ತಪ್ಪು ದಿನಾಂಕದ ಮಾಹಿತಿ; ಕ್ರೀಡಾಪಟುಗಳಿಗೆ ಅನ್ಯಾಯ
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ನಡೆದ ಜಿಲ್ಲಾಮಟ್ಟದ ಕ್ರೀಡಾ ಕೂಟದಲ್ಲಿ ಕಬಡ್ಡಿಯಲ್ಲಿ ವಿಜೇತರಾಗಿ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದ ಬಾಲಕಿಯರಿಗೆ ಸೆ.30ರಂದು ಶಿವಮೊಗ್ಗದಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಾಹಿತಿ ನೀಡಲಾಗಿತ್ತು ಎನ್ನಲಾಗಿದೆ. ಆದರೆ ಸ್ಪರ್ಧೆ ಸೆ.29ರಂದೇ ನಡೆದಿರುವುದು ಬಳಿಕ ತಿಳಿದುಬಂದಿದ್ದು, ಬಾಲಕಿಯರಿಗೆ ವಿಭಾಗೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸುವ ಅವಕಾಶವೇ ಕೈತಪ್ಪಿದೆ ಎಂದು ಪೋಷಕರು ಆರೋಪಿಸಿದರು.