ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕರ್ನಾಟಕ

WPL 2026: ಜೆಮಿಮಾ ರೊಡ್ರಿಗಸ್‌ ಫಿಫ್ಟಿ, ಡೆಲ್ಲಿ ಕ್ಯಾಪಿಟಲ್ಸ್‌ಗೆ 7 ವಿಕೆಟ್‌ ಜಯ!

ಮುಂಬೈ ಇಂಡಿಯನ್ಸ್‌ ಎದುರು ಡೆಲ್ಲಿ ಕ್ಯಾಪಿಟಲ್ಸ್‌ಗೆ 7 ವಿಕೆಟ್‌ ಜಯ!

DCW vs MIW Match Highlights: ವಡೋದರಾದ ಬಿಸಿಎ ಕೋಟಂಬಿ ಕ್ರೀಡಾಂಗಣದಲ್ಲಿ ನಡೆದಿದ್ದ 2026ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ 13ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್‌ಗಳ ಗೆಲುವು ಸಾಧಿಸಿತು. ಮುಂಬೈ ನೀಡಿದ್ದ 155 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಜೆಮಿಮಾ ರೊಡ್ರಿಗಸ್‌ ಅರ್ಧಶತಕದ ಬಲದಿಂದ 19 ಓವರ್‌ಗಳಿಗೆ ಮೂರು ವಿಕೆಟ್‌ ನಷ್ಟಕ್ಕೆ ಗೆದ್ದು ಬೀಗಿತು.

ಏಕರೂಪದ ಬಾಡಿಗೆ ನಿಗದಿಗೆ ಸಂಘದ ತೀರ್ಮಾನ : ನಿಯಮ ಮೀರಿದರೆ 10 ಸಾವಿರ ದಂಡದ ಎಚ್ಚರಿಕೆ

ಏಕರೂಪದ ಬಾಡಿಗೆ ನಿಗದಿಗೆ ಸಂಘದ ತೀರ್ಮಾನ

ಜೆಸಿಬಿ ಬಿಡಿಭಾಗಗಳ ಬೆಲೆ ಗಗನಕ್ಕೇರಿದೆ. ಹೊಸ ಜೆಸಿಬಿಗಳ ಬೆಲೆ ಸದ್ಯ 42 ಲಕ್ಷಮುಟ್ಟಿದೆ. ಹಿಂದೆ 18 ಲಕ್ಷಕ್ಕೆ ಜೆಸಿಬಿ ಖರೀದಿ ಮಾಡಬಹುದಾಗಿತ್ತು.ಈ ವರ್ಷ ಏಕಾಏಕಿ ಹೊಸ ಜೆಸಿಬಿಗಳ ಮೇಲೆ 10 ಲಕ್ಷಕ್ಕೆ ಹೆಚ್ಚಳವಾಗಿದೆ. ಆಪರೇಟರ್‌ಗಳ ಸಂಬಳ 10 ಸಾವಿದಿಂದ 20 ಸಾವಿರಕ್ಕೆ ಏರಿಕೆಯಾಗಿದೆ.ಇತ್ತೀಚೆಗೆ ತೈಲಬೆಲೆಯೂ ಹೆಚ್ಚಿದೆ.  ಇವೆಲ್ಲಾ ಮಾನದಂಡಗಳ ಹಿನ್ನೆಲೆಯಲ್ಲಿ ಜೆಸಿಬಿಯಲ್ಲಿ ಒಂದು ಗಂಟೆ ಕೆಲಸಕ್ಕೆ 1100 ಬಾಡಿಗೆ,ಟ್ರಾಕ್ಟರ್ ಒಂದು ಬಾಡಿಗೆ ದಿನಕ್ಕೆ-4000, ಟಿಪ್ಪರ್ ಒಂದು ದಿನಕ್ಕೆ 7000 ಬಾಡಿಗೆ ನಿಗದಿ ಮಾಡಲಾಗಿದ್ದು ನಾಗರೀಕರು ಸಹಕರಿಸಬೇಕು

ಮರಳು ದಂಧೆ ವಿರುದ್ಧ ಸಮರ ಸಾರಿದ ಜೆಡಿಎಸ್‌ ಶಾಸಕಿ ಮನೆಗೆ ನುಗ್ಗಿ ಜೀವ ಬೆದರಿಕೆ!

