ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಕ್ಷೇತ್ರದ ಆರೋಗ್ಯ, ಶಿಕ್ಷಣ, ರಸ್ತೆ ಸುರಕ್ಷತೆ, ಆಡಳಿತ, ಬರ ಪರಿಹಾರ ಸೇರಿ ಅಭಿವೃದ್ಧಿ ಅಜೆಂಡಾ ಮುಂದಿಟ್ಟ ಶಾಸಕ; ಉಸ್ತುವಾರಿ ಸಚಿವರಿಂದ ಬೇಡಿಕೆ ಈಡೇರಿಕೆಯ ಭರವಸೆ

ಕೆಡಿಪಿಯಲ್ಲಿ ಶಾಸಕ ಪ್ರದೀಪ್ ಈಶ್ವರ್ ದಿಟ್ಟ ಧ್ವನಿ

ನಗರ ಹೊರವಲಯದ ಜಿಲ್ಲಾಡಳಿತ ಭವನದ ಸರ್.ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ನಡೆದ ಸಭೆ ಯಲ್ಲಿ ಮಾತನಾಡಿದ ಅವರು, ಹಿಂದಿನ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಅವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಕೇಂದ್ರ ಸ್ಥಾಪನೆಗೆ ಸಿದ್ಧತೆ ನಡೆಸಲಾಗಿದ್ದು, ಹೊಸ ಕಟ್ಟಡವೂ ಅಂತಿಮ ಹಂತದಲ್ಲಿದೆ. ಹೀಗಾಗಿ ಯಾವುದೇ ವಿಳಂಬ ಮಾಡದೆ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೇವೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.

Chikkaballapur News: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರೀ ವೀರ ಬ್ರಹ್ಮೇಂದ್ರಸ್ವಾಮಿಗಳ ರಥೋತ್ಸವ; ವೇದಘೋಷ, ಹೋಮ-ಹವನ, ಅಭಿಷೇಕಗಳಿಂದ ಕಂಗೊಳಿಸಿದ ಪುಣ್ಯಕ್ಷೇತ್ರ

ಪಾಪಾಗ್ನಿ ಮಠದಲ್ಲಿ 308ನೇ ಆರಾಧನಾ ಮಹೋತ್ಸವದ ದಿವ್ಯ ವೈಭವ

ಬೆಳಗ್ಗೆಯಿಂದಲೇ ಗಣಪತಿ ಪೂಜೆ, ಪುಣ್ಯಾಹ, ದಶಶಾಂತಿ, ರುದ್ರಾಭಿಷೇಕ, ಕಳಶಾರಾಧನೆ, ಮಹಾನ್ಯಾಸ ಪೂರ್ವಕ ಅಭಿಷೇಕ, ಮಹಾಮಂತ್ರ ಹೋಮ, ಧ್ವಜಾರೋಹಣ, ಕಳಶೋತ್ಸವ, ಲಿಂಗ ಪ್ರತಿಷ್ಠಾಪನೆ ಹಾಗೂ ಶ್ರೀ ಶರಭಯೋಗೇಂದ್ರಸ್ವಾಮಿ, ಅನ್ನಪೂರ್ಣದೇವಿ ಮತ್ತು ಕಾಶಿ ವಿಶ್ವನಾಥ ಸ್ವಾಮಿಗಳಿಗೆ ಪಂಚಾಮೃತಾಭಿಷೇಕ ಸೇರಿದಂತೆ ವಿವಿಧ ವೈದಿಕ ಪೂಜೆಗಳು ಭಕ್ತಿಭಾವದಿಂದ ನೆರವೇರಿದವು.

