ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Alok Mohan: ರಾಜ್ಯದ ಡಿಜಿ-ಐಜಿಪಿ ಅಲೋಕ್‌ ಮೋಹನ್‌ ಅವಧಿ ಮೇ 21ರವರೆಗೆ ವಿಸ್ತರಣೆ

ಡಿಜಿ-ಐಜಿಪಿ ಅಲೋಕ್‌ ಮೋಹನ್‌ ಅವಧಿ ಮೇ 21ರವರೆಗೆ ವಿಸ್ತರಣೆ

Alok Mohan: 2023ರ ಮೇ 20ರಂದು ಡಿಜಿ-ಐಜಿಪಿಯಾಗಿ ನೇಮಕವಾಗಿದ್ದ ಅಲೋಕ್‌ ಮೋಹನ್‌ ಅವರು, ಇದೇ ಏಪ್ರಿಲ್‌ 30ರಂದು ನಿವೃತ್ತಿಯಾಗಬೇಕಿತ್ತು. ಆದರೆ, ಇದೀಗ 22 ದಿನಗಳ ಕಾಲ ಸೇವಾವಧಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿದೆ. ಇವರು 1987ನೇ ಬ್ಯಾಚ್‌ನ ಕರ್ನಾಟಕ ಕೇಡರ್‌ ಐಪಿಎಸ್‌ ಅಧಿಕಾರಿಯಾಗಿದ್ದಾರೆ.

Karnataka Weather: ನಾಳೆ ರಾಜ್ಯದ ಉತ್ತರ, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

ನಾಳೆ ಉತ್ತರ, ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ

Karnataka Weather: ಉತ್ತರ ಒಳನಾಡಿನಲ್ಲಿ 2 ದಿನಗಳವರೆಗೆ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ. ನಂತರ 2-3 ಡಿಗ್ರಿ ಸೆಲ್ಸಿಯಸ್ ಕ್ರಮೇಣ ಹೆಚ್ಚಳವಾಗುತ್ತದೆ. ಮುಂದಿನ 5 ದಿನಗಳವರೆಗೆ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಗರಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ.

Bribery case: ಯಾದಗಿರಿ ಪಿಡಬ್ಲ್ಯುಡಿಯಲ್ಲಿ ಭಾರಿ ಭ್ರಷ್ಟಾಚಾರ; 17 ಲಕ್ಷ ಬಿಲ್ ಪಾವತಿಗೆ 4.80 ಲಕ್ಷ ಲಂಚ ಪಡೆದ ಅಧಿಕಾರಿಗಳು!

17 ಲಕ್ಷ ಬಿಲ್ ಪಾವತಿಗೆ 4.80 ಲಕ್ಷ ಲಂಚ ಪಡೆದ ಅಧಿಕಾರಿಗಳು!

Bribery case: ಯಾದಗಿರಿ ಲೋಕೋಪಯೋಗಿ ಇಲಾಖೆಯ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳ ಬ್ರಹ್ಮಾಂಡ ಭ್ರಷ್ಟಾಚಾರ ಬಟಾಬಯಲಾಗಿದೆ. ಅಧಿಕಾರಿಗಳ ಲಂಚಾವತಾರದ ಆಡಿಯೋ ಲಭ್ಯವಾಗಿದೆ. ಜಿಲ್ಲಾ‌ ಮಟ್ಟದ ಅಧಿಕಾರಿಗಳು ಸೇರಿ ಐದಾರು ಅಧಿಕಾರಿಗಳಿಂದ ಹಣ ವಸೂಲಿ ನಡೆದಿದೆ.

