ಜನರ ಬದಲು ಬೆಕ್ಕನ್ನು(Cat) ಬಳಸಿಕೊಂಡಿದ್ದಾರೆ. ಹೌದು, ಕೋಸ್ಟರಿಕಾದ ಜೈಲಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡಲು ಬೆಕ್ಕನ್ನು ಬಳಸಿಕೊಂಡಿರುವ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ಇತ್ತೀಚೆಗೆ ಪೊಕೊಸಿ ಜೈಲಿನ ಹೊರಗೆ ಕಪ್ಪು-ಬಿಳಿ ಬಣ್ಣದ ಬೆಕ್ಕಿನ ದೇಹಕ್ಕೆ ಮಾದಕ ವಸ್ತುಗಳನ್ನು ಟೇಪ್ ಮೂಲಕ ಅಂಟಿಸಲಾಗಿತ್ತು. ಬೇಲಿಯ ಉದ್ದಕ್ಕೂ ತೆವಳುತ್ತಿರುವ ಬೆಕ್ಕಿನ ತುಪ್ಪಳದ ಮೇಲೆ ಕೆಲವು ತೇಪೆಗಳನ್ನು ಹಾಕಿರುವುದನ್ನು ಜೈಲಿನ ಹೊರಗಿನ ಸಿಬ್ಬಂದಿಗಳು ಗಮನಿಸಿದ ನಂತರ ಈ ಕಳ್ಳಸಾಗಣೆ ಪ್ರಕರಣ ಬೆಳಕಿಗೆ ಬಂದಿದೆ. ಬೆಕ್ಕನ್ನು ಹಿಡಿದ , ಅಧಿಕಾರಿಗಳು ಸುಮಾರು 236 ಗ್ರಾಂ ಗಾಂಜಾ, 68 ಗ್ರಾಂ ಹೆರಾಯಿನ್ ಮತ್ತು ಅದರ ಬೆನ್ನಿಗೆ ಟೇಪ್ ಮಾಡಿದ ರೋಲಿಂಗ್ ಪೇಪರ್‌ಗಳನ್ನು ನೋಡಿದ್ದಾರೆ. ಬೆಕ್ಕಿನ ಮೇಲಿದ್ದ ಪ್ಯಾಕೆಟ್‌ಗಳನ್ನು ತೆಗೆದುಹಾಕಿದ್ದಾರೆ.ನಂತರ ಅಧಿಕಾರಿಗಳು ಬೆಕ್ಕನ್ನು ಆರೋಗ್ಯ ತಪಾಸಣೆಗಾಗಿ ರಾಷ್ಟ್ರೀಯ ಪ್ರಾಣಿ ಆರೋಗ್ಯ ಸೇವೆಗೆ ಹಸ್ತಾಂತರಿಸಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
ಜೈಲು ಅಧಿಕಾರಿಗಳು ಈ ಘಟನೆಯ ಬಗ್ಗೆ ತನಿಖೆಯನ್ನು ಶುರುಮಾಡಿದ್ದಾರೆ. ಬೆಕ್ಕಿನ ಚಲನವಲನ ಮತ್ತು ಅದು ಜೈಲಿಗೆ ಎಲ್ಲಿಂದ ಬಂದಿತು ಎಂಬುದನ್ನು ತಿಳಿಯಲು ಅಧಿಕಾರಿಗಳು ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ.
