ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

Chikkaballapur News: ರಾಜ್ಯಕ್ಕೆ ಎರಡನೇ ರ‍್ಯಾಂಕ್‌ನ ಗರಿ ಮೂಡಿಸಿದ ಪ್ರಣತಿರಾಜ್‌ಗೆ ವಕೀಲರಿಂದ ಅಭಿನಂದನೆ

ಎರಡನೇ ರ‍್ಯಾಂಕ್‌ನ ಗರಿ ಮೂಡಿಸಿದ ಪ್ರಣತಿರಾಜ್‌ಗೆ ಅಭಿನಂದನೆ

ಪ್ರಣಿತಿರಾಜ್ ನಂತರ ಜಿಲ್ಲೆಗೆ ಎರಡನೇ ಸ್ಥಾನ ಗಳಿಸಿದ ಧನುಶ್ರೀ.ಸಿ 625ಕ್ಕೆ 621 ಇವರಿ ಬ್ಬರೂ ನಮ್ಮ ಆತ್ಮೀಯ ವಕೀಲ ಮಿತ್ರರ ಮಕ್ಕಳೆಂಬುದು ಹೆಮ್ಮೆಯ ಸಂಗತಿ. ಇವರಿಬ್ಬರೂ ಕೂಡ ತಾಲೂಕಿನ ಮಂಚನಬಲೆ ಬಿ,ಜಿ,ಎಸ್ ಪ್ರೌಢಶಾಲೆ ಹಾಗೂ ಅಗಲ ಗುರ್ಕಿ ಬಿ.ಜಿ.ಎಸ್ ಶಾಲೆಯಲ್ಲಿ ಸಾಧನೆಯನ್ನು ಮಾಡಿರುತ್ತಾರೆ. ಹಾಗಾಗಿ ಇಬ್ಬರು ಹೆಣ್ಣು ಮಕ್ಕಳಿಗೂ ವಕೀಲ ವೃಂದ ಹೋಗಿ ಸನ್ಮಾನ ಮಾಡಿ ಶುಭ ಕೋರಲಾಯಿತು.

SSLC Achievers honoured: ಎಸ್.ಎಸ್.ಎಲ್.ಸಿ ಸಾಧಕರಿಗೆ ನೇತಾಜಿ ಫೌಂಡೇಶನ್‌ನಿಂದ ಸನ್ಮಾನ: ತಲಾ 5 ಸಾವಿರ ರೂ. ನಗದು ಪುರಸ್ಕಾರ

ಎಸ್.ಎಸ್.ಎಲ್.ಸಿ ಸಾಧಕರಿಗೆ ನೇತಾಜಿ ಫೌಂಡೇಶನ್‌ನಿಂದ ಸನ್ಮಾನ

ನೇತಾಜಿ ಫೌಂಡೇಶನ್ ಕಳೆದ 9 ವರ್ಷ ಗಳಿಂದ ಸತತವಾಗಿ ಗೌರಿಬಿದನೂರು ಮತ್ತು ಮಂಚೇನ ಹಳ್ಳಿ ತಾಲ್ಲೂಕುಗಳಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಅಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿರಂತರ ವಾಗಿ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಈ ಸಮಾಜಮುಖಿ ಕಾರ್ಯವನ್ನು ಜಿಲ್ಲೆಯಾದ್ಯಂತ ವಿಸ್ತರಿಸಲಾಗುವುದು

Chikkaballapur News: ಶ್ರದ್ಧಾಭಕ್ತಿಯಿಂದ ನಡೆದ ಧರ್ಮರಾಯಸ್ವಾಮಿಯ 42ನೇ ವರ್ಷದ ಕರಗ ಮಹೋತ್ಸವ

ನಗರಕ್ಕೆ ಕಳೆಕಟ್ಟಿದ ದೀಪಾಲಂಕಾರ

ಹೂವಿನ ಕರಗದ ಹಿನ್ನೆಲೆಯಲ್ಲಿ ವಹ್ನಿಕುಲ ವಂಶಸ್ಥರು, ಕರಗದಮ್ಮನ ಪುತ್ರರಾದ ವೀರ ಕುಮಾರರು ಗೋವಿಂದ ನಾಮಸ್ಮರಣೆಯೊಂದಿಗೆ ದೇವಿಗೆ ಸಲ್ಲಿಸಬೇಕಾದ ಹರಕೆಯನ್ನು ಶ್ರದ್ಧಾಭಕ್ತಿಯಿಂದ ಅರ್ಪಿಸಿದ್ದು ವಿಶೇಷವಾಗಿತ್ತು. ಕರಗದ ಪೂಜಾರಿ ಕುಪ್ಪಂನ ಬಾಲಾಜಿ ಅವರು ರಾತ್ರಿ 10.30ಕ್ಕೆ ಕರಗಕ್ಕೆ ಪೂಜೆ ಸಲ್ಲಿಸಿದ ನಂತರ ಹೂವಿನ ಕರಗವನ್ನು ತಲೆಯ ಮೇಲೆ ಹೊತ್ತು ತಮಟೆಯ ನಾದಕ್ಕೆ ಪೂರಕವಾಗಿ ಕುಣಿಯುತ್ತಾ ದೇವಾಲಯವನ್ನು 3 ಸುತ್ತು ಪ್ರದಕ್ಷಿಣೆ ಹಾಕಿದ ನಂತರ ನಗರ ಸಂಚಾರಕ್ಕೆ ತೆರಳಿದ್ದು ವಿಶೇಷ.

ಹೆಚ್.ಎನ್.ವ್ಯಾಲಿಯ ನೀರಿನ ಸಂಗ್ರಹಾಗಾರವಾದ ಕಂದವಾರ ಕೆರೆಯಲ್ಲಿ ಮೀನುಗಳ ಮಾರಣಹೋಮ

ಕಂದವಾರ ಕೆರೆಯಲ್ಲಿ ಮೀನುಗಳ ಮಾರಣಹೋಮ

ಎರಡನೇ ಹಂತದ ಶುದ್ಧೀಕರಣದಲ್ಲಿ ಕೂಡ ಲೋಪದೋಷಗಳಾಗುತ್ತಿರುವ ಬಗ್ಗೆ ಸ್ವತಃ ಈ ಯೋಜನೆಯ ಕಾರಣಕರ್ತರು, ಹಾಲಿ ಬಿಜೆಪಿ ಸಂಸದ ಡಾ.ಕೆ.ಸುಧಾಕರ್ ಇತ್ತೀಚೆಗೆ ಸುದ್ದಿ ಗೋಷ್ಠಿ ನಡೆಸಿ ಶುದ್ಧೀಕರಣ ಸಂಬಂಧದ ಮಾಹಿತಿಗಳನ್ನು ಬಟಾಬಯಲು ಮಾಡಿರುವು ದನ್ನು ಜನತೆ ಕಂಡಿದ್ದಾರೆ.

ವಿಶ್ವೇಶ್ವರ ಭಟ್ ಕೃತಿಗಳೆಂದರೆ ಅವು ಅಮೂಲ್ಯ ಜ್ಞಾನ ಭಂಡಾರ: ವಸಂತ್ ಗಿಳಿಯಾರ್

ವಿಶ್ವೇಶ್ವರ ಭಟ್ ಅವರಿಗೆ ರಾಷ್ಟ್ರೀಯ ಸೌರಭ ಸಮ್ಮಾನ್ ಪ್ರಶಸ್ತಿ ಪ್ರದಾನ

Vishweshwar Bhat: ಅತ್ಯಂತ ವೇಗವಾಗಿ ವಿಶ್ವವನ್ನು ಸುತ್ತ ಬಲ್ಲ, ಅಷ್ಟೇ ವೇಗವಾಗಿ ಬರೆಯಬಲ್ಲ ಪರ್ತಕರ್ತರು ವಿಶ್ವೇಶ್ವರ ಭಟ್. ಅವರಂಥವರು ಇನ್ನೊಬ್ಬರಿಲ್ಲ ಎಂದು ಚಿಂತಕ, ಸಂಘಟಕ ವಸಂತ್ ಗಿಳಿಯಾರ್ ಹೇಳಿದರು. ಕುಮಟಾದಲ್ಲಿ ಆಯೋಜಿಸಲಾಗಿದ್ದ ಸಾಧನಾ ಸೌರಭ ಕಾರ್ಯಕ್ರಮದಲ್ಲಿ ಅವರು ವಿಶ್ವೇಶ್ವರ ಭಟ್ ಅವರ ಬರಹದ ಕುರಿತಾಗಿ ಮಾತನಾಡಿದರು.

Shidlaghatta News: ಎಸ್'ಎಸ್'ಎಲ್'ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ

ಎಸ್'ಎಸ್'ಎಲ್'ಸಿಯಲ್ಲಿ ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಸನ್ಮಾನ

ನಗರದ ಮಾರಮ್ಮ ವೃತ್ತದಲ್ಲಿರುವ ಮರಗೆಲಸ ಕಚೇರಿಯಲ್ಲಿ ತಾಲೂಕು ಮರಗೆಲಸ ಕಾರ್ಮಿಕ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ವಿದ್ಯಾರ್ಥಿನಿಯರನ್ನು ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರ ಸಾಧನೆ ಸಮಾಜಕ್ಕೆ ಹೆಮ್ಮೆ ತರಿಸುವಂತ ದ್ದಾಗಿದೆ

Pratap Simha: 2028ರಲ್ಲಿ ವಿಧಾನಸೌಧ ಪ್ರವೇಶ ಮಾಡಿಯೇ ಮಾಡ್ತೀನಿ: ಪ್ರತಾಪ್ ಸಿಂಹ Video

2028ರಲ್ಲಿ ವಿಧಾನಸೌಧ ಪ್ರವೇಶ ಮಾಡುತ್ತೇನೆ: ಪ್ರತಾಪ್ ಸಿಂಹ

ಮೈಸೂರು ಕ್ಷೇತ್ರದಲ್ಲಿ‌ ಬಿಜೆಪಿ ಎಂಪಿ ಟಿಕೆಟ್ ಕೈತಪ್ಪಿದಾದ ಕಾಂಗ್ರೆಸ್‌ ಶಾಸಕರು ತಮ್ಮ ಪಕ್ಷಕ್ಕೆ ಬರುವಂತೆ ಬೆನ್ನುಬಿದ್ದಿದ್ದರು. ನನಗಾಗಿ ಕಾಂಗ್ರೆಸ್‌ ಟಿಕೆಟ್‌ ಅನ್ನು ತಡೆಹಿಡಿದಿದ್ದರು. ಆದರೆ, ನಾನು ನಂಬಿದ ಸಿದ್ಧಾಂತಕ್ಕಾಗಿ ಕಾಂಗ್ರೆಸ್‌ ಆಫರ್‌ ತಿರಸ್ಕರಿಸಿದ್ದೆ. ಕಾಂಗ್ರೆಸ್‌ಗೆ ಹೋಗಿದ್ದರೂ ನಾನೇ ಗೆಲ್ಲುತ್ತಿದ್ದೆ. ಯಾಕೆಂದರೆ ಆ ರೀತಿ ಜನ ಸೇವೆ ಮಾಡಿದ್ದೇನೆ. ಆ ಬಲದಿಂದಲೇ ಮುಂದಿನ ಚುನಾವಣೆಯಲ್ಲಿ ನಾನು ವಿಧಾನಸೌಧ ಪ್ರವೇಶ ಮಾಡುವೆ ಎಂದು ವಿಶ್ವಾಸದಿಂದ ಹೇಳುತ್ತಿದ್ದೇನೆ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿದ್ದಾರೆ.

Protest against KIADB enters 51th day: ಕೆಐಎಡಿಬಿ ವಿರುದ್ಧ ಹೋರಾಟ 51ನೇ ದಿನಕ್ಕೆ : ಉಸ್ತುವಾರಿ ಸಚಿವರ ಗೃಹ ಕಚೇರಿಗೆ ಮುತ್ತಿಗೆ

ಕೆಐಎಡಿಬಿ ವಿರುದ್ಧ ಹೋರಾಟ 51ನೇ ದಿನಕ್ಕೆ

ಧರಣಿ ಪ್ರಾರಂಭಿಸಿ 41 ದಿನವಾಗಿದ್ದರೂ ಉಸ್ತುವಾರಿ ಸಚಿವರು ಮಾತ್ರ ಧರಣಿ ನಿರತ ರೈತರನ್ನು  ಮಾತನಾಡಿಸಿಲ್ಲ. ಅವರ ಕಷ್ಟ ಸುಖ ಕೇಳಿಲ್ಲ ಎಂದು ಆಕ್ರೋಶಗೊಂಡ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಮತ್ತು ರೈತ ಮಹಿಳೆಯರು ತಮ್ಮ ಭೂಮಿಗಾಗಿ ಧರಣಿ  ಗೃಹ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Vishweshwar Bhat: ಸಂಕೇಶ್ವರರಿಗೆ ಕೊಟ್ಟ ಆ ಪುಸ್ತಕ ನನ್ನ ಹಣೆಬರಹ ಬದಲಿಸಿತು: ವಿಶ್ವೇಶ್ವರ ಭಟ್‌

ಸಂಕೇಶ್ವರರಿಗೆ ಕೊಟ್ಟ ಆ ಪುಸ್ತಕ ನನ್ನ ಹಣೆಬರಹ ಬದಲಿಸಿತು: ವಿಶ್ವೇಶ್ವರ ಭಟ್‌

Sadhana Sourabha: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ಆಯೋಜಿಸಿದ್ದ ʼಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿ ಸ್ವೀಕರಿಸಿ ವಿಶ್ವವಾಣಿ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರು ಮಾತನಾಡಿದ್ದಾರೆ.

ರವಿ ಬೆಳೆಗೆರೆ ಪತ್ರಿಕೆ ಲೋಕದ ಪಾತಕಿ: ಪ್ರತಾಪ್ ಸಿಂಹ ಆಕ್ರೋಶ

ರವಿ ಬೆಳೆಗೆರೆ ಹೀಯಾಳಿಸಿಯೇ ಬರೆಯುತ್ತಿದ್ದರು: ಪ್ರತಾಪ್ ಸಿಂಹ

Pratap Simha: ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ 'ಸಾಧನಾ ಸೌರಭ' ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಮತ್ತು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರಿಗೆ ಪ್ರತಿಷ್ಠಿತ 'ರಾಷ್ಟ್ರೀಯ ಸೌರಭ ಸಮ್ಮಾನ್' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ʼಹಾಯ್ ಬೆಂಗಳೂರುʼ ಪತ್ರಿಕೆಯಲ್ಲಿ ರವಿ ಬೆಳೆಗೆರೆ ವ್ಯಕ್ತಿತ್ವವನ್ನು ತೀವ್ರವಾಗಿ ಟೀಕಿಸುತ್ತಿದ್ದರು. ರವಿ ಬೆಳೆಗೆರೆ ಪತ್ರಿಕಾ ಲೋಕದ ಒಬ್ಬ ಪಾತಕಿʼʼ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಸ್ರೋ ವಿಜ್ಞಾನಿ ಕೆ.ರಾಧಾಕೃಷ್ಣನ್ ಪರಮ್ ಫೌಂಡೇಷನ್'ನ ವಿಜ್ಞಾನ ವಿಸ್ಮಯಗಳ ಲೋಕ `ಪಾರ್ಸೆಕ್ ವೈಟ್ಫೀಲ್ಡ್ ಉದ್ಘಾಟನೆ  ’

ವಿಜ್ಞಾನ ವಿಸ್ಮಯಗಳ ಲೋಕ `ಪಾರ್ಸೆಕ್ ವೈಟ್ಫೀಲ್ಡ್ ಉದ್ಘಾಟನೆ ’

ವಿಜ್ಞಾನ, ಅನ್ವೇಷಣೆ ಮತ್ತು ಆವಿಷ್ಕಾರಗಳಿಗೆ ವಿಶೇಷ ಸ್ಥಳವನ್ನು ಹೊಂದಿರುವ ಪಾರ್ಸೆಕ್ ವೈಟ್ಫೀಲ್ಡ್ ಹೇಗೆ ನಗರವು ವಿಜ್ಞಾನ ಮತ್ತು ಆವಿಷ್ಕಾರವನ್ನು ಸಾಂಪ್ರದಾಯಿಕ ಶೈಕ್ಷಣಿಕ ಗಡಿಗಳ ಆಚೆಗೂ ಅನುಭವಿಸುತ್ತದೆ ಎನ್ನುವುದನ್ನು ಪರಿವರ್ತಿಸುವ ನಿರೀಕ್ಷೆ ಹೊಂದಿದೆ. ಈ ಕೇಂದ್ರವು ವೈಜ್ಞಾನಿಕ ಪರಿಶೋಧನೆಯು ಎಲ್ಲ ವಯಸ್ಸಿನ ಶಿಕ್ಷಣಾರ್ಥಿಗಳಿಗೆ ಲಭ್ಯ ಮತ್ತು ಸಕ್ರಿಯವಾಗಿ ಸುವ ಧ್ಯೇಯವನ್ನು ಬಿಂಬಿಸುತ್ತದೆ.

Bangalore News: ರಿಯಾ ಡೈಮಂಡ್ಸ್ ಬೆಂಗಳೂರಿನಲ್ಲಿ ಭಾರತದ ಮೊದಲ ಪ್ರಯೋಗಾಲಯದಲ್ಲಿ ಬೆಳೆದ ವಜ್ರ ನಿಶ್ಚಿತಾರ್ಥ ಉಂಗುರ ಸ್ಟುಡಿಯೋ ಪ್ರಾರಂಭ

ವಜ್ರ ನಿಶ್ಚಿತಾರ್ಥ ಉಂಗುರ ಸ್ಟುಡಿಯೋ ಪ್ರಾರಂಭ

ದೇಶವು ಪ್ರಸ್ತುತ ವಿಶ್ವದ ವಜ್ರಗಳಲ್ಲಿ ಸುಮಾರು 90–95% ರಷ್ಟು ಸಂಸ್ಕರಿಸು ತ್ತಿದೆ ಮತ್ತು ಮೌಲ್ಯ ಸರಪಳಿಯಲ್ಲಿ ತನ್ನ ಉಪಸ್ಥಿತಿಯನ್ನು ಸ್ಥಿರವಾಗಿ ವಿಸ್ತರಿಸುತ್ತಿದೆ. ವರದಿಗಳ ಪ್ರಕಾರ, ಭಾರತೀಯ ವಜ್ರ ಮಾರುಕಟ್ಟೆಯು FY25 ರಲ್ಲಿ ರೂ. 53,512 ಕೋಟಿ (US$ 6.2 ಬಿಲಿಯನ್) ಎಂದು ಅಂದಾಜಿಸಲಾಗಿದೆ ಮತ್ತು FY28 ರ ವೇಳೆಗೆ ರೂ. 74,227 ಕೋಟಿ (US$ 8.2 ಬಿಲಿಯನ್) ಗೆ ಬೆಳೆಯುವ ನಿರೀಕ್ಷೆಯಿದೆ.

ಸಂಧಿವಾತ ರೋಗಗಳ ಬಗ್ಗೆ ಜಾಗೃತಿ ಅಗತ್ಯ: ರುಮಟಾಲಜಿ ವೈದ್ಯರ ಸಂಘ

ಸಂಧಿವಾತ ರೋಗಗಳ ಬಗ್ಗೆ ಜಾಗೃತಿ ಅಗತ್ಯ: ರುಮಟಾಲಜಿ ವೈದ್ಯರ ಸಂಘ

ಹಲವು ಸಂದರ್ಭಗಳಲ್ಲಿ ಆರೋಗ್ಯ ವಿಮಾ ಕಂಪನಿಗಳು ಈ ಕಾಯಿಲೆಗಳಿಗೆ ಸಂಬಂಧಿಸಿದ ಪಾಲಿಸಿಗಳನ್ನು ನೀಡಲು ಹಿಂದೇಟು ಹಾಕುತ್ತಿರುವುದು ಆತಂಕಕಾರಿ ಬೆಳವಣಿಗೆ. ಈ ಹಿನ್ನೆಲೆಯಲ್ಲಿ ವಿಮಾ ವಲಯದಲ್ಲಿ ನೀತಿ ಬದಲಾವಣೆ ಅಗತ್ಯವಿದ್ದು, ರೋಗಿಗಳಿಗೆ ಸಮರ್ಪಕ ಸೌಲಭ್ಯ ದೊರಕುವಂತೆ ಕ್ರಮ ಕೈಗೊಳ್ಳಬೇಕು

Sadhana Sourabha: ವಿಶ್ವೇಶ್ವರ ಭಟ್ಟರಿಗೆ ಹುಟ್ಟೂರಿನಲ್ಲಿ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼ ಪ್ರದಾನ

ವಿಶ್ವೇಶ್ವರ ಭಟ್ಟರಿಗೆ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼ ಪ್ರದಾನ

Vishweshwar Bhat: ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ʼಸಾಧನಾ ಸೌರಭ; ಸಾಂಸ್ಕೃತಿಕ ಅನುಸಂಧಾನ ಮತ್ತು ರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾನುವಾರ ಆಯೋಜಿಸಲಾಗಿತ್ತು. ಈ ವೇಳೆ ವಿಶ್ವವಾಣಿ ಪ್ರಧಾನ ಸಂಪಾದಕ ಹಾಗೂ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರಿಗೆ ʼರಾಷ್ಟ್ರೀಯ ಸೌರಭ ಸಮ್ಮಾನ್‌ ಪ್ರಶಸ್ತಿʼಯನ್ನು ಪ್ರದಾನ ಮಾಡಲಾಗಿದೆ.

Belagavi shootout: ಬೆಳಗಾವಿಯ ಖ್ಯಾತ ವಕೀಲೆ ಮನೆ ಮೇಲೆ ಗುಂಡಿನ ದಾಳಿ; ಪುತ್ರಿ ಅಪಾಯದಿಂದ ಪಾರು

ಬೆಳಗಾವಿಯ ಖ್ಯಾತ ವಕೀಲೆ ಮನೆ ಮೇಲೆ ಗುಂಡಿನ ದಾಳಿ

ಬೆಳಗಾವಿ ನಗರದ ಮಾಂಡೋಳಿ ರಸ್ತೆಯಲ್ಲಿರುವ ವಕೀಲೆ ಪೂಜಾ ಕಾಕತಕರ್​ ಮನೆ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಶನಿವಾರ ಮಧ್ಯೆ ರಾತ್ರಿ ಕಿಡಿಗೇಡಿಗಳು ಫೈರಿಂಗ್​ ಮಾಡಿದ್ದು, ಬೆಳಗಾವಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಏಪ್ರಿಲ್‌ 27ರಂದು ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ, ಸ್ಮರಣ ಸಂಚಿಕೆ ಬಿಡುಗಡೆ

ಏ. 27ಕ್ಕೆ ಕೆಎಎಸ್ ಅಧಿಕಾರಿಗಳ ಸಂಘದ ನವೀಕರಿಸಿದ ಕಟ್ಟಡ ಉದ್ಘಾಟನೆ

KAS Officers Association: ಜನಸೇವೆಯಲ್ಲಿ ಅವಿರತವಾಗಿ ತೊಡಗಿರುವ ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘದ ಕಟ್ಟಡವು ಸುಮಾರು 20 ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡವನ್ನು ಪ್ರಸ್ತುತ ನವೀಕರಿಸಿ ಉದ್ಘಾಟಿಸಲಾಗುತ್ತಿದೆ. ಏಪ್ರಿಲ್ 27 ರಂದು ಸಂಜೆ 4 ಗಂಟೆಗೆ ಬೆಂಗಳೂರಿನ ಇನ್ ಫೆಂಟ್ರಿ ರಸ್ತೆಯ ಕೆಎಎಸ್ ಅಧಿಕಾರಿಗಳ ಸಂಘದ ಕಾರ್ಯಾಲಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ʼʼಐಸ್‌ ಕ್ರೀಂ ಬೇಕ ಅಣ್ಣ?ʼʼ:  ಸುಡುವ ಬಿಸಿಲಿನಲ್ಲಿ ಕಾರ್ಯ ನಿರ್ವಹಿಸುವ ಕಾರ್ಮಿಕರಿಗೆ ಐಸ್‌ ಕ್ರೀಂ ವಿತರಿಸಿದ ಬೆಂಗಳೂರಿನ ಯುವಕ

ರಸ್ತೆಬದಿಯ ಕಾರ್ಮಿಕರಿಗೆ ಐಸ್‌ ಕ್ರೀಂ ವಿತರಿಸಿದ ಬೆಂಗಳೂರಿನ ಯುವಕ

Viral Video: ಬೆಂಗಳೂರಿನ ಕಂಟೆಂಟ್ ಕ್ರಿಯೇಟರ್ ಹಾಗೂ ಬೈಕ್ ರೈಡರ್ ಒಬ್ಬರು ರಸ್ತೆ ಬದಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಐಸ್ ಕ್ರೀಂ ವಿತರಿಸುವ ಮೂಲಕ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬೆಂಗಳೂರಿನಲ್ಲಿ ಕಂಡುಬಂದ ಈ ಹೃದಯಸ್ಪರ್ಶಿ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

Haveri News: ಹಾವೇರಿಯಲ್ಲಿ ನಿಶ್ಚಿತಾರ್ಥದ ಹಿಂದಿನ ದಿನ ಯುವತಿ ನಾಪತ್ತೆ; ಇಬ್ರಾಹಿಂ ವಿರುದ್ಧ ಲವ್‌ ಜಿಹಾದ್‌ ಆರೋಪ

ನಿಶ್ಚಿತಾರ್ಥದ ಹಿಂದಿನ ದಿನ ಯುವತಿ ನಾಪತ್ತೆ; ಲವ್‌ ಜಿಹಾದ್‌ ಆರೋಪ

Haveri love jihad case: ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದ ಯುವತಿ ನಾಪತ್ತೆಯಾಗಿದ್ದಾಳೆ. ನಿಶ್ಚಿತಾರ್ಥದ ಹಿಂದಿನ ದಿನವೇ ಯುವತಿ ಕಾಣೆಯಾಗಿದ್ದರಿಂದ ಪೋಷಕರು ಕಂಗಾಲಾಗಿದ್ದಾರೆ. ಆದರೆ, ಯವತಿಯು ಮುಸ್ಲಿಂ ಯುವಕನ ಜತೆ ಪರಾರಿಯಾಗಿದ್ದಾಳೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದು ಲವ್‌ ಜಿಹಾದ್‌ ಎಂದು ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 'ಬೆಂಗಳೂರಿನ ಆತ್ಮ' ಶಿಲ್ಪ ಅನಾವರಣ, ಟರ್ಮಿನಲ್-2ರ ಸೌಂದರ್ಯಕ್ಕೆ ಹೊಸ ಮೆರುಗು

ಟರ್ಮಿನಲ್-2ರ ಸೌಂದರ್ಯಕ್ಕೆ ಹೊಸ ಮೆರುಗು

ಬಯೊಕಾನ್ ಫೌಂಡೇಷನ್ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (ಬಿಐಎಎಲ್‌) ಸಹಯೋಗದಲ್ಲಿ ಈ ಕಲಾಕೃತಿಯನ್ನು ಟರ್ಮಿನಲ್-2ರ ಮುಂಭಾಗ ದಲ್ಲಿ ಸ್ಥಾಪಿಸಲಾಗಿದೆ. ಸ್ಪೇನ್‌ನ ಖ್ಯಾತ ಕಲಾಕಾರ ಜೌಮೆ ಪ್ಲೆನ್ಸಾ ಅವರ ಕಲ್ಪನೆಯಲ್ಲಿ ಮೂಡಿ ಬಂದಿರುವ ಈ ಶಿಲ್ಪವು ಪ್ರಯಾಣಿಕರ ಕಣ್ಮನ ಸೆಳೆಯುತ್ತಿದೆ.

Kodagu News: ಮಡಿಕೇರಿಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ

ಮಡಿಕೇರಿಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಶಿಕ್ಷಕಿ ಆತ್ಮಹತ್ಯೆ

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಚೇರಂಬಾಣೆ ಗ್ರಾಮದಲ್ಲಿ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಡೇಟ್‌ ಫಿಕ್ಸ್‌;  ಹೈಕೋರ್ಟ್​​ ಆದೇಶ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಡೇಟ್‌ ಫಿಕ್ಸ್‌

ತೀವ್ರ ಕುತೂಹಲ ಕರಳಿಸಿರುವ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಅಂಚೆ ಮತಗಳ ಮರು ಎಣಿಕೆಗೆ ಅಂತಿಮವಾಗಿ ದಿನಾಂಕ ನಿಗದಿಯಾಗಿದೆ. ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇ 2 ರಂದು ಮರು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಐಡಿಎಸ್‌ಜಿ ಫಸ್ಟ್ ಗ್ರೇಡ್ ಕಾಲೇಜಿನಲ್ಲಿ ನಡೆಯಲಿದೆ.

ಸಾಂಬಾರ್‌ ಮಾಡಿಲ್ಲ ಎಂದು ಅಪ್ಪ ಬೈದಿದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗಳು!

ಸಾಂಬಾರ್‌ ಮಾಡಿಲ್ಲ ಎಂದು ಅಪ್ಪ ಬೈದಿದಕ್ಕೆ ಆತ್ಮಹತ್ಯೆ ಮಾಡಿಕೊಂಡ ಮಗಳು!

ಸಾಂಬಾರ್ ಮಾಡಿಲ್ಲ ಎಂದು ಅಪ್ಪ ಬೈದಿದ್ದಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಸೌಜನ್ಯ ಪೂಜಾರಿ (22) ಮೃತ ಯುವತಿ. ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಘಟನೆ ನಡೆದಿದೆ. ಸದ್ಯ ಈ ಘಟನೆ ಚಿಕ್ಕಮಗಳೂರು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.

ಬೆಂಗಳೂರಿನ ಪ್ರಯಾಣಿಕರಿಗೆ ಗುಡ್‌ ನ್ಯೂಸ್‌; ಬಿಎಂಟಿಸಿ ಮತ್ತು ಮೆಟ್ರೋಗೆ ಇನ್ಮುಂದೆ ಒಂದೇ ಸ್ಮಾರ್ಟ್ ಕಾರ್ಡ್

ಬಿಎಂಟಿಸಿ ಮತ್ತು ಮೆಟ್ರೋಗೆ ಇನ್ಮುಂದೆ ಒಂದೇ ಸ್ಮಾರ್ಟ್ ಕಾರ್ಡ್

ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಶೀಘ್ರದಲ್ಲೇ ಮಹತ್ವದ ಬದಲಾವಣೆ ಜಾರಿಯಾಗಲಿದೆ. ಬಿಎಂಟಿಸಿ ಹಾಗೂ ಮೆಟ್ರೋದಲ್ಲಿ ಪ್ರಯಾಣಿಸುವವರು ಎರಡೆರಡು ಕಾರ್ಡ್‌ಗಳನ್ನಿಟ್ಟುಕೊಳ್ಳಬೇಕಿತ್ತು. ಆದರೆ ಇನ್ನು ಮುಂದೆ ಈ ಕಿರಿಕಿರಿ ನಿವಾರಣೆಯಾಗಲಿದೆ. ಇನ್ನು ಮುಂದೆ ಸರ್ಕಾರ ಸ್ಮಾರ್ಟ್‌ ಕಾರ್ಡ್‌ ಪರಿಚಯಿಸಲಿದೆ.

Karnataka Weather: ರಾಜ್ಯಾದ್ಯಂತ ಹೆಚ್ಚಿದ ತಾಪಮಾನ; ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಸಾಧ್ಯತೆ

ಇಂದು ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಮಳೆ ಸಾಧ್ಯತೆ

ರಾಜ್ಯದಲ್ಲಿ ಬೇಸಿಗೆಯ ತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಇನ್ನೂ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್​ಗೆ ಏರುವ ಸಾಧ್ಯತೆಯಿದೆ.

Loading...