VAO Recruitment: ಒಂದು ರೂಪಾಯಿ ಲಂಚವಿಲ್ಲದೆ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ ನಡೆದಿದೆ: ಸಿಎಂ ಸಿದ್ದರಾಮಯ್ಯ

ಒಂದು ರೂಪಾಯಿ ಲಂಚವಿಲ್ಲದೆ ಗ್ರಾಮ ಆಡಳಿತಾಧಿಕಾರಿಗಳ ನೇಮಕಾತಿ: ಸಿಎಂ

VAO Recruitment: ಕಂದಾಯ ಇಲಾಖೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ 1000 ಗ್ರಾಮ ಆಡಳಿತಾಧಿಕಾರಿಗಳಿಗೆ ನೇಮಕಾತಿ ಆದೇಶ ವಿತರಿಸಿ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ. ಗ್ರಾಮ ಆಡಳಿತಾಧಿಕಾರಿಗಳು ಒಳ್ಳೆ ರೀತಿಯ ಕೆಲಸ ಮಾಡಿಕೊಟ್ಟರೆ ಅವರ ಮೇಲೂ ಗೌರವವಿರುತ್ತದೆ. ಜನರ ಕೆಲಸ ದೇವರ ಕೆಲಸ ಎಂದು ನೆನೆಪಿಟ್ಟುಕೊಳ್ಳಬೇಕು ಎಂದು ಸಿಎಂ ಸಲಹೆ ನೀಡಿದ್ದಾರೆ.

Jr NTR and Prashanth Neel: ಜೂನಿಯರ್‌ ಎನ್‌ಟಿಆರ್‌, ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ ಆಕ್ಷನ್‌ ಪ್ಯಾಕ್ಡ್‌ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌

ಜೂನಿಯರ್‌ ಎನ್‌ಟಿಆರ್‌ ನಟನೆಯ ಹೊಸ ಸಿನಿಮಾದ ರಿಲೀಸ್‌ ಡೇಟ್‌ ಅನೌನ್ಸ್‌

ಟಾಲಿವುಡ್‌ ನಟ ಜೂನಿಯರ್‌ ಎನ್‌ಟಿಆರ್‌ ಮತ್ತು ನಿರ್ದೇಶಕ ಪ್ರಶಾಂತ್‌ ನೀಲ್‌ ಕಾಂಬಿನೇಷನ್‌ನ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಆಗಿದೆ. ಇನ್ನೂ ಶೀರ್ಷಿಕೆ ಅಂತಿಮವಾಗದ ʼ#NTRNeelʼ ತಾತ್ಕಾಲಿಕ ಶೀರ್ಷಿಕೆಯ ಈ ಸಿನಿಮಾ, 2026ರ ಜೂನ್‌ 25ರಂದು ತೆರೆಗೆ ಬರಲಿದೆ. ಈ ಕುರಿತ ವಿವರ ಇಲ್ಲಿದೆ.

Bomb threat: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಬಾಂಬ್ ಬೆದರಿಕೆ; ಪ್ರಿನ್ಸಿಪಾಲ್‌ನ ಕತ್ತರಿಸಿ ಫ್ರಿಡ್ಜ್‌ನಲ್ಲಿ ಇಡುವುದಾಗಿ ಸಂದೇಶ

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಬಾಂಬ್ ಬೆದರಿಕೆ!

Bomb threat: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಅಪರಿಚಿತ ವ್ಯಕ್ತಿ ಬೆದರಿಕೆ ಸಂದೇಶ ಕಳುಹಿಸಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಸಂಬಂಧ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Kalladka Prabhakar Bhat: ಹಿಂದೂ ಹೆಣ್ಣು ಮಕ್ಕಳು ಇನ್ನುಮುಂದೆ ಬ್ಯಾಗ್‌ನಲ್ಲಿ ಚೂರಿ ಇಟ್ಕೊಂಡು ಓಡಾಡಿ: ಕಲ್ಲಡ್ಕ ಪ್ರಭಾಕರ ಭಟ್

ಹಿಂದೂ ಹೆಣ್ಣು ಮಕ್ಕಳು ಚೂರಿ ಇಟ್ಕೊಂಡು ಓಡಾಡಿ: ಪ್ರಭಾಕರ ಭಟ್

Kalladka Prabhakar Bhat: ಹಿಂದೂ ಹೆಣ್ಣು ಮಕ್ಕಳು ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಇನ್ನು ಮುಂದೆ ಹೊರಗೆ ಹೋಗುವಾಗ ಬ್ಯಾಗ್‌ನಲ್ಲಿ ಆರಿಂಚು ಉದ್ದದ ಚೂರಿ ಇಟ್ಕೊಳ್ಳಿ. ಸಂಜೆ ಮೇಲೆ ಹೊರಗಡೆ ಹೋಗುವಾಗ ನಿಮ್ಮ ಸುರಕ್ಷತೆಗೆ ಬೇಕಾಗುತ್ತದೆ ಎಂದು ಆರ್‌ಎಸ್ಎಸ್ ನಾಯಕ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

