IPL 2025: ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರಜತ್ ಪಾಟೀದಾರ್
ಪಾಟೀದಾರ್ ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದರು. 15 ರನ್ ಗಳಿಸುತ್ತಿದ್ದಂತೆ, ಆರ್‌ಸಿಬಿ ಪರ ಸಾವಿರ ರನ್ ಗಳಿಸಿದ 3ನೇ ಭಾರತೀಯ ಆಟಗಾರ ಎನಿಸಿಕೊಂಡರು. ಕೊಹ್ಲಿ, ಪಡಿಕ್ಕಲ್ ಮೊದಲಿಬ್ಬರು. ಪಂಜಾಬ್ ಪರ ಪಾಟೀದಾರ್ 22 ರನ್ ಬಾರಿಸಿದರು.


ಬೆಂಗಳೂರು: ಶುಕ್ರವಾರ ನಡೆದಿದ್ದ ಐಪಿಎಲ್(IPL 2025) ಪಂದ್ಯದಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು(RCB vs PBKS) ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್ ಅಂತರದ ಸೋಲು ಕಂಡರೂ ಈ ಪಂದ್ಯದಲ್ಲಿ ನಾಯಕ ರಜತ್ ಪಾಟೀದಾರ್(Rajat Patidar) ಅವರು ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ. ಪಂದ್ಯದಲ್ಲಿ 16 ರನ್ ಪೂರ್ಣಗೊಳಿಸುತ್ತಿದ್ದಂತೆ ಐಪಿಎಲ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದ್ದಾರೆ.
ಸಚಿನ್ ತೆಂಡೂಲ್ಕರ್ 31 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ನಿರ್ಮಿಸಿದ್ದರು. ಇದೀಗ ಪಾಟೀದಾರ್ 30 ಇನಿಂಗ್ಸ್‌ನಲ್ಲಿ ಈ ಗುರಿ ತಲುಪಿದ್ದಾರೆ. ದಾಖಲೆ ಗುಜರಾತ್ ಟೈಟಾನ್ಸ್ ತಂಡದ ಯುವ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಹೆಸರಿನಲ್ಲಿದೆ. ಅವರು ಕೇವಲ 25 ಇನಿಂಗ್ಸ್‌ನಲ್ಲಿ ಈ ದಾಖಲೆ ನಿರ್ಮಿಸಿದ್ದರು.
ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 1000 ರನ್ ಗಳಿಸಿದ ಭಾರತೀಯರು
ಸಾಯಿ ಸುದರ್ಶನ್- 25 ಇನಿಂಗ್ಸ್
ರಜತ್ ಪಾಟೀದಾರ್-30 ಇನಿಂಗ್ಸ್
ಸಚಿನ್ ತೆಂಡೂಲ್ಕರ್-31 ಇನಿಂಗ್ಸ್
ಋತುರಾತ್ ಗಾಯಕ್ವಾಡ್-31 ಇನಿಂಗ್ಸ್
ತಿಲಕ್ ವರ್ಮಾ-33 ಇನಿಂಗ್ಸ್
ಆರ್‌ಸಿಬಿ ಪರ ದಾಖಲೆ
ಪಾಟೀದಾರ್ ಈ ಪಂದ್ಯದಲ್ಲಿ ಮತ್ತೊಂದು ದಾಖಲೆಯನ್ನು ಕೂಡ ತಮ್ಮ ಹೆಸರಿಗೆ ಬರೆದರು. 15 ರನ್ ಗಳಿಸುತ್ತಿದ್ದಂತೆ, ಆರ್‌ಸಿಬಿ ಪರ ಸಾವಿರ ರನ್ ಗಳಿಸಿದ 3ನೇ ಭಾರತೀಯ ಆಟಗಾರ ಎನಿಸಿಕೊಂಡರು. ಕೊಹ್ಲಿ, ಪಡಿಕ್ಕಲ್ ಮೊದಲಿಬ್ಬರು. ಪಂಜಾಬ್ ಪರ ಪಾಟೀದಾರ್ 22 ರನ್ ಬಾರಿಸಿದರು.
ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದಿದ್ದ ಮಳೆ ಪೀಡಿತ ಕದನದಲ್ಲಿ ಉತ್ಕೃಷ್ಟ ಮಟ್ಟದ ಬೌಲಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ತೋರಿದ ಪಂಜಾಬ್ ಕಿಂಗ್ಸ್ ತಂಡ, ಆತಿಥೇಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿತ್ತು.
ಇದನ್ನೂ ಓದಿ IPL 2025 Points Table: ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ
14 ಓವರ್‌ಗಳಿಗೆ ಇಳಿಸಲ್ಪಟ್ಟ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ಟಿಮ್ ಡೇವಿಡ್ ಅವರ ಅಜೇಯ ಅರ್ಧಶತಕದ ನೆರವಿನಿಂದ 9 ವಿಕೆಟ್‌ಗೆ 95 ರನ್ ಬಾರಿಸಿತು. ಜಾವಾಬಿತ್ತ ಪಂಜಾಬ್ ಕಿಂಗ್ಸ್ ಹಲವು ಏರಿಳಿತದ ಮಧ್ಯೆಯೂ 12.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 98 ರನ್ ಬಾರಿಸಿ ಗೆಲುವು ಸಾಧಿಸಿತ್ತು.