ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Chikkaballapur News: ದಾಳಿಯಲ್ಲಿ ಮಡಿದವರಿಗೆ ಕ್ಯಾಂಡಲ್ ಬೆಳಗಿ ಗೌರವ ಸಲ್ಲಿಕೆ,  ಬಿಜೆಪಿ ಮುಖಂಡ ಸಂದೀಪ್ ಬಿ ರೆಡ್ಡಿ ಮತ್ತು ಸಾರ್ವಜನಿಕರು ಭಾಗಿ

ಪಹಲ್ಗಾಮ್ ದಾಳಿ ಖಂಡಿಸಿ ಹಿಂದೂ ಸಂಘಟನೆಗಳ ಪಂಜಿನ ಮೆರವಣಿಗೆ

ಪೆಹಲ್ಗಾಂ ನಲ್ಲಿ ಪಾಕಿಸ್ತಾನ ಉಗ್ರರು ಭಾರತದ ಪ್ರವಾಸಿಗರ ಮೇಲೆ ನಡೆಸಿರುವ ಅಟ್ಟಹಾಸಕ್ಕೆ ನನ್ನ ಖಂಡನೆ ಇದೆ. ಇದೊಂದು ಹೇಡಿಗಳ ಕೃತ್ಯವಾಗಿದೆ. ಅಭಿವೃದ್ಧಿಯ ಮೂಲಕ ಭಾರತವನ್ನು ಎದುರಿಸಲಾಗದ ಪಾಕಿಸ್ತಾನ ಉಗ್ರರನ್ನು ಛೂ ಬಿಟ್ಟು ವಿಕೃತ ಆನಂದ ಪಡುತ್ತಿದೆ.

Chikkaballapur News: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಪುಟ್ಟಣ್ಣಯ್ಯ ಬಣದ ವತಿಯಿಂದ 28ರಂದು ಮಂಚೇನಹಳ್ಳಿ ಬಂದ್ ಗೆ ಕರೆ

28ರಂದು ಮಂಚೇನಹಳ್ಳಿ ಬಂದ್ ಗೆ ಕರೆ: ಲಕ್ಷ್ಮಿನಾರಾಯಣರೆಡ್ಡಿ

ಸೋಮವಾರ ನಡೆಯಲಿರುವ ಮಂಚೇನಹಳ್ಳಿ ಬಂದ್ ಕರೆಗೆ ಸ್ವಯಂ ಪ್ರೇರಿತವಾಗಿ ಭಾಗವಹಿಸಲು ಬರುತ್ತಿರುವ ಎಲ್ಲಾ ಸಂಘ-ಸಂಸ್ಥೆಗಳ ಮುಖಂಡರು ಕಾರ್ಯಕರ್ತರು, ಮಂಚೇನಹಳ್ಳಿ ಭಾಗದ ನಾಗರಿಕರಿಗೆ ಧನ್ಯವಾದಗಳು ಅರ್ಪಿಸುತ್ತೇನೆ ಎಂದ ಅವರು ಶಾಂತಿಯುತವಾಗಿ ನಡೆಸುವ ಬಂದ್ ಹತ್ತಿಕ್ಕುವ ಕೆಲಸವನ್ನು ಜಿಲ್ಲಾಡಳಿತ ಪೊಲೀಸರು ಮಾಡಬಾರದು ಎಂದು ಎಚ್ಚರಿಸಿದರು

Vijayanagar News: ಕಾಶ್ಮೀರದ ಪಲ್ಗಾಮ ಜಿಲ್ಲೆಯಲ್ಲಿ ಉಗ್ರರಿಂದ ಹತರಾದ ವ್ಯಕ್ತಿಗಳ ಆತ್ಮಕ್ಕೆ ಶ್ರದ್ದಾಂಜಲಿ

ಉಗ್ರರಿಂದ ಹತರಾದ ವ್ಯಕ್ತಿಗಳ ಆತ್ಮಕ್ಕೆ ಶ್ರದ್ದಾಂಜಲಿ

ಭಯೋತ್ಪಾದಕರಿಂದ ಹತರಾದ ಮಂಜುನಾಥರಾವ್,ಭರತ ಭೂಷಣ, ಮಧುಸೂದನರಾವ್ ಅವರುಗಳ ಭಾವಚಿತ್ರ ಹಿಡಿದು ಹಾಗೂ ಮೇಣದಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅವರು ಅಮಾಯಕ ಪ್ರವಾಸಿಗರನ್ನು ಉಗ್ರರು ಕೊಲೆ ಮಾಡಿದ್ದು ಅತ್ಯಂತ ಖಂಡನೀಯ , ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡಿಯಬೇಕು ಎಂದು ಒತ್ತಾಯಿಸಿದರು

