ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

ಸಂಕಷ್ಟದ ವೇಳೆ ಯುಎಇ ಪ್ರವಾಸಿಗರಿಗೆ ಆಪತ್ಬಾಂಧವನಾದ 'ಕನ್ನಡಿಗಾಸ್ ಹೆಲ್ಪ್ ಲೈನ್’

ಕನ್ನಡಿಗಾಸ್ ಹೆಲ್ಪ್ ಲೈನ್ ಗೆ ಅನಿವಾಸಿಗಳಿಂದ ಮೆಚ್ಚುಗೆ

ಅಮೆರಿಕ- ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷದ ಪರಿಣಾಮವಾಗಿ ಮಧ್ಯೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಸಂದರ್ಭದಲ್ಲಿ ಯುಎಇಯಲ್ಲಿ ಸಂಕಷ್ಟಕ್ಕೀಡಾಗಿದ್ದ ಪ್ರವಾಸಿ ಕನ್ನಡಿಗರನ್ನು ರಕ್ಷಿಸಲು ಆಪತ್ಬಾಂಧವನಾಗಿ ಹಗಲಿರುಳು ಕಾರ್ಯನಿರ್ವಹಿಸಿದ 'ಕನ್ನಡಿಗಾಸ್ ಹೆಲ್ಪ್ ಲೈನ್’ ಗೆ ಅನಿವಾಸಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಮ್ಮೊಂದಿಗೆ ಪ್ರೀತಿ, ಮೋದಿ ಜತೆ ಮದುವೆ ಎಂದಿದ್ದ ಖರ್ಗೆಗೆ ತೀಕ್ಷ್ಣ ಉತ್ತರ ಕೊಟ್ಟ ಎಚ್.ಡಿ. ದೇವೇಗೌಡರು

ಕಾಂಗ್ರೆಸ್‌ಗೆ ವಿಚ್ಛೇದನ ಕೊಟ್ಟಿದ್ದಕ್ಕೆ ಕಾರಣ ಕೊಟ್ಟ ಎಚ್‌.ಡಿ.ದೇವೇಗೌಡರು

HD Deve Gowda: ಕಾಂಗ್ರೆಸ್ ಪಕ್ಷದ ಜೊತೆಗಿನದ್ದು ಪ್ರೀತಿಯಲ್ಲ, ಅದು ಒಂದು ಬಲವಂತದ ಮದುವೆಯಾಗಿತ್ತು ಎಂದು ಕಿಡಿಕಾರಿರುವ ಮಾಜಿ ಪ್ರಧಾನಿಗಳು, ಆ ಅಂದಿನ ಸಂಬಂಧದಲ್ಲಿನ ಕಿರುಕುಳ ಹಾಗೂ ಹಿಂಸೆ ಇದ್ದ ಕಾರಣದಿಂದಲೇ ನಾನು ಅವರಿಗೆ ವಿಚ್ಛೇದನ ನೀಡಿದೆ ಎಂದು ಹೇಳಿದ್ದಾರೆ.

ಕಾಯಿನ್‌ಸ್ವಿಚ್‌ನಿಂದ ಭಾರತದ ಎಚ್‌ಎನ್‌ಐಗಳು ಮತ್ತು ಸಂಸ್ಥೆಗಳಿಗೆ ಸುರಕ್ಷಿತ ಕ್ರಿಪ್ಟೋ ಕಸ್ಟಡಿ ಪರಿಹಾರವಾದ ಡಿಜಿವಾಲ್ಟ್ ಬಿಡುಗಡೆ

ಭಾರತದ ಕ್ರಿಪ್ಟೋ ಪರಿಸರ ವ್ಯವಸ್ಥೆ ಪ್ರಬುದ್ಧ ಹಂತಕ್ಕೆ ತಲುಪಿದೆ

ಭಾರತೀಯ ನಿಯಮಗಳಿಗೆ ಪೂರಕವಾದ ಬಲವಾದ ಕಸ್ಟಡಿ ಮೂಲಸೌಕರ್ಯದ ಕೊರತೆಯು ಒಂದು ದೊಡ್ಡ ಸವಾಲಾಗಿತ್ತು. ಡಿಜಿವಾಲ್ಟ್ ಈ ಕೊರತೆಯನ್ನು ನೀಗಿಸಲಿದ್ದು, ಜಾಗತಿಕ ಮಟ್ಟದ ಭದ್ರತೆ, ಸ್ಥಳೀಯ ನಿಯಮಗಳಿಗೆ ಅನುಗುಣವಾದ ಆಡಳಿತ ಮತ್ತು ಟೋಕ ನೈಸೇಶನ್‌ಗೆ ಸಿದ್ಧವಾಗಿರುವ ಮೂಲ ಸೌಕರ್ಯವನ್ನು ಒದಗಿಸಲಿದೆ.