Chikkaballapur News: ಮಹಿಳೆಯರಿಗೆ ಸೀರೆ, ಮಕ್ಕಳಿಗೆ ಪುಸ್ತಕ ವಿತರಣೆ; ಜನರ ಪ್ರೀತಿಯೇ ನನ್ನ ಶಕ್ತಿ, ನಂಬಿಕೆಗೆ ಚ್ಯುತಿ ಬಾರದಂತೆ ಸೇವೆ ಮಾಡುತ್ತೇನೆ ಎಂದ ಹರೀಶ್ ರೆಡ್ಡಿ

ಸಾಮಾಜಿಕ ಸೇವೆಯ ಮೂಲಕ ಜನ್ಮದಿನ ಆಚರಿಸಿದ ಗೋದಾನಿ ಹರೀಶ್ ಕೆ.ರೆಡ್ಡಿ

ಗುರುವಾರ ಬೆಳಿಗ್ಗೆ ನಗರದಲ್ಲಿರುವ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಹರೀಶ್ ರೆಡ್ಡಿ, ಬಳಿಕ ಅಂಬೇಡ್ಕರ್ ನಗರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಹಿಳೆಯರಿಗೆ ಸೀರೆ ಹಾಗೂ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು. ನಂತರ ಮೂಸ್ಟೂರಿನಲ್ಲಿ ಯುವಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೃಹತ್ ಕೇಕ್ ಕತ್ತರಿಸಿ ಯುವಕರೊಂದಿಗೆ ಸಂಭ್ರಮ ಹಂಚಿಕೊಂಡರು

Chikkaballapur News: ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಹಿಂಪಡೆಯಲು ಆಗ್ರಹಿಸಿ ಯುವ ಕಾಂಗ್ರೆಸ್ ಸ್ಟಿಕರ್ ಪ್ರತಿಭಟನೆ

ವಿದ್ಯಾರ್ಥಿಗಳ ಮೇಲಿನ ಎಫ್‌ಐಆರ್ ಹಿಂಪಡೆಯಲು ಆಗ್ರಹಿಸಿ ಪ್ರತಿಭಟನೆ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಸ್.ಮಂಜುನಾಥಗೌಡ ಅವರ ಸೂಚನೆಯಂತೆ ನಡೆದ ಪ್ರತಿಭಟನೆಗೆ ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಹಾಗೂ ಜಿಲ್ಲಾ ಉಸ್ತುವಾರಿ ದಿವ್ಯಾ ಚಾಲನೆ ನೀಡಿದರು. ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ ನೇತೃತ್ವ ದಲ್ಲಿ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಸ್ಟಿಕರ್ ಅಂಟಿಸಿ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿದರು.

Vishwavani Impact: ಪಂಪ್‌ʼಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆರೋಪ: ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ

ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ

ವಿಶ್ವವಾಣಿಯಲ್ಲಿ ಹೆಸ್ಕಾಂ ಸಿಬ್ಬಂದಿಯ ಪಿತೂರಿ: ಪಂಪ್‌ʼಸೆಟ್‌ಗಳಿಗೆ ದೊರೆಯದ ವಿದ್ಯುತ್ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಗ್ರಾಮಸ್ಥರು ಹಾಗೂ ಹೆಸ್ಕಾಂ ಉಪ ಕೇಂದ್ರದ ಶಾಖಾಧಿಕಾರಿ ಮಾರುತಿ ಹಟ್ಟಿ ಆರೋಪದ ಬೆನ್ನಲ್ಲೆ ಗ್ರಾಮಕ್ಕೆ ಆಗಮಿಸಿದ ಹಿಂದೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಿಬ್ಬಂದಿಗಳು ತಮ್ಮ ಮೇಲೆ ವಿನಾಕಾರಣ ಆರೋಪವಿದೆ.