ಕೋಸ್ಟರಿಕಾದಲ್ಲಿ ಕೈದಿಗಳು ಬೆಕ್ಕುಗಳನ್ನು ಬಳಸಿಕೊಂಡು ಜೈಲುಗಳಿಗೆ ಮಾದಕವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ. ಈ ಬೆಕ್ಕುಗಳನ್ನು ಆಹಾರ ನೀಡುವ ಆಮಿಷವೊಡ್ಡಿ ಒಳಗೆ ಕರೆಯಲಾಗುತ್ತದೆ ಮತ್ತು ಜೈಲಿನ ಆವರಣಕ್ಕೆ ಪ್ರವೇಶಿಸಲು ತರಬೇತಿ ನೀಡಲಾಗುತ್ತದೆ. ನಂತರ ಕೈದಿಗಳು ಅಥವಾ ಹೊರಗಿನ ಅವರ ಸಹಚರರು ಅವುಗಳಿಗೆ ಸಣ್ಣ ಪ್ರಮಾಣದ ಮಾದಕವಸ್ತುಗಳನ್ನು ಅಂಟಿಸುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಕೋಸ್ಟರಿಕಾದಲ್ಲಿ ಅಪರಾಧ ಮತ್ತು ಮಾದಕವಸ್ತು ಕಳ್ಳಸಾಗಣೆ ಹೆಚ್ಚುತ್ತಿದೆ. 2023 ರಲ್ಲಿ ಮಾತ್ರ, ಅಧಿಕಾರಿಗಳು ದೇಶಾದ್ಯಂತ 21.3 ಟನ್ ಕೊಕೇನ್ ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಈ ಸುದ್ದಿಯನ್ನೂ ಓದಿ:Viral Video: ಬೆಂಗಳೂರನ್ನು ಐಜ್ವಾಲ್‌ನೊಂದಿಗೆ ಹೋಲಿಸಿದ ವಿದೇಶಿ ಕಂಟೆಂಟ್ ಕ್ರಿಯೇಟರ್; ಕಾರಣವೇನು?
ಇತ್ತೀಚೆಗಷ್ಟೇ ಉತ್ತರಪ್ರದೇಶದ ಹೋಶಿಯಾರ್‌ಪುರ ಜಿಲ್ಲೆಯ ಬಸ್ತಿ ಸೆನ್ಸಿಯನ್ ಗ್ರಾಮದಲ್ಲಿ ಮಹಿಳೆಯೊಬ್ಬಳು ಮಾದಕವಸ್ತುಗಳನ್ನು ಮಾರುತ್ತಿದ್ದ ಆಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ವಿಡಿಯೊ ವೈರಲ್ ಆದ ನಂತರ, ಪೊಲೀಸರು ತಕ್ಷಣ ಕ್ರಮ ಕೈಗೊಂಡು ಮಹಿಳೆಯನ್ನು ಬಂಧಿಸಿದ್ದರು. ವೈರಲ್ ಆದ ಈ ವಿಡಿಯೊದಲ್ಲಿ ಕೆಲವು ಯುವಕರು ಬೈಕಿನಲ್ಲಿ ಬಂದು ಮಹಿಳೆಯಿಂದ ಮಾದಕ ದ್ರವ್ಯ ಪ್ಯಾಕೆಟ್‌ಗಳನ್ನು ತೆಗೆದುಕೊಳ್ಳುತ್ತಿರುವುದು ಸೆರೆಯಾಗಿದೆ. ಡಿಎಸ್ಪಿ ಜಸ್ಪ್ರೀತ್ ಸಿಂಗ್ ಮತ್ತು ಎಸ್‌ಎಚ್‌ಒ ಜೈಪಾಲ್ ಸಿಂಗ್ ನೇತೃತ್ವದ ಪೊಲೀಸ್ ತಂಡವು ಬಸ್ತಿ ಸೆನ್ಸಿಯನ್‌ನಲ್ಲಿ ಶೋಧ ಕಾರ್ಯಾಚರಣೆ ನಡೆಸಿತು.ಮಾದಕವಸ್ತು ಪೂರೈಕೆದಾರ ಸಂದೀಪ್ ಕೌರ್ ಅಲಿಯಾಸ್ ಶೆರ್ನಿಯನ್ನು ಬಂಧಿಸಲಾಯಿತು ಮತ್ತು ಆಕೆಯಿಂದ 15 ಮಾದಕ ದ್ರವ್ಯ ಇಂಜೆಕ್ಷನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಏಳು ಅನುಮಾನಾಸ್ಪದ ಬೈಕ್‍ಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.