ಮಲ್ಲಿಕಾರ್ಜುನ ಮುತ್ಯಾಗೆ ತಾತ್ಕಾಲಿಕ ರಿಲೀಫ್‌; ಪೋಕ್ಸೊ ಪ್ರಕರಣದ ತನಿಖೆಗೆ ಹೈಕೋರ್ಟ್‌ ಮಧ್ಯಂತರ ತಡೆ

ಮಲ್ಲಿಕಾರ್ಜುನ ಮುತ್ಯಾಗೆ ತಾತ್ಕಾಲಿಕ ರಿಲೀಫ್‌; ತನಿಖೆಗೆ ಹೈಕೋರ್ಟ್‌ ತಡೆ

Mallikarjun Mutya Case: ಪೋಕ್ಸೊ ಪ್ರಕರಣದಲ್ಲಿ ನಡೆಯುತ್ತಿದ್ದ ತನಿಖೆಗೆ ತಡೆ ನೀಡಿ ಹೈಕೋರ್ಟ್‌ನ ಕಲಬುರಗಿ ವಿಭಾಗೀಯ ಪೀಠ ಆದೇಶ ಹೊರಡಿಸಿದೆ. ಬಾಲಕಿ ಜತೆ ಅನುಚಿತವಾಗಿ ವರ್ತನೆ ಆರೋಪದಲ್ಲಿ ಕಳೆದ ಫೆಬ್ರವರಿ 25 ರಂದು ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೊ ಪ್ರಕರಣ ದಾಖಲಾಗಿತ್ತು.

SED: ನೈಸರ್ಗಿಕ ಬುದ್ಧಿಮತ್ತೆ ಮತ್ತು ನರವಿಜ್ಞಾನ ಆಧಾರಿತ ಕಲಿಕಾ ರೋಗನಿರ್ಣಯ ವೇದಿಕೆ ಪ್ರಾರಂಭ

ನೈಸರ್ಗಿಕ ಬುದ್ಧಿಮತ್ತೆ ಆಧಾರಿತ ಕಲಿಕಾ ರೋಗನಿರ್ಣಯ ವೇದಿಕೆ ಪ್ರಾರಂಭ

ರಗತಿಗಳಾದ್ಯಂತ, ಕಳಪೆ ಕಾರ್ಯಕ್ಷಮತೆ ಹೊಂದಿರುವವರು ಎಂದು ಲೇಬಲ್ ಮಾಡಲಾದ ಅನೇಕ ವಿದ್ಯಾರ್ಥಿಗಳು ಸಾಮಾನ್ಯವಾಗಿ ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಸಾಂಪ್ರದಾಯಿಕ ಮೌಲ್ಯಮಾಪನಗಳು ಫಲಿತಾಂಶ ಗಳನ್ನು ಅಳೆಯಲು ಒಲವು ತೋರುತ್ತವೆ, ಆದರೆ ಅವು ವಿದ್ಯಾರ್ಥಿ ಹೇಗೆ ಕಲಿಯುತ್ತಾನೆ ಎಂಬು ದನ್ನು ವಿರಳವಾಗಿ ವಿವರಿಸುತ್ತವೆ

MLA B.N. Ravikumar: ಶಿಡ್ಲಘಟ್ಟದಲ್ಲಿ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭ: 2000 ಕೋಟಿ ಅನುದಾನ ಗುರಿ: ಶಾಸಕ ರವಿಕುಮಾರ್