ಚಾಲಕನ ನಿರ್ಲಕ್ಷ್ಯದಿಂದ ಯುವತಿ ಗಂಭೀರ ಗಾಯ; ಚಿಕಿತ್ಸೆಗೆ 20 ಲಕ್ಷ ರುಪಾಯಿ ಆಗಿದ್ದರೂ ಕ್ಯಾರೇ ಎನ್ನದ ರ‍್ಯಾಪಿಡೋ ಸಂಸ್ಥೆ

ಚಾಲಕನ ನಿರ್ಲಕ್ಷ್ಯದಿಂದ ಯುವತಿಗೆ ಗಾಯ; ಕ್ಯಾರೇ ಎನ್ನದ ರ‍್ಯಾಪಿಡೋ

Viral News: ಯುವತಿಯೊಬ್ಬರು ಕಚೇರಿಗೆ ತೆರಳಲು ಬೆಂಗಳೂರಿನಿಂದ ರ‍್ಯಾಪಿಡೋ ಬುಕ್ ಮಾಡಿದ್ದರು. ಆದರೆ ರೈಡರ್ ಅಜಾಗರೂಕತೆಯಿಂದ ವೇಗವಾಗಿ ತೆರಳಿದ ಕಾರಣ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಇದರಿಂದ ಯುವತಿ ರಸ್ತೆಗೆ ಬಿದ್ದಿದ್ದು ಟ್ರ್ಯಾಕ್ಟರ್‌ ಅವರ ಮೇಲೆ ಹರಿದಿದೆ. ಈ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ರ‍್ಯಾಪಿಡೋ ಸಂಸ್ಥೆ ಮಾತ್ರ ಯಾವುದೇ ವೈದ್ಯಕೀಯ ವೆಚ್ಚಗಳನ್ನು ನೀಡದೆ ನಿರ್ಲಕ್ಷ್ಯವಹಿಸಿದೆ.

Annabrahma chaturmasya: ನಮ್ಮೊಳಗೆ ಒಂದಾಗದೇ ಇರುವ ಆಹಾರವೇ ನಮಗೆ ಶತ್ರು; ರಾಘವೇಶ್ವರ ಶ್ರೀ ವಿಶ್ಲೇಷಣೆ

ಭೋಜನವೆಂದರೆ ಅದ್ವೈತ ಸಾಧನೆ: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ಜೀವವು ಉತ್ಕೃಷ್ಟ ಆಹಾರವನ್ನೇ ಸ್ವೀಕರಿಸಬೇಕಾಗುತ್ತದೆ. ದೋಷಯುಕ್ತ ಆಹಾರವನ್ನು ಸೇವಿಸಿದಾಗ ಅದು ನಮ್ಮ ಜೀವಕ್ಕೆ ಹಾನಿಯನ್ನು ಮಾಡುವುದರ ಜತೆಗೆ ಮುಂದಿನ ಪೀಳಿಗೆಗೂ ದೋಷವನ್ನು ವರ್ಗಾಯಿಸುತ್ತದೆ. ಹಾಗಾಗಿ ಜೀವವೆಂಬ ಯಂತ್ರಕ್ಕೆ ಉತ್ತಮವಾದ ಆಹಾರವೆಂಬ ಇಂಧನವನ್ನಷ್ಟೇ ನೀಡಬೇಕು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ಉದ್ಯೋಗಾಂಕ್ಷಿಗಳ ಗಮನಕ್ಕೆ...: ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಅರ್ಜಿ ಸಲ್ಲಿಕೆ ದಿನಾಂಕ ಮತ್ತೊಮ್ಮೆ ವಿಸ್ತರಣೆ

ಗ್ರಾಮ ಆಡಳಿತ ಅಧಿಕಾರಿ ಹುದ್ದೆ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

KEA Recruitment: 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೀಗ ಕೊನೆಯ ದಿನಾಂಕವನ್ನು ವಿಸ್ತರಿಸಿ ಆದೇಸ ಹೊರಡಿಸಿದೆ. ಹೊಸ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಆಗಸ್ಟ್‌ 20ರವರೆಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಆನ್‌ಲೈನ್‌ ಮೂಲಕ ಶುಲ್ಕ ಪಾವತಿಸಲು ಕೊನೆಯ ದಿನ ಆಗಸ್ಟ್‌ 21.

