ನವಜಾತ ಶಿಶುವಿಗೆ ಮರುಜೀವ ನೀಡಿದ ಸಿದ್ದಾರ್ಥ ಆಸ್ಪತ್ರೆ ವೈದ್ಯರು
Tumkur News: ನವಜಾತ ಶಿಶುಗಳಲ್ಲಿ ಎದುರಾಗುವ ಕರುಳಿನ ಅಡಚಣೆಯಂತಹ ಅತ್ಯಂತ ಅಪರೂಪದ ಹಾಗೂ ಮಾರಣಾಂತಿಕ ಕಾಯಿಲೆಯನ್ನು ಯಶಸ್ವಿಯಾಗಿ ಪತ್ತೆಹಚ್ಚಿ, ತುರ್ತು ಶಸ್ತ್ರಚಿಕಿತ್ಸೆ ಮಾಡುವ ಮೂಲಕ ತುಮಕೂರು ನಗರದ ಶ್ರೀ ಸಿದ್ದಾರ್ಥ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ವೈದ್ಯರ ತಂಡವು ಮಗುವಿಗೆ ಮರುಜೀವ ನೀಡಿದೆ.