ಶಿಡ್ಲಘಟ್ಟದಲ್ಲಿ ಅಭಿವೃದ್ಧಿಯ ಹೊಸ ಶಕೆ ಪ್ರಾರಂಭ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಶಿಫಾರಸ್ಸಿನ ಮೇರೆಗೆ ಪಲ್ಚರ್ ರಸ್ತೆಯ ಅಭಿವೃದ್ಧಿಗೆ ಈಗಾಗಲೇ 5 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ತಿಳಿಸಿದರು. ಜೊತೆಗೆ, ಹೆಚ್.ಡಿ. ಕುಮಾರಸ್ವಾಮಿ ಅವರ ಸಹಕಾರದಿಂದ ಸಿ.ಎಸ್.ಆರ್ ನಿಧಿಯಡಿ ಹೆಚ್ಚಿನ ಅನುದಾನ ವನ್ನು ತಾಲೂಕಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ

ಜಿಲ್ಲಾಡಳಿತ ಭವನದಲ್ಲಿ ಶಾಶ್ವತವಾಗಿ ಸ್ವಸಹಾಯ ಸಂಘಗಳ ಪ್ರೋತ್ಸಾಹಕ್ಕಾಗಿ ಅಕ್ಕ ಮಳಿಗೆ ತೆರೆಯಲು ಚಿಂತನೆ : ಸಿಇಓ ಡಾ.ನವೀನ್ ಭಟ್ ಘೋಷಣೆ

ಸಂಜೀವಿನಿ ಯುಗಾದಿ ಮಾಸಿಕ ಸಂತೆ ಯಶಸ್ವಿ

ಜಿಲ್ಲಾಡಳಿತದ ವತಿಯಿಂದ ಇದೇ ಮೊದಲ ಬಾರಿಗೆ ಎಸ್‌ಹೆಚ್‌ಜಿ ಗುಂಪುಗಳಿಗೆ ಆರ್ಥಿಕ ಚೈತನ್ಯ ತುಂಬುವ ಸಲುವಾಗಿ ಏರ್ಪಡಿಸಿದ್ದ ಸಂಜೀವಿನಿ ಉಗಾದಿ ಮಾಸಿಕ ಸಂತೆ ಮಾರಾಟ ಮೇಳವು ಒಳ್ಳೆಯ ಯಶಸ್ಸು ಕಂಡಿದ್ದು ಮುಂದಿನ ಹಬ್ಬಗಳಲ್ಲೂ ಇಂತಹ ಮಾರಾಟ ಮೇಳಗಳನ್ನು ಆಯೋಜಿಸ ಲಾಗುವುದು ಎಂದು ಹೇಳಿದರು.

ಬೆಂಗಳೂರು ವಿಮಾನ ನಿಲ್ದಾಣಗಳ ಸುತ್ತಮುತ್ತಲ ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಿ: ಕೇಂದ್ರಕ್ಕೆ ಡಿ.ಕೆ. ಶಿವಕುಮಾರ್ ಮನವಿ

ಕಟ್ಟಡಗಳ ಎತ್ತರದ ಮಿತಿ ಮರುಪರಿಶೀಲಿಸಲು ಡಿಕೆಶಿ ಮನವಿ

DK Shivakumar: ಬೆಂಗಳೂರಿನಲ್ಲಿರುವ ಎಚ್ಎಎಲ್, ಜಕ್ಕೂರು, ವಾಯುನೆಲೆ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಕಟ್ಟಡ ಎತ್ತರದ ಮಿತಿಯಿಂದ ಅಭಿವೃದ್ಧಿ ಕಾಮಗಾರಿಗೆ ತೊಡಕಾಗಿದ್ದು, ಈ ಮಿತಿಯ ಬಗ್ಗೆ ಪರಿಶೀಲನೆ ನಡೆಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Book Release: ಡಾ. ಶಾರದಾ ಚೈತ್ರ ಅವರ ‘ನಿಗಳ’ ಕಾದಂಬರಿ ಮಾರ್ಚ್‌ 21ಕ್ಕೆ ಲೋಕಾರ್ಪಣೆ