ಮರಳು ದಂಧೆ ವಿರುದ್ಧ ಸಮರ ಸಾರಿದ ಶಾಸಕಿಗೆ ಜೀವ ಬೆದರಿಕೆ!

ಜೀವ ಬೆದರಿಕೆ ಸಂಬಂಧ ರಾಯಚೂರು ಎಸ್ಪಿ ಅರುಣಾಂಶು ಗಿರಿ ಅವರ ಕಚೇರಿಗೆ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್‌ ಅವರು ತೆರಳಿ ದೂರು ನೀಡಿದ್ದಾರೆ. ಅಕ್ರಮ ಮರಳುಗಾರಿಕೆ ತಡೆಯಲು ಹೋದರೆ ಯಾರೂ ಇಲ್ಲದ ಸಮಯ ನೋಡಿ ಮನೆ ಬಳಿ ಬಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ತಮಗೆ ರಕ್ಷಣೆ ನೀಡಬೇಕು ಎಂದು ಶಾಸಕಿ ಕೋರಿದ್ದಾರೆ.

Bagepally News: ಬಡ ದಲಿತ ಕುಟುಂಬದ ಗುಡಿಸಲನ್ನು ತೆರವುಗೊಳಿಸಿದರೆ ಜೈಭೀಮ್ ಸಂಘಟನೆಯಿಂದ ಪ್ರತಿಭಟನೆ ಎಚ್ಚರಿಕೆ ರವಾನೆ

ಬಡ ದಲಿತ ಕುಟುಂಬದ ಗುಡಿಸಲನ್ನು ತೆರವುಗೊಳಿಸಿದರೆ ಪ್ರತಿಭಟನೆ

ನಿರಾಶ್ರಿತರಾಗಿರುವ ಇವರು ತುಂಬಾ ಬಡವರು, ಪ.ಜಾತಿಗೆ ಸೇರಿದವರಾಗಿರುತ್ತಾರೆ. ಈ ಕುಟುಂಬ ದವರು ನಿರ್ಮಿಸಿಕೊಂಡಿರುವ ಗುಡಿಸಲು ತೆರವುಗೊಳಿಸುವ ಕ್ರಮವನ್ನು ಕೈ ಬಿಡಿ ಇಲ್ಲವೇ ಅವರಿಗೆ ಇದೇ ಗ್ರಾಮದಲ್ಲಿನ ಸರ್ಕಾರಿ ಜಾಗದಲ್ಲಿ ನಿವೇಶನ ಮಂಜೂರು ಮಾಡಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ತೆರವು ಗೊಳಿಸಿದರೆ ನಮ್ಮದೇನು ಅಭ್ಯಂತರವಿಲ್ಲ, ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಗುಡಿಸಲು ತೆರುವುಗೊಳಿಸುವಂತಹ ಕ್ರಮ ಸರಿಯಲ್ಲ ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದರು.

Gauribidanur News: ಡ್ರಗ್ಸ್ ನಿಯಂತ್ರಣಕ್ಕೆ ಪಂಚೇಂದ್ರಿಯಗಳ ನಿಯಂತ್ರಣ ಅವಶ್ಯಕ: ವಕೀಲರ ಸಂಘದ ಅಧ್ಯಕ್ಷ ದಿನೇಶ್ ಕುಮಾರ್

ಡ್ರಗ್ಸ್ ನಿಯಂತ್ರಣಕ್ಕೆ ಪಂಚೇಂದ್ರಿಯಗಳ ನಿಯಂತ್ರಣ ಅವಶ್ಯಕ

ಇಡೀ ವಿಶ್ವದಲ್ಲಿಯೇ ಹೆಚ್ಚು ಯುವ ಶಕ್ತಿ ಹೊಂದಿರುವ ಭಾರತದಲ್ಲಿ, ಯುವ ಶಕ್ತಿಯನ್ನೇ ಗುರಿ ಯಾಗಿಸಿ ಕೊಂಡು ಕೆಲ ಬಾಹ್ಯ ದುಷ್ಟ ಶಕ್ತಿಗಳು ನಮ್ಮ ದೇಶದ ಯುವಕರನ್ನು ಷಡ್ಯಂತರದಿಂದ ಮಾದಕವಸ್ತು ಗಳ ಅಮಲಿಗೆ ದೂಡುತ್ತಾ ದೇಶದ ಭವಿಷ್ಯಕ್ಕೆ ಗಂಡಾಂತರ ತರುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿವೆ.

