Sunil Joshi: ಕನ್ನಡಿಗ ಸುನಿಲ್ ಜೋಶಿ ಟೀಮ್ ಇಂಡಿಯಾಕ್ಕೆ ಸ್ಪಿನ್ ಕೋಚ್?
ಬಿಸಿಸಿಐ(BCCI) ಮೂಲಗಳ ಪ್ರಕಾರ ಜೋಶಿ ಅವರು ಈಗಾಗಲೇ ಬಿಸಿಸಿಐನ ಆಯ್ಕೆ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಬಿಸಿಸಿಐನ ಶ್ರೇಷ್ಠತಾ ಕೇಂದ್ರದ (ಸೆಂಟರ್ ಆಫ್ ಎಕ್ಸಲೆನ್ಸ್) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಬೇ ಕುರುವಿಲ್ಲಾ ಅವರು ಸಂದರ್ಶನ ನಡೆಸಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ, ಕನ್ನಡಿಗ ಸುನಿಲ್ ಜೋಶಿ(Sunil Joshi) ಅವರು ಭಾರತ ಕ್ರಿಕೆಟ್ ತಂಡಕ್ಕೆ ಸ್ಪಿನ್ ಕೋಚ್(Team India Spin Coach) ಆಗಿ ಆಯ್ಕೆಯಾಗುವ ಸಾಧ್ಯತೆ ಇದೆ. ಹೀಗೊಂದು ಸುದ್ದಿ ಈಗ ಹರಿದಾಡುತ್ತಿದೆ. ವರ್ಷದ ಆರಂಭದಲ್ಲಿ ಸಾಯಿರಾಜ್ ಬಹುತುಳೆ ಅವರಿಂದ ತೆರವಾಗಿದ್ದ ಈ ಸ್ಥಾನಕ್ಕೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹುಡುಕಾಟ ನಡೆಸುತ್ತಿದೆ. ಮೂಲಗಳ ಪ್ರಕಾರ ಸುನಿಲ್ ಜೋಶಿ ಆಯ್ಕೆಯಾಗುವುದು ಖಚಿತ ಎಂದಾದರೂ ಅದಿನ್ನೂ ಅಧಿಕೃತವಾಗಿಲ್ಲ.
ಬಿಸಿಸಿಐ(BCCI) ಮೂಲಗಳ ಪ್ರಕಾರ ಜೋಶಿ ಅವರು ಈಗಾಗಲೇ ಬಿಸಿಸಿಐನ ಆಯ್ಕೆ ಸಮಿತಿಯ ಮುಂದೆ ಸಂದರ್ಶನಕ್ಕೆ ಹಾಜರಾಗಿದ್ದಾರೆ. ಬಿಸಿಸಿಐನ ಶ್ರೇಷ್ಠತಾ ಕೇಂದ್ರದ (ಸೆಂಟರ್ ಆಫ್ ಎಕ್ಸಲೆನ್ಸ್) ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಅಬೇ ಕುರುವಿಲ್ಲಾ ಅವರು ಸಂದರ್ಶನ ನಡೆಸಿದ್ದಾರೆ ಎನ್ನಲಾಗಿದೆ.
ರಾಜಸ್ಥಾನ ರಾಯಲ್ಸ್ ತಂಡದ ಸ್ಪಿನ್ ಕೋಚ್ ಸ್ಥಾನ ಪಡೆಯುವುದಕ್ಕಾಗಿ ಬಹುತುಳೆ ಭಾರತದ ತಂಡದ ಕೋಚಿಂಗ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಸುನಿಲ್ ಜೋಶಿ ಸದ್ಯ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದಾರೆ.
54 ವರ್ಷ ವಯಸ್ಸಿನ ಜೋಶಿ ಅವರು ಭಾರತದ ಪರ 15 ಟೆಸ್ಟ್ ಪಂದ್ಯ ಆಡಿದ್ದಾರೆ. ಒಟ್ಟು 41 ವಿಕೆಟ್ ಪಡೆದಿದ್ದಾರೆ. ಬ್ಯಾಟಿಂಗ್‌ನಲ್ಲೂ ಗುಣಮಟ್ಟದ ಆಟ ಪ್ರದರ್ಶಿಸಿರುವ ಅವರು 1 ಅರ್ಧಶತಕ ಒಳಗೊಂಡಂತೆ 352 ರನ್‌ಗಳಿಸಿದ್ದಾರೆ.
ಇದನ್ನೂ ಓದಿ IPL 2025: ದಿಗ್ಗಜ ಸಚಿನ್, ಲಾರಾ ಮನಗೆದ್ದ ವೈಭವ್ ಸೂರ್ಯವಂಶಿ
ದೇಶೀಯ ಕ್ರಿಕೆಟ್‌ನಲ್ಲಿ ಜೋಶಿ ಉತ್ತರಪ್ರದೇಶ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅಲ್ಲದೆ, ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್ ತಂಡದ ಸ್ಪಿನ್ ಬೌಲಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಕೂಡ ಹೊಂದಿದ್ದಾರೆ.