Caste Census: ಜಾತಿಗಣತಿ ವರದಿ ಪ್ರಶ್ನಿಸಿ ಅರ್ಜಿ: ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ತಡೆ

ಜಾತಿಗಣತಿ ವರದಿ ಪ್ರಶ್ನಿಸಿ ಅರ್ಜಿ: ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ತಡೆ

ರಾಜ್ಯದಲ್ಲಿ ಜಾತಿಗಣತಿ ವರದಿ ಜಾರಿ ಸಂಬಂಧ ಈಗಾಗಲೇ ಹಲವು ಚರ್ಚೆಗಳು ನಡೆದಿವೆ. ಈ ವರದಿಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಲಾಗಿದೆ. ಇದೀಗ ಹೈಕೋರ್ಟ್‌ ಈ ಕುರಿತು ಆದೇಶ ಹೊರಡಿಸಿದ್ದು, ಈ ಪ್ರಕರಣದಲ್ಲಿ ಮಧ್ಯಂತರ ಆದೇಶ ನೀಡಲು ಕರ್ನಾಟಕ ಹೈಕೋರ್ಟ್‌ ನಿರಾಕರಿಸಿದೆ. ವಿಚಾರಣೆ ಬಳಿಕ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಜುಲೈ 17 ಕ್ಕೆ ಮುಂದೂಡಿದೆ.

HD Kumaraswamy : ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯವಾಗಿದ್ದಾರೆ; ಮೀಡಿಯಾ ಸೆಕ್ರೆಟರಿ ಚೆನ್ನಕೃಷ್ಣ ಮಾಹಿತಿ

ಕುಮಾರಸ್ವಾಮಿ ಅವರು ಆರೋಗ್ಯವಾಗಿದ್ದಾರೆ; ಮೀಡಿಯಾ ಸೆಕ್ರೆಟರಿಯಿಂದ ಮಾಹಿತಿ

ಕೇಂದ್ರ ಸಚಿವ ಎಚ್ ಡಿ ಕುಮಾರ ಸ್ವಾಮಿ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಕಫದ ಸಮಸ್ಯೆಯಿಂದ ಅವರು ಬಳಲುತ್ತಿದ್ದಾರೆ. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿಸಾಗಿದೆ ಎಂದು ಸುದ್ದಿ ಹಬ್ಬಿತ್ತು. ಆದರೆ ಈ ಕುರಿತು ಇದೀಗ ಸ್ಪಷ್ಟನೆ ದೊರಕಿದೆ. ಕುಮಾರ ಸ್ವಾಮಿಯವರ ಮೀಡಿಯಾ ಸೆಕ್ರೆಟರಿ ಚೆನ್ನಕೃಷ್ಣ ಮಾಹಿತಿ ನೀಡಿದ್ದಾರೆ.

Tushar Girinath: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ವರ್ಗಾವಣೆ; ಹೊಸ ಆಯುಕ್ತ ನೇಮಕ

ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್​ ವರ್ಗಾವಣೆ

ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ (Tushar Girinath) ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಇವರ ಸ್ಥಾನಕ್ಕೆ ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದಂತ ಮಹೇಶ್ವರ ರಾವ್. ಎಂ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Gold Price Today: ಚಿನ್ನದ ದರದಲ್ಲಿ ಇಂದು ಮತ್ತೆ ಏರಿಕೆ; ಅಕ್ಷಯ ತೃತೀಯಕ್ಕೆ ಬಂಗಾರ ಮತ್ತಷ್ಟು ತುಟ್ಟಿ

ಅಕ್ಷಯ ತೃತೀಯಕ್ಕೆ ಬಂಗಾರ ಮತ್ತಷ್ಟು ತುಟ್ಟಿ

Gold Price Today on 29th April 2025:ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 40 ರೂ. ಏರಿಕೆ ಕಂಡಿದ್ದು, 8,980 ರೂ. ಇದೆ. 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 44ರೂ. ಏರಿಕೆಯಾಗಿದ್ದು 9,797 ರೂ. ಆಗಿದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನ 71,840 ರೂ. ಬೆಲೆ ಬಾಳಿದರೆ, 10 ಗ್ರಾಂಗೆ ನೀವು 89,800 ರೂ. ಮತ್ತು 100 ಗ್ರಾಂಗೆ 8,98,000 ರೂ. ನೀಡಬೇಕಾಗುತ್ತದೆ.