Chimul Election: ಚಿಮುಲ್ ಚುನಾವಣೆ: ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ. ನಾಗರಾಜ್ ಎನ್‌ಡಿಎ ಅಭ್ಯರ್ಥಿ; ಒಗ್ಗಟ್ಟಿನ ಮಂತ್ರ ಜಪಿಸಿದ ಸಂಸದ ಡಾ.ಕೆ.ಸುಧಾಕರ್

ಪೆರೇಸಂದ್ರ ಕ್ಷೇತ್ರದಲ್ಲಿ ಕೆ.ವಿ. ನಾಗರಾಜ್ ಎನ್‌ಡಿಎ ಅಭ್ಯರ್ಥಿ

ಪೆರೇಸಂದ್ರ ಕ್ಷೇತ್ರದಲ್ಲಿ ಸಂಸದ ಡಾ. ಕೆ. ಸುಧಾಕರ್(MP Dr.K.Sudhakar) ಅವರ ಸಂಬಂಧಿಕರಾದ ಗರಗಿರೆಡ್ಡಿ ಅವರು ಟಿಕೆಟ್ ಆಕಾಂಕ್ಷಿ ಯಾಗಿದ್ದರು. ಆದರೆ, ಒಕ್ಕೂಟದ ಹಿತದೃಷ್ಟಿಯಿಂದ ಅನುಭವೀ ನಾಯಕ ಕೆ.ವಿ. ನಾಗರಾಜ್ ಅವರಿಗೆ ಟಿಕೆಟ್ ನೀಡ ಲಾಗಿದೆ. ಈ ಹಿನ್ನೆಲೆಯಲ್ಲಿ, ಅಸಮಾಧಾನಗೊಂಡಿ ರುವ ಗರಗಿರೆಡ್ಡಿ ಅವರಿಗೆ ಮುಂದಿನ ದಿನಗಳಲ್ಲಿ ನಾಮನಿರ್ದೇಶಿತ ನಿರ್ದೇಶಕ ಸ್ಥಾನ ನೀಡಿ, ಒಕ್ಕೂಟದ ಅಧ್ಯಕ್ಷರನ್ನಾಗಿ ಮಾಡುವ ಭರವಸೆಯನ್ನು ಸಂಸದರು ನೀಡಿದ್ದಾರೆ

Gadag News: ಮೇಲಧಿಕಾರಿಗಳ ಕಿರುಕುಳ; ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ

ದಯಾಮರಣ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಗ್ರಾಮ ಲೆಕ್ಕಾಧಿಕಾರಿ

ಕಂದಾಯ ಇಲಾಖೆಯಲ್ಲಿ ಸಮರ್ಪಕವಾಗಿ ನಿರ್ವಹಿಸಿದರೂ ಮೇಲಧಿಕಾರಿಳು ಕಿರುಕುಳ ನೀಡುತ್ತಿದ್ದಾರೆ. ವಿನಾಕಾರಣ ಮೇಲಿಂದ ಮೇಲೆ ನೋಟಿಸ್ ನೀಡಿರುವುದಲ್ಲದೆ, ಕಳೆದ 2 ತಿಂಗಳಿಂದ ವೇತನ ತಡೆಹಿಡಿಯಲಾಗಿದೆ. ನನಗೆ ಅನಾರೋಗ್ಯ ಪೀಡಿತ ತಾಯಿ ಇದ್ದಾರೆ. ನನಗೂ ಆರೋಗ್ಯ ಸಮಸ್ಯೆ ಇರುವುದರಿಂದ ಜೀವನ ಕಷ್ಟವಾಗಿದೆ. ಹೀಗಾಗಿ ದಯಾಮರಣಕ್ಕೆ ಅನುಮತಿ ನೀಡಬೇಕು ಎಂದು ರಾಷ್ಟ್ರಪತಿಗಳಿಗೆ ಸರ್ಕಾರಿ ನೌಕರ ಮನವಿ ಮಾಡಿದ್ದಾರೆ.

ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ನಿಲುಗಡೆಯಿಂದ ಕಿರಿಕಿರಿ: ಸಾರ್ವಜನಿಕರ ಆಕ್ರೋಶ

ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ವಾಹನ ನಿಲುಗಡೆಯಿಂದ ಕಿರಿಕಿರಿ

Madhugiri News: ಮಧುಗಿರಿ ತಾಲೂಕು ಕಚೇರಿ ಆವರಣದಲ್ಲಿ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿರುವುದರಿಂದ ವೃದ್ಧರು ಹಾಗೂ ಮಹಿಳೆಯರು ಕಚೇರಿಗೆ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

Bengaluru civic polls: ಗ್ರೇಟರ್‌ ಬೆಂಗಳೂರು ಚುನಾವಣೆ; ಮತದಾರರ ಕರಡು ಪಟ್ಟಿ ಪ್ರಕಟ

ಗ್ರೇಟರ್‌ ಬೆಂಗಳೂರು ಚುನಾವಣೆ; ಮತದಾರರ ಕರಡು ಪಟ್ಟಿ ಪ್ರಕಟ

GBA Election 2026: ಗ್ರೇಟರ್‌ ಬೆಂಗಳೂರಿನ ವಾರ್ಡ್‌ವಾರು ಮತದಾರರ ಕರಡು ಪಟ್ಟಿಯನ್ನು ಜಿಬಿಎ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿದ್ದು, ಮತದಾರರು ಪರಿಶೀಲಿಸಿಕೊಳ್ಳಬೇಕು. ಗೊಂದಲವಿದ್ದರೆ ನಗರ ಪಾಲಿಕೆವಾರು ಸಹಾಯವಾಣಿಗೆ ಕರೆ ಮಾಡಿ ಪರಿಹರಿಸಿಕೊಳ್ಳಬಹುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್‌. ಸಂಗ್ರೇಶಿ ತಿಳಿಸಿದ್ದಾರೆ.

ಯುವತಿಯ ಎದೆ ಭಾಗ ನೋಡಿ ಬಟ್ಟೆ ಬಗ್ಗೆ ಅಶ್ಲೀಲ ಕಮೆಂಟ್‌ ಮಾಡಿದ 10 ವರ್ಷದ ಬಾಲಕ; ಬೆಂಗಳೂರಿನಲ್ಲಾದ ಮುಜುಗರದ ಸನ್ನಿವೇಶ ವಿವರಿಸಿದ ಸಂತ್ರಸ್ತೆ

ಯುವತಿಯ ಬಟ್ಟೆ ಬಗ್ಗೆ ಕೆಟ್ಟ ಕಮೆಂಟ್‌ ಮಾಡಿದ 10 ವರ್ಷದ ಬಾಲಕ

Viral Video: ಸ್ಲೀವ್‌ಲೆಸ್‌ ಟಾಪ್‌ ಧರಿಸಿದ ಯುವತಿಯನ್ನು ಕೆಟ್ಟ ದೃಷ್ಟಿಯಿಂದ ನೋಡಿ 10ರಿಂದ 13 ವರ್ಷದೊಳಗಿನ ಬಾಲಕರು ಅಶ್ಲೀಲ ಕಮೆಂಟ್‌ ಮಾಡಿರುವ ಘಟನೆ ಬೆಂಗಳೂರಿನ ಆವಲಹ‍ಳ್ಳಿಯಲ್ಲಿ ನಡೆದಿದೆ. ಉತ್ತರ ಭಾರತದ ಯುವತಿ ಈ ಘಟನೆ ವಿವರಿಸಿ ವಿಡಿಯೊ ಮಾಡಿದ್ದಾಳೆ. ಸದ್ಯ ಇದು ವೈರಲ್‌ ಆಗಿದೆ.

ಮೈಸೂರು ರೇಷ್ಮೆ ಸೀರೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡ್: ಖರೀದಿಗೆ ಮುಂಜಾನೆ 4 ಗಂಟೆಯಿಂದಲೇ ಕ್ಯೂ ನಿಂತ ಗ್ರಾಹಕರು!

ಮೈಸೂರು ಸಿಲ್ಕ್ ಸೀರೆಗಾಗಿ ಮುಂಜಾನೆ 4 ಗಂಟೆಗೆ ಕ್ಯೂ ನಿಂತ ಜನ

Viral Video: ಕರ್ನಾಟಕದ ಹೆಮ್ಮೆಯ ಮೈಸೂರು ಸಿಲ್ಕ್ ಸೀರೆಗಾಗಿ ಗ್ರಾಹಕರು ಮುಂಜಾನೆ 4 ಗಂಟೆಯಿಂದಲೇ ಬೆಂಗಳೂರಿನಲ್ಲಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಶೋರೂಂ ಮುಂದೆ ಮುಗಿಬಿದ್ದಿರುವ ವಿಡಿಯೊ ವೈರಲ್‌ ಆಗಿದೆ. ಟೋಕನ್ ಹೊಂದಿರುವ ಗ್ರಾಹಕರಿಗೆ ಮಾತ್ರ ಖರೀದಿಗೆ ಅವಕಾಶವಿದೆ.