ಸತ್ಕರ್ಮಗಳಿಂದ ಮಾತ್ರ ಟೀಕಿಸುವವರಿಗೆ ಉತ್ತರ ಕೊಡಲು ಸಾಧ್ಯ: ಪ್ರಸನ್ನನಾಥ ಸ್ವಾಮೀಜಿ

ಚುಂಚಾದ್ರಿ ಉತ್ಸವ 2025ರ ಸಮಾರೋಪ

ನಮ್ಮ ಸತ್ಕರ್ಮಗಳಿಂದ ಮಾತ್ರ ನಮ್ಮನ್ನ ಟೀಕಿಸುವವರಿಗೆ ಉತ್ತರ ಕೊಡಲು ಸಾಧ್ಯ. ಬದುಕಿನಲ್ಲಿ ಒಳ್ಳೆಯ ಕಾರ್ಯಗಳನ್ನು ಮಾಡುವುದಕ್ಕೆ ಅವಕಾಶ ಸಿಗುವುದು ಪುಣ್ಯದ ಕೆಲಸ. ಆ ನಿಟ್ಟಿನಲ್ಲಿ ಈ ಪ್ರಯತ್ನ ಪ್ರಶಂಸನೀಯ ಎಂದು ಆದಿಚುಂಚನಗಿರಿ ಮಹಾಸಂಸ್ಥಾನದ ಪ್ರಧಾನ ಕಾರ್ಯದರ್ಶಿಗಳಾದ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದ್ದಾರೆ.

DJ Halli-KG Halli case: ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಮೌಸೀನ್ ಬಂಧನ

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಬಂಧನ

DJ Halli-KG Halli case: 2020ರ ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಶಿರಸಿಯ ಟಿಪ್ಪು ನಗರ ನಿವಾಸಿ ಮೌಸೀನ್ ಅಲಿಯಾಸ್ ಇಮ್ತಿಯಾಝ್ ಶುಕುರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.‌ನಾರಾಯಣ್ ನೇತೃತ್ವದ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

DK Shivakumar: ಬಿಜೆಪಿ-ದಳದ ಟೀಕೆಗಳು ಸತ್ತಿವೆ, ನಮ್ಮ ಸರ್ಕಾರದ ಯೋಜನೆಗಳು ಶಾಶ್ವತವಾಗಿ ಉಳಿಯಲಿವೆ: ಡಿ.ಕೆ.ಶಿವಕುಮಾರ್

ಬಿಜೆಪಿ-ದಳದ ಟೀಕೆಗಳು ಸತ್ತಿವೆ, ನಮ್ಮ ಕೆಲಸ ಶಾಶ್ವತವಾಗಿ ಉಳಿಯಲಿವೆ: ಡಿಕೆಶಿ

DK Shivakumar: ಪಿರಿಯಾಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಹಾಗೂ ಉದ್ಘಾಟನೆ ಮಾಡಲಾಗಿದ್ದು, ಇದರಿಂದ ಬಿಜೆಪಿ ಹಾಗೂ ದಳದ ಟೀಕೆಗಳು ಸತ್ತಿವೆ. ನಮ್ಮ ಸರ್ಕಾರದ ಯೋಜನೆಗಳು ಶಾಶ್ವತವಾಗಿ ಉಳಿಯಲಿವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

Laxmi Hebbalkar: ಉಗ್ರರನ್ನು ಸದೆಬಡಿಯಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು: ಲಕ್ಷ್ಮಿ ಹೆಬ್ಬಾಳ್ಕರ್

ಉಗ್ರರನ್ನು ಸದೆಬಡಿಯಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕು: ಹೆಬ್ಬಾಳ್ಕರ್