Mangalore Doctor Controversy: ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ, ನಾನು ಭಾರತವನ್ನು ದ್ವೇಷಿಸುತ್ತೇನೆ; ಮಂಗಳೂರು ವೈದ್ಯೆಯಿಂದ ದೇಶ ವಿರೋಧಿ ಪೋಸ್ಟ್

"ನಾನು ಭಾರತವನ್ನು ದ್ವೇಷಿಸುತ್ತೇನೆ" ; ವೈದ್ಯೆಯಿಂದ ದೇಶ ವಿರೋಧಿ ಪೋಸ್ಟ್

ಮಂಗಳೂರಿನ ವೈದ್ಯೆ ಅಫೀಫಾ ಫಾತಿಮಾ ಎಂಬಾಕೆ ದೇಶ ವಿರೋಧಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆ ಆಕೆಯನ್ನು ವಜಾಗೊಳಿಸಿದೆ. ಆಸ್ಪತ್ರೆಯ ಹೆಚ್​ಆರ್ ಆಕೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆಕೆ ಭಾರತವನ್ನು ನಾನು ದ್ವೇಷಿಸುತ್ತೇನೆ ಎಂದು ಪೋಸ್ಟ್‌ ಹಾಕಿದ್ದಾಳೆ.

Harassment Case: ಮಹಿಳಾ ಪಿಎಸ್ಐಯಿಂದ ಕಿರುಕುಳ; ಬೇಸತ್ತ ಯುವಕ ಆತ್ಮಹತ್ಯೆಗೆ ಯತ್ನ

ಮಹಿಳಾ ಪಿಎಸ್ಐಯಿಂದ ಯುವಕನಿಗೆ ಬೆದರಿಕೆ

ಮಹಿಳಾ ಪಿಎಸ್ಐ ಕಿರುಕುಳಕ್ಕೆ ಬೇಸತ್ತು ಯುವಕನೊಬ್ಬ ಮದ್ಯದಲ್ಲಿ ಡೊಮ್ಯಾಕ್ಸ್ ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ನಡೆದಿದೆ. ಯುವಕನಿಗೆ ಕೊಳ್ಳೇಗಾಲ ಠಾಣೆಯ ಪಿಎಸ್ಐ ಸುಮಾರು ಒಂದು ವರ್ಷಗಳಿಂದ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ.

Mysore Family Killed: ಅಮೆರಿಕದಲ್ಲಿ ಪತ್ನಿ ಪುತ್ರನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮೈಸೂರು ಉದ್ಯಮಿ

ಪತ್ನಿ ಪುತ್ರನನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮೈಸೂರು ಉದ್ಯಮಿ

ಅಮೆರಿಕದಲ್ಲಿ ನೆಲೆಸಿದ್ದ ಮೈಸೂರು ಮೂಲದ ಉದ್ಯಮಿಯೊಬ್ಬರು ಪತ್ನಿ, ಪುತ್ರನಿಗೆ ಗುಂಡಿಕ್ಕಿ ಹತ್ಯೆ ಮಾಡಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಶ್ವೇತಾ, ಹಾಗೂ ಪುತ್ರನನ್ನು ಕೊಲೆ ಮಾಡಿದ ಬಳಿಕ ಹರ್ಷ ಕಿಕ್ಕೇರಿ ಅಲಿಯಾಸ್ ಹರ್ಷವರ್ಧನ್ (57) ಆತ್ಮಹತ್ಯೆಗೆ ಶರಣಾಗಿದ್ದಾರೆ.