ವಾಲಿವಾಲ್‌ ಆಡುತ್ತಿದ್ದಾಗಲೇ ಕುಸಿದು ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು; ಸುರತ್ಕಲ್‌ನಲ್ಲಿ ಭೀಕರ ಘಟನೆ: ವಿಡಿಯೊ ವೈರಲ್‌

ವಾಲಿವಾಲ್‌ ಆಡುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿ ಸಾವು

Heart Attack: ಇತ್ತೀಚೆಗೆ ಯುವ ಜನತೆ ಅದರಲ್ಲೂ ಚಿಕ್ಕ ಚಿಕ್ಕ ಮಕ್ಕಳು ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಘಟನೆ ಹೆಚ್ಚಾಗುತ್ತಿದ್ದು, ಅದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದಿದೆ. ವಾಲಿಬಾಲ್‌ ಆಡುತ್ತಿದ್ದ ಲಿಖಿತ್‌ ಆಮೀನ್‌ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾನೆ.

ಕಾರವಾರದಲ್ಲಿ ಕಾರ್ಯಾಚರಣೆಗಿಳಿದ ಐಎನ್‌ಎಸ್ ಮಾಲವನ್‌, ಈ ಯುದ್ಧನೌಕೆಯ ಹಿಂದಿದೆ ಎಎಂ/ಎನ್ಎಸ್ ಇಂಡಿಯಾ ಉಕ್ಕಿನ ಶಕ್ತಿ!

ಕಾರವಾರದಲ್ಲಿ ಕಾರ್ಯಾಚರಣೆಗಿಳಿದ ಐಎನ್‌ಎಸ್ ಮಾಲವನ್‌

ಭಾರತೀಯ ನೌಕಾಪಡೆಗೆ ಇತ್ತೀಚೆಗೆ ಅತ್ಯಾಧುನಿಕ 'ಐಎನ್‌ಎಸ್ ಮಾಲವನ್‌' ಯುದ್ಧನೌಕೆ ಸೇರ್ಪಡೆಗೊಂಡಿತ್ತು. ಇದರ ನಿರ್ಮಾಣಕ್ಕೆ ಅಗತ್ಯವಿದ್ದ ಶೇ. 100ರಷ್ಟು ವಿಶೇಷ ಉಕ್ಕನ್ನು ಪ್ರಸಿದ್ಧ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ಇಂಡಿಯಾ ಪೂರೈಸಿದೆ. ಈ ಕುರಿತ ಡಿಟೇಲ್ಸ್‌ ಇಲ್ಲಿದೆ.

ಗುಂಡಿನ ಸದ್ದಿಗೆ ಬೆದರಿದ ಬೆಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಮನಬಂದಂತೆ ಏರ್ ಗನ್‌ನಿಂದ ಶೂಟೌಟ್ ಮಾಡಿದ ಟೆಕ್ಕಿ

ಗುಂಡಿನ ಸದ್ದಿಗೆ ಬೆದರಿದ ಸಿಲಿಕಾನ್ ಸಿಟಿ ಬೆಂಗಳೂರು

Techie Opens Fire: ಬೆಂಗಳೂರಿನ ಅಪಾರ್ಟ್‌ಮೆಂಟ್ ಒಳಗೆ ಭದ್ರತಾ ಸಿಬ್ಬಂದಿ ಮತ್ತು ವಾಹನಗಳ ಮೇಲೆ ಏರ್ ಗನ್‌ನಿಂದ ಗುಂಡು ಹಾರಿಸಿದ ಆರೋಪದ ಮೇಲೆ 40 ವರ್ಷದ ಐಟಿ ಉದ್ಯೋಗಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ವೇಳೆ ಅನುರಾಗ್ ತಿವಾರಿ ಕುಡಿದ ಅಮಲಿನಲ್ಲಿದ್ದ. ನಂತರ ಬಾಲ್ಕನಿಗೆ ಹೋಗಿ ಏರ್ ಗನ್‌ನಿಂದ ಗುಂಡು ಹಾರಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ಆಗಸ್ಟ್‌ 8ರಂದು ವಿಪ್ರ ವ್ಯವಹಾರ ವೇದಿಕೆಯಿಂದ "ವಿಪ್ರ ಸಮ್ಮಿಲನ–2026"