ಸ್ವಂತ UPI ಕ್ಯೂಆರ್‌ ಕೋಡ್‌ ಬಳಸಿ ಬಿಎಂಟಿಸಿ ಟಿಕೆಟ್‌ ಹಣ ಗುಳುಂ; ಮೂವರು ಕಂಡಕ್ಟರ್‌ಗಳ ಅಮಾನತು

ಬಿಎಂಟಿಸಿ ಟಿಕೆಟ್‌ ಹಣ ದುರ್ಬಳಕೆ; ಮೂವರು ಕಂಡಕ್ಟರ್‌ಗಳ ಅಮಾನತು

BMTC conductor fraud: ಅಮಾನತುಗೊಂಡ ಬಿಎಂಟಿಸಿ ಸಿಬ್ಬಂದಿ ಟಿಕೆಟ್‌ ನೀಡುವ ವೇಳೆ ಸುಮಾರು 1 ಲಕ್ಷಕ್ಕೂ ಅಧಿಕ ಹಣವನ್ನು ಅಕ್ರಮವಾಗಿ ತಮ್ಮ ಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಡಿಸೆಂಬರ್ 2025 ರಲ್ಲಿ ನಡೆಸಲಾದ ತಪಾಸಣೆಯ ಸಂದರ್ಭದಲ್ಲಿ ಬಿಎಂಟಿಸಿ ತನಿಖಾ ತಂಡವು ಈ ಅಕ್ರಮವನ್ನು ಪತ್ತೆಹಚ್ಚಿದೆ.

ಪಾನ್ಸರೆ ಹತ್ಯೆ ಕೇಸ್‌ ಆರೋಪಿ ಸಮೀರ್ ನಿಧನ; ಇದು ವ್ಯವಸ್ಥೆಯು ತೆಗೆದುಕೊಂಡ ಬಲಿ ಎಂದ ಸನಾತನ ಸಂಸ್ಥೆ

ಸಮೀರ್ ಸಾವು ವ್ಯವಸ್ಥೆಯು ತೆಗೆದುಕೊಂಡ ಬಲಿ: ಸನಾತನ ಸಂಸ್ಥೆ

ಗೋವಿಂದ್ ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ ವೇಳೆ ಸೆರೆಮನೆಯಲ್ಲೂ ಸಮೀರ್‌ ಗಾಯಕ್ವಾಡ್‌ ಅವರು ಸಾಕಷ್ಟು ಕಿರುಕುಳ ಅನುಭವಿಸಿದರು. 19 ತಿಂಗಳುಗಳ ಕಾಲ ಅವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ತದನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು. ತನಿಖಾ ಸಂಸ್ಥೆಗಳ ಕಿರುಕುಳ ಮತ್ತು ಪ್ರಗತಿಪರರು ಮಾಡಿದ ಅಪಪ್ರಚಾರವು ಅವರ ಜೀವನವನ್ನೇ ಧ್ವಂಸಗೊಳಿಸಿತ್ತು ಎಂದು ಸನಾತನ ಸಂಸ್ಥೆ ಹೇಳಿಕೆ.