Laxmi Hebbalkar: ಉಗ್ರರನ್ನು ಮಟ್ಟಹಾಕುವ ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ನಮ್ಮ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಈಗಾಗಲೇ ಹೇಳಿದ್ದಾರೆ. ಉಗ್ರರನ್ನು ಮಟ್ಟಹಾಕುವುದೇ ನಮ್ಮೆಲ್ಲರ ಉದ್ದೇಶವಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

Chikkaballapur News: ಕೆರೆಯಲ್ಲಿ ಮುಳುಗಿ ತಂದೆ-ಮಗಳು ದಾರುಣ ಸಾವು; ಪುತ್ರಿಯನ್ನು ರಕ್ಷಿಸಲು ಹೋಗಿ ದುರಂತ

ಕೆರೆಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ ತಂದೆಯೂ ನೀರುಪಾಲು

Chikkaballapur News: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿಯಲ್ಲಿ ಘಟನೆ ನಡೆದಿದೆ. ಕೆರೆಯಲ್ಲಿ ಕೈ ಕಾಲು ತೊಳೆಯಲು ಮಗಳು, ಕಾಲು ಜಾರಿ ನೀರಿಗೆ ಬಿದ್ದಿದ್ದಾಳೆ. ಈ ವೇಳೆ ರಕ್ಷಿಸಲು ತಂದೆ ನೀರಿಗೆ ಇಳಿದಿದ್ದು, ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

Havyaka Special Award: ಹವ್ಯಕ ವಿಶೇಷ ಪ್ರಶಸ್ತಿ ಪ್ರಕಟ; ನಾಳೆ ಸಂಸ್ಥಾಪನೋತ್ಸವದಲ್ಲಿ ಪ್ರಶಸ್ತಿ ಪ್ರದಾನ

ಹವ್ಯಕ ವಿಶೇಷ ಪ್ರಶಸ್ತಿ ಪ್ರಕಟ; ನಾಳೆ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

Havyaka Special Award: ಏಪ್ರಿಲ್ 27 ಭಾನುವಾರದಂದು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಆಯೋಜಿಸಿರುವ 82ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಶ್ರೀ ಅಖಿಲ ಹವ್ಯಕ ಮಹಾಸಭೆ ತಿಳಿಸಿದೆ.

Pakistan citizens: ಕಲಬುರಗಿಯಲ್ಲಿದ್ದಾರೆ 9 ಪಾಕ್ ಪ್ರಜೆಗಳು; ಸ್ವದೇಶಕ್ಕೆ ಮರಳಲು ಸೂಚನೆ

ಕಲಬುರಗಿಯಲ್ಲಿದ್ದಾರೆ 9 ಪಾಕ್ ಪ್ರಜೆಗಳು; ಸ್ವದೇಶಕ್ಕೆ ಮರಳಲು ಸೂಚನೆ

Pakistan citizens: ಕಲಬುರಗಿಯಲ್ಲಿ ಒಟ್ಟು 9 ಪಾಕಿಸ್ತಾನಿ ಪ್ರಜೆಗಳು ಇದ್ದು, ಇವರಲ್ಲಿ ಇಬ್ಬರು ಲಾಂಗ್ ಟರ್ಮ್ ವೀಸಾ ಹೊಂದಿದವರಾಗಿದ್ದಾರೆ. 7 ಜನ ವಿಸಿಟರ್ಸ್ ವೀಸಾ ಹೊಂದಿದ್ದು, ಇವರಲ್ಲಿ ಒಬ್ಬ ಮಹಿಳೆ ಅನುಮತಿ ಪಡೆದು ಅಮೆರಿಕಗೆ ತೆರಳಿದ್ದಾರೆ ಎಂದು

Karnataka Rains: ನಾಳೆ ಬಾಗಲಕೋಟೆ, ಬೆಳಗಾವಿ ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ ಮುನ್ಸೂಚನೆ

ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆ!