ಬೆಂಗಳೂರಿನಲ್ಲಿ ಆ.8ಕ್ಕೆ ವಿಪ್ರ ವ್ಯವಹಾರ ವೇದಿಕೆಯಿಂದ ವಿಪ್ರ ಸಮ್ಮಿಲನ–2026

Vipra Sammilana 2026: ವಿಪ್ರ ವ್ಯವಹಾರ ವೇದಿಕೆ ವತಿಯಿಂದ ಆಗಸ್ಟ್ 8ರಂದು ಶನಿವಾರ ಮಧ್ಯಾಹ್ನ 3.30 ರಿಂದ ರಾತ್ರಿ 8.00 ಗಂಟೆಯವರೆಗೆ ಬೆಂಗಳೂರು ನಗರದ ಕೆಜಿ ರಸ್ತೆಯಲ್ಲಿರುವ ಎಫ್‌ಕೆಸಿಸಿಐ ಸಂಸ್ಥೆಯ ಸರ್‌ ಎಂ. ವಿಶ್ವೇಶ್ವರಯ್ಯ ಸಭಾಂಗಣದಲ್ಲಿ "ವಿಪ್ರ ಸಮ್ಮಿಲನ–2026" ಹಮ್ಮಿಕೊಳ್ಳಲಾಗಿದೆ.

‘ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಿ’ : ಮಾನ್ವಿತಾ ಕಾಮತ್

ಒತ್ತಡದ ಬದುಕಿನಲ್ಲಿ ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡಿ; ಮಾನ್ವಿತಾ ಕಾಮತ್‌

ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ವಿಶ್ವವಾಣಿ ಟಿವಿ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ಕಾರ್ಯಕ್ರಮವು ಬುಧವಾರ (ಆ. 5) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಸ್ಯಾಂಡಲ್‌ವುಡ್‌ ನಟಿ ಮಾನ್ವಿತಾ ಕಾಮತ್‌ ಆಗಮಿಸಿದ್ದರು.

Miss World pageant: ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಿಂಚಿದ ಚಿಕ್ಕಬಳ್ಳಾಪುರದ ಡಾ.ವಿ.ಮೋನಿಷಾ

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಮಿಂಚಿದ ಚಿಕ್ಕಬಳ್ಳಾಪುರದ ಡಾ.ವಿ.ಮೋನಿಷಾ

ಚಿಂತಾಮಣಿಯ ರಾಯಲ್ ಶಾಲೆ ಹಾಗೂ ಏನಿಗದಲೆ ಜವಾಹರ್ ನವೋದಯ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಅವರು, ಉಡುಪಿಯ ಎಸ್‌ಡಿಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ಆಯುರ್ವೇದ ವೈದ್ಯಕೀಯ ಪದವಿ ಹಾಗೂ ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕ ಆರೋಗ್ಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Chikkaballapur News: ಪಸುಪಲೋಡು ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ನೂತನ ಪದಾಧಿಕಾರಿಗಳ ಆಯ್ಕೆ

ಪಸುಪಲೋಡು ಸರ್ಕಾರಿ ಶಾಲೆಗೆ ಎಸ್‌ಡಿಎಂಸಿ ನೂತನ ಪದಾಧಿಕಾರಿಗಳ ಆಯ್ಕೆ

ತಾಲೂಕಿನ ಪಸುಪಲೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪೋಷಕರ ಸಾಮಾನ್ಯ ಸಭೆಯಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯ 18 ಸದಸ್ಯರನ್ನು ಆಯ್ಕೆ ಮಾಡಲಾಯಿತು. ಆಯ್ಕೆಯಾದ ಸದಸ್ಯರು ಸಭೆ ನಡೆಸಿ, ಸುಮತಿ ಅವರನ್ನು ಎಸ್‌ಡಿಎಂಸಿ ಅಧ್ಯಕ್ಷರಾಗಿ ಹಾಗೂ ಜಿ.ವಿ. ವೆಂಕಟೇಶಪ್ಪ ಅವರನ್ನು ಉಪಾಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದರು.

