ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

SIR–2026: ಮತದಾರರ ಪಟ್ಟಿ ಪರಿಶೀಲನೆಗೆ ಸಾರ್ವಜನಿಕರಿಗೆ ಮಹತ್ವದ ಮಾಹಿತಿ: ಸೆ.23ರೊಳಗೆ ಹೊಸ ಮತದಾರರಿಗೆ ನೋಂದಣಿಗೆ ಅವಕಾಶ

54,840 ಅನಾಮಲಿ, ನೋ ಮ್ಯಾಪಿಂಗ್ ಮತದಾರರಿಗೆ ನೋಟಿಸ್

ನೋಟಿಸ್ ಪಡೆದವರು ಆತಂಕಪಡುವ ಅಗತ್ಯವಿಲ್ಲ. ಸಂಬಂಧಿಸಿದ ಅಧಿಕಾರಿಗಳಿಗೆ ಅಗತ್ಯ ದಾಖಲೆ ಗಳನ್ನು ಸಲ್ಲಿಸಿ ತಮ್ಮ ಅರ್ಹತೆಯನ್ನು ದೃಢಪಡಿಸಿಕೊಳ್ಳಬಹುದು. ಈಗಾಗಲೇ ನೋಟಿಸ್ ಪಡೆದ 958 ಮಂದಿಯನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಅಂತಹವರನ್ನು ಮತ್ತೊಮ್ಮೆ ಸಂಪರ್ಕಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಾಲು ಉತ್ಪಾದಕರಿಗೆ 10 ಲೀಟರ್ ಸಾಮರ್ಥ್ಯದ ಕ್ಯಾನ್ ವಿತರಣೆ

ಹಾಲು ಉತ್ಪಾದಕರಿಗೆ 10 ಲೀಟರ್ ಸಾಮರ್ಥ್ಯದ ಕ್ಯಾನ್ ವಿತರಣೆ

ಇತ್ತೀಚಿನ ದಿನಗಳಲ್ಲಿ ರೈತರು ಹಾಲಿನ ಉತ್ಪಾದನೆಗಿಂತ ಇತರೆ ಬೆಳೆಗಳತ್ತ ಹೆಚ್ಚಿನ ಗಮನ ಹರಿಸುತ್ತಿರುವುದರಿಂದ ತಾಲೂಕು ಮಟ್ಟದಲ್ಲಿ ಹಾಲಿನ ಉತ್ಪಾದನೆ ಕುಸಿಯುತ್ತಿದೆ. ಹೀಗಾಗಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಿ ಹಾಲಿನ ಉತ್ಪಾದನೆ ಹೆಚ್ಚಿಸಲು ಸಂಘದಿAದ ವಿವಿಧ ಕ್ರಮಗಳನ್ನು ಕೈಗೊಳ್ಳ ಲಾಗುತ್ತಿದೆ

Chikkaballapur News: ಮಾರುಕಟ್ಟೆ ಮೌಲ್ಯ ಪರಿಗಣಿಸಿ ಸೂಕ್ತ ಪರಿಹಾರ ನೀಡಲು ಕ್ರಮ: ಜಿ.ಪ್ರಭು

ಭೂಸ್ವಾಧೀನದಲ್ಲಿ ರೈತರ ಹಿತ ಕಾಪಾಡಲು ಜಿಲ್ಲಾಧಿಕಾರಿ ಭರವಸೆ

ಭಕ್ತರಹಳ್ಳಿ ಗ್ರಾಮದ ಬಳಿ ಜಮೀನಿನ ಸರ್ಕಾರಿ ಮಾರ್ಗಸೂಚಿ ಮೌಲ್ಯ ಎಕರೆಗೆ ಸುಮಾರು ರೂಪಾಯಿ 15 ಸಾವಿರ ಇದ್ದು, ಅದರ ನಾಲ್ಕು ಪಟ್ಟು ಲೆಕ್ಕದಲ್ಲಿ ಸುಮಾರು ರೂಪಾಯಿ 63,400 ಪರಿಹಾರ ದೊರೆಯಲಿದೆ. ಯಶವಂತಪುರದ ಬಳಿ ಎಕರೆಗೆ ಸುಮಾರು ರೂಪಾಯಿ 51,500 ಪರಿಹಾರ ನಿಗದಿಯಾಗಿ ರುವ ಮಾಹಿತಿಯನ್ನು ಅಧಿಕಾರಿಗಳು ಸಭೆಯಲ್ಲಿ ನೀಡಿದರು.

Srinidhi Bengaluru:‌ “ಪ್ರತಿಯೊಂದು ಚಿತ್ರವೂ ಸೃಜನಶೀಲತೆಯ ಧೈರ್ಯದಿಂದ ಆರಂಭವಾಗುತ್ತದೆ”: ಶ್ರೀನಿಧಿ ಬೆಂಗಳೂರು

ಪ್ರತಿಯೊಂದು ಚಿತ್ರವೂ ಸೃಜನಶೀಲತೆಯ ಧೈರ್ಯದಿಂದ ಆರಂಭವಾಗುತ್ತದೆ

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅತಿಥಿಗಳಾದ ಶ್ರೀನಿಧಿ ಬೆಂಗಳೂರು, ಬರಹಗಾರ ಹಾಗೂ ನಿರ್ದೇಶಕ ‘ಬ್ಲಿಂಕ್’, ‘ಜೆರಾಕ್ಸ್’ ಮತ್ತು ‘ವಿಡಿಯೋ’ ಚಿತ್ರಗಳಿಂದ ಚಿರ ಪರಿಚಿತರಾಗಿದ್ದಾರೆ. ಯುವ ಚಲನಚಿತ್ರ ನಿರ್ಮಾಪಕರನ್ನು ಪ್ರೋತ್ಸಾಹಿಸುತ್ತಾ, “ಒಂದು ಚಿತ್ರವು ಚಿತ್ರಕಥೆಯಿಂದ ಆರಂಭ ವಾಗಬಹುದು. ಆದರೆ ಚಲನಚಿತ್ರ ನಿರ್ಮಾಣದ ಪ್ರಕ್ರಿಯೆಯು ಕಥೆಗೆ ತನ್ನದೇ ಆದ ಜೀವವನ್ನು ನೀಡುತ್ತದೆ” ಎಂದು ಹೇಳಿದರು

ಯೋಗೇಶ್ ‌ಗೌಡ ಕೊಲೆ ಪ್ರಕರಣ; ಏಳು ಅಪರಾಧಿಗಳಿಗೆ ಷರತ್ತುಬದ್ಧ ಜಾಮೀನು ನೀಡಿದ ಹೈಕೋರ್ಟ್

ಯೋಗೇಶ್ ‌ಗೌಡ ಕೊಲೆ ಪ್ರಕರಣ; ಏಳು ಅಪರಾಧಿಗಳಿಗೆ ಜಾಮೀನು

Yogesh Gowda murder case: ಶಿಕ್ಷೆ ರದ್ದು ಕೋರಿ ಅರ್ಜಿದಾರರು ಸಲ್ಲಿಸಿರುವ ಮೇಲ್ಮನವಿಗಳು ತೀರ್ಮಾನವಾಗುವ ತನಕ ವಿಚಾರಣಾ ನ್ಯಾಯಾಲಯದ ಆದೇಶವನ್ನು ಅಮಾನತಿನಲ್ಲಿರಿಸಲಾಗಿದೆ ಮತ್ತು ಷರತ್ತುಗಳಿಗೆ ಒಳಪಟ್ಟಂತೆ ಮೇಲ್ಮನವಿದಾರರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್ ಆದೇಶಿಸಿದೆ.

Chikkaballapur News: ಕಿಸಾನ್ ಕ್ರೆಡಿಟ್ ಕಾರ್ಡ್ ಸೌಲಭ್ಯ ಅರ್ಹ ರೈತರಿಗೆ ತಲುಪಿಸಲು ವಿಶೇಷ ಅಭಿಯಾನ: ಡಾ.ವೈ.ನವೀನ್ ಭಟ್

ಬರಗಾಲದಲ್ಲಿ ರೈತರ ಬೆನ್ನಿಗೆ ಬ್ಯಾಂಕ್‌ಗಳು ನಿಲ್ಲಬೇಕು

ಬರದ ಪರಿಸ್ಥಿತಿಯಲ್ಲಿ ರೈತರು ಹಾಗೂ ಗ್ರಾಮೀಣ ಜನರಿಗೆ ಅಗತ್ಯ ಸಾಲ ಸೌಲಭ್ಯಗಳು ಸಕಾಲದಲ್ಲಿ ದೊರೆಯುವಂತೆ ಬ್ಯಾಂಕ್‌ಗಳು ಮತ್ತು ಸಂಬಂಧಿಸಿದ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿ ಡಾ.ವೈ.ನವೀನ್ ಭಟ್ ಸೂಚಿಸಿದರು.

Dr K Sudhakar: ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವ, ಪೊಲೀಸ್‌ ಠಾಣೆಗಳು ವಸೂಲಿ ಕೇಂದ್ರಗಳಾಗಿವೆ: ಸುಧಾಕರ್‌

ಜಿಲ್ಲೆಯಲ್ಲಿ ಪೊಲೀಸ್‌ ಠಾಣೆಗಳು ವಸೂಲಿ ಕೇಂದ್ರಗಳಾಗಿವೆ

ನಂದಿ ಮೆಡಿಕಲ್‌ ಕಾಲೇಜಿನ ಹೊರರೋಗಿ ವಿಭಾಗದ ಉದ್ಘಾಟನಾ ಕಾರ್ಯಕ್ರಮದ ಬಳಿಕ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಒಂದು ರೂಪಾಯಿ ಭ್ರಷ್ಟಾಚಾರಕ್ಕೂ ಅವಕಾಶ ನೀಡಬಾರದು ಎಂದು ಹೇಳಿದ್ದರೂ ಅಧಿಕಾರಿಗಳು ಹಾಗೂ ಶಾಸಕರು ಅದನ್ನು ಪಾಲಿಸುತ್ತಿಲ್ಲ ಎಂದು ದೂರಿದರು.

Lokayukta News: ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯ ರೆಕಾರ್ಡ್‌ ರೂಂ, ಎಡಿಎಲ್‌ಆರ್‌ ಕಚೇರಿಗೆ ಲೋಕಾಯುಕ್ತ ಲಗ್ಗೆ

ಸರ್ಕಾರಿ ಕೆರೆ ಜಮೀನು ಖಾಸಗಿ ವ್ಯಕ್ತಿಗೆ ಮಂಜೂರು ಆರೋಪ

ಖಾಸಗಿ ವ್ಯಕ್ತಿಗಳಿಗೆ ಮಂಜೂರು ಮಾಡಲು ಅವಕಾಶವಿಲ್ಲದ ಜಮೀನುಗಳನ್ನು ದರಖಾಸ್ತು ಮೂಲಕ ಪ್ರಭಾವಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಲೋಕಾ ಯುಕ್ತ(Lokayukta) ಅಧಿಕಾರಿಗಳು ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಯ ರೆಕಾರ್ಡ್‌ ರೂಂ ಹಾಗೂ ಎಡಿಎಲ್‌ಆರ್‌ ಕಚೇರಿ ಮೇಲೆ ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸಿದರು.

Bengaluru Murder Case: ಬೆಂಗಳೂರಿನಲ್ಲಿ ಅಮಾನುಷ ಕೃತ್ಯ; ಹಣಕ್ಕಾಗಿ ಪಕ್ಕದ ಮನೆಯ ಬಾಲಕನನ್ನೇ ಕಿಡ್ನ್ಯಾಪ್‌ ಮಾಡಿ ಕೊಂದ ಯುವಕ!

ಪಕ್ಕದ ಮನೆಯ ಬಾಲಕನನ್ನೇ ಕಿಡ್ನ್ಯಾಪ್‌ ಮಾಡಿ ಕೊಂದ ಯುವಕ!

Bengaluru Murder Case: ಬೆಂಗಳೂರು ನಗರದ ಹೊರವಲಯದ ಚಿಕ್ಕಜಾಲದಲ್ಲಿ ಘಟನೆ ನಡೆದಿದೆ. ಪಕ್ಕದ ಮನೆಯ 13 ವರ್ಷದ ಬಾಲಕನನ್ನು ಪರಿಚಿತ ಯುವಕನೇ ಕಿಡ್ನ್ಯಾಪ್‌ ಮಾಡಿ, ಕೊಲೆ ಮಾಡಿದ್ದಾನೆ. ಹಣಕ್ಕಾಗಿ ಆರೋಪಿ ಕೃತ್ಯ ಎಸಗಿದ್ದು, ಬಾಲಕನ ಮೃತದೇಹವನ್ನು ಕಾರಿನಲ್ಲಿ ಆಂಧ್ರ ಪ್ರದೇಶಕ್ಕೆ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

Annabrahma Chaturmasya: ಬಾಯಾರಿದವರಿಗೆ ನೀರು ನೀಡುವುದು ಶ್ರೇಷ್ಠ ಯಜ್ಞ: ರಾಘವೇಶ್ವರ ಶ್ರೀ

ಬಾಯಾರಿದವರಿಗೆ ನೀರು ನೀಡುವುದು ಶ್ರೇಷ್ಠ ಯಜ್ಞ: ರಾಘವೇಶ್ವರ ಶ್ರೀ

ಯಜ್ಞ - ತಪಸ್ಸು - ವ್ರತಗಳನ್ನು ಮಾಡದೇ ಇದ್ದರೂ ಬಾಯಾರಿದವರಿಗೆ ನೀರನ್ನು ದಾನ ಮಾಡಿದವನು ಸ್ವರ್ಗವನ್ನು ಪಡೆಯುತ್ತಾನೆ. ಬೇಸಿಗೆಯಲ್ಲಿ ದಾರಿಹೋಕರಿಗೆ ನೀರನ್ನು ಒದಗಿಸುವುದು, ಬಾವಿ ಹಾಗೂ ಕೆರೆಗಳನ್ನು ನಿರ್ಮಿಸುವುದು ಶ್ರೇಷ್ಠ ಕಾರ್ಯ ಎಂದು ಧರ್ಮ ಶಾಸ್ತ್ರವನ್ನು ಆಧರಿಸಿ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಪ್ಪೂರು ಸಹಕಾರ ಸಂಘಕ್ಕೆ ಸುವರ್ಣ ಸಂಭ್ರಮ; ಸೆ.25ರಂದು ವಾರ್ಷಿಕ ಮಹಾಸಭೆ

ಕುಪ್ಪೂರು ಸಹಕಾರ ಸಂಘಕ್ಕೆ ಸುವರ್ಣ ಸಂಭ್ರಮ; ಸೆ.25ಕ್ಕೆ ವಾರ್ಷಿಕ ಮಹಾಸಭೆ

Chikkanayakanahalli News: 1976ರಲ್ಲಿ ಆರಂಭಗೊಂಡ ಚಿಕ್ಕನಾಯಕನಹಳ್ಳಿಯ ಕುಪ್ಪೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. ಸಂಘದ 50ನೇ ವರ್ಷದ ವಾರ್ಷಿಕ ಮಹಾಸಭೆ ಸೆ.25ರಂದು ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.

ವೈ.ಎನ್.ಹೊಸಕೋಟೆಯಲ್ಲಿ ಮಳೆಗಾಗಿ ಮುಸ್ಲಿಂ ಸಮುದಾಯದವರಿಂದ ಸಾಮೂಹಿಕ ಪ್ರಾರ್ಥನೆ

ಮಳೆಗಾಗಿ ಮುಸ್ಲಿಂ ಸಮುದಾಯದವರಿಂದ ಸಾಮೂಹಿಕ ಪ್ರಾರ್ಥನೆ

Pavagada News: ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದಲ್ಲಿ ಶುಕ್ರವಾರ ಮಳೆಗಾಗಿ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ವೈ.ಎನ್. ಹೊಸಕೋಟೆ ಗ್ರಾಮದ ಮುಸ್ಲಿಂ ಸಮುದಾಯದವರು ಶುಕ್ರವಾರದ ಸಾಮೂಹಿಕ ನಮಾಜ್‌ ಪೂರ್ಣಗೊಳಿಸಿದ ಬಳಿಕ ಈದ್ಗಾ ಮೈದಾನದಲ್ಲಿ ಒಂದೆಡೆ ಸೇರಿ ಮಳೆಗಾಗಿ ವಿಶೇಷ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.

Cabinet Meeting: ಕರಾವಳಿ ಭಾಗಕ್ಕೆ ಭರ್ಜರಿ ಗಿಫ್ಟ್: 32,611 ಕೋಟಿ ರೂ. ಯೋಜನೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ!

ಕರಾವಳಿಗೆ ಭರ್ಜರಿ ಗಿಫ್ಟ್: 32,611 ಕೋಟಿ ರೂ. ಯೋಜನೆಗಳಿಗೆ ಸಂಪುಟ ಒಪ್ಪಿಗೆ

ಮಂಗಳೂರಿನ ಪ್ರಜಾಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಳು ಭಾಷೆಗೆ ರಾಜ್ಯದ 2ನೇ ಹೆಚ್ಚುವರಿ ಆಡಳಿತ ಭಾಷೆಯಾಗಿ ಮಾನ್ಯತೆ ಸೇರಿ ಕರಾವಳಿ ಭಾಗದ ಪ್ರವಾಸೋದ್ಯಮ, ಬಂಡವಾಳ ಹೂಡಿಕೆ, ಆರೋಗ್ಯ, ಭಾಷೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ.

ವಿಶ್ವಕರ್ಮ ಸಮುದಾಯದವರು ವೃತ್ತಿಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ: ಶಾಸಕ ಜಿ.ಬಿ. ಜ್ಯೋತಿಗಣೇಶ್

ವಿಶ್ವಕರ್ಮ ಸಮುದಾಯದವರು ವೃತ್ತಿಯಲ್ಲಿ ತಂತ್ರಜ್ಞಾನ ಬಳಸಿ: ಜ್ಯೋತಿಗಣೇಶ್

Tumkur News: ವಿಶ್ವಕರ್ಮ ಜಯಂತಿಯ ದಿನವೇ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನವಿರುವುದು ವಿಶೇಷ. ಕರಕುಶಲ ಕರ್ಮಿಗಳಿಗೆ ಪ್ರೋತ್ಸಾಹ ನೀಡಲು ಪ್ರಧಾನಿ ಮೋದಿ ಅವರು ವಿಶೇಷ ‘ವಿಶ್ವಕರ್ಮ ಯೋಜನೆʼಯನ್ನು ಜಾರಿಗೆ ತಂದಿದ್ದು, ಸಮುದಾಯದವರು ಇದರ ಪ್ರಯೋಜನ ಪಡೆಯಬೇಕು ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ತಿಳಿಸಿದ್ದಾರೆ.

ಪ್ರಗತಿ ಪಥದಲ್ಲಿ ತುಮಕೂರು ಪಟ್ಟಣ ಕ್ರೆಡಿಟ್ ಸೊಸೈಟಿ: ಪಿ.ಆರ್. ದೇವರಾಜು

ಪ್ರಗತಿ ಪಥದಲ್ಲಿ ತುಮಕೂರು ಪಟ್ಟಣ ಕ್ರೆಡಿಟ್ ಸೊಸೈಟಿ

Tumkur News: ತುಮಕೂರು ಪಟ್ಟಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯು 2026-27ನೇ ಸಾಲಿಗೆ ಸೊಸೈಟಿ 1000 ಲಕ್ಷ ರೂ. ಠೇವಣಿ ಸಂಗ್ರಹಿಸುವ ಗುರಿ ಹೊಂದಿದ್ದು, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಗ್ರಾಹಕರಿಗೆ ತ್ವರಿತ ಸೇವೆ ನೀಡುವ ಉದ್ದೇಶದಿಂದ ಸಂಘದ ವ್ಯವಹಾರವನ್ನು ಕಂಪ್ಯೂಟರೀಕರಣಗೊಳಿಸಲಾಗಿದೆ ಸೊಸೈಟಿಯ ಅಧ್ಯಕ್ಷ ಪಿ.ಆರ್. ದೇವರಾಜು ತಿಳಿಸಿದ್ದಾರೆ.

Gauribidanur News: ರೈತರ ಸಮಸ್ಯೆಗಳಿಗೆ ಅಧಿಕಾರಿಗಳ ಸ್ಪಂದನೆ ಇಲ್ಲ: ರೈತ ಸಂಘಟನೆಗಳ ಆರೋಪ

ಸಭೆಯಿಂದ ಅಧಿಕಾರಿಗಳ ನಿರ್ಗಮನಕ್ಕೆ ರೈತರ ಆಕ್ರೋಶ

ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಆರ್.ರವಿಚಂದ್ರರೆಡ್ಡಿ ಮಾತನಾಡಿ, ರೈತರ ಸಮಸ್ಯೆ ಆಲಿಸಲು ಸಭೆ ಕರೆದ ಅಧಿಕಾರಿಗಳೇ ಸಮರ್ಪಕವಾಗಿ ಸ್ಪಂದಿಸದೆ, ಸರ್ಕಾರಿ ವಿಡಿಯೋ ಕಾನ್ಫರೆನ್ಸ್ ಇದೆ ಎಂಬ ಕಾರಣ ನೀಡಿ ಸಭೆಯಿಂದ ಹೊರನಡೆದಿರುವುದು ಖಂಡನೀಯ. ನಮ್ಮ ಸಮಸ್ಯೆಗಳನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

AIಗೆ ಸಿದ್ಧವಾದ ಭವಿಷ್ಯ ನಿರ್ಮಿಸಲು ಮತ್ತು 2 ಸಾವಿರ ಯುವಕರಿಗೆ ತರಬೇತಿ ನೀಡಲು ಸ್ಯಾಮ್‌ಸಂಗ್ ಇನ್ನೋವೇಶನ್ ಕ್ಯಾಂಪಸ್ ಪ್ರಾರಂಭ

2 ಸಾವಿರ ಯುವಕರಿಗೆ ತರಬೇತಿ ನೀಡಲು ಕ್ಯಾಂಪಸ್ ಪ್ರಾರಂಭ

ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾದ ಈ ಕಾರ್ಯ ಕ್ರಮವು ಪ್ರಾಯೋಗಿಕ AI ಶಿಕ್ಷಣಕ್ಕೆ ಪ್ರವೇಶ ವಿಸ್ತರಿಸುವ ಮೂಲಕ ಮತ್ತು ಭವಿಷ್ಯಕ್ಕೆ ಸಿದ್ಧವಾದ ತಂತ್ರಜ್ಞಾನ ಕಾರ್ಯಪಡೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುವ ಮೂಲಕ AI-ಆಧಾರಿತ ಪರಿಸರ ವ್ಯವಸ್ಥೆ ನಿರ್ಮಿಸುವ ಕರ್ನಾಟಕದ ಮಹತ್ವಾಕಾಂಕ್ಷೆಯನ್ನು ಬೆಂಬಲಿಸುತ್ತದೆ.

Cabinet Meeting: ತುಳು ಭಾಷೆಗೆ ರಾಜ್ಯದ 2ನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಲು ಸಚಿವ ಸಂಪುಟ ತೀರ್ಮಾನ

ತುಳು ಭಾಷೆಗೆ 2ನೇ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಲು ಸಚಿವ ಸಂಪುಟ ತೀರ್ಮಾನ

Tulu second official language: ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಮಹತ್ವದ ಸಚಿವ ಸಂಪುಟ ಸಭೆ ನಡೆದಿದೆ. ತುಳು ಭಾಷೆಯನ್ನು (Tulu) ಕರ್ನಾಟಕದ ಹೆಚ್ಚುವರಿ ಅಧಿಕೃತ ಭಾಷೆಯನ್ನಾಗಿ ಮಾಡುವುದು, 'ದಕ್ಷಿಣ ಕನ್ನಡ' ಜಿಲ್ಲೆಯ ಹೆಸರನ್ನು 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಇತ್ತು. ಈ ಬಗ್ಗೆ ಮಹತ್ವದ ತೀರ್ಮಾನವನ್ನು ಸರ್ಕಾರ ಕೈಗೊಂಡಿದ್ದು, ಯಾವೆಲ್ಲಾ ನಿರ್ಣಯಗಳನ್ನು ಕೈಗೊಳ್ಳಲಾಗಿದೆ ಎಂಬ ಕುರಿತ ಮಾಹಿತಿ ಇಲ್ಲಿದೆ.

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ; ಮೇಲ್ಸೇತುವೆಯಿಂದ ಕಾರು ಬಿದ್ದು ಮಹಿಳೆ ಸಾವು

ಮಂಡ್ಯ ಬಳಿ ಮೇಲ್ಸೇತುವೆಯಿಂದ ಕಾರು ಬಿದ್ದು ಮಹಿಳೆ ಸಾವು

Mandya Car Accident: ಮಂಡ್ಯದ ಬಳಿಯ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ ಭೀಕರ ಅಪಘಾತ ನಡೆದಿದೆ. ಡಿವೈಡರ್‌ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಎಕ್ಸ್‌ಪ್ರೆಸ್‌ವೇ ಫ್ಲೈ ಓವರ್‌ನಿಂದ ಹಾರಿ ಅಂಡರ್ ಪಾಸ್‌ಗೆ ಬಿದ್ದಿದೆ. ಇದರಿಂದ ಗಂಭೀರಾಗಿ ಗಾಯಗೊಂಡು ಮಹಿಳೆ ಮೃತಪಟ್ಟಿದ್ದಾರೆ.

Gudibande News: ಗುಡಿಬಂಡೆಯಲ್ಲಿ ಅರ್ಥಪೂರ್ಣ ವಿಶ್ವಕರ್ಮ ಜಯಂತಿ ಆಚರಣೆ

ಗುಡಿಬಂಡೆಯಲ್ಲಿ ಅರ್ಥಪೂರ್ಣ ವಿಶ್ವಕರ್ಮ ಜಯಂತಿ ಆಚರಣೆ

ಕಾರ್ಯಕ್ರಮದಲ್ಲಿ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಲಾಯಿತು. ಶಿಕ್ಷಕ ಚಂದ್ರಶೇಖರ್ ಮಾತನಾಡಿ, ವಿಶ್ವಕರ್ಮ ಸಮುದಾಯವು ಬುದ್ಧಿವಂತಿಕೆ, ದೂರದೃಷ್ಟಿ ಹಾಗೂ ವಿಶಿಷ್ಟ ಕೌಶಲ್ಯಕ್ಕೆ ಹೆಸರಾಗಿದ್ದು, ಚಿನ್ನ-ಬೆಳ್ಳಿ ಕೆಲಸ, ಮರಗೆಲಸ, ಕಬ್ಬಿಣದ ಕೆಲಸ, ಶಿಲ್ಪಕಲೆ ಸೇರಿದಂತೆ ವಿವಿಧ ಸಾಂಪ್ರದಾಯಿಕ ಕಸುಬುಗಳಲ್ಲಿ ಪರಿಣತಿ ಹೊಂದಿದೆ ಎಂದರು.

Cess on Cinema Tickets: ರಾಜ್ಯದ ಸಿನಿಮಾ ಪ್ರಿಯರಿಗೆ ಬೆಲೆ ಏರಿಕೆ ಶಾಕ್; ಟಿಕೆಟ್‌ ಮೇಲೆ ಶೇ. 2 ಸೆಸ್‌ ವಿಧಿಸಿದ ಸರ್ಕಾರ!

ಸಿನಿಮಾ ಪ್ರಿಯರಿಗೆ ಬೆಲೆ ಏರಿಕೆ ಶಾಕ್; ಟಿಕೆಟ್‌ ಮೇಲೆ ಶೇ. 2 ಸೆಸ್‌!

ರಾಜ್ಯ ಸರ್ಕಾರವು 2024 ರಲ್ಲಿ ಮಂಡಿಸಿದ್ದ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ (ಕ್ಷೇಮಾಭಿವೃದ್ಧಿ) ವಿಧೇಯಕಕ್ಕೆ 2024ರ ಸೆಪ್ಟೆಂಬರ್ 23 ರಂದು ಕರ್ನಾಟಕದ ರಾಜ್ಯಪಾಲರು ಅಧಿಕೃತವಾಗಿ ಅಂಕಿತ ಹಾಕಿದ್ದರು. ಎರಡು ವರ್ಷಗಳ ಸುದೀರ್ಘ ಪ್ರಕ್ರಿಯೆಯ ಬಳಿಕ ಸಿನಿಮಾ ಟಿಕೆಟ್‌ಗಳ ಮೇಲೆ ಸೆಸ್‌ ವಿಧಿಸಲು ಅಧಿನಿಯಮವನ್ನು ಜಾರಿಗೆ ತರಲಾಗುತ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ಮೂರ್ತಿ ತೆರವು ಖಂಡಿಸಿ ಕಲಬುರಗಿಯಲ್ಲಿ ಅಭಿಮಾನಿಗಳ ಬಳಗದಿಂದ ಪ್ರತಿಭಟನೆ

ಮಾಜಿ ಸಿಎಂ ಸಿದ್ದರಾಮಯ್ಯ ಮೂರ್ತಿ ತೆರವು ಖಂಡಿಸಿ ಕಲಬುರಗಿಯಲ್ಲಿ ಪ್ರತಿಭಟನೆ

Kalaburagi News: ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೂರ್ತಿಯನ್ನು ತೆರವುಗೊಳಿಸಿರುವುದನ್ನು ಖಂಡಿಸಿ, ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ತೆರವುಗೊಳಿಸಿರುವ ಸ್ಥಳದಲ್ಲಿಯೇ ಸಿದ್ದರಾಮಯ್ಯ ಅವರ ಮೂರ್ತಿಯನ್ನು ಮರಳಿ ಪ್ರತಿಷ್ಠಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಮಂಗಳೂರು ಜಿಲ್ಲಾ ಕಾರಾಗೃಹದ ಸುತ್ತಮುತ್ತ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ: ಸಚಿವ ಪ್ರಿಯಾಂಕ್ ಖರ್ಗೆ

ಮಂಗಳೂರು ಕಾರಾಗೃಹದ ಬಳಿ ಮೊಬೈಲ್ ನೆಟ್‌ವರ್ಕ್ ವ್ಯತ್ಯಯ ತಗ್ಗಿಸಲು ಕ್ರಮ

Priyank Kharge: ಕಾರಾಗೃಹದ ಭದ್ರತೆ ಅತ್ಯಂತ ಮುಖ್ಯವಾಗಿರುವಂತೆಯೇ, ಕಾರಾಗೃಹದ ಸುತ್ತಮುತ್ತ ವಾಸಿಸುವ ಸಾರ್ವಜನಿಕರಿಗೆ ಮತ್ತು ಇತರ ಬಳಕೆದಾರರಿಗೆ ಮೊಬೈಲ್ ಸಂಪರ್ಕ ಸೇವೆಯಲ್ಲಿ ಅನಗತ್ಯ ವ್ಯತ್ಯಯ ಉಂಟಾಗದಂತೆ ನೋಡಿಕೊಳ್ಳುವುದೂ ಅಗತ್ಯ. ಈ ಎರಡೂ ಅಗತ್ಯಗಳ ನಡುವೆ ಸಮತೋಲನ ಸಾಧಿಸುವ ನಿಟ್ಟಿನಲ್ಲಿ ತಾಂತ್ರಿಕ ಪರಿಹಾರಗಳನ್ನು ಕೈಗೊಳ್ಳಲಾಗುತ್ತಿದೆ” ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಹೊಸ ಆಶಯದೊಂದಿಗೆ ಕತಾರ್‌ ‘ಕನ್ನಡ ಪಾಠಶಾಲೆ’ ಪುನರಾರಂಭ

ಕತಾರ್‌ ‘ಕನ್ನಡ ಪಾಠಶಾಲೆ’ ಪುನರಾರಂಭ

ವಿದೇಶದಲ್ಲಿ ನೆಲೆಸಿರುವ ಕನ್ನಡ ಭಾಷಿಗರ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಕರ್ನಾಟಕ ಸಂಘ ಕತಾರ್ ವತಿಯಿಂದ ‘ಕನ್ನಡ ಪಾಠಶಾಲೆ’ಯನ್ನು ಹೊಸ ಆಶಯದೊಂದಿಗೆ ಪುನರಾರಂಭಿಸಲಾಗಿದೆ. ಇತ್ತೀಚೆಗೆ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇದನ್ನು ಅಧಿಕೃತವಾಗಿ ಘೋಷಿಸಲಾಯಿತು.

Loading...