Chikkaballapur News: ರೈತರ ಮೇಲೆ ಹಾರಿದೆ ಗುಂಡಿನ ದಾಳಿ

ರೈತರ ಮೇಲೆ ಹಾರಿದೆ ಗುಂಡಿನ ದಾಳಿ

ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ ಮತ್ತು ಗುಡಿಬಂಡೆ ತಾಲ್ಲೂಕಿನಲ್ಲಿಯೇ ಅತಿ ಹೆಚ್ಚಿನ ಗಣಿಗಾರಿಕೆ ಚಟುವಟಿ ಕೆಗಳು ನಡೆಯುತ್ತಿದ್ದು ಇವುಗಳ ಕಾರಣವಾಗಿ ಇಲ್ಲಿ ನಿತ್ಯವೂ ಮಾನವ ಹಕ್ಕುಗಳ ಉಲ್ಲಂಘನೆಯಂತಹ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿವೆ. ಗಣಿಗಾರಿಕೆಗೆ ಅವಶೇಷಗಳನ್ನು ಸಾಗಿಸಲು ಬಳಕೆಯಾಗುವ ಟಿಪ್ಪರ್‌ಗಳಿಂದಾಗಿ ರಾಷ್ಟೀಯ ಹೆದ್ದಾರಿ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ನಿತ್ಯವೂ ಒಂದಿಲ್ಲೊಂದು ಅಪಘಾತಗಳು ಘಟಿಸಿ ಅಮಾಯಕರ ಪ್ರಾಣಕ್ಕೆ ಎರವಾಗುತ್ತಿರುವುದು ಸುಳ್ಳಲ್ಲ.ಇದಕ್ಕೆ ಹೊಸ ಸೇರ್ಪಡೆ ಏ.23ರಂದು ಕನಗಾನಕೊಪ್ಪ ಗ್ರಾಮದಲ್ಲಿ ಕ್ವಾರಿಗೆ ರಸ್ತೆ ನಿರ್ಮಾಣ ಮಾಡುವಾಗ ನಡೆದ ಶೂಟೌಟ್ ಘಟನೆಯಾಗಿದೆ

Akshaya Trutiya Special: ಅಕ್ಷಯ ತೃತೀಯ ಸೀಸನ್‌ನಲ್ಲಿ ಬ್ರೈಡಲ್‌ ಆಭರಣಗಳಿಗೆ ಹೆಚ್ಚಿದ ಬೇಡಿಕೆ

ಅಕ್ಷಯ ತೃತೀಯ ಸೀಸನ್‌ನಲ್ಲಿ ಬ್ರೈಡಲ್‌ ಆಭರಣಗಳಿಗೆ ಹೆಚ್ಚಿದ ಬೇಡಿಕೆ

Akshaya Trutiya Special: ಅಕ್ಷಯ ತೃತೀಯ ಸಮೀಪಿಸುತ್ತಿದೆ. ಇದೇ ಸೀಸನ್‌ನಲ್ಲಿ ಎಲ್ಲೆಡೆ ಮದುವೆಯ ಸಂಭ್ರಮಾಚರಣೆಗಳು ನಡೆಯುತ್ತಿವೆ. ಇದಕ್ಕೆ ಪೂರಕ ಎಂಬಂತೆ, ಈಗಾಗಲೇ ಆಭರಣ ಲೋಕದಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ವೆಡ್ಡಿಂಗ್‌ ಜ್ಯುವೆಲರಿಗಳು ಬಿಡುಗಡೆಗೊಂಡಿವೆ. ಯಾವ್ಯಾವ ಆಭರಣಗಳು ಬೇಡಿಕೆ ಸೃಷ್ಟಿಸಿಗೊಂಡಿವೆ? ಈ ಎಲ್ಲದರ ಬಗ್ಗೆ ಜ್ಯುವೆಲ್‌ ಡಿಸೈನರ್‌ಗಳು ವಿವರಿಸಿದ್ದಾರೆ.

