ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕರ್ನಾಟಕ

2026ರ ಐಪಿಎಲ್‌ ಟೂರ್ನಿಯ ಹಿನ್ನೆಲೆಯಲ್ಲಿ ಕೆಎಸ್‌ಸಿಎ ಅಧಿಕಾರಿಗಳ ಜೊತೆ ಶಾಲಿನಿ ರಜನೀಶ್‌ ಸಭೆ

IPL 2026: ಕೆಎಸ್‌ಸಿಎ ಅಧಿಕಾರಿಗಳ ಜೊತೆ ಶಾಲಿನಿ ರಜನೀಶ್‌ ಸಭೆ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಆರಂಭಕ್ಕೂ ಮುನ್ನ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು, ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹಾಗೂ ಸುತ್ತುಮುತ್ತು ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೆ ಸೂಕ್ತ ಅಧಿಕಾರಿಗಳ ಜೊತೆ ಸಭೆಯನ್ನು ನಡೆಸಿದ್ದಾರೆ.

Davanagere south bypolls: ಸಿಎಂ ಸಂಧಾನ ಸಕ್ಸಸ್‌; ದಾವಣಗೆರೆ ಕಣದಿಂದ ಹಿಂದೆ ಸರಿದ ಸ್ವತಂತ್ರ ಅಭ್ಯರ್ಥಿ ಸಾದಿಕ್ ಪೈಲ್ವಾನ್

ದಾವಣಗೆರೆ ಕಣದಿಂದ ಹಿಂದೆ ಸರಿದ ಸ್ವತಂತ್ರ ಅಭ್ಯರ್ಥಿ ಸಾದಿಕ್ ಪೈಲ್ವಾನ್

Karnataka By-Election: ದಾವಣಗೆರೆ ಉಪಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಕಣದಿಂದ ಹಿಂದೆ ಸರಿದಿದ್ದು, ದಾವಣಗೆರೆ ಮತ್ತು ಬಾಗಲಕೋಟೆ ಎರಡೂ ಕಡೆ ಕಾಂಗ್ರೆಸ್ ಗೆಲ್ಲಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ.

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹ; ಕಲಬುರಗಿಯಲ್ಲಿ ಉದ್ಯೋಗಾಕಾಂಕ್ಷಿಗಳಿಂದ ಬೃಹತ್ ಪ್ರತಿಭಟನೆ

ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಪ್ರತಿಭಟನೆ

Kalaburagi News: ಖಾಲಿ ಇರುವ 2.84 ಲಕ್ಷ ಹುದ್ದೆಗಳ ತಕ್ಷಣದ ಭರ್ತಿಗೆ ಆಗ್ರಹಿಸಿ, ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಶುಕ್ರವಾರ ಕಲಬುರಗಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ಜರುಗಿತು. ಈ ಕುರಿತ ವಿವರ ಇಲ್ಲಿದೆ.

ಕೇಂದ್ರವನ್ನು ಟೀಕಿಸುವುದರಲ್ಲೇ 3 ವರ್ಷ ಕಾಲಹರಣ: ಕಾಂಗ್ರೆಸ್‌ ನಾಯಕರ ವಿರುದ್ಧ ವಿಜಯೇಂದ್ರ ಕಿಡಿ

ಕೇಂದ್ರವನ್ನು ಟೀಕೆ ಮಾಡುವುದರಲ್ಲೇ 3 ವರ್ಷ ಕಾಲಹರಣ: ವಿಜಯೇಂದ್ರ

BY Vijayendra: ರಾಜ್ಯದಲ್ಲಿ ಕಾಂಗ್ರೆಸ್ಸಿನವರು, ಈ ಸರ್ಕಾರವು ಕೇಂದ್ರ ಸರ್ಕಾರವನ್ನು ಟೀಕೆ ಮಾಡುವುದರಲ್ಲೇ 3 ವರ್ಷಗಳ ಕಾಲಹರಣ ಮಾಡಿದ್ದಾರೆ. ಆದರೆ, ಮೋದಿ ಅವರ ಜನಪರ ಕಾಳಜಿ ಏನು ಎಂಬುದನ್ನು ರಾಜ್ಯದ ಮುಖ್ಯಮಂತ್ರಿಗಳು, ಅವರ ಸಚಿವ ಸಂಪುಟದ ಸದಸ್ಯರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.

IPL 2026 tickets: ನಾಳಿನ ಐಪಿಎಲ್‌ ಉದ್ಘಾಟನಾ ಪಂದ್ಯಕ್ಕೆ ಶಾಸಕರಿಗೆ 2 ಟಿಕೆಟ್‌ ನೀಡಲು ಕೆಎಸ್‌ಸಿಎ ಒಪ್ಪಿಗೆ

ನಾಳಿನ ಆರ್‌ಸಿಬಿ ಪಂದ್ಯಕ್ಕೆ ಶಾಸಕರಿಗೆ 2 ಟಿಕೆಟ್‌; ಕೆಎಸ್‌ಸಿಎ ಒಪ್ಪಿಗೆ

RCB vs SRH IPL 2026 Match: ಮಾರ್ಚ್ 28ರಂದು ನಡೆಯಲಿರುವ ಐಪಿಎಲ್ ಕ್ರಿಕೆಟ್‌ನ ಉದ್ಘಾಟನಾ ಪಂದ್ಯ ವೀಕ್ಷಿಸಲು ಶಾಸಕರಿಗೆ ತಲಾ 4 ಟಿಕೆಟ್‌ಗಳನ್ನು ನೀಡಬೇಕೆಂದು ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಆದರೆ, ಒಬ್ಬ ಶಾಸಕರಿಗೆ ಎರಡು ಟಿಕೆಟ್‌ನಂತೆ ಎಲ್ಲ ಶಾಸಕರಿಗೂ ಕ್ರಿಕೆಟ್ ಮ್ಯಾಚ್ ನೋಡಲು ಅವಕಾಶ ಮಾಡಿಕೊಡುತ್ತೇವೆ ಎಂದು ಕೆಎಸ್‌ಸಿಎ ತಿಳಿಸಿದೆ.

ಅಪೋಲೋ ಆಸ್ಪತ್ರೆಯಲ್ಲಿ 1,000 ಟ್ರಾನ್ಸ್‌ ಕ್ರೇನಿಯಲ್ ಡಾಪ್ಲರ್ ಪ್ರಕ್ರಿಯೆ ಪೂರ್ಣ: ಪಾರ್ಶ್ವವಾಯು ರೋಗಪತ್ತೆಯಲ್ಲಿ ಮಹತ್ವದ ಸಾಧನೆ

1,000 ಟ್ರಾನ್ಸ್‌ ಕ್ರೇನಿಯಲ್ ಡಾಪ್ಲರ್ ಪ್ರಕ್ರಿಯೆ ಪೂರ್ಣ

ಈ 1,000 ಪ್ರಕ್ರಿಯೆಗಳ ಅವಧಿಯಲ್ಲಿ, ಟಿಸಿಡಿ ತಂತ್ರಜ್ಞಾನವು ಆಸ್ಪತ್ರೆಯಲ್ಲಿ ಸಾಮಾನ್ಯ ಮತ್ತು ಸುಧಾ ರಿತ ಪಾರ್ಶ್ವವಾಯು ಮೌಲ್ಯಮಾಪನ ಮಾಡಲು ಅನುವು ಮಾಡಿಕೊಟ್ಟಿದೆ. ಇದರಲ್ಲಿ ತೀವ್ರ ಪಾರ್ಶ್ವ ವಾಯುವಿಗೆ ಒಳಗಾದ 350ಕ್ಕೂ ಹೆಚ್ಚು ರೋಗಿಗಳ ಮೇಲ್ವಿಚಾರಣೆಯನ್ನೂ ಮಾಡಲಾಗಿದೆ. ಈ ತಂತ್ರ ಜ್ಞಾನವು ಮೆದುಳಿನ ಒಳಗಿನ ರಕ್ತನಾಳಗಳ ಸಂಕುಚಿತಗೊಳ್ಳುವಿಕೆ, ಅಡೆತಡೆಗಳು ಮತ್ತು ರಕ್ತಪರಿಚಲನೆ ಯ ಅಸಮಾನತೆಯನ್ನು ತ್ವರಿತವಾಗಿ ಗುರುತಿಸಲು ಸಹಾಯ ಮಾಡಿದೆ.

SSLC Exam: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮಹತ್ವದ ಬದಲಾವಣೆ; ಈ ವರ್ಷದಿಂದ ಹಿಂದಿ ಭಾಷೆ ಅಂಕಗಳಿಗೆ ಕೊಕ್‌!

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿ ಭಾಷೆ ಅಂಕಗಳಿಗೆ ಕೊಕ್‌!

ನಮ್ಮಲ್ಲಿ ಸದ್ಯಕ್ಕೆ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಆದರೆ ಹಿಂದಿ ಭಾಷೆಯ ಅಂಕಗಳನ್ನು ಫಲಿತಾಂಶದಲ್ಲಿ ಅಂಕಗಳ ಬದಲಿಗೆ ಗ್ರೇಡ್ ರೂಪದಲ್ಲಿ ನೀಡುವುದರಿಂದ ವಿದ್ಯಾರ್ಥಿಗಳ ಮೇಲಿನ ಒತ್ತಡ ಕಡಿಮೆಯಾಗಲಿದೆ. ಈ ವರ್ಷದಿಂದಲೇ ಈ ಎಲ್ಲಾ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಮಧು ಬಂಗಾರಪ್ಪ ತಿಳಿಸಿದ್ದಾರೆ.

Ricky Rai Case: ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಕೇಸ್‌ ಬಳಿಕ ರಿಕ್ಕಿ ರೈ ವಿರುದ್ಧ ಮತ್ತೊಂದು ಎಫ್‌ಐಆರ್‌; ಕಾರಿನ ರಿಜಿಸ್ಟರ್‌ ಮಾಡಿಸಿಲ್ಲ, ಟ್ಯಾಕ್ಸ್‌ ಕೂಡ ಕಟ್ಟಿಲ್ಲ!

ಕಾರು ಡ್ರಿಫ್ಟಿಂಗ್ ಕೇಸ್‌ ಬಳಿಕ ರಿಕ್ಕಿ ರೈ ವಿರುದ್ಧ ಮತ್ತೊಂದು ಎಫ್‌ಐಆರ್‌

Lamborghini stunt case: ದೆಹಲಿಯಲ್ಲಿ ಆರ್‌ಟಿಒ ಹರಾಜಿನಲ್ಲಿ ಲ್ಯಾಂಬೋರ್ಗಿನಿ ಕಾರು ಖರೀದಿಸಿದ್ದ ರಿಕ್ಕಿ ರೈ, ಬಳಿಕ ಕಲರ್ ಬದಲಿಸಿ, ಅದಕ್ಕೆ ಫ್ಯಾನ್ಸಿ ನಂಬರ್ ಪಡೆದಿದ್ದಾರೆ. ಆದರೆ, ಕರ್ನಾಟಕದಲ್ಲಿ ರಿಜಿಸ್ಟರ್ ಮಾಡಿಸದೆ ತೆರಗೆ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

Self Harming: ಆ್ಯಪಲ್ ಕಂಪನಿ ಉದ್ಯೋಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಆ್ಯಪಲ್ ಕಂಪನಿ ಉದ್ಯೋಗಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ

ಮೃತ ಯುವತಿಯನ್ನು ಯಶಸ್ವಿನಿ (22) ಎಂದು ಗುರುತಿಸಲಾಗಿದೆ. ಯುವತಿ ಸ್ನಾನದ ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆ ಕಳೆದ ಐದು ತಿಂಗಳಿಂದ ದೊಡ್ಡಬಳ್ಳಾಪುರದಲ್ಲಿರುವ ಆ್ಯಪಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

Stabbing at spot: ಭಟ್ಕಳದಲ್ಲಿ ಸಣ್ಣ ವಿಚಾರಕ್ಕೆ ಜಗಳ : ಚಾಕು ಇರಿತ

ಭಟ್ಕಳದಲ್ಲಿ ಸಣ್ಣ ವಿಚಾರಕ್ಕೆ ಜಗಳ : ಚಾಕು ಇರಿತ

ನಂತರ ಅವಾಚ್ಯ ಪದಗಳಿಂದ ನಿಂದಿಸಿ, ದೂರುದಾರನ ಜೊತೆಗಿದ್ದ ತೌಸಿಫ್ ಖತೀಬ್ ಅವರ ಹೊಟ್ಟೆ ಭಾಗಕ್ಕೆ ಹಾಗೂ ಮಹಮ್ಮದ್ ಜುಪಾಪ್ ಅರ್ಮರ್ ಅವರ ಕುತ್ತಿಗೆ ಭಾಗಕ್ಕೆ ಚಾಕುವಿನಿಂದ ಇರಿದು ಗಾಯಪಡಿಸಿದ್ದಾರೆ. ಈ ವೇಳೆ ಗಾಯಾಳು ತೌಸಿಫ್ ಖತೀಬ್ ಅವರ ಬಳಿ ಇದ್ದ ಬೆಲೆ ಬಾಳುವ ವಾಚ್ ಹಾಗೂ ನಗದು ಹಣ ಕಳೆದುಹೋಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ

Bomb threat: ನಿನ್ನೆ ವಿದ್ಯಾರ್ಥಿನಿಗೆ ಪ್ರೊಫೆಸರ್‌ ಪ್ರಪೋಸ್‌ ಮಾಡಿ ಏಟು ತಿಂದ ಕಾಲೇಜಿಗೆ ಇಂದು ಬಾಂಬ್‌ ಬೆದರಿಕೆ!

ಗೃಹಮಂತ್ರಿ ಪರಮೇಶ್ವರ್ ಒಡೆತನದ ಮೆಡಿಕಲ್‌ ಕಾಲೇಜಿಗೆ ಬಾಂಬ್‌ ಬೆದರಿಕೆ!

ಬಾಂಬ್ ಬೆದರಿಕೆ ಈ ಹಿಂದಿನ ಘಟನೆಯೊಂದಿಗೆ ಸಂಬಂಧ ಹೊಂದಿದೆ ಎಂಬ ಬಗ್ಗೆ ಅನುಮಾನ ಮೂಡಿಲ್ಲವಾದರೂ, ಪೊಲೀಸರು ಎಲ್ಲ ಆಯಾಮಗಳ್ನು ಪರಿಶೀಲಿಸುತ್ತಿದ್ದಾರೆ. ಕಾಲೇಜ್ ಆವರಣದಲ್ಲಿ ಬಾಂಬ್ ಸ್ಕ್ವಾಡ್ ಮತ್ತು ಡಾಗ್ ಸ್ಕ್ವಾಡ್ ತಂಡಗಳು ತೀವ್ರ ಪರಿಶೀಲನೆ ನಡೆಸುತ್ತಿವೆ. ಪೊಲೀಸರು ಪೂರ್ಣ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಏ.5ರಂದು ವಿದ್ಯಾನಿಧಿ ಡಾ.ವಿದ್ಯಾಭೂಷಣ್ ಸಂಗೀತ ಕಛೇರಿ

ಏ.5ರಂದು ವಿದ್ಯಾನಿಧಿ ಡಾ.ವಿದ್ಯಾಭೂಷಣ್ ಸಂಗೀತ ಕಛೇರಿ

ಕ್ಯಾನ್ಸರ್, ಡಯಾಲಿಸಸ್ ರೋಗಿಗಳ ನೆರವಿಗಾಗಿ ಏ.5ರಂದು ಎ.ಡಿ.ಎ. ರಂಗಮಂದಿರದಲ್ಲಿ ವಿದ್ಯಾನಿಧಿ ಡಾ. ವಿದ್ಯಾಭೂಷಣ್ ಅವರಿಂದ ವಿಶೇಷ ಶಾಸ್ತ್ರೀಯ ಸಂಗೀತ ಕಚೇರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. “ಸೇವೆಗಾಗಿ ಸಂಗೀತ – ಸಂಗೀತದ ಮೂಲಕ ಮಾನವೀಯತೆ” ಎಂಬ ಅರ್ಥಪೂರ್ಣ ಕಾರ್ಯಕ್ರಮ ಭಾನುವಾರ ಸಂಜೆ 5:30 ಕ್ಕೆ ಎ.ಡಿ.ಎ. ರಂಗಮಂದಿರದಲ್ಲಿ ನಡೆಯಲಿದೆ.

Bengaluru Accident : ಗೂಗಲ್‌ ಮ್ಯಾಪ್‌ ನಂಬಿ ಅನಾಹುತ, ಲಾರಿ ಡಿಕ್ಕಿಯಾಗಿ ಕಾರು ಚಾಲಕ ಸಾವು, ಗೋಡೌನ್‌ಗೆ ಬೆಂಕಿ!

ಗೂಗಲ್‌ ಮ್ಯಾಪ್‌ ತಂದ ಅನಾಹುತ: ಲಾರಿ ಡಿಕ್ಕಿಯಾಗಿ ಕಾರು ಚಾಲಕ ಸಾವು

ಆಂಧ್ರ ಪ್ರದೇಶದಿಂದ ಕಬ್ಬಿಣದ ಸರಳುಗಳನ್ನು ಹೊತ್ತು ಬಂದ ಲಾರಿ ಸುಂಕದಕಟ್ಟೆ ಕಡೆಗೆ ಸಾಗುತ್ತಿತ್ತು. ಗೂಗಲ್ ಮ್ಯಾಪ್ ನೋಡಿಕೊಂಡು ಚಾಲಕ ಲಾರಿ ಓಡಿಸುತ್ತಿದ್ದ. ಕುರುಬರಹಳ್ಳಿ ಮೂಲಕ ಮ್ಯಾಪ್‌ ದಾರಿ ತೋರಿಸಿದೆ. ಆದರೆ ಕುರುಬರಹಳ್ಳಿ ಬಳಿ ಬಹುತೇಕ ಇಳಿಜಾರು ಪ್ರದೇಶ ಇದೆ. ಹಾಗಾಗಿ ತುಂಬಿದ ಲೋಡ್‌ ಇದ್ದ ಲಾರಿ ನಿಯಂತ್ರಣಕ್ಕೆ ಸಿಕ್ಕಿಲ್ಲ.

Asia Book of Record: ಏಷ್ಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ ಡ್ಯಾನೋನ್ ಇಂಡಿಯಾ

ರಕ್ತಹೀನತೆಯ ವಿರುದ್ಧ ಹೋರಾಡಲು 20,911 ಆರೋಗ್ಯ ವೃತ್ತಿಪರರಿಂದ ಬೆಂಬಲ

ಈ ಸಾಮೂಹಿಕ ಪ್ರಯತ್ನವು ವೈದ್ಯಕೀಯ ಸಮುದಾಯದೊಳಗೆ ಬಲವಾದ ಮತ್ತು ಏಕೀಕೃತ ಆಂದೋಲನವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ, ಕುಟುಂಬಗಳು ತಮ್ಮ ದೈನಂದಿನ ಜೀವನದಲ್ಲಿ ಕಬ್ಬಿಣದ ಕೊರತೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಮತ್ತು ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡುತ್ತದೆ.

ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು, ತೊಕ್ಕೊಟ್ಟಿನಲ್ಲಿ ರೌಡಿಶೀಟರ್‌ ಕಗ್ಗೊಲೆ

ಕರಾವಳಿಯಲ್ಲಿ ಮತ್ತೆ ಹರಿದ ನೆತ್ತರು, ತೊಕ್ಕೊಟ್ಟಿನಲ್ಲಿ ರೌಡಿಶೀಟರ್‌ ಕೊಲೆ

ಆರೋಪಿಗಳು ಕಾರಿನಲ್ಲಿ ಬಂದು ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ರೌಡಿಶೀಟರ್ ರಸ್ತೆಗೆ ಬಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದಾರೆ. ನಂತರ ಕಾರಿನಲ್ಲಿ ಪರಾರಿಯಾಗಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಗ್ಯಾಂಗ್ ವಾರ್ ಶಂಕೆ ವ್ಯಕ್ತವಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Self harming: ರಾಜ್ಯದಲ್ಲೊಂದು ಮನಕಲಕುವ ಘಟನೆ, ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ

ಮನಕಲಕುವ ಘಟನೆ, ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ

ಶನಿವಾರ ಸಂಜೆ ಗ್ರಾಮದ ಸಮೀಪವಿರುವ ಬಾವಿಯಲ್ಲಿ ಇಬ್ಬರು ಮಕ್ಕಳ ಶವಗಳು ತೇಲುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ತಕ್ಷಣವೇ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಇಂಡಿ ಗ್ರಾಮೀಣ ಪೊಲೀಸರು, ಪರಿಶೀಲನೆ ನಡೆಸಿದಾಗ ತಾಯಿ ಮತ್ತು ಮೂವರು ಮಕ್ಕಳ ಸಾವಿನ ಸುದ್ದಿ ದೃಢಪಟ್ಟಿದೆ.

Menstrual Leave: ಋತುಚಕ್ರ ರಜೆ ಪ್ರಶ್ನಿಸಿ 17 ಮಹಿಳೆಯರಿಂದಲೇ ಹೈಕೋರ್ಟ್‌ಗೆ ಅರ್ಜಿ!

ಋತುಚಕ್ರ ರಜೆ ಪ್ರಶ್ನಿಸಿ 17 ಮಹಿಳೆಯರಿಂದಲೇ ಹೈಕೋರ್ಟ್‌ಗೆ ಅರ್ಜಿ!

ರಾಜ್ಯ ಕಾರ್ಮಿಕ ಇಲಾಖೆಯ ಅಧಿಸೂಚನೆ ಪರೋಪಕಾರಿ ದೃಷ್ಟಿಯಿಂದ ಕೂಡಿದೆ‌‌‌. ಆದರೆ, ನೈಜವಾಗಿ ಹೇಳುವುದಾದರೆ, ಇದು ಸಮಾನತೆ ಹಕ್ಕಿಗೆ ವಿರುದ್ಧವಾಗಿದೆ. ಲಿಂಗ ತಾರತಮ್ಯಕ್ಕೆೆ ಎಡೆ ಮಾಡಿಕೊಡುತ್ತದೆ. ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ಭಾವನೆಯನ್ನು ಉದ್ಯೋಗದಾತರಲ್ಲಿ ಮೂಡಿಸುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

Professor arrest: ಕ್ಲಾಸಿನಲ್ಲಿ ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿದ ಪ್ರೊಫೆಸರ್‌ ಆರೆಸ್ಟ್‌

ಕ್ಲಾಸಿನಲ್ಲಿ ವಿದ್ಯಾರ್ಥಿನಿಗೆ ಪ್ರಪೋಸ್‌ ಮಾಡಿದ ಪ್ರೊಫೆಸರ್‌ ಆರೆಸ್ಟ್‌

ಈ ಪ್ರೊಫೆಸರ್ ಅಬ್ದುಲ್ ಈ ರೀತಿ ಮಾಡಿರುವುದು ಇದೇ ಮೊದಲಲ್ಲ. ಹೆಂಡತಿಯಿಂದ ದೂರವಾಗಿದ್ದ ಅಬ್ದುಲ್ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಈ ಹಿಂದೆ ಬೌರಿಂಗ್ ಆಸ್ಪತ್ರೆ, ತುಮಕೂರಿನ ಆಸ್ಪತ್ರೆಯಲ್ಲಿಯೂ ಕೂಡ ಇದೇ ರೀತಿ ಕೃತ್ಯ ಎಸಗಿದ್ದಾನೆ ಎಂಬ ಆರೋಪಗಳು ಈತನ ಮೇಲಿದೆ. ಇದರಿಂದ ಬುದ್ಧಿವಾದ ಹೇಳಿ ತುಮಕೂರು ಕಾಲೇಜಿನಿಂದ ಹೊರಹಾಕಿದ್ದರು.

Love Jihad: ಮೂಡಿಗೆರೆ ಲವ್‌ ಜಿಹಾದ್‌, ಹಿಂದೂ ಹುಡುಗಿಯಿಂದ ಮನೆಯಲ್ಲೇ ನಮಾಜ್!

ಮೂಡಿಗೆರೆ ಲವ್‌ ಜಿಹಾದ್‌, ಹಿಂದೂ ಹುಡುಗಿಯಿಂದ ಮನೆಯಲ್ಲೇ ನಮಾಜ್!

ಅಪ್ರಾಪ್ತ ಹುಡುಗ-ಹುಡುಗಿ ನಡುವಿನ ಪ್ರೇಮ ವಿಚಾರ ಮೂಡಿಗೆರೆ ಪಟ್ಣಣದಲ್ಲಿ ಬೂದಿ ಮುಚ್ಚಿದ ಕೆಂಡದಂತ ವಾತಾವರಣಕ್ಕೆ ಕಾರಣವಾಗಿದೆ. ಅಪ್ರಾಪ್ತ ಬಾಲಕಿಯ ತಂದೆ ಕೂಡ ಅಪ್ರಾಪ್ತ ಪ್ರೇಮಿ ವಿರುದ್ಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣ ದಾಖಲಿಸಿದ್ದಾರೆ. ಅಪ್ರಾಪ್ತ ಯುವಕ ಮೂಡಿಗೆರೆ ಮೂವರು ಹಿಂದೂ ಸಂಘಟನೆ ಕಾರ್ಯಕರ್ತರ ಮೇಲೆ ದೂರು ನೀಡಿದ್ದಾನೆ.

ಬಿಸಿಲ ಝಳ ತಪ್ಪಿಸಲು ಕೊಡೆಗಳ ವಿತರಿಸಿ ಮಾನವೀಯತೆ ಮೆರೆದ ಸಮಾಜ ಸೇವಕ ಜಯಕುಮಾರ್

ಬೀದಿಬದಿ ವ್ಯಾಪಾರಿಗಳ ನೆರವಿಗೆ ನಿಂತ ಜೈ ಫೌಂಡೇಷನ್

ಬಿಸಿಲಿನ ತಾಪದಿಂದ ವ್ಯಾಪಾರಿಗಳು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಅವರು ನೆರಳಲ್ಲಿ ನಿಂತು ವ್ಯಾಪಾರ ಮಾಡಿ ಜೀವನ ನಡೆಸುವಂತಾಗಲಿ ಎನ್ನುವ ಕಾರಣದಿಂದ ಈ ಸಣ್ಣ ಪ್ರಯತ್ನ ಮಾಡಿದ್ದೇನೆ. ನನ್ನಂತೆ ಇತರರೂ ಅಶಕ್ತರ ನೆರವಿಗೆ ನಿಲ್ಲುವ ಕೆಲಸ ಮಾಡಬೇಕಿದೆ. ಆಗಲೇ ಸಮಸಮಾಜದ ಆಶಯ ಈಡೇರಲು ಸಾಧ್ಯ.

Chikkaballapur News: ಅಂಬೇಡ್ಕರ್ ಗುರುವಾಗಿ ಪಡೆದ ಯಾವ ಚಳವಳಿಗೆ ಎಂದೂ ಸಾವಿಲ್ಲ: ಡಾ.ಎಂ.ವೆಂಕಟಸ್ವಾಮಿ

ಅಂಬೇಡ್ಕರ್ ಗುರುವಾಗಿ ಪಡೆದ ಯಾವ ಚಳವಳಿಗೆ ಎಂದೂ ಸಾವಿಲ್ಲ

ದಲಿತ ಜನಾಂಗಗಳಿಗಾಗಿ ಸೇವೆ ಸಲ್ಲಿಸಿದ ಕಾರಣಕ್ಕೆ ನನಗೆ ದಲಿತ ಚೇತನ ಪ್ರಶಸ್ತಿ ನೀಡಿದ್ದಾರೆ. ದಸಂಸ ಹುಟ್ಟಿ 50 ವರ್ಷಗಳ ಆಯುಷ್ಯ ಕಳೆದಿದೆ. ಈ ನಡುವೆ ಚಿರಸ್ಥಾಯಿಯಾಗಿ ಉಳಿಯು ವಂತಹ ಚಾರಿತ್ರಿಕ ಹೋರಾಟಗಳನ್ನು ಮಾಡಿದೆ. ಮುಂದೆಯೂ ಕೂಡ 50 ವರ್ಷ ಖಚಿತವಾಗಿ ಈ ಹೋರಾಟ ಮುನ್ನಡೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಕೋಲಾರ ಪಿಡಿಒ ಸಂಘದ ಚುನಾವಣೆ: ಜಿಲ್ಲಾಧ್ಯಕ್ಷ ಮಹೇಶ್ ಕುಮಾರ್, ಉಪಾಧ್ಯಕ್ಷೆ ಮಂಗಳಾಂಬ Video

ಕೋಲಾರ ಪಿಡಿಒ ಸಂಘದ ಜಿಲ್ಲಾಧ್ಯಕ್ಷರಾಗಿ ಮಹೇಶ್ ಕುಮಾರ್ ಆಯ್ಕೆ

ಕೋಲಾರ ಪಂಚಾಯತ್‌ ಅಭಿವೃದ್ದಿ ಸಂಘದ (PDO) ಜಿಲ್ಲಾಧ್ಯಕ್ಷರಾಗಿ ಕೆ. ಮಹೇಶ್‌ ಕುಮಾರ್, ಉಪಾಧ್ಯಕ್ಷರಾಗಿ ಎಂ. ಮಂಗಳಾಂಬ ಹಾಗೂ ಖಜಾಂಚಿಯಾಗಿ ಎನ್. ಸಂಪರಾಜ್ ಜಯಭೇರಿ ಭಾರಿಸಿದ್ದಾರೆ. ತಾಲೂಕು ಪಂಚಾಯತ್‌ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ಪಿಡಿಒ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹೇಶ್ ಕುಮಾರ್ 77 ಮತ, ಎ.ಚಂಗಲರಾಯಗೌಡ 42 ಮತ, ಉಪಾಧ್ಯಕ್ಷ ಸ್ಥಾನದ ಎಂ. ಮಂಗಳಾಂಬ 61 ಮತ, ಎಸ್.ಎನ್. ಮೇಘಾ 55 ಮತ, ಖಜಾಂಚಿ ಸ್ಥಾನದ ಅಭ್ಯರ್ಥಿ ಎನ್. ಸಂಪರಾಜ್ 66 ಮತ, ಆರ್.ಮಂಜುನಾಥ ಪ್ರಸಾದ್ 51 ಮತ ಪಡೆದುಕೊಂಡರು. ಆಯ್ಕೆ ವೇಳೆ ತಾ.ಪಂ. ಇಒ ಮಂಜುನಾಥ್, ಹುತ್ತೂರು ಪಿಡಿಒ ಜಿ. ಲಕ್ಷ್ಮೀ, ಐತರಾಸನಹಳ್ಳಿಯ ಜಿ.ಎಸ್. ಸತೀಶ್ ಕುಮಾರ್, ಕೊಂಡರಾಜನಹಳ್ಳಿಯ ಎಂ. ರಾಮಕೃಷ್ಣ,ಮಾರ್ಜೇನಹಳ್ಳಿಯ ಎಚ್.ಸಿ. ಮಧುಮತಿ, ಮುದುವತ್ತಿಯ ಎಚ್.ಎಂ.ರವಿ, ನರಸಾಪುರ ಎಂ. ಮುನಿರಾಜು, ಶಾಪೂರಿನ ಕೆ.ಸಿ. ಬಾಲಾಜಿ, ವಕ್ಕಲೇರಿಯ ಎ. ಭಾರತಮ್ಮ ಮತ್ತಿತರರು ಉಪಸ್ಥಿತರಿದ್ದರು.

Deputy Commissioner G.Prabhu: ತೆರೆದ ಕೊಳವೆ ಬಾವಿಗಳಿಂದಾಗುವ ಅವಘಡಗಳನ್ನು ಸಹಿಸಲ್ಲ: ಜಿಲ್ಲಾಧಿಕಾರಿ ಜಿ.ಪ್ರಭು

ತೆರೆದ ಕೊಳವೆ ಬಾವಿಗಳಿಂದಾಗುವ ಅವಘಡಗಳನ್ನು ಸಹಿಸಲ್ಲ

ಜಿಲ್ಲೆಯಲ್ಲಿ ಮುಂಗಾರು ಮಾನ್ಸೂನ್ ಮಳೆ ಬರುವವರೆಗೂ ಮುಂದಿನ 3 ರಿಂದ 4 ತಿಂಗಳು ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ನೀರು ಪೂರೈಕೆಯಲ್ಲಿ ವ್ಯತ್ಯಯ ಆಗದಂತೆ  ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಲ ಜೀವನ್ ಮಿಷನ್ ಯೋಜನೆಯ ಅನುಷ್ಠಾನದ ಕಾರ್ಯಪಾಲಕ ಅಭಿಯಂತರರು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು

ಮಾರ್ಚ್‌ 27ರ ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆ; ಕಾರಣವೇನು?

ನಾಳೆಯ ವಿಶೇಷ ಸಚಿವ ಸಂಪುಟ ಸಭೆ ಮುಂದೂಡಿಕೆ

Special Cabinet Meeting: ಬಾಗಲಕೋಟೆ ಮತ್ತು ದಾವಣೆಗೆರೆ ದಕ್ಷಿಣ ಕ್ಷೇತ್ರಗಳಿಗೆ ಉಪ ಚುನಾವಣೆ (Byelection) ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ (ಮಾರ್ಚ್‌ 26) ಮಧ್ಯಾಹ್ನ 12 ಗಂಟೆಗೆ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯನ್ನು ಮುಂದೂಡಲಾಗಿದೆ ಎಂದು ಸರ್ಕಾರದ ಅಪರ ಕಾರ್ಯದರ್ಶಿ ಆರ್‌. ಚಂದ್ರಶೇಖರ್‌ ತಿಳಿಸಿದ್ದಾರೆ.

Loading...