Karnataka Rains: ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಭಾಗಶಃ ಮೋಡ ಕವಿದ ಆಕಾಶ ಇರಲಿದ್ದು, ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 34 ° C ಮತ್ತು 23 ° C ಇರಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Elephant attack: ಕಾಡಾನೆ ದಾಳಿಗೆ ಕಾಫಿ ತೋಟದ ಮಾಲೀಕ ಸಾವು; ಶಾಸಕ ಸಿಮೆಂಟ್‌ ಮಂಜು ಸಂತಾಪ

ಕಾಡಾನೆ ದಾಳಿಗೆ ವ್ಯಕ್ತಿ ಸಾವು; ಶಾಸಕ ಸಿಮೆಂಟ್‌ ಮಂಜು ಸಂತಾಪ

Elephant attack: ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೈಕೆರೆವ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಮೃತಪಟ್ಟಿರುವ ಷಣ್ಮುಖ ಅವರ ಸಾವಿಗೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜು ಅವರು ಸಂತಾಪ ವ್ಯಕ್ತಪಡಿಸಿದ್ದು, ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

Assault Case: ಕನ್ನಡ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ರೈಲ್ವೆ ಟಿಕೆಟ್ ಕಲೆಕ್ಟರ್ ಹಲ್ಲೆ

ಕನ್ನಡ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ

Assault Case: ಮೈಸೂರು-ಕೊಪ್ಪಳ ಮಾರ್ಗದ ರೈಲಿನಲ್ಲಿ ಘಟನೆ ನಡೆದಿದೆ. ಕನ್ನಡ ಮಾತನಾಡಿ ಎಂದು ಹೇಳಿದ್ದಕ್ಕೆ ಕೊಪ್ಪ ಮೂಲದ ಪ್ರಯಾಣಿಕನ ಮೇಲೆ ಟಿಕೆಟ್ ಕಲೆಕ್ಟರ್‌ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಬಗ್ಗೆ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿವೆ.

Kuladalli keelyavudo Movie: ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಶೀರ್ಷಿಕೆ ಗೀತೆ ಅನಾವರಣ ಮಾಡಿದ ಶತಾಯುಷಿ ಸಾಲುಮರದ ತಿಮ್ಮಕ್ಕ

‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ

Kuladalli keelyavudo Movie title song released: ಕೆ. ರಾಮನಾರಾಯಣ್ ನಿರ್ದೇಶನದಲ್ಲಿ ʼಕಾಮಿಡಿ ಕಿಲಾಡಿಗಳುʼ ಖ್ಯಾತಿಯ ಮಡೆನೂರ್ ಮನು ನಾಯಕನಾಗಿ ನಟಿಸಿರುವ ʼಕುಲದಲ್ಲಿ ಕೀಳ್ಯಾವುದೋʼ ಚಿತ್ರದ ಶೀರ್ಷಿಕೆ ಗೀತೆಯನ್ನು ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ದಿನ ಶತಾಯುಷಿ ಸಾಲುಮರದ ತಿಮ್ಮಕ್ಕ ಅನಾವರಣ‌ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ಈ ಕುರಿತ ವಿವರ ಇಲ್ಲಿದೆ.

Namma Metro: ಪ್ರಯಾಣಿಕರೇ ಗಮನಿಸಿ; ನಾಳೆ ಮುಂಜಾನೆ 3.30ರಿಂದಲೇ ನಮ್ಮ ಮೆಟ್ರೋ ರೈಲು ಸಂಚಾರ ಆರಂಭ

ನಾಳೆ ಮುಂಜಾನೆ 3.30ರಿಂದಲೇ ನಮ್ಮ ಮೆಟ್ರೋ ರೈಲು ಸಂಚಾರ ಆರಂಭ

Namma Metro: ಟಿಸಿಎಸ್ ವರ್ಲ್ಡ್ 10ಕೆ - 2025 ಮ್ಯಾರಥಾನ್‌ 17ನೇ ಆವೃತ್ತಿಯಲ್ಲಿ ಸಾರ್ವಜನಿಕರಿಗೆ ಭಾಗವಹಿಸಲು ಅನುಕೂಲವಾಗಲು ಏಪ್ರಿಲ್ 27 ರ ಭಾನುವಾರ ಬೆಳಗ್ಗೆ 3:30ಕ್ಕೆ ಮೆಟ್ರೋ ರೈಲು ಸೇವೆ ಪ್ರಾರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್‌ ಮಾಹಿತಿ ನೀಡಿದೆ.

ರಾಷ್ಟ್ರೀಯ ಬಂಜೆತನ ಜಾಗೃತಿ ಸಪ್ತಾಹದಲ್ಲಿ ಮಾನಸಿಕ ಆರೋಗ್ಯ ಮತ್ತು ಫಲವಂತಿಕೆ ಕುರಿತು ಜಾಗೃತಿ

ಮಾನಸಿಕ ಆರೋಗ್ಯ ಮತ್ತು ಫಲವಂತಿಕೆ ಕುರಿತು ಜಾಗೃತಿ

, ವಿಶ್ವದಲ್ಲಿ ಪ್ರತೀ 6 ದಂಪತಿಗಳಲ್ಲಿ ಒಂದು ದಂಪತಿ ಬಂಜೆತನ ಸಮಸ್ಯೆ ಎದುರಿಸುತ್ತಾರೆ. ಒಂದು ವರ್ಷದವರೆಗೆ ನಿಯಮಿತವಾಗಿ ಯಾವುದೇ ರಕ್ಷಣೆಯಿಲ್ಲದೆ ನಡೆಸುವ ದೈಹಿಕ ಸಂಪರ್ಕದ ನಂತರವೂ ಗರ್ಭಧಾರಣೆಯಾಗದೇ ಇದ್ದರೆ ಅದನ್ನು ಬಂಜೆತನ ಎಂದೇ ಪರಿಗಣಿಸಲಾಗುತ್ತದೆ. ಈ ವರ್ಷ #ಆಲ್‌ಇನ್‌ ಫರ್ಟಿಲಿಟಿ ಎಂಬ ಥೀಮ್ ಇಡಲಾಗಿದ್ದು, ಬಂಜೆತನ ಸಮಸ್ಯೆ ವಿರುದ್ಧ ಹೋರಾಡುವಾಗ ವೈದ್ಯರು, ಮನಶ್ಶಾಸ್ತ್ರಜ್ಞರು, ಕುಟುಂಬ ಮತ್ತು ಕಚೇರಿಯಲ್ಲಿ ಬೆಂಬಲ ಪಡೆಯುವ ಅಗತ್ಯದ ಕುರಿತು ಜಾಗೃತಿ ನಡೆಯಲಿದೆ

ABB India: ಇಂಗಾಲದ ಹೊರಸೂಸುವಿಕೆ ಕಡಿತಗೊಳಿಸಲು ಎಬಿಬಿ ಇಂಡಿಯಾ ತನ್ನ ನಗರದೊಳಗಿನ ವಾಣಿಜ್ಯ ಲಾಜಿಸ್ಟಿಕ್ಸ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜಿಸಿದೆ

ಇಂಗಾಲದ ಹೊರಸೂಸುವಿಕೆ ಕಡಿತ: ಎಲೆಕ್ಟ್ರಿಕ್ ವಾಹನಗಳ ನಿಯೋಜನೆ

ಸರಕು ಸಾಗಾಣಿಕಾ ಕಾರ್ಯಾಚರಣೆಗಳಲ್ಲಿ ಇವಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಎಬಿಬಿ ಇಂಡಿಯಾ ಸಂಸ್ಥೆಯು ಸ್ಕೋಪ್-3 ಇಂಗಾಲ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಈ ಬದಲಾವಣೆಯು ಕಡಿಮೆ ಇಂಗಾಲದ, ಸುಸ್ಥಿರ ಸಮಾಜ ಸೃಷ್ಟಿಸುವ ಕಂಪನಿಯ ವಿಶಾಲ ಉದ್ದೇಶಕ್ಕೆ ಪೂರಕವಾಗಿ ಮೂಡಿ ಬಂದಿದೆ ಮತ್ತು ಪರಿಸರ ಸಂರಕ್ಷಣೆಗೆ ಎಬಿಬಿ ಸಂಸ್ಥೆಯ ನಿರಂತರ ಬದ್ಧತೆಯನ್ನು ಸಾರಿದೆ

ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ ‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ ಲೋಕಾರ್ಪಣೆ

‘ಮಣಿಪಾಲ್ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್’ ಲೋಕಾರ್ಪಣೆ

ತರಬೇತಿ ಪಡೆದ ವೈದ್ಯರು, ನರ್ಸ್, ಮನಶಾಸ್ತ್ರಜ್ಞರು, ಸಮಾಜ ಕಾರ್ಯಕರ್ತರು ಮತ್ತು ಅನೇಕ ಎನ್ ಜಿ ಓ ಗಳು ಸಹ ಇದಕ್ಕೆ ನೆರವು ನೀಡುತ್ತಿವೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ಕೇವಲ 4.5 ಕಿ.ಮೀ. ಮತ್ತು NH-66 ನಿಂದ 4 ಕಿ.ಮೀ. ದೂರದಲ್ಲಿ ಸ್ವರ್ಣಾನದಿಯ ಶಾಂತವಾದ ದಡದಲ್ಲಿ, 12 ಎಕರೆ ವಿಸ್ತಾರದ ಹಸಿರು ಕ್ಯಾಂಪಸ್ಸಿನಲ್ಲಿ ಈ ಮಣಿಪಾಲ್ ಹಾಸ್ಪೈಸ್ ಮತ್ತು ರಿಸ್ಪ್ಟ್ ಸೆಂಟರ್ (MHRC) ಕೇಂದ್ರ ಇದೆ.

ಫೋಟೋ ಗ್ಯಾಲರಿ: ರಷ್ಯಾದಲ್ಲಿ ನಾಡಿನ 21 ಸಾಧಕರಿಗೆ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ ಹೀಗಿತ್ತು

ಫೋಟೋ ಗ್ಯಾಲರಿ: ಮಾಸ್ಕೋದಲ್ಲಿ ಕಂಗೊಳಿಸಿದ ವಿಶ್ವವಾಣಿ ಸಾಧಕರ ಸಂಗಮ

ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ‘ವಿಶ್ವವಾಣಿ’ ಏರ್ಪಡಿಸಿದ್ದ ಗ್ಲೋಬಲ್ ಅಚೀವರ್ಸ್ ಸಮ್ಮೇಳನದಲ್ಲಿ ಕನ್ನಡ ನಾಡಿನ 21 ಸಾಧಕರಿಗೆ ʼವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿʼ ನೀಡಿ ಪುರಸ್ಕರಿಸಲಾಯಿತು. ಭಾರತ ಮತ್ತು ರಷ್ಯಾದ ಗಣ್ಯರ ಸಮ್ಮುಖದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಮಾಜ ಸೇವೆ, ಕೃಷಿ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಚಿತ್ರರಂಗ, ಕೈಗಾರಿಕೋದ್ಯಮ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಮುಂತಾದ ಹಲವು ರಂಗಗಳಲ್ಲಿ ಸಾಧನೆ ಗೈಯುತ್ತಿರುವವರನ್ನು ಗುರುತಿಸಿ ಅವರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗೌರವಿಸಲಾಯಿತು.

Ranya Rao case: ನಟಿ ರನ್ಯಾ ರಾವ್‌ಗೆ ಶಾಕ್‌; ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

ನಟಿ ರನ್ಯಾ ರಾವ್‌ಗೆ ಶಾಕ್‌; ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್

Ranya Rao case: ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿದ ಹಿನ್ನೆಲೆ ರನ್ಯಾರಾವ್ ಪರ ವಕೀಲರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದೀಗ ಕರ್ನಾಟಕ ಹೈಕೋರ್ಟ್‌ ಕೂಡ ನಟಿ ರನ್ಯಾ ರಾವ್‌ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನವಾಗಿರುವ ನಟಿ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.

Murder Case: ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಕೇಸ್‌ ಆರೋಪಿ ಹತ್ಯೆ; ಮೂವರು‌ ಎಸ್‌ಡಿಪಿಐ ಕಾರ್ಯಕರ್ತರ ಬಂಧನ

ಹತ್ಯೆ ಪ್ರಕರಣ; ಮೂವರು‌ ಎಸ್‌ಡಿಪಿಐ ಕಾರ್ಯಕರ್ತರ ಬಂಧನ

Murder Case: ಹತ್ಯೆಯಾದ ವ್ಯಕ್ತಿ ಡಿಜೆ ಹಳ್ಳಿ-ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಬ್ಬ ಆರೋಪಿಯ ಪತ್ನಿಯೊಂದಿಗೆ ಸಂಬಂಧ ಹೊಂದಿ, ಆಕೆಯನ್ನು ವಿವಾಹವಾಗಿದ್ದ ಎನ್ನಲಾಗಿದೆ. ಇದೇ ಕಾರಣಕ್ಕೆ ಹತ್ಯೆ ನಡೆದಿತ್ತು ಎನ್ನಲಾಗಿದೆ. ಹೀಗಾಗಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

Vishwavani Award: ರಷ್ಯಾದಲ್ಲಿ ಮೊಳಗಿದ ವಿಶ್ವವಾಣಿ ಕಹಳೆ: ಕನ್ನಡ ನಾಡಿನ 21 ಸಾಧಕರಿಗೆ ಮಾಸ್ಕೋದಲ್ಲಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ

ಸಾಧಕರಿಗೆ ಮಾಸ್ಕೋದಲ್ಲಿ ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಪ್ರಶಸ್ತಿ ಪ್ರದಾನ

ಭಾರತ ಮತ್ತು ರಷ್ಯಾದ ಗಣ್ಯರ ಸಮ್ಮುಖದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಮಾಜ ಸೇವೆ, ಕೃಷಿ, ಶಿಕ್ಷಣ, ಕ್ರೀಡೆ, ವೈದ್ಯಕೀಯ, ಚಿತ್ರರಂಗ, ಕೈಗಾರಿಕೋದ್ಯಮ, ಪ್ರವಾಸೋದ್ಯಮ, ಹೋಟೆಲ್ ಉದ್ಯಮ ಮುಂತಾದ ಹಲವು ರಂಗಗಳಲ್ಲಿ ತಮ್ಮಷ್ಟಕ್ಕೆ ತಾವೇ ಸಾಧನೆ ಗೈಯುತ್ತಿರುವವರನ್ನು ಗುರುತಿಸಿ ಅವರಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಗೌರವಿಸಿದ್ದು ‘ವಿಶ್ವವಾಣಿ’ಯ ವಿಶೇಷವಾಗಿತ್ತು.

IPL 2025: ಕೆಕೆಆರ್‌ ಪಂದ್ಯಕ್ಕೂ ಮುನ್ನ ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

ಪಂಜಾಬ್‌ ಕಿಂಗ್ಸ್‌ ತಂಡ ಸೇರಿದ ಉಡುಪಿ ಮೂಲದ ತನುಷ್‌ ಕೋಟ್ಯಾನ್‌

Tanush Kotian: ತನುಷ್‌ ಕೋಟ್ಯಾನ್ ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಮುಂಬೈನ ಉದಯೋನ್ಮುಖ ತಾರೆಯಾಗಿದ್ದಾರೆ. ಕಳೆದ ಬಾರಿಯ ರಣಜಿ ಟೂರ್ನಿಯಲ್ಲಿ ಕೋಟ್ಯಾನ್ ಅವರು 10 ಪಂದ್ಯಗಳಲ್ಲಿ 41 ಕ್ಕಿಂತ ಹೆಚ್ಚು ಸರಾಸರಿಯೊಂದಿಗೆ 502 ರನ್ ಗಳಿಸಿದ್ದರು. ಒಟ್ಟಾರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 112, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 22, ಟಿ20ಯಲ್ಲಿ 33 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.

Self Harming: ಗೆಳತಿ ಸೈಕಲ್‌ ಕೊಡಲಿಲ್ಲ ಎಂದು ಪುಟ್ಟ ಬಾಲಕಿ ಆತ್ಮಹತ್ಯೆ

ಗೆಳತಿ ಸೈಕಲ್‌ ಕೊಡಲಿಲ್ಲ ಎಂದು ಪುಟ್ಟ ಬಾಲಕಿ ಆತ್ಮಹತ್ಯೆ

ಪಕ್ಕದ ಮನೆ ಗೆಳತಿ ಜೊತೆ ಬಾಲಕಿ ಪ್ರತಿನಿತ್ಯ ಸೈಕಲ್ ಆಡುತ್ತಿದ್ದಳು. ಅವಳು ಅಂದು ಆಡುವುದಕ್ಕೆ ಸೈಕಲ್ ಕೊಟ್ಟಿಲ್ಲ ಎಂದು ಮನನೊಂದು ಸ್ಪಂದನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿರಿಯೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇಷ್ಟು ಸಣ್ಣ ಬಾಲಕಿಗೆ ಕರಾರುವಕ್ಕಾಗಿ ನೇಣು ಬಿಗಿದುಕೊಳ್ಳುವುದಕ್ಕೆ ತಿಳಿದದ್ದು ಕೂಡ ಆಶ್ಚ‌ರ್ಯಕರವಾಗಿದೆ.