Karnataka Weather: ಇಂದು ಬೆಂಗಳೂರು, ತುಮಕೂರು ಸೇರಿ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ

ಇಂದು ಬೆಂಗಳೂರು, ತುಮಕೂರು ಸೇರಿ ಈ ಜಿಲ್ಲೆಗಳಲ್ಲಿ ಅಬ್ಬರಿಸಲಿದೆ ಮಳೆ

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ/ಗುಡುಗು ಸಹಿತ ಮಳೆಯಾಗಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನ ಕ್ರಮವಾಗಿ 34°C ಮತ್ತು 23°C ಇರುವ ಸಾಧ್ಯತೆ ಇದೆ.

ಪಂಚಗಿರಿಗಳ ನಾಡಿನಲ್ಲಿ ಹಾಡಹಗಲೇ ಕೊಲೆ ಯತ್ನ: ರೈತರ ಹಾರಿತು ಗುಂಡಿನ ದಾಳಿ

ಪಂಚಗಿರಿಗಳ ನಾಡಿನಲ್ಲಿ ಹಾಡಹಗಲೇ ಕೊಲೆ ಯತ್ನ

ಗಣಿಗಾರಿಕೆಗೆ ಬಳಕೆಯಾಗುವ ಟಿಪ್ಪರ್‌ಗಳಿಂದಾಗಿ ರಾಷ್ಟ್ರೀಯ ಹೆದ್ದಾರಿ ಅಷ್ಟೇ ಅಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಒಂದಿಲ್ಲೊಂದು ಅಪಘಾತಗಳು ಘಟಿಸಿ ಅಮಾಯಕರ ಪ್ರಾಣ ಹಾರಿಹೋಗುತ್ತಿರುವುದು ಸುಳ್ಳಲ್ಲ. ಇದಕ್ಕೆ ಹೊಸ ಸೇರ್ಪಡೆ ಏ.೨೩ರಂದು ಕನಗಾನಕೊಪ್ಪ ಗ್ರಾಮದಲ್ಲಿ ಕ್ವಾರಿಗೆ ರಸ್ತೆ ನಿರ್ಮಾಣ ಮಾಡುವಾಗ ನಡೆದ ಶೂಟೌಟ್ ಘಟನೆಯಾಗಿದೆ.

CM Siddaramaiah: ಎಲ್ಲ ಧರ್ಮದವರೂ ಒಂದೇ ತಾಯಿಯ ಮಕ್ಕಳಂತೆ ಬದುಕುವುದೇ ಸಮಾಜಕ್ಕೆ ನೀಡುವ ಕೊಡುಗೆ: ಸಿಎಂ

ದೇಶದ ಒಳಿತಿಗೆ ಕನ್ನಡಿಗರ ಪರವಾಗಿ ಪ್ರಾರ್ಥಿಸಿ: ಸಿಎಂ

CM Siddaramaiah: ಮುಸಲ್ಮಾನರಲ್ಲಿ ಶಿಕ್ಷಣದ ಮಟ್ಟ ಹೆಚ್ಚಾಗಬೇಕು. ಸಾಚಾರ್ ಸಮಿತಿ ವರದಿಯಲ್ಲಿ ಶಿಕ್ಷಣದ ಪ್ರಮಾಣ ಬಹಳ ಕಡಿಮೆ ಇದೆ ಎಂದು ತಿಳಿಸಲಾಗಿದೆ. ಶಿಕ್ಷಣ ಇಲ್ಲದಿದ್ದರೆ ಸ್ವಾಭಿಮಾನದಿಂದ ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆದುಕೊಳ್ಳಲೇಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

Chikkaballapur News: ಗಣಿಗಾರಿಕೆ, ಅಕ್ರಮ ವಿರುದ್ಧ ಹೋರಾಟ ; ಮಂಚೇನಹಳ್ಳಿ ಬಂದ್ ಯಶಸ್ವಿ

ಅಕ್ರಮ ಗಣಿಗಾರಿಕೆ ಸಂಸ್ಕೃತಿಯ ಕಿತ್ತಸೆಯಲು ಜಿಲ್ಲಾಡಳಿತಕ್ಕೆ ಆಗ್ರಹ

ಮಂಚೇನಹಳ್ಳಿ ತಾಲ್ಲೂಕಿನ ವಿವಿದೆಡೆಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಅಕ್ರಮ ಕ್ವಾರಿಗಳಿಂದಾಗಿ ಸರ್ಕಾರಿ ಭೂಮಿ ಮತ್ತು ಪರಿಸರಕ್ಕೆ ಧಕ್ಕೆಯಾಗುತ್ತಿದೆ. ರೈತರ ಬದುಕಿಗೆ ಮಾರಕ ವಾಗುತ್ತಿದೆ ಎಂಬುದಾಗಿ ರೈತ ಸಂಘದ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದರು. ಪಟ್ಟಣದ ಗಣೇಶ ದೇವಾಲಯದ ಆವರಣದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖಂಡರು ಮಾತನಾಡಿದರು