ರಾಜ್ಯದಲ್ಲಿ ಗೃಹ ಇಲಾಖೆ ಸತ್ತಿದೆ; ಸಚಿವ ಪರಮೇಶ್ವರ್‌ ವಿರುದ್ಧ ಅಶ್ವತ್ಥನಾರಾಯಣ್ ಟೀಕೆ

ರಾಜ್ಯದಲ್ಲಿ ಗೃಹ ಇಲಾಖೆ ಸತ್ತಿದೆ; ಅಶ್ವತ್ಥನಾರಾಯಣ್ ಟೀಕೆ

Ashwathnarayan: ರಾಜ್ಯದ ಗೃಹ ಸಚಿವರಿಗೆ ತಮ್ಮ ಜವಾಬ್ದಾರಿ ಏನೆಂದೇ ಅರ್ಥ ಆಗಿಲ್ಲ. ಕೇವಲ ಝೀರೊ ಟ್ರಾಫಿಕ್‍ನಲ್ಲಿ ಓಡಾಡುವುದೇ ಗೃಹ ಸಚಿವರ ಜವಾಬ್ದಾರಿ ಅಂದುಕೊಂಡಿದ್ದಾರೆ. ಗೃಹ ಸಚಿವರಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯಲು ನೈತಿಕತೆ ಇಲ್ಲ. ತಕ್ಷಣವೇ ಕೇಂದ್ರದ ವರಿಷ್ಠರು ಆ ಸ್ಥಾನದಿಂದ ಅವರನ್ನು ತೆಗೆಯಬೇಕು ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್ ಆಗ್ರಹಿಸಿದ್ದಾರೆ.

ಬಿಗ್‌ ಬಾಸ್‌ಗೆ ತೆರೆ ಬಿದ್ದ ಬೆನ್ನಲ್ಲೇ ಸುದೀಪ್‌ಗೆ ಎದುರಾಯ್ತು ಸಂಕಷ್ಟ; 90 ಲಕ್ಷ ರುಪಾಯಿ ವಂಚನೆ ಆರೋಪ

ಸುದೀಪ್‌ ವಿರುದ್ಧ 90 ಲಕ್ಷ ರುಪಾಯಿ ವಂಚನೆ ಆರೋಪ

Kichcha Sudeepa: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ ಬಾಸ್‌ ಸೀಸನ್‌ 12 ಮುಕ್ತಾಯವಾದ ಬೆನ್ನಲ್ಲೇ ಸುದೀಪ್‌ ವಿರುದ್ಧ ದೂರು ದಾಖಲಾಗಿದೆ. 90 ಲಕ್ಷ ರುಪಾಯಿ ನೀಡದೆ ಸುದೀಪ್‌ ಮತ್ತು ಅವರ ಮ್ಯಾನೇಜರ್‌ ಚಕ್ರವರ್ತಿ ಚಂದ್ರಚೂಡ್‌ ವಂಚಿಸಿದ್ದಾರೆ ಎಂದು ಚಿಕ್ಕಮಗಳೂರು ಮೂಲದ, ಕಾಫಿ ತೋಟದ ಮಾಲಕ ದೀಪಕ್‌ ಠಾಣೆ ಮೆಟ್ಟಿಲೇರಿದ್ದಾರೆ.

Karnataka CM Row: ನಮ್ಮ ಅಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು ಸಿಎಂ ಆಗ್ತಾರೆ: ಡಿ.ಕೆ.ಸುರೇಶ್‌

ನಮ್ಮ ಅಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು ಸಿಎಂ ಆಗ್ತಾರೆ: ಡಿ.ಕೆ.ಸುರೇಶ್‌

DK Suresh: ಶಿವಕುಮಾರ್ ಮೊದಲಿನಿಂದಲೂ ಪಕ್ಷದ ಶಿಸ್ತಿನ ಸಿಪಾಯಿ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂಬ ಗುರಿಯೊಂದಿಗೆ ಪಕ್ಷದ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಮುಖ್ಯಮಂತ್ರಿ ಹುದ್ದೆ ಸುಲಭವಾಗಿ ಸಿಗುವಂಥದ್ದಲ್ಲ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ತಿಳಿಸಿದ್ದಾರೆ.

ಬೆಂಗಳೂರು ಮೂಲದ ಮಹಿಳಾ ಇನ್ಫ್ಲುಯೆನ್ಸರ್‌ಗೆ ಹರಿಯಾಣದ ವ್ಯಕ್ತಿಯಿಂದ ಲೈಂಗಿಕ ಕಿರುಕುಳ; ಆರೋಪಿ ಅರೆಸ್ಟ್

ಬೆಂಗಳೂರು ಮೂಲದ ಮಹಿಳಾ ಇನ್ಫ್ಲುಯೆನ್ಸರ್‌ಗೆ ಲೈಂಗಿಕ ಕಿರುಕುಳ

ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಬೆಂಗಳೂರು ಮೂಲದ ಮಹಿಳಾ ಇನ್ಫ್ಲುಯೆನ್ಸರ್‌ ಒಬ್ಬರು, ಹರಿಯಾಣದ ವ್ಯಕ್ತಿಯಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ. ಈ ಸಂಬಂಧ ದಾಖಲಾಗಿದ್ದ ದೂರಿನ ಆಧಾರದ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಈ ವಿಚಾರ ಭಾರಿ ಚರ್ಚೆಗೆ ಕಾರಣವಾಗಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನೂತನ ಅಧ್ಯಕ್ಷರಾಗಿ ಸಚಿವ ಈಶ್ವರ್ ಖಂಡ್ರೆ ಆಯ್ಕೆ

