ʼಧರ್ಮಶ್ರೀʼಗೆ 65 ವರ್ಷ! ನಾಳೆ ಬೆಂಗಳೂರಿನಲ್ಲಿ ಭೈರಪ್ಪ ಸಾಹಿತ್ಯ ಸ್ಮರಣೆ
ಧರ್ಮಶ್ರೀ ಕಾದಂಬರಿ ಎಸ್ ಎಲ್ ಭೈರಪ್ಪ ಅವರ ಮಹತ್ವದ ಕಾದಂಬರಿಗಳಲ್ಲಿ ಒಂದಾಗಿದ್ದು, ಅದನ್ನು ಅವರು ಬರೆದು 65 ವರ್ಷಗಳಾಗಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜ್ ಸಭಾಂಗಣದಲ್ಲಿ ಏ.18ರಂದು ಶನಿವಾರ ಸಂಜೆ 5 ಗಂಟೆಗೆ ಎಸ್ ಎಲ್ ಭೈರಪ್ಪ ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.