Chikkaballapur News: ಅಂಬೇಡ್ಕರ್ ಪುತ್ಥಳಿ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿಯ ಭಾವಚಿತ್ರ: ಎರಡು ಗುಂಪುಗಳ ಮಧ್ಯೆ ಘರ್ಷಣೆ

ಅಂಬೇಡ್ಕರ್ ಪುತ್ಥಳಿ ಮುಂಭಾಗ ವಾಲ್ಮೀಕಿಯ ಭಾವಚಿತ್ರ: ಘರ್ಷಣೆ

ಭಾನುವಾರ ಬೆಳಗ್ಗೆ ಅಂಬೇಡ್ಕರ್ ಪುತ್ಥಳಿ ಅನಾವರಣ ಮಾಡಲು, ಮಹರ್ಷಿ ವಾಲ್ಮೀಕಿ ನಾಮಫಲಕ ಅಡ್ಡವಿರುವುದರಿಂದ ಅದನ್ನು ಅಂಬೇಡ್ಕರ್ ಪುತ್ಥಳಿ ಪಕ್ಕದಲ್ಲಿ ನಿಲ್ಲಿಸಲು ಪರಿಶಿಷ್ಟ ಜಾತಿ ಮುಖಂ ಡರು ನಾಯಕ ಸಮುದಾಯದ ಮುಖಂಡರಲ್ಲಿ ಮನವಿ ಮಾಡಿದರು.ಇದಕ್ಕೆ ಒಪ್ಪದ ಮುಖಂಡರು ಶನಿಮಹಾತ್ಮ ದೇವಸ್ಥಾನದ ಟ್ರಸ್ಟ್ಗೆ ಧಾನವಾಗಿ ನೀಡಿರುವ ಜಾಗದಲ್ಲಿ ಅಂಬೇಡ್ಕರ್ ಪುತ್ತಳಿ ನಿರ್ಮಾಣ ಮಾಡಲಾಗಿದೆ

Chikkaballapur News: ಬಾಗೇಪಲ್ಲಿ ಕಾಶ್ಮೀರದ ಗುಂಡಿನ ದಾಳಿ; ಹುತಾತ್ಮರಿಗೆ ಶ್ರದ್ಧಾಂಜಲಿ

ಬಾಗೇಪಲ್ಲಿ ಕಾಶ್ಮೀರದ ಗುಂಡಿನ ದಾಳಿ; ಹುತಾತ್ಮರಿಗೆ ಶ್ರದ್ಧಾಂಜಲಿ

ಖಮರ್ ಮಸೀದಿಯ ಧರ್ಮಗುರು ರಿಜ್ವಾನ್ ಅಹಮದ್ ಮಾತನಾಡಿ, ಇಸ್ಲಾಂ ಪ್ರಕಾರ ವ್ಯಕ್ತಿಗಳನ್ನು ಕೊಲ್ಲುವುದು ಇಡೀ ಮಾನವಕುಲವನ್ನೇ ಕೊಂದಿದಂತೆ. ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ಗುಂಡಿನ ದಾಳಿಯು ಖಂಡನೀಯ ಆಗಿದೆ. ಗುಂಡಿನ ದಾಳಿಯಲ್ಲಿ ಅಮಾಯಕರು ಹುತಾತ್ಮರಾಗಿ ದ್ದಾರೆ. ಕುಟುಂಬ ಸದಸ್ಯರನ್ನು ಕಳೆದುಕೊಂಡ ರೋಧನ ಮನಕುಲಕ್ಕೆ ಮಾರಕ ಆಗಿದೆ. ದೇಶದಲ್ಲಿ ಶಾಂತಿ ಸೃಷ್ಠಿಯಾಗಬೇಕು. ಕೂಡಿಬಾಳುವ ಸಂಸ್ಕೃತಿ ಬೆಳೆಯಬೇಕು