ವೀರಶೈವ ಲಿಂಗಾಯತ ಮಹಾಸಭಾ ನೂತನ ಅಧ್ಯಕ್ಷರಾಗಿ ಈಶ್ವರ್ ಖಂಡ್ರೆ ಆಯ್ಕೆ

ಕಾಂಗ್ರೆಸ್‌ ಹಿರಿಯ ಶಾಸಕ ಶಾಮನೂರು ಶಿವಶಂಕಪ್ಪ ಅವರ ನಿಧನದಿಂದ ತೆರವಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸ್ಥಾನಕ್ಕೆ ಹಲವು ಪ್ರಮುಖ ನಾಯಕರ ಹೆಸರು ಕೇಳಿಬಂದಿತ್ತು. ಆದರೆ ಅಂತಿಮವಾಗಿ ಕಾರ್ಯಕಾರಿ ಸಭೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಅವರನ್ನು ನೂತನ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಮಾದಕವಸ್ತು ಮಾರುತ್ತಿದ್ದ ವಿದೇಶಿ ಪ್ರಜೆ ಬಂಧನ; 5.15 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಬೆಂಗಳೂರಿನಲ್ಲಿ 5.15 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ; ವಿದೇಶಿ ಪ್ರಜೆ ಬಂಧನ

ಬೆಂಗಳೂರಿನ ಮಾರತ್ತಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಮುನೆಕೊಳಲು ಪ್ರದೇಶದ ಬಾಡಿಗೆ ಮನೆಯಲ್ಲಿ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾರ್ಯಾಚರಣೆಯ ಸಮಯದಲ್ಲಿ, ಪೊಲೀಸರು ಆರೋಪಿಯಿಂದ 2.5 ಕೆಜಿ ಎಂಡಿಎಂಎ ಮತ್ತು 300 ಎಕ್ಸ್ಟಸಿ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಂತ್ರಾಲಯಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್- ಟ್ರಕ್‌ ನಡುವೆ ಅಪಘಾತ; ಓರ್ವ ಸಾವು, 10 ಮಂದಿಗೆ ಗಂಭೀರ ಗಾಯ

ಮಂತ್ರಾಲಯಕ್ಕೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್- ಟ್ರಕ್‌ ನಡುವೆ ಅಪಘಾತ

Road Accident: ಚಿಕ್ಕಬಳ್ಳಾಪುರದಲ್ಲಿ ಭೀಕರ ಅಪಘಾತವೊಂದು ನಡೆದಿದೆ. ಅಗಲಗುರ್ಕಿ ಬಳಿ ಮಂತ್ರಾಲಯಕ್ಕೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಸಾವಿಗೀಡಾಗಿದ್ದು, 10 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಗಮ್ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಸ್ಲೀಪರ್ ಬಸ್ ಮೈಸೂರಿನಿಂದ ಬೆಂಗಳೂರು ಮೂಲಕ ಮಂತ್ರಾಲಯಕ್ಕೆ ತೆರಳುತ್ತಿತ್ತು.

Bengaluru News: ವೆಂಕಟೇಶ ನಾಟ್ಯ ಮಂದಿರದಿಂದ ಯಶಸ್ವಿಯಾಗಿ ನಡೆದ ಭರತ ನಾಟ್ಯ ರಸ ಸಂಜೆ ಉತ್ಸವ

ವೆಂಕಟೇಶ ನಾಟ್ಯ ಮಂದಿರದಿಂದ ಯಶಸ್ವಿಯಾಗಿ ನಡೆದ ಭರತ ನಾಟ್ಯ ರಸ ಸಂಜೆ ಉತ್ಸವ

ಹಿರಿಯ ಭರತನಾಟ್ಯ ಗುರು ರಾಧಾ ಶ್ರೀಧರ್ ಅವರು 1969ರಲ್ಲಿ ಸ್ಥಾಪನೆ ಮಾಡಿದ ವೆಂಕಟೇಶ ನಾಟ್ಯ ಮಂದಿರ 56ವರ್ಷಗಳಿಂದ ನಿರಂತರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸರ್ಕಾರದ ಶಾಂತಲಾ ನಾಟ್ಯ ಪ್ರಶಸ್ತಿಗೆ ಭಾಜನವಾಗಿರುವ ರಾಧಾ ಶ್ರೀಧರ್ 87ರ ಹರೆಯದಲ್ಲೂ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಅವರ ಜೀವನೋತ್ಸಾಹ ಕುಂದಿಲ್ಲ

ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ

ಕಬ್ಬು ಕಟಾವಿಗೆ ಕಾರ್ಮಿಕರ ಕೊರತೆ

ಕಾರ್ಮಿಕರಿಗೆ ಕಾರ್ಖಾನೆ ನಿಗದಿಪಡಿಸಿದ ದರ ನೀಡುತ್ತದೆ. ಆದರೆ ಈಗ ಕಾರ್ಖಾನೆ ನೀಡುವ ಕಟಾವು ದರದ ಜೊತೆಗೆ ರೈತರಿಗೆ ಎಕರೆಗೆ 3 ರಿಂದ 4 ಸಾವಿರ ಹೆಚ್ಚುವರಿ ಹಣವನ್ನು ಏಜೆಂಟರ್‌ ಮೂಲಕ ಕೇಳುತ್ತಾರೆ. ಬೇಗ ಬರಲು ಚಿಕನ್ ಮಟನ್ ಗೆ ಹಣ ನೀಡಬೇಕು ಎಂದು ಕಬ್ಬು ಬೆಳೆಗಾರರು ಅಳಲು ತೋಡಿಕೊಳ್ಳುತ್ತಿದ್ದಾರೆ. ಈಗ ಎಷ್ಟು ಅಲೆದರೂ ಕಬ್ಬು ಕಡಿಯುವವರು ಸಿಗುತ್ತಿಲ್ಲ.

ಗೋಕರ್ಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳ ಆಗರ

ಗೋಕರ್ಣ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳ ಆಗರ

ಗೋಕರ್ಣ ಕೇವಲ ಧಾರ್ಮಿಕ ತಾಣವಾಗಿ ಉಳಿದಿಲ್ಲ. ಇಲ್ಲಿಯ ಬೀಚ್ಗಳಿಂದಾಗಿ ಸಾಕಷ್ಟು ಪ್ರವಾಸೋ ದ್ಯಮ ಬೆಳೆದಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಿದರೆ, ಗೋಕರ್ಣ ಕೂಡ ಪ್ರವಾಸಿಗರ ನೆಚ್ಚಿನ ತಾಣ ಎನಿಸಿಕೊಳ್ಳುವುದರಲ್ಲಿ ಯಾವುದೇ ಶಂಕೆಯಿಲ್ಲ. ಆದರೆ ಕೆಲವು ಪಟ್ಟಾಭದ್ರ ಹಿತಾಸಕ್ತಿಗಳು ಗೋಕರ್ಣದ ಅಭಿವೃದ್ಧಿಗೆ ಅಡ್ಡಿಯಾಗುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಶಬರಿಮಲೆ ಅಯ್ಯಪ್ಪ ದೇಗುಲ ಚಿನ್ನ ಕಳವು ಪ್ರಕರಣ: ಬೆಂಗಳೂರು, ಬಳ್ಳಾರಿ ಸೇರಿ 21  ಕಡೆ ಇಡಿ ದಾಳಿ

ಶಬರಿಮಲೆ ಅಯ್ಯಪ್ಪ ದೇಗುಲ ಚಿನ್ನ ಕಳವು ಪ್ರಕರಣ: ಹಲವೆಡೆ ಇಡಿ ದಾಳಿ

ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲದದ 4.5 ಕೆಜಿ ಚಿನ್ನದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ತನ್ನ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದೆ. ಚಿನ್ನ ಕಳವು ಪ್ರಕರಣದಲ್ಲಿ ಬಳ್ಳಾರಿಯ ಚಿನ್ನದ ವ್ಯಾಪಾರಿ ಗೋವರ್ಧನ್ ಪಾತ್ರ ಪ್ರಮುಖವಾಗಿದೆ ಎನ್ನಲಾಗಿದೆ.

Loading...