ರಾಜ್ಯದ ಸಾಧಕ ವೈದ್ಯರಿಗೆ ವಿಶ್ವವಾಣಿ ಟಿವಿಯ ‘ಪ್ರೈಡ್ ಆಫ್ ಹೆಲ್ತ್‌ಕೇರ್ʼ ಅವಾರ್ಡ್; Photo Gallery ಇಲ್ಲಿದೆ

ವೈದ್ಯರಿಗೆ ವಿಶ್ವವಾಣಿ ಟಿವಿಯ ‘ಪ್ರೈಡ್ ಆಫ್ ಹೆಲ್ತ್‌ಕೇರ್ʼ ಅವಾರ್ಡ್ ಪ್ರದಾನ

Pride of Healthcare Award: ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗುರುತಿಸಿ ವಿಶ್ವವಾಣಿ ಟಿವಿ ಬೆಂಗಳೂರಿನಲ್ಲಿ ಗೌರವಿಸಿದೆ. ರಾಜ್ಯದ ವಿವಿಧ ಕಡೆಗಳಿಂದ ಆಗಮಿಸಿದ ವೈದ್ಯಕೀಯ ಸಾಧಕರಿಗೆ ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್‌ ಮಾಡಲಾಯಿತು. ಬುಧವಾರ (ಆಗಸ್ಟ್‌ 5) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಡೆಯಿತು. ಇಲ್ಲಿದೆ ಪ್ರಶಸ್ತಿ ಪುರಸ್ಕೃತರ ವಿವರ.

ನಾಡಿನ ಆರೋಗ್ಯ ಸಾಧಕರಿಗೆ ವಿಶ್ವವಾಣಿ ಟಿವಿ ಗೌರವ ಸಚಿವ ಯು ಟಿ ಖಾದರ್‌ ಶ್ಲಾಘನೆ

ವೈದ್ಯರು ಕೇವಲ ಸಂಬಳಕ್ಕಾಗಿ ಕೆಲಸ ಮಾಡಲ್ಲ, ಅದೊಂದು ಸೇವೆ; ಯು.ಟಿ ಖಾದರ್‌

ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ವಿಶ್ವವಾಣಿ ಟಿವಿ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ಕಾರ್ಯಕ್ರಮವು ಬುಧವಾರ (ಆ. 5) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಧನೆಗೈದ 17 ಮಂದಿ ಸಾಧಕರನ್ನು ಸನ್ಮಾನಿಸಲಾಗಿದೆ.

Chikkaballapur News: ಭಾರತ್ ಜೋಡೋ ಯುವ ಸಂಘಗಳಿಗೆ ನೋಂದಣಿ ಆರಂಭ

ಭಾರತ್ ಜೋಡೋ ಯುವ ಸಂಘಗಳಿಗೆ ನೋಂದಣಿ ಆರಂಭ

16ರಿಂದ 35 ವರ್ಷದೊಳಗಿನ 100 ಯುವ ಸದಸ್ಯರನ್ನು ಒಳಗೊಂಡ ಒಂದು ಸಂಘವನ್ನು ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ರಚಿಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಪ್ರಾತಿ ನಿಧ್ಯ ದೊರೆಯುವಂತೆ ಸಂಘಗಳನ್ನು ರೂಪಿಸಲು ಸೂಚಿಸಲಾಗಿದೆ. ಪ್ರತಿ ಸಂಘಕ್ಕೆ ರಾಜ್ಯ ಸರ್ಕಾರ ದಿಂದ ವಾರ್ಷಿಕ 10 ಲಕ್ಷ ರೂ. ಅನುದಾನ ನೀಡಲಾಗುತ್ತದೆ.

Chikkaballapur News: ವಿದ್ಯಾರ್ಥಿ ಪರಿಷತ್ ಅಕಾಡೆಮಿಕ್ ಹಾಗೂ ಸೇವಾ ಪರಂಪರೆಯನ್ನು ಎತ್ತಿ ಹಿಡಿಯಲಿ: ಡಾ.ಕೋಡಿ ರಂಗಪ್ಪ

ಡಿಜಿಟಲ್ ಚುನಾವಣೆ: ವಿದ್ಯಾರ್ಥಿ ಪರಿಷತ್ ಪ್ರತಿನಿಧಿಗಳಿಗೆ ಅಭಿನಂದನೆ

ಶಾಲೆ ಹಾಗೂ ಕಾಲೇಜು ಹಂತದಲ್ಲಿನ ಚುನಾವಣೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಗಳನ್ನು ಬೆಳೆಸಲು ಅತ್ಯುತ್ತಮ ವೇದಿಕೆಯಾಗಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕುಟುಂಬ, ಶಾಲೆ, ಸಮಾಜ, ಕೈಗಾರಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ಸಮರ್ಥ ನಾಯಕತ್ವ ಅಗತ್ಯವಿದ್ದು, ಅದರ ಅಡಿಪಾಯ ವಿದ್ಯಾರ್ಥಿ ಜೀವನದಲ್ಲೇ ನಿರ್ಮಾಣವಾಗಬೇಕು

ಮಣಿಪಾಲ್ ಆಸ್ಪತ್ರೆಯಲ್ಲಿ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ

ಮಣಿಪಾಲ್ ಆಸ್ಪತ್ರೆಯಲ್ಲಿ ದೇಶದ ಮೊದಲ ಎಐ ಆಧಾರಿತ ಎಲೆಕ್ಟಾ ಇವೋ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಅಂಕಿಅಂಶಗಳ ಪ್ರಕಾರ, ದೇಶದಲ್ಲಿ ಪ್ರತಿ ವರ್ಷ ಸುಮಾರು 14.6 ಲಕ್ಷ ಹೊಸ ಕ್ಯಾನ್ಸರ್ ಪ್ರಕರಣಗಳು ದಾಖಲಾಗುತ್ತಿವೆ. ಈ ಹಿನ್ನೆಲೆ ಯಲ್ಲಿ ರೋಗಿಯ ಅಗತ್ಯಕ್ಕೆ ತಕ್ಕಂತೆ ಚಿಕಿತ್ಸೆಯನ್ನು ರೂಪಿಸುವ ತಂತ್ರಜ್ಞಾನಗಳ ಅಗತ್ಯ ಹೆಚ್ಚುತ್ತಿದ್ದು, ಎಲೆಕ್ಟಾ ಇವೋ ಈ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದೆ.

"ಯುದ್ಧ ಬೇಡ, ಶಾಂತಿ ಬೇಕು" - ಜಯನಗರದಲ್ಲಿ ಹಿರೋಷಿಮಾ ದಿನಾಚರಣೆ

"ಯುದ್ಧ ಬೇಡ, ಶಾಂತಿ ಬೇಕು" - ಜಯನಗರದಲ್ಲಿ ಹಿರೋಷಿಮಾ ದಿನಾಚರಣೆ

ಹಿರೋಷಿಮಾ ನಾಗಾಸಾಕಿ ಬಾಂಬ್ ದಾಳಿಯ ಭೀಕರತೆಯನ್ನು ನೆನಪಿಸಿಕೊಂಡು ವಿಶ್ವಶಾಂತಿಯ ಸಂದೇಶ ಸಾರುವ ಉದ್ದೇಶದಿಂದ ಆರ್ಟ್ ಕಲ್ಚರಲ್ ಎಜುಕೇಶನಲ್ ಎನ್ಲೈಟ್ ಫೌಂಡೇಶನ್ (ರಿ) ವತಿಯಿಂದ ಜಯನಗರದ ಆರ್.ಕೆ.ಎಸ್. ಎಜುಕೇಶನಲ್ ಸೊಸೈಟಿ (ರಿ) ಶಾಲೆ ಯಲ್ಲಿ "ಹಿರೋಷಿಮಾ ಡೇ" ಶಾಂತಿ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಆರೋಗ್ಯ ಕ್ಷೇತ್ರದ ಸಾಧಕರಿಗೆ ಗೌರವ; ವಿಶ್ವವಾಣಿ ಟಿವಿಯ ‘ಪ್ರೈಡ್ ಆಫ್ ಹೆಲ್ತ್‌ಕೇರ್ʼ ಅವಾರ್ಡ್ ಪ್ರದಾನ

ವಿಶ್ವವಾಣಿ ಟಿವಿಯ ‘ಪ್ರೈಡ್ ಆಫ್ ಹೆಲ್ತ್‌ಕೇರ್ʼ ಅವಾರ್ಡ್ ಪ್ರದಾನ

ಆರೋಗ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಆರೋಗ್ಯ ವಲಯದ ಸಾಧಕರನ್ನು ಗೌರವಿಸುವ ಉದ್ದೇಶದಿಂದ ವಿಶ್ವವಾಣಿ ಟಿವಿ ಆಯೋಜಿಸಿದ್ದ ‘ಪ್ರೈಡ್ ಆಫ್ ಹೆಲ್ತ್‌ಕೇರ್ ಅವಾರ್ಡ್’ಕಾರ್ಯಕ್ರಮವು ಬುಧವಾರ (ಆ. 6) ಸಂಜೆ ಬೆಂಗಳೂರಿನ ರಾಡಿಸನ್‌ ಬ್ಲೂ ಹೋಟೆಲ್‌ನಲ್ಲಿ ಯಶಸ್ವಿಯಾಗಿ ನಡೆಯಿತು.

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿ ಉಮ್ಮರ್ ಫಾರೂಕ್  ಬಂಧಿಸಿದ NIA

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಪ್ರಮುಖ ಆರೋಪಿಯನ್ನು ಬಂಧಿಸಿದ NIA

Praveen Nettaru Murder: BJP ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್‌ ಆರೋಪಿ ಉಮ್ಮರ್ ಫಾರೂಕ್ ಎಂ.ಆರ್.ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಕೇರಳದ ಕೊಚ್ಚಿಯಲ್ಲಿ ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಎನ್‌ಐಎ ಬಂಧಿಸಿರುವ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

Sirsi News: ಆಧ್ಯಾತ್ಮ-ಆರೋಗ್ಯ ಹೂವು-ಪರಿಮಳದ ಸಂಬಂಧ: ವಿಭೂತಿಪುರ ಮಠದ ಶ್ರೀ

ಆಧ್ಯಾತ್ಮ-ಆರೋಗ್ಯ ಹೂವು-ಪರಿಮಳದ ಸಂಬಂಧ

ಮನಸ್ಸನ್ನು ನಿತ್ಯವೂ ಅಂತರಂಗದ ಕಡೆಗೆ ಕೊಂಡೊಯ್ಯಲು ಸಾಧ್ಯವಾದರೆ ಜೀವನದಲ್ಲಿ ಆರೋಗ್ಯ ಮತ್ತು ನೆಮ್ಮದಿ ನೆಲೆಸುತ್ತದೆ. ಮಠಾಧೀಶರು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರಾಗಿರುವ ಕಾರಣ ದೊಡ್ಡ ಜವಾಬ್ದಾರಿಯನ್ನು ಹೊತ್ತ ಸಂಸಾರಿಗಳೇ ಆಗಿದ್ದಾರೆ. ಆದರೆ ಎಲ್ಲ ವ್ಯವಹಾರಗಳ ಮಧ್ಯೆಯೂ ತಾವು ಅದರಲ್ಲಿ ಅಂಟಿಕೊಳ್ಳದೆ ಬದುಕಬೇಕು ಎಂದು ತಿಳಿಸಿದರು.

Loading...