Akshaya Tritiya 2025: ಜಿಯೋ ಗೋಲ್ಡ್ 24ಕೆ ಡೇಸ್; ಶೇ.2ರವರೆಗೆ ಉಚಿತ ಡಿಜಿಟಲ್ ಚಿನ್ನ ಪಡೆಯುವ ಅವಕಾಶ

ಅಕ್ಷಯ ತೃತೀಯ: ʼಜಿಯೋ ಗೋಲ್ಡ್ 24ಕೆ ಡೇಸ್ʼ ನಲ್ಲಿ ವಿಶೇಷ ಕೊಡುಗೆ!

Akshaya Tritiya 2025: ಅಕ್ಷಯ ತೃತೀಯವನ್ನು ಇನ್ನಷ್ಟು ವಿಶೇಷ ಆಗಿಸುವುದಕ್ಕೆ ಗ್ರಾಹಕರು ಜಿಯೋ ಗೋಲ್ಡ್ 24ಕೆ ಡೇಸ್‌ನಲ್ಲಿ ಡಿಜಿಟಲ್ ಚಿನ್ನವನ್ನು ಖರೀದಿಸಬಹುದು ಮತ್ತು ಹೆಚ್ಚುವರಿಯಾಗಿ ಉಚಿತ ಚಿನ್ನವನ್ನು ಪಡೆಯಬಹುದು. ಜಿಯೋ ಗೋಲ್ಡ್ 24ಕೆ ಡೇಸ್ ಎಂಬುದು ವಿಶೇಷ ಸಂದರ್ಭಗಳಲ್ಲಿ ಬರುವಂಥದ್ದಾಗಿದ್ದು, ಈ ಸಮಯದಲ್ಲಿ ಜಿಯೋ ಫೈನಾನ್ಸ್ ಮತ್ತು ಮೈ ಜಿಯೋ ಅಪ್ಲಿಕೇಷನ್‌ಗಳ ಬಳಕೆದಾರರು ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ವಿಶೇಷ ಕೊಡುಗೆಗಳಿಂದ ಪ್ರಯೋಜನ ಪಡೆಯಬಹುದಾಗಿದೆ ಎಂದು ತಿಳಿಸಿದೆ. ಈ ಕುರಿತ ವಿವರ ಇಲ್ಲಿದೆ.

Pralhad Joshi: ಸಿಎಂ ದರ್ಪ, ಡಿಸಿಎಂ ಧಮ್ಕಿ ಎಲ್ಲೆ ಮೀರಿದೆ: ಪ್ರಲ್ಹಾದ್‌ ಜೋಶಿ ಆಕ್ರೋಶ

ಸಿಎಂ ದರ್ಪ, ಡಿಸಿಎಂ ಧಮ್ಕಿ ಎಲ್ಲೆ ಮೀರಿದೆ: ಪ್ರಲ್ಹಾದ್‌ ಜೋಶಿ ಆಕ್ರೋಶ

Pralhad Joshi: ಅಧಿಕಾರದ ಮದದಲ್ಲಿ ಮುಖ್ಯಮಂತ್ರಿಗೆ, ಒಬ್ಬ ಕರ್ತವ್ಯ ನಿರತ ಅಧಿಕಾರಿಯ ಮೇಲೆ ಕೈ ಎತ್ತುವಷ್ಟು ದರ್ಪ ಬಂದಿದೆ. ಇನ್ನು, ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬ ನಾಗರಿಕರಿಗೂ ಇದ್ದು, ಅದನ್ನೇ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ ಡಿಸಿಎಂ ಡಿಕೆ ಶಿವಕುಮಾರ್. ಸಂವಿಧಾನದ ರಕ್ಷಣೆ, ಪ್ರಜಾಪ್ರಭುತ್ವ ಎಂದೆಲ್ಲಾ ನಾಟಕೀಯ ನಡೆ ತೋರುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆರೋಪಿಸಿದ್ದಾರೆ.