ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ

Actor Darshan: ಸೀಕ್ರೆಟ್‌ ಆಗಿ ಮದುವೆ ಆಗಿದ್ರಾ ನಟ ದರ್ಶನ್‌; ಪವಿತ್ರಾ ಗೌಡ ಜತೆಗಿನ ಹಳೆಯ ಫೋಟೊಗಳು ವೈರಲ್‌!

ದರ್ಶನ್‌-ಪವಿತ್ರಾ ಗೌಡ ಫೋಟೊಗಳು ವೈರಲ್‌; ಸೀಕ್ರೆಟ್‌ ಆಗಿ ಮದುವೆ ಆಗಿದ್ರಾ!

Sandalwood News: ದರ್ಶನ್ ಹಾಗೂ ಪವಿತ್ರಾ ಗೌಡ ಮದುವೆಯದ್ದು ಎಂಬುವುದನ್ನು ಬಿಂಬಿಸಲು ಲೀಕ್ ಮಾಡಿರುವ ಫೋಟೊಗಳಂತೆ ಇವು ಕಾಣುತ್ತಿದೆ. ಇದರಿಂದ ನಟ ದರ್ಶನ್‌ ಮತ್ತು ಪವಿತ್ರಾ ಗೌಡಗೆ ರಹಸ್ಯವಾಗಿ ಮದುವೆಯಾಗಿತ್ತಾ? ಎಂಬ ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ಪವಿತ್ರಾ ಕೊರಳಲ್ಲಿರುವ ಅರಿಶಿನ ದಾರವಾಗಿದೆ.

CM Siddaramaiah: ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇಲ್ಲ: ಸಿಎಂ ಸಿದ್ದರಾಮಯ್ಯ

ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇಲ್ಲ: ಸಿಎಂ

CM Siddaramaiah slams BJP: ಬಿಜೆಪಿಯವರು ನೆಹರೂ ಅವರನ್ನು ಟೀಕಿಸುತ್ತಾರೆ. ಆದರೆ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧಿಯವರ ನೇತೃತ್ವದಲ್ಲಿ ನೆಹರೂ, ವಲ್ಲಭಭಾಯಿ ಪಟೇಲ್, ಸುಭಾಷ್‌ ಚಂದ್ರ ಬೋಸ್ ಸೇರಿದಂತೆ ಅನೇಕರು ಹೋರಾಡಿದರು. ಇಂದು ದೇಶ ಸ್ವತಂತ್ರವಾಗಿದ್ದರೆ ಅದು ಅವರ ಹೋರಾಟದ ಫಲ. ಬಿಜೆಪಿಯವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿಯೇ ಇಲ್ಲ. ಸಾವರ್ಕರ್, ಗೋಲ್ವಾಲ್ಕರ್ ಆಗಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿಲ್ಲ. ಈಗ ಬಿಜೆಪಿಯವರು ಮಹಾನ್ ದೇಶಭಕ್ತರಂತೆ ಮಾತನಾಡುತ್ತಾರೆ. ಇದನ್ನು ಬಿಜೆಪಿಯವರ ಢೋಂಗಿತನ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.

National Unity Day 2025: ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಶಿಕಾರಿಪುರದಲ್ಲಿ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆ

ಶಿಕಾರಿಪುರದಲ್ಲಿ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆ

Shikaripura News: ಬೆಜೆಪಿ ವತಿಯಿಂದ ಶುಕ್ರವಾರ ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ನೇತೃತ್ವದಲ್ಲಿ ಶಿಕಾರಿಪುರದಲ್ಲಿ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ “ಒಂದೇ ಭಾರತ - ಆತ್ಮನಿರ್ಭರ ಭಾರತ” ಘೋಷವಾಕ್ಯದ ಅಡಿಯಲ್ಲಿ ದೇಶಾದ್ಯಂತ ನಡೆಯುತ್ತಿರುವ ಏಕತಾ ನಡಿಗೆಯ ಅಂಗವಾಗಿ ಈ ಕಾರ್ಯಕ್ರಮ ನಡೆಯಿತು. ಶಿಕಾರಿಪುರದ ಬಸವೇಶ್ವರ ಪಾರ್ಕ್‌ನ ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.

Rotary Karnataka Rajyotsava 2025: ಮಲ್ಲೇಶ್ವರದಲ್ಲಿ ನ.1ರಂದು ರೋಟರಿ ಕರ್ನಾಟಕ ರಾಜ್ಯೋತ್ಸವ 2025; ಆಪತ್ಬಾಂಧವ ಪ್ರಶಸ್ತಿ ಪ್ರದಾನ

ಮಲ್ಲೇಶ್ವರದಲ್ಲಿ ನ.1ರಂದು ರೋಟರಿ ಕರ್ನಾಟಕ ರಾಜ್ಯೋತ್ಸವ 2025

Rotary Karnataka Rajyotsava 2025: ಬೆಂಗಳೂರಿನ ಮಲ್ಲೇಶ್ವರದಲ್ಲಿ ನ.1ರಂದು ನಡೆಯಲಿರುವ ರೋಟರಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಛಾಯಾಚಿತ್ರ ಪ್ರದರ್ಶನ, ಗಾಯಕ ಮನೋಜವಂ ಆತ್ರೇಯ, ಗಾಯಕಿ ಪೃಥ್ವಿ ಭಟ್ ಅವರಿಂದ ಗೀತ ಸಂಭ್ರಮ, ಪ್ರಸಿದ್ಧ ಪ್ರಭಾತ್‌ ಇಂಟರ್‌ನ್ಯಾಷನಲ್‌ನ ಕಲಾವಿದರಾದ ಶರತ್, ಭರತ್ ವೃಂದದಿದ ನೃತ್ಯ ನಾಟಕ ಪ್ರದರ್ಶನ ನಡೆಯಲಿದೆ.

Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣ; ನಟ ದರ್ಶನ್‌ ಗ್ಯಾಂಗ್ ವಿರುದ್ಧ ನ.3ಕ್ಕೆ ದೋಷಾರೋಪ ನಿಗದಿ

ನಟ ದರ್ಶನ್‌ ಸೇರಿ ಇತರ ಆರೋಪಿಗಳ ವಿರುದ್ಧ ನ.3ಕ್ಕೆ ದೋಷಾರೋಪ ನಿಗದಿ

Renukaswamy Case: ನವೆಂಬರ್ 3 ರಂದು ದರ್ಶನ್ ಹಾಗೂ ಇತರೆ ಆರೋಪಿಗಳ ಪಾಲಿಗೆ ಅತ್ಯಂತ ಮಹತ್ವದ ದಿನ ಆಗಿರಲಿದೆ. ಅಂದು ನಿಗದಿ ಆಗುವ ಆರೋಪಗಳ ಮೇಲೆಯೇ ಮುಂದಿನ ವಿಚಾರಣೆ ನಡೆಯಲಿದೆ. ಪೊಲೀಸರು ಅಥವಾ ತನಿಖಾಧಿಕಾರಿಗಳು ಈ ದೋಷಾರೋಪವನ್ನು ನಿಗದಿ ಮಾಡಲಿದ್ದಾರೆ.

Jemimah Rodrigues ವಿಶ್ವಕಪ್‌ ಸೆಮಿಯಲ್ಲಿ ಭಾರತ ಗೆಲುವಿಗೆ ಕಾರಣವಾದ ಜೆಮಿಮಾ ಮಂಗಳೂರು ಮೂಲದ ಹುಡುಗಿ!

ಸೆಮಿ ಪಂದ್ಯದಲ್ಲಿ ಮಿಂಚಿದ ಮಂಗಳೂರು ಮೂಲದ ಜೆಮಿಮಾ ರಾಡ್ರಿಗಸ್‌

ಜೆಮಿಮಾ ರಾಡ್ರಿಗಸ್‌ ಅವರಿಗೆ ಇದು ಚೊಚ್ಚಲ ವಿಶ್ವಕಪ್‌ ಟೂರ್ನಿಯಾಗಿದೆ. ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಬೀಸಿದ ಜೆಮಿಮಾ ಕ್ರೀಸ್‌ನಲ್ಲಿ ಬೇರೂರಿ ನಿಂತು ಆಸೀಸ್‌ ಬೌಲರ್‌ಗಳನ್ನು ಬೆಂಡೆತ್ತಿದರು. ತಂಡದ ಗೆಲುವಿಗೆ ಟೊಂಕ ಕಟ್ಟಿ ನಿಂತ ಅವರು ಶತಕ ಬಾರಿಸಿದರೂ ಸಂಭ್ರಮಿಸಲಿಲ್ಲ. ತಂಡವನ್ನು ಗೆಲುವಿನ ದಡ ಸೇರಿಸುವುದೇ ಅವರ ಪ್ರಧಾನ ಲಕ್ಷ್ಯವಾಗಿತ್ತು. ತಂಡ ಗೆಲ್ಲುತ್ತಿದ್ದಂತೆ ಭಾವುಕರಾದ ಜೆಮಿಮಾ ಮೈದಾನದಲ್ಲೇ ಸಂತಸದಿಂದ ಕಣ್ಣೀರು ಸುರಿಸಿದರು.

Self Harming: ಅರ್ಚಕರ ಕುಟುಂಬ ಸಾಮೂಹಿಕ ಆತ್ಮಹತ್ಯೆ ಯತ್ನ, ಇಬ್ಬರ ಸಾವು, ಇನ್ನಿಬ್ಬರು ಗಂಭೀರ

ಅರ್ಚಕರ ಕುಟುಂಬ ಸಾಮೂಹಿಕ ಆತ್ಮಹತ್ಯೆ ಯತ್ನ, ಇಬ್ಬರ ಸಾವು, ಇಬ್ಬರು ಗಂಭೀರ

Devanahalli: 60 ವರ್ಷ ವಯಸ್ಸಿನ ಕುಮಾರಪ್ಪ, ಇವರ ಪತ್ನಿ 55 ವರ್ಷದ ರಮಾ ಮತ್ತು ಗಂಡು ಮಕ್ಕಳಾದ ಅಕ್ಷಯ್ ಹಾಗೂ ಅರುಣ್ ಸಾಮೂಹಿಕವಾಗಿ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ಪೈಕಿ ಹಿರಿಯ ಮಗ ಕ್ರೀಮಿನಾಶಕ ಸೇವಿಸಿ ನಂತರ ನೇಣಿಗೆ ಶರಣಾಗಿದ್ದಾನೆ. ತಂದೆ ಕುಮಾರಪ್ಪ ಹಾಗೂ ಹಿರಿಯ ಮಗ ಅರುಣ್ ಸಾವನ್ನಪ್ಪಿದ್ದು, ಅರಚಾಡುತ್ತಾ ವಿಲವಿಲ ಒದ್ದಾಡುತ್ತಿದ್ದ ತಾಯಿ ರಮಾ ಹಾಗೂ ಕಿರಿಯ ಮಗನನ್ನು ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಬ್ಬರ ಸ್ಥಿತಿಯೂ ಗಂಭೀರವಾಗಿದೆ.

Suhas Shetty Murder case: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ತನಿಖೆ ಚಾರ್ಜ್‌ಶೀಟ್‌ ಸಲ್ಲಿಕೆ, ನಿಷೇಧಿತ ಪಿಎಫ್‌ಐ ಕೈವಾಡ ಬಯಲು

ಸುಹಾಸ್‌ ಶೆಟ್ಟಿ ಹತ್ಯೆ ತನಿಖೆ ಚಾರ್ಜ್‌ಶೀಟ್‌; ಪಿಎಫ್‌ಐ ಕೈವಾಡ ಬಯಲು

Chargesheet: ಸುಹಾಸ್ ಶೆಟ್ಟಿ ಪ್ರಯಾಣಿಸುತ್ತಿದ್ದ ಇನೋವಾ ಕಾರು ಹಿಂಬಾಲಿಸಿ ಹತ್ಯೆ ಮಾಡಲಾಗಿದೆ. ಇನೋವಾ ಕಾರಿಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದು ಮತ್ತೊಂದು ವಾಹನದಿಂದ ಮುಂಭಾಗ ತಡೆ ಒಡ್ಡಲಾಗಿತ್ತು. ಹೀಗಾಗಿ ಸುಹಾಸ್ ಶೆಟ್ಟಿ ತಪ್ಪಿಸಿಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಸಂಚು ರೂಪಿಸಿ ಹತ್ಯೆ ಮಾಡಲಾಗಿತ್ತು. ಹತ್ಯೆ ಸಂಚಿನ ರೂವಾರಿ ಅಬ್ದುಲ್ ಸಫ್ವಾನ್ ಅಲಿಯಾಸ್ ಕಳವಾರು ಸಫ್ವಾನ್. ಈತ ನಿಷೇಧಿತ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI)ದ ಮಾಜಿ ಸದಸ್ಯನಾಗಿದ್ದಾನೆ. ನಿಷೇಧಿತ ಪಿಎಫ್ಐ ಸಂಘಟನೆ ಈಗಲೂ ಸಕ್ರಿಯವಾಗಿದೆ ಎಂಬುದು ಇದರಿಂದ ರುಜುವಾತಾಗಿದೆ.

Shivamogga news: ಬರ್ಬರ ಕೃತ್ಯ, ಮಗುವಿನ ಮುಖಕ್ಕೆ ಕಾಸಿದ ಚಾಕುವಿನಿಂದ ಬರೆ ಎಳೆದ ಅಂಗನವಾಡಿ ಸಹಾಯಕಿ

ಬರ್ಬರ ಕೃತ್ಯ, ಮಗುವಿನ ಮುಖಕ್ಕೆ ಕಾಸಿದ ಚಾಕುವಿನಿಂದ ಬರೆ ಎಳೆದ ಸಹಾಯಕಿ

Assault: ಚಿಕ್ಕಸವಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ 10 ಮಕ್ಕಳಿದ್ದಾರೆ. ಗುರುವಾರ ಬೆಳಗ್ಗೆ ಎಂದಿನಂತೆ ಮಕ್ಕಳು ಅಂಗನವಾಡಿಗೆ ಹಾಜರಾಗಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಮಕ್ಕಳು ಜಗಳ ಆಡಿಕೊಂಡಿದ್ದಾರೆ. ಯೋಧಮೂರ್ತಿ ಇನ್ನೊಬ್ಬ ಮಗುವಿನ ಕೈಗೆ ಕಚ್ಚಿದ್ದಾನೆ. ಪರಸ್ಪರ ಜಗಳವಾಡುತ್ತಿದ್ದ ಮಕ್ಕಳನ್ನು ಬಿಡಿಸಲು ಬಂದ ಅಂಗನವಾಡಿ ಸಹಾಯಕಿ ಹೇಮಮ್ಮ ಎಂಬಾಕೆ ಚಾಕುವನ್ನು ಬೆಂಕಿಯಲ್ಲಿ ಕಾಸಿ ಯೋಧಮೂರ್ತಿಯ ಗಲ್ಲಕ್ಕೆ ಬರೆ ಎಳೆದಿದ್ದಾಳೆ. ಬಿಸಿಯ ಉರಿಯಿಂದ ಅಳತೊಡಗಿದ ಮಗು ಅಸ್ವಸ್ಥಗೊಂಡಿದ್ದು, ಸೊರಬ ಸಾರ್ವಜನಿಕ ಆಸತ್ರೆಗೆ ದಾಖಲಿಸಲಾಗಿದೆ. ಮಗುವಿನ ಪೋಷಕರು ನೀಡಿದ ದೂರಿನನ್ವಯ ಸೊರಬ ಪೊಲೀಸ್ ಠಾಣೆಯಲ್ಲಿಅಂಗನವಾಡಿ ಸಹಾಯಕಿ ಹೇಮಮ್ಮ ವಿರುದ್ಧ ದೂರು ದಾಖಲಾಗಿದೆ.

Namma Metro: ನಮ್ಮ ಮೆಟ್ರೊದಲ್ಲಿ ತ್ವರಿತ ಅಂಗಾಂಗ ರವಾನೆ, ನಾಲ್ಕು ರೋಗಿಗಳಿಗೆ ಜೀವದಾನ

ನಮ್ಮ ಮೆಟ್ರೊದಲ್ಲಿ ತ್ವರಿತ ಅಂಗಾಂಗ ರವಾನೆ, ನಾಲ್ಕು ರೋಗಿಗಳಿಗೆ ಜೀವದಾನ

organ donation: ಅತಿಯಾದ ಒತ್ತಡದಿಂದ ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿ ಮಿದುಳು ನಿಷ್ಕ್ರಿಯಗೊಂಡ 33 ವರ್ಷದ ಯುವಕನಿಂದ ಪಡೆದ ಅಂಗಾಂಗವನ್ನು ‘ನಮ್ಮ ಮೆಟ್ರೊ’ ರೈಲಿನಲ್ಲಿ ರವಾನಿಸುವ ಮೂಲಕ ನಾಲ್ವರು ರೋಗಿಗಳಿಗೆ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡಲಾಗಿದೆ. ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ದಾನಿಯಿಂದ ಪಡೆದ ಅಂಗಾಂಗಗಳ ಪೈಕಿ ಶ್ವಾಸಕೋಶವನ್ನು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ, ಆರ್.ವಿ. ರಸ್ತೆಯ ನಿಲ್ದಾಣಕ್ಕೆ ಹಾಗೂ ಅಲ್ಲಿಂದ ಹಳದಿ ಮಾರ್ಗವಾಗಿ ಬೊಮ್ಮಸಂದ್ರ ನಿಲ್ದಾಣಕ್ಕೆ 61 ನಿಮಿಷಗಳಲ್ಲಿ (30-33ಕಿ.ಮೀ.) ನಾರಾಯಣ ಹೆಲ್ತ್ ಆಸ್ಪತ್ರೆಗೆ ತಲುಪಿಸಲಾಯಿತು.

Karnataka Weather: ರಾಜ್ಯದಲ್ಲಿ ಕಡಿಮೆಯಾಯ್ತು ಮಳೆ ಆರ್ಭಟ; ಎಲ್ಲೆಡೆ ಒಣಹವೆ

ರಾಜ್ಯದಲ್ಲಿ ಕಡಿಮೆಯಾಯ್ತು ಮಳೆ ಆರ್ಭಟ

ಕರ್ನಾಟಕ ಹವಾಮಾನ ವರದಿ: ಅಕ್ಟೋಬರ್‌ 31ರಂದು ಕರಾವಳಿಯ ಕೆಲವೆಡೆಯಲ್ಲಿ ಸಾಧಾರಣ ಮಳೆಯಾಗಲಿದ್ದು, ಉಳಿದೆಡೆ ಒಣಹವೆ ಮುಂದುವರಿಯಲಿದೆ. ಇನ್ನು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 19°C ಮತ್ತು 27°C ಕಂಡುಬರಲಿದೆ. ಬೆಳಗ್ಗೆ ಮತ್ತು ರಾತ್ರಿ ಚಳಿಯ ವಾತಾವರಣ ಕಂಡುಬರುವ ಸಾಧ್ಯತೆ ಇದೆ ಎಂದು ಎಂದು ಹವಾಮಾನ ಇಲಾಖೆ ತಿಳಿಸಿದೆ.

Seikal Ramachandra Gowda: ಜೋಳ ಬೆಳೆದ ರೈತರಿಗೆ ವಂಚನೆಯಾದರೆ ಹೋರಾಟ ಖಚಿತ: ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ

ಜೋಳ ಬೆಳೆದ ರೈತರಿಗೆ ವಂಚನೆಯಾದರೆ  ಹೋರಾಟ ಖಚಿತ

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮುಸ್ಲಿಮರ ದೌರ್ಜನ್ಯ ಮೇರೆ ಮೀರುತ್ತದೆ. ಜೋಳ ಬೆಳೆದ ರೈತರ ಮೇಲೆ ನಡೆದಿರುವ ದೌರ್ಜನ್ಯ ಮತ್ತು ಅನ್ಯಾಯವೇ ಇದಕ್ಕೆ ಸಾಕ್ಷಿ. ಶಿಡ್ಲಘಟ್ಟದಲ್ಲಿ ಶೇಕಡ 90 ಭಾಗ ರೈತರು ತಾವು ಬೆಳೆದ ರೇಷ್ಮೆಯನ್ನು ಇಲ್ಲಿನ ಮುಸ್ಲಿಮರಿಗೆ ಮಾಡುತ್ತಾರೆ ಎಂದು ಕೂಡ ಇಲ್ಲಿ ರೈತರ ಮೇಲೆ ಮುಸ್ಲಿಂ ಜನಾಂಗದಿಂದ ದೌರ್ಜನ್ಯವಾಗಲಿ ಅನ್ಯಾಯವಾಗಲಿ ನಡೆದಿಲ್ಲ ಎಂದರು

Bagepally News: ಕಾಂಗ್ರೆಸ್ ಹಿರಿಯ ಮುಖಂಡ ಜಿ.ವಿ.ಬಾಬುರೆಡ್ಡಿ ಅಭಿಮಾನಿಗಳಿಂದ ಅನ್ನದಾನ ಹಾಗೂ ನುಡಿನಮನ ಕಾರ್ಯಕ್ರಮ

ಅಭಿಮಾನಿಗಳಿಂದ ಅನ್ನದಾನ ಹಾಗೂ ನುಡಿನಮನ ಕಾರ್ಯಕ್ರಮ

ಬಾಗೇಪಲ್ಲಿ ತಾಲೂಕಿನಲ್ಲಿ ಅನೇಕ ರಂಗಗಳಲ್ಲಿ ಉತ್ತಮ ಸೇವೆ ಮಾಡಿರುವ ಬಾಬು ರೆಡ್ಡಿ ಅವರು ಅಪರೂಪದ ರಾಜಕಾರಣಿ, ಬಹುಶಃ ಎಲ್ಲರ ಜೊತೆ ಬೆರೆಯುವ ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಅಭಿವೃದ್ಧಿ ಹೆಚ್ಚು ಹೊತ್ತನ್ನು ನೀಡಿದ್ದಾರೆ ವಿಶೇಷವಾಗಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಕ್ಕೆ ಅವಿಭಾಜಿತ ಕೋಲಾರ ಜಿಲ್ಲೆಯು ಹೋರಾಟದ ಕ್ಷೇತ್ರವಾಗಿದೆ.

ಸೃಜನಶೀಲತೆ ಹೊರಹೊಮ್ಮಲು ತೊಡಗಿಸಿಕೊಳ್ಳುವಿಕೆ ಮುಖ್ಯ: ಪ.ಸ. ಕುಮಾರ್

ಸೃಜನಶೀಲತೆ ಹೊರಹೊಮ್ಮಲು ತೊಡಗಿಸಿಕೊಳ್ಳುವಿಕೆ ಮುಖ್ಯ: ಪ.ಸ.ಕುಮಾರ್

Prasanna Heggodu: ಪ್ರಸನ್ನ ಒಬ್ಬ ರಂಗಕರ್ಮಿ. ದಶಕಗಳಿಂದ ರಂಗಭೂಮಿಯ ಆತ್ಮವೇ ಆಗಿದ್ದಾರೆ. ಇಲ್ಲಿ ಮೂಡಿರುವ ಕಪ್ಪು ಬಿಳುಪು ಚಿತ್ರಗಳು ಅಲ್ಲಿನ ಪಾತ್ರಗಳೇ ಆಗಿವೆ. ಅವು ನಮಗೆ ಬಾಹ್ಯವಾಗಿ ಕಾಣುವ ನೋಟವಲ್ಲ. ಅವರ ಅಂತರಂಗದಲ್ಲಿ ಒಂದು ಭಿನ್ನ ನೋಟವಿದೆ. ಅದು ಇಲ್ಲಿ ಚಿತ್ರಗಳಾಗಿ ಢಾಳಾಗಿ ಮೂಡಿವೆ ಎಂದು ಲಲಿತಾಕಲಾ ಅಕಾಡೆಮಿ ಅಧ್ಯಕ್ಷ ಪ.ಸ. ಕುಮಾರ್ ತಿಳಿಸಿದ್ದಾರೆ.

Pralhad Joshi: ಭಾರತದ ಪವನ ಶಕ್ತಿಗೆ ಕರ್ನಾಟಕ ಸೇರಿ 3 ರಾಜ್ಯಗಳ ಮಹತ್ವದ ಕೊಡುಗೆ: ಜೋಶಿ ಮೆಚ್ಚುಗೆ

ಭಾರತದ ಪವನ ಶಕ್ತಿಗೆ ಕರ್ನಾಟಕ ಸೇರಿ 3 ರಾಜ್ಯಗಳ ಮಹತ್ವದ ಕೊಡುಗೆ: ಜೋಶಿ

Wind Energy India 2025: ಚೆನ್ನೈನಲ್ಲಿ ಗುರುವಾರ ನಡೆದ ʼವಿಂಡ್‌ ಎನರ್ಜಿ ಇಂಡಿಯಾ-2025ʼರ 7ನೇ ಆವೃತ್ತಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್‌ ಜೋಶಿ, ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ಒಟ್ಟಾಗಿ ಭಾರತದ ಪವನ ಶಕ್ತಿ ಸಾಮರ್ಥ್ಯದ ಅರ್ಧದಷ್ಟು ಕೊಡುಗೆ ನೀಡುತ್ತಿದ್ದು, ಇದು 54 GW ಆಗಿದೆ. ಭಾರತ ವಿಶ್ವದ 4ನೇ ಅತಿದೊಡ್ಡ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಹೊಂದಿದ್ದು, 2030ರ ವೇಳೆಗೆ 500 GW ಇಂಧನ ಉತ್ಪಾದನೆ ಗುರಿಯತ್ತ ಸಾಗುತ್ತಿದೆ. ಇದರಲ್ಲಿ ಪವನ ಶಕ್ತಿಯು 100 GW ಕೊಡುಗೆ ನೀಡುವ ಮೂಲಕ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ದೇಶದ ಪವನ ವಿದ್ಯುತ್‌ ಸಾಮರ್ಥ್ಯದ ಶ್ರೇಯಾಂಕವು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.

ನೆರೆ ಹಾವಳಿಯಿಂದ ವ್ಯಾಪಕ ಕೃಷಿ ಹಾನಿ; 1,545 ಕೋಟಿ ರೂ. ಪರಿಹಾರ ಒದಗಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಲು ಸಚಿವ ಸಂಪುಟ ತೀರ್ಮಾನ

1,545.23 ಕೋಟಿ ರೂ. ಪರಿಹಾರ ಒದಗಿಸಲು ಕೇಂದ್ರಕ್ಕೆ ಮನವಿ

2025ರ ನೈಋತ್ಯ ಮುಂಗಾರು ಅವಧಿಯಲ್ಲಿ ಹಾನಿಗೊಳಗಾದ ಮೂಲ ಸೌಕರ್ಯಗಳ ಪುನನಿರ್ಮಾಣವನ್ನು ಕೈಗೊಳ್ಳಲು ಎನ್‌ಡಿಆರ್‌ಎಫ್‌ನ ಚೇತರಿಕೆ ಮತ್ತು ಪುನರ್‌ನಿರ್ಮಾಣ ವಿಂಡೋದ ಅಡಿಯಲ್ಲಿ ಜಿಲ್ಲಾ ಮತ್ತು ವಲಯವಾರು ಹಾನಿ ಮೌಲ್ಯಮಾಪನದ ವಿವರಗಳೊಂದಿಗೆ ಸುಮಾರು 1,545.23 ಕೋಟಿ ರೂ. ಆರ್ಥಿಕ ಸಹಾಯವನ್ನು ಕೋರಿ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಲು ಹಾಗೂ ಭಾರತ ಸರ್ಕಾರದ ಉನ್ನತ ಮಟ್ಟದ ಸಮಿತಿಯು ಪರಿಹಾರ ನಿಧಿಯನ್ನು ಅನುಮೋದಿಸಿದ ನಂತರ, ಆರ್ಥಿಕ ಪರಿಣಾಮಗಳ ಪ್ಯಾರ‍್ಯಾಗ್ರಾಫ್‌ನಲ್ಲಿ ನಿರ್ದಿಷ್ಟಪಡಿಸಿದ ವೆಚ್ಚ ಹಂಚಿಕೆ ಮಾದರಿಗೆ ಅನುಗುಣವಾಗಿ ರಾಜ್ಯ ನಿಧಿಯಿಂದ ವೆಚ್ಚವನ್ನು ಹಂಚಿಕೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.

SIRA News: ಡಾ.ಪುನೀತ್ ರಾಜ್ ಕುಮಾರ್ ಎಂದಿಗೂ ಅಜರಾಮರ: ಡಾ.ಸಿ.ಎಂ.ರಾಜೇಶ್ ಗೌಡ

ಡಾ.ಪುನೀತ್ ರಾಜ್ ಕುಮಾರ್ ಎಂದಿಗೂ ಅಜರಾಮರ

ಪುನೀತ್ ರಾಜ್‌ಕುಮಾರ್ ಅವರು ೨೬ ಅನಾಥಾಶ್ರಮಗಳು, ೧೬ ವೃದ್ಧಾಶ್ರಮಗಳು, ಸಾಕಷ್ಟು ಗೋ ಶಾಲೆಗಳು ಹಾಗೂ ೪೫ಕ್ಕೂ ಹೆಚ್ಚು ಸರಕಾರಿ ಶಾಲೆಗಳಿಗೆ ನೆರವು ನೀಡಿದ್ದಾರೆ. ತಮ್ಮ ಜನಸೇವೆ ಯನ್ನು ಎಡಗೈನಲ್ಲಿ ಮಾಡಿದ ಕೆಲಸ ಬಲಗೈಗೆ ತಿಳಿಯದಂತೆ ಮಾಡಿದ್ದಾರೆ. ಕನ್ನಡಿಗರ ಪಾಲಿಗೆ ಅಪ್ಪು ದೇವರಂತೆ, ಜನರಿಂದ ಮರೆಯಾದರೂ ಎಂದಿಗೂ ಅಭಿಮಾನಿಗಳ ಮನಸ್ಸಿಂದ ಮರೆಯಾಗದ ಮಾಣಿಕ್ಯ ಅಪ್ಪು ಅವರ ಉತ್ತಮ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು

ಜಿಲ್ಲೆಯಲ್ಲಿ ಅಶಾಂತಿ ಹುಟ್ಟು ಹಾಕುತ್ತಿರುವ ದಯಾಸಾಗರ ಪಾಟೀಲ ಇವರಿಗೆ ಜಿಲ್ಲೆಯಿಂದ ಹೊರ ಹಾಕಲು ಆಗ್ರಹ: ಮಲ್ಲು ಲೋಣಿ

ಅಶಾಂತಿಗೆ ಕಾರಣವಾದ ದಯಾಸಾಗರ ಪಾಟೀಲರನ್ನು ಜಿಲ್ಲೆಯಿಂದ ಹೊರ ಹಾಕಿ

ಶಾಸಕ ಯಶವಂತರಾಯಗೌಡ ಪಾಟೀಲ ಎಲ್ಲ ಸಮುದಾಯಗಳ ಪ್ರೀತಿ, ವಿಶ್ವಾಸ ಗಳಿಸಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತದಂತೆ ಎಲ್ಲರನ್ನು ಸಮಾನವಾಗಿ ಕಂಡಿದ್ದಾರೆ. ಶಾಸಕ ಯಶವಂತರಾಯಗೌಡ ಪಾಟೀಲರ ವಿರುದ್ಧ ದಯಾಸಾಗರ ಪಾಟೀಲ ಮಾಡಿರುವ ಆರೋಪಗಳಿಗೆ ಯಾವುದೇ ಹುರುಳಿಲ್ಲ. ಇದು ರಾಜಕೀಯ ಷೆಡ್ಯಂತರ ಶಾಸಕ ಹೆಸರು ಕೆಡಿಸುವ ಹುನ್ನಾರ, ಕಳೆದ ೮ ವರ್ಷಗಳ ಹಿಂದೆ ೨ ಬಾರಿ ಯಶವಂತರಾಯಗೌಡ ಪಾಟೀಲ ಶಾಸಕರಾಗಿ ಜನಮನ ಗೆದ್ದಿದ್ದಾರೆ.

Sadguru Sri Madhusudan Sai: ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ

ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ

Sathya sai grama: ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಮಹೋತ್ಸವ'ದ 76ನೇ ದಿನವಾದ ಗುರುವಾರ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ʼʼಸತ್ಯ ಸಾಯಿ ವಿಶ್ವವಿದ್ಯಾಲಯದಿಂದ ರೈತರಿಗಾಗಿ ಕೌಶಲ್ಯ ಪ್ರಮಾಣೀಕರಣ ಪತ್ರ ನೀಡುವ ಹೊಸ ಕಾರ್ಯಕ್ರಮವನ್ನು ಜಾರಿ ಮಾಡುತ್ತಿದ್ದೇವೆ. ರೈತರಿಗೆ ತಮ್ಮ ಕೌಶಲ್ಯ ಹಾಗೂ ಜ್ಞಾನವನ್ನು ಗುರುತಿಸಿ, ಗೌರವಿಸುವ ಯಾವುದೇ ಪ್ರಮಾಣ ಪತ್ರಗಳು ಇಲ್ಲ. ಹೀಗಾಗಿ ಈ ಕಾರ್ಯಕ್ರಮನ್ನು ರೂಪಿಸುತ್ತಿದ್ದೇವೆʼʼ ಎಂದು ತಿಳಿಸಿದ್ದಾರೆ.

Gubbi News: ನಿರ್ಭೀತಿಯಿಂದ ಒತ್ತುವರಿ ತೆರವು ಮಾಡಿ : ಅಧಿಕಾರಿಗಳಿಗೆ ಧೈರ್ಯ ತುಂಬಿದ ಪಪಂ ಸದಸ್ಯರು

ನಿರ್ಭೀತಿಯಿಂದ ಒತ್ತುವರಿ ತೆರವು ಮಾಡಿ

ಕಳೆದ ಸಭೆಯಲ್ಲಿ ನಾವು ಚರ್ಚೆ ಮಾಡಿದ ವಿಚಾರ ಈ ಸಭೆಯ ನಡಾವಳಿಯಲ್ಲಿ ಮುದ್ರಣವೇ ಮಾಡಿಲ್ಲ. 4 ನೇ ವಾರ್ಡ್ ನಲ್ಲಿ ನಡೆದ ಪೈಪ್ ಲೈನ್ ಬಿಲ್ ಪಾವತಿ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಆದರೆ ನಡಾವಳಿ ಯಲ್ಲಿ ಕೈ ಬಿಡಲಾಗಿದೆ ಎಂದು ಕಿಡಿಕಾರಿದ ಅವರು ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದ ಕಾಂಪೌಂಡ್ ಬಿದ್ದು ಬಹಳ ವರ್ಷವಾಗಿದೆ. ಬಾಕಿ ಇರುವ ಹಳೇಯ ತಡೆ ಗೋಡೆ ತೆರವು ಮಾಡಬೇಕು.

Cabinet Meeting: ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ

ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟದ ಪ್ರಮುಖ ನಿರ್ಣಯಗಳು

Cabinet Decisions: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್‌ 30ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ. ಈ ಪೈಕಿ ಸರ್ಕಾರಿ ಶಾಲೆಗಳಲ್ಲಿ 2,200 ಕೊಠಡಿಗಳನ್ನು 360 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಲೋಕೋಪಯೋಗಿ ಇಲಾಖೆಗೆ ವಹಿಸಲು ನಿರ್ಧರಿಸಲಾಗಿದೆ. 2025-26ನೇ ಆರ್ಥಿಕ ವರ್ಷದಲ್ಲಿ ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ, ವಲಯ ಮಟ್ಟದಲ್ಲಿ ಟೆಂಡರ್ ಕರೆಯಲು ಅವಕಾಶ ನೀಡುವುದು ಮತ್ತು ಮೈಸೂರು ಮತ್ತು ಬೆಂಗಳೂರು ವಿಭಾಗಗಳಲ್ಲಿ ಶಾಲಾ ತರಗತಿ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆಯ ಯೋಜನಾ ರಸ್ತೆ ಆಸ್ತಿ ನಿರ್ವಹಣಾ ಕೇಂದ್ರಕ್ಕೆ ವಹಿಸಿ, ಕೇಂದ್ರೀಕೃತ ಟೆಂಡರ್ ಕರೆಯಲು ಅವಕಾಶ ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.

Sadhguru Shri Madhusudan Sai: ಅಧ್ಯಾತ್ಮದ ಹಾದಿಯಲ್ಲಿ ಅಡ್ಡದಾರಿಗಳಿಲ್ಲ, ಪ್ರಯಾಣ ನಿಲ್ಲಿಸಬೇಡಿ: ಸದ್ಗುರು ಶ್ರೀ ಮಧುಸೂದನ ಸಾಯಿ

ಅಧ್ಯಾತ್ಮದ ಹಾದಿಯಲ್ಲಿ ಅಡ್ಡದಾರಿಗಳಿಲ್ಲ, ಪ್ರಯಾಣ ನಿಲ್ಲಿಸಬೇಡಿ

ಭಾರತ ಮತ್ತು ಪೊಲೆಂಡ್ ಸಂಬಂಧಗಳು ಬಹಳ ಹಳೆಯದು. ವಿಶ್ವ ಯುದ್ಧದ ಸಮಯದಲ್ಲಿ ಐರೋಪ್ಯ ದೇಶಗಳು ಪೊಲೆಂಡ್ ಜನರನ್ನು ಸ್ವೀಕರಿಸಲು ಸಿದ್ಧವಾಗಿರಲಿಲ್ಲ. ಆದರೆ ಅಂತಿಮವಾಗಿ ಅವರು ಗುಜರಾತ್‌ಗೆ ಬಂದರು. ಪ್ರತಿ ಯೊಂದು ದೇಶಕ್ಕೂ ತನ್ನದೇ ಆದ ಮೋಡಿ, ಸೌಂದರ್ಯ, ಸಂಸ್ಕೃತಿ ಇರುತ್ತದೆ. ಇಂಥದ್ದೇ ವೈಶಿಷ್ಟ್ಯಗಳನ್ನು ನಾವು ಪೊಲೆಂಡ್‌ನಲ್ಲೂ ಕಾಣುತ್ತೇವೆ

Gauribidanur News: ಮಕ್ಕಳ ಜೀವದ ರಕ್ಷಣೆಯ ಹೊಣೆಯನ್ನು ಚಾಲಕರ ಜೊತೆಗೆ ಶಾಲಾ ಮುಖ್ಯಸ್ಥರು ಹೊರಬೇಕು

ಮಕ್ಕಳ ರಕ್ಷಣೆಯ ಹೊಣೆಯನ್ನು ಚಾಲಕರು, ಶಾಲಾ ಮುಖ್ಯಸ್ಥರು ಹೊರಬೇಕು

ಸಮಸ್ಯೆಗಳನ್ನು ಖುದ್ದು ಅರಿತುಕೊಂಡು ಅಗತ್ಯ ಜಾಗೃತಿ ಮೂಡಿಸಬೇಕು. ರಸ್ತೆ ದಾಟುವಾಗ ಕೆಂಪು ದೀಪವಿದ್ದಾಗಲೂ ಬಸ್ ಓಡಿಸಿಕೊಂಡು ಹೋಗುವುದರಿಂದ ಸಿಗ್ನಲ್ ಜಂಪ್ ಮಾಡಬಹುದು ಎಂಬ ಭಾವನೆ ಮಕ್ಕಳಲ್ಲಿ ಮೂಡುವಂತೆ ಮಾಡಿದಂತಾಗುತ್ತದೆ. ಪೋಷಕರ ಮತ್ತು ಶಿಕ್ಷಕರ ಚಾಲಕರ ನಡವಳಿಕೆಯೂ ಮಕ್ಕಳ ಮೇಲೆ ಪರಿಣಾಮ ಬೀರಿದಂತೆ ಎಚ್ಚರಿಕೆ ವಹಿಸಬೇಕು.

Gauribidanur News: ಗ್ರಾಚ್ಯುಟಿ ಹಣವನ್ನು ಕೂಡಲೇ ನೀಡಬೇಕು : ಸಿದ್ದಗಂಗಪ್ಪ

ಗ್ರಾಚ್ಯುಟಿ ಹಣವನ್ನು ಕೂಡಲೇ ನೀಡಬೇಕು : ಸಿದ್ದಗಂಗಪ್ಪ

ಇಂತಹ ಯೋಜನೆಯ ಅಭಿವೃದ್ಧಿಗೆ 150 ಹಾಗೂ 75 ರೂಗಳಿಂದ ಹಿಡಿದು ಸಾವಿರಾರು ಜನ ಕಾರ್ಯ ಕರ್ತರು ಸಹಾಯಕಿಯರು ದುಡಿದಿದ್ದಾರೆ. 25 ಏಪ್ರಿಲ್ 2022 ರಂದು ಸುಪ್ರೀಂಕೋರ್ಟ್ ಅಂಗನ ವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಎಲ್ಲರಿಗೂ 1972 ಕಾಯಿದೆ ಅನ್ವಯಿಸುತ್ತವೆ 303 ನಿಬಂಧನೆಗಳು ತೀರ್ಪನ್ನು ನೀಡಿದೆ.

Loading...