ಮಾರ್ಚ್‌ 21ರಂದು ಬೆಂಗಳೂರಿನಲ್ಲಿ ʼನಿಗಳʼ ಕಾದಂಬರಿ ಲೋಕಾರ್ಪಣೆ

ಡಾ. ಶಾರದಾ ಚೈತ್ರ ಅವರ ಕಾದಂಬರಿ ‘ನಿಗಳ’ ಪುಸ್ತಕದ ಲೋಕಾರ್ಪಣೆ ಸಮಾರಂಭವು ಮಾ. 21ರಂದು ಬೆಳಗ್ಗೆ 10.30ಕ್ಕೆ ಬೆಂಗಳೂರು ನಗರದ ಬಸವನಗುಡಿಯ ಎನ್‌.ಆರ್‌. ಕಾಲೋನಿಯಲ್ಲಿರುವ ಬಿ.ಎಂ.ಶ್ರೀ. ಕಲಾಭವನದಲ್ಲಿ ಜರುಗಲಿದೆ. ಶತಾವಧಾನಿ ಡಾ.ಆರ್‌. ಗಣೇಶ್‌ ಪುಸ್ತಕ ಲೋಕಾರ್ಪಣೆಗೊಳಿಸಲಿದ್ದಾರೆ.

ಮದುವೆಯಾದ 15ನೇ ದಿನಕ್ಕೆ ನವವಧು ಎಸ್ಕೇಪ್; ಬ್ರೋಕರ್‌ಗಳ ಮಾತು ನಂಬಿ ಕೆಟ್ಟ ಯುವಕ!

ಮದುವೆಯಾದ 15ನೇ ದಿನಕ್ಕೆ ನವವಧು ಎಸ್ಕೇಪ್!

marriage fraud: ಆಂಧ್ರ ಪ್ರದೇಶ ಮೂಲದ ಭಾಸ್ಕರ್ ಎಂಬಾತ​ ಬ್ರೋಕರ್​ಗಳ ಮೂಲಕ ಹುಡುಗಿಯನ್ನು ಹುಡುಕಿದ್ದ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆ ಗ್ರಾಮದ ಯುವತಿಯನ್ನು ವಿವಾಹವಾಗಿದ್ದ. ಆದರೆ, ಮದುವೆಯಾದ ಎರಡೇ ವಾರಕ್ಕೆ ಯುವತಿ ಪರಾರಿಯಾಗಿದ್ದಾಳೆ.

ನವರಾತ್ರಿ, ಯುಗಾದಿ ಮತ್ತು ಈದ್ ಸಂಭ್ರಮಕ್ಕಾಗಿ Amazon.in ಇಂದ AI ಆಧಾರಿತ ಹಬ್ಬದ ಶಾಪಿಂಗ್‌

Amazon.in ಇಂದ AI ಆಧಾರಿತ ಹಬ್ಬದ ಶಾಪಿಂಗ್‌

ಸಾಂಪ್ರದಾಯಿಕ ಉಪವಾಸದ ಪದಾರ್ಥಗಳು ಮತ್ತು ಪ್ರೀಮಿಯಂ ಒಣ ಹಣ್ಣುಗಳಿಂದ ಹಿಡಿದು, ಸಾಂಪ್ರದಾಯಿಕ ಸಿಹಿತಿಂಡಿಗಳು ಮತ್ತು ಪಾನೀಯಗಳವರೆಗೆ ಎಲ್ಲವನ್ನೂ ಅಮೆಜಾನ್ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ. ಗ್ರಾಹಕರು ಟಾಟಾ ಸಂಪನ್ನ, ಫಾರ್ಮ್ಲಿ, ಗೋ ದೇಸಿ, ಸ್ಟೋರಿಯಾ, ನಟ್ರಾಜ್ ನಂತಹ ಪ್ರಸಿದ್ಧ ಬ್ರಾಂಡ್‌ಗಳ ಹಬ್ಬದ ವಿಶೇಷ ಉತ್ಪನ್ನಗಳನ್ನು ಖರೀದಿಸಬಹುದು.

ಕಾಂಗ್ರೆಸ್ ಜತೆಗಿನದ್ದು 'ಬಲವಂತದ ಮದುವೆ'; ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ  ದೇವೇಗೌಡ ತಿರುಗೇಟು

ಮಲ್ಲಿಕಾರ್ಜುನ ಖರ್ಗೆ ಹೇಳಿಕೆಗೆ ದೇವೇಗೌಡ ಖಡಕ್‌ ತಿರುಗೇಟು

H.D. Deve Gowda: ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಕಾಂಗ್ರೆಸ್ ಜತೆಗಿನ ಮೈತ್ರಿಯನ್ನು ‘ಬಲವಂತದ ಮದುವೆ’ ಎಂದು ಕರೆದು ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. 2018ರ ಕರ್ನಾಟಕದಲ್ಲಿನ ಮೈತ್ರಿ ಅನುಭವ ಹಿಂಸೆಯಿಂದ ಕೂಡಿತ್ತು. 2019ರಲ್ಲಿ ಕಾಂಗ್ರೆಸ್ ಕೈಬಿಟ್ಟ ಕಾರಣ ವಿಚ್ಛೇದನ ಅನಿವಾರ್ಯವಾಯಿತು ಎಂದು ಹೇಳಿದ್ದಾರೆ.

ಲಂಚ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಗ್ರಾಮಲೆಕ್ಕಿಗನಿಗೆ ಬಡ್ತಿ; ಕ್ರಮಕ್ಕೆ ಆಗ್ರಹ Video

ಲಂಚ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಗ್ರಾಮಲೆಕ್ಕಿಗನಿಗೆ ಬಡ್ತಿ!

ದೀರ್ಘ ಕಾಲದಿಂದ ವಿಚಾರಣೆ ನಡೆಯದೆ ಆರೋಪಿಗೆ ರೆವಿನ್ಯೂ ಇನ್ಸ್ಪೆಕ್ಟರ್ ಆಗಿ ಪ್ರಮೋಷನ್ ಭಾಗ್ಯ ಸಹ ದೊರೆತಿದೆ. ಆರೋಪಿ ಕಾನೂನು ಹಿಡಿತದಿಂದ ನುಣುಚಿಕೊಳ್ಳಲು ವಕೀಲರು ಮತ್ತು ಸಿಬ್ಬಂದಿ ಅವಕಾಶ ಮಾಡಿಕೊಟ್ಟಿದ್ದಾರೆ. ತಕ್ಷಣ ಅರುಣ್ ಕುಮಾರ್ ಅವರನ್ನು ಮಾಲೂರು ಕಸಬಾ ರೆವಿನ್ಯೂ ಇನ್ಸಪೆಕ್ಟರ್ ಹುದ್ದೆಯೆಂದ ಬದಲಾಯಿಸಿ ಬೇರೆಡೆಗೆ ಹಾಕಬೇಕೆಂದು ಸಾಮಾಜಿಕ ಕಾರ್ಯಕರ್ತ ಕೆ.ಸಿ.ರಾಜಣ್ಣ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

DJ ban: ಧಾರ್ಮಿಕ ಕಾರ್ಯಕ್ರಮ, ಮೆರವಣಿಗೆಳಲ್ಲಿ ಡಿಜೆ, ಐಟಂ ಸಾಂಗ್‌ಗಳಿಗೆ ಬ್ರೇಕ್‌ ಹಾಕಲು ಮುಂದಾದ ರಾಜ್ಯ ಸರ್ಕಾರ

ಮೆರವಣಿಗೆಳಲ್ಲಿ ಡಿಜೆ, ಐಟಂ ಸಾಂಗ್‌ಗಳಿಗೆ ಬ್ರೇಕ್‌ ಹಾಕಲು ಮುಂದಾದ ಸರ್ಕಾರ

ರಾಜ್ಯದಲ್ಲಿ ಡಿಜೆ ಬಳಕೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಸದನದಲ್ಲಿ ಪ್ರಸ್ತಾಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್‌ ತಂಗಡಗಿ ಅವರು, ನಾವು ಶೀಘ್ರದಲ್ಲೇ ಆದೇಶವೊಂದನ್ನು ಹೊರಡಿಸುತ್ತೇವೆ ಎಂದು ತಿಳಿಸಿದ್ದಾರೆ.

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ವಿಮಾನ ನಿಲ್ದಾಣದ ಸಂಪೂರ್ಣ ಕಾರ್ಯಾಚರಣೆ ನಡೆಸಿಕೊಟ್ಟ ಬಿಐಎಎಲ್‌ಆರ್‌ ಮಹಿಳಾ ತಂಡ

ಕಾರ್ಯಾಚರಣೆ ನಡೆಸಿಕೊಟ್ಟ ಬಿಐಎಎಲ್‌ಆರ್‌ ಮಹಿಳಾ ತಂಡ

ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಒಂದು ದಿನದ ಮಟ್ಟಿಗೆ ಇಡೀ ಟರ್ಮಿನಲ್‌ 1 ಹಾಗೂ ಟರ್ಮಿನಲ್‌ 2 ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ಮಹಿಳಾ ತಂಡವೇ ನಿರ್ವಹಿಸುವ ಮೂಲಕ, ಮಹಿಳಾ ಶಕ್ತಿಯನ್ನು ಪ್ರದರ್ಶಿಸ ಲಾಯಿತು.

ಜಿಬಿಎ ಚುನಾವಣೆಯಲ್ಲೂ ವಿಜಯಪತಾಕೆ ಹಾರಿಸಲು ಶ್ರಮಿಸೋಣ: ಬಿಜೆಪಿ ಕಾರ್ಯಕರ್ತರಿಗೆ ವಿಜಯೇಂದ್ರ ಕರೆ

ಜಿಬಿಎ ಚುನಾವಣೆಯಲ್ಲೂ ಗೆಲುವಿಗಾಗಿ ಶ್ರಮಿಸೋಣ: ವಿಜಯೇಂದ್ರ

BY Vijayendra: ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಡಿ.ವಿ. ಸದಾನಂದಗೌಡ ಅವರ ಜನ್ಮದಿನಾಚರಣೆ ಹಿನ್ನೆಲೆಯಲ್ಲಿ ಬುಧವಾರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ರಾಜ್ಯ ಬಿಜೆಪಿ, ರಾಜ್ಯದ ಜನತೆಯ ಪರವಾಗಿ ಶುಭ ಕೋರಿದರು. ಈ ವೇಳೆ ಜಿಬಿಎ ಚುನಾವಣೆ ಬಗ್ಗೆ ಅವರು ಮಾತನಾಡಿದ್ದಾರೆ.

ರಾಜ್ಯಕ್ಕೆ ದಿಸೆ ತೋರದ ಬಜೆಟ್‌ ಕನ್ನಡಿಗರ ಪಾಲಿನ ಆರ್ಥಿಕ ಮರಣ ಶಾಸನ: ಅರವಿಂದ ಬೆಲ್ಲದ್‌ ಟೀಕೆ

ಯೋಜನೆಗಳಿಲ್ಲದ ಅಂಕಿ-ಅಂಶ ತುಂಬಿರುವ ಬಜೆಟ್‌: ಅರವಿಂದ ಬೆಲ್ಲದ್‌

ಇದೊಂದು ಬಜೆಟ್‌ ಅಲ್ಲ, ಸಾಲದ ಹೇಳಿಕೆ. ಇದು ಕರ್ನಾಟಕವನ್ನು ಎತ್ತ ಕೊಂಡೊಯ್ಯುತ್ತಿದೆ? ಅಭಿವೃದ್ಧಿ ಕಡೆಗಾ ಅಥವಾ ಸಾಲದ ಕೂಪಕ್ಕೋ? ಎಂದು ಪ್ರಶ್ನಿಸಿದ ವಿಧಾನಸಭೆ ವಿಪಕ್ಷ ಉಪ ನಾಯಕ ಹಾಗೂ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ, ಈ ಬಜೆಟ್‌ ಕಾಂಗ್ರೆಸ್ಸಿಗರ ಪಾಲಿನ ಅಕ್ಷಯ ಪಾತ್ರೆಯಾಗಿದ್ದರೆ, ಕನ್ನಡಿಗರ ಪಾಲಿನ ಖಾಲಿ ಚೊಂಬು ಎಂದು ಟೀಕಿಸಿದ್ದಾರೆ.

ST Internal Reservation: ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ ಜಾರಿಗೊಳಿಸಿ: ಸದನದಲ್ಲಿ ಎಂಎಲ್‌ಸಿ ಶಾಂತಾರಾಮ್‌ ಸಿದ್ದಿ ಆಗ್ರಹ

ಎಸ್‌ಟಿ ಒಳ ಮೀಸಲಾತಿ ಜಾರಿಗೆ ಸದನದಲ್ಲಿ ಶಾಂತಾರಾಮ್‌ ಸಿದ್ದಿ ಆಗ್ರಹ

Karnataka Assembly Session 2026: ಸದನದ ಶೂನ್ಯವೇಳೆಯಲ್ಲಿ ಮಾತನಾಡಿರುವ ಎಂಎಲ್‌ಸಿ ಶಾಂತಾರಾಮ್‌ ಸಿದ್ದಿ ಅವರು, ಪರಿಶಿಷ್ಟ ಪಂಗಡಗಳಲ್ಲೂ ಒಳ ಮೀಸಲಾತಿ ಜಾರಿ ಮಾಡಲು, ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಆಯೋಗ ರಚಿಸಿ, ಸೂಕ್ತ ಪರಿಹಾರ ಒದಗಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮರ್ಯಾದೆ ಹತ್ಯೆ ತಡೆಗೆ ಸರ್ಕಾರದಿಂದ ಮಹತ್ವದ ಹೆಜ್ಜೆ; ವಿಧಾನಸಭೆಯಲ್ಲಿ ಇವ ನಮ್ಮವ ಇವ ನಮ್ಮವ ವಿಧೇಯಕ -2026 ಮಂಡನೆ

ಮರ್ಯಾದೆ ಹತ್ಯೆ ತಡೆಗೆ ಸರ್ಕಾರದಿಂದ ಮಹತ್ವದ ವಿಧೇಯಕ ಮಂಡನೆ

Iva Nammava Iva Nammava Bill 2026: ಸಚಿವ ಪ್ರಿಯಾಂಕ್‌ ಖರ್ಗೆ ಅವರು ಇವ ನಮ್ಮವ ಇವ ನಮ್ಮವ ವಿಧೇಯಕವನ್ನು ವಿಧಾನಸಭೆಯಲ್ಲಿ ಬುಧವಾರ ಮಂಡನೆ ಮಾಡಿದ್ದಾರೆ. ಈ ವಿಧೇಯಕವು ಅಂತರ್ಜಾತಿ ವಿವಾಹಿತರ ಹಕ್ಕುಗಳನ್ನು ಎತ್ತಿಹಿಡಿಯುವ ಮತ್ತು ಅವರಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಜರುಗಿಸುವ ಹಲವು ಅಂಶಗಳನ್ನು ಒಳಗೊಂಡಿದೆ.

Prajwal revanna Case: ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ; ಮಾಜಿ ಸಂಸದನಿಗೆ ಆಪ್ತರಿಂದಲೇ ಖೆಡ್ಡಾ!

ಪ್ರಜ್ವಲ್‌ ರೇವಣ್ಣ ವಿಡಿಯೊ ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆ

2024ರ ಲೋಕಸಭಾ ಚುನಾವಣೆಯ ವೇಳೆ ಜೆಡಿಎಸ್ ಏಜೆಂಟ್ ಆಗಿದ್ದ ವಕೀಲ ಪೂರ್ಣಚಂದ್ರ ನೀಡಿದ ದೂರಿನ ಆಧಾರದ ಮೇಲೆ ಈ ಪ್ರಕರಣದಲ್ಲಿ ತನಿಖೆ ಆರಂಭವಾಗಿತ್ತು. ಅಶ್ಲೀಲ ವಿಡಿಯೊಗಳನ್ನು ಹಂಚಲು ಆರೋಪಿಗಳು ಹಾಸನದಲ್ಲೇ ಸುಮಾರು 70 ಪೆನ್‌ಡ್ರೈವ್‌ಗಳನ್ನು ಖರೀದಿಸಿದ್ದ ವಿಚಾರ ತನಿಖೆಯ ವೇಳೆ ಬಹಿರಂಗವಾಗಿದೆ.

ರಂಜಾನ್‌ ವೇಳೆ ಅಕ್ರಮ ಗೋಸಾಗಾಟ, ಗೋಹತ್ಯೆ ನಡೆಯದಂತೆ ಕ್ರಮ ಕೈಗೊಳ್ಳಿ: ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ಆಗ್ರಹ

ರಂಜಾನ್‌ ವೇಳೆ ಅಕ್ರಮ ಗೋಸಾಗಾಟ, ಗೋಹತ್ಯೆ ನಡೆಯದಂತೆ ಕ್ರಮಕ್ಕೆ ಆಗ್ರಹ

ರಂಜಾನ್ ಹಬ್ಬದ ಸಂದರ್ಭದಲ್ಲಿ ಅಕ್ರಮ ಗೋಸಾಗಾಟ ಮತ್ತು ಗೋಹತ್ಯೆ ನಡೆಯದಂತೆ ತಡೆಯಲು ಕಾನೂನುಬದ್ದ ಹಾಗೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ, ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮೂಲಕ ರಾಜ್ಯ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕಲಬುರಗಿ ಪ್ರಬುದ್ಧ ಅಕಾಡೆಮಿಯ 2 ಕೋಟಿ ವೆಚ್ಚದ ಪಾರ್ಕಿಂಗ್ ಶೆಡ್ ಧರೆಗೆ; ಕಳಪೆ ಕಾಮಗಾರಿ ಆರೋಪ

ಪ್ರಬುದ್ಧ ಅಕಾಡೆಮಿಯ 2 ಕೋಟಿ ವೆಚ್ಚದ ಪಾರ್ಕಿಂಗ್ ಶೆಡ್ ಧರೆಗೆ

ಕಲಬುರಗಿಯಲ್ಲಿ ಜನವರಿಯಲ್ಲಷ್ಟೇ ಉದ್ಘಾಟನೆಗೊಂಡಿದ್ದ ಈ ಅಕಾಡೆಮಿಯ ಕಟ್ಟಡದ ಛಾವಣಿ ಒಂದು ತಿಂಗಳ ಹಿಂದೆಯಷ್ಟೇ ಉದುರಿ ಬಿದ್ದಿತ್ತು. ಆ ಘಟನೆ ಮಾಸುವ ಮುನ್ನವೇ ಈಗ ಪಾರ್ಕಿಂಗ್ ಶೆಡ್ ಕುಸಿದಿದೆ. ಇದರಿಂದ ಕಟ್ಟಡದ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆಗಳು ಮೂಡಿವೆ.

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್‌ನಲ್ಲಿ ಭಾರಿ ಹಿನ್ನಡೆ: ಗಡಿಪಾರು ಆದೇಶ ಪ್ರಶ್ನಿಸಿದ್ದ ಅರ್ಜಿ ವಜಾ

ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ಶಾಕ್

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಗಡಿಪಾರು ಆದೇಶ ವಿರೋಧದ ಮೇಲ್ಮನವಿ ಅರ್ಜಿಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಜಾಗೊಳಿಸಿದೆ. ಏಕಸದಸ್ಯ ಪೀಠದ ಆದೇಶವನ್ನು ಸಮರ್ಥಿಸಿಕೊಂಡ ನ್ಯಾಯಾಲಯ, ತಿಮರೋಡಿಗೆ ಆರು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶ ನಿಷೇಧವನ್ನು ಮುಂದುವರಿಸಿದೆ.

Dharwad Rain: ಆಲಿಕಲ್ಲು ಮಳೆಯಿಂದ ಕಾಶ್ಮೀರದಂತೆ ಬದಲಾದ ಧಾರವಾಡದ ಕಲಘಟಗಿ; ವಿಡಿಯೊ ವೈರಲ್‌

ಆಲಿಕಲ್ಲು ಮಳೆಯಿಂದ ಕಾಶ್ಮೀರದಂತೆ ಬದಲಾದ ಕಲಘಟಗಿ; ವಿಡಿಯೊ ವೈರಲ್‌

ರಾಜ್ಯದಲ್ಲಿ ಬೆಂಗಳೂರು, ಧಾರವಾಡ, ಬೆಳಗಾವಿ, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಮಂಗಳವಾರ ಆಲಿಕಲ್ಲು ಮಳೆ ಸುರಿದಿದೆ. ಇನ್ನು ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಾಚಾಪುರದಲ್ಲಿ ಭಾರಿ ಆಲಿಕಲ್ಲು ಮಳೆಯಿಂದ ರಸ್ತೆಗಳು ಹಿಮಾವೃತ ಕಾಶ್ಮೀರದಂತೆ ಬದಲಾಗಿರುವುದು ಕಂಡುಬಂದಿತ್ತು.

Loading...