ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

80ನೇ ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಡಿ ಕೆ ಶಿವಕುಮಾರ್‌ ಮಾಡಿದ ಪ್ರಮುಖ ಘೋಷಣೆ ಏನು?

ಸ್ವಾತಂತ್ರ್ಯೋತ್ಸವದಲ್ಲಿ ಸಿಎಂ ಮಾಡಿದ ಪ್ರಮುಖ ಘೋಷಣೆ ಏನು?

CM DK Shivakumar: 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಇಂದು ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಪೆರೇಡ್ ಮೈದಾನದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ರಾಜ್ಯದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ: ನಗರ ಸಂಚಾರಿ ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಮೆಚ್ಚುಗೆ

ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ: ಕಟ್ಟುನಿಟ್ಟಿನ ಕ್ರಮಕ್ಕೆ ಮೆಚ್ಚುಗೆ

ನಗರದಲ್ಲಿ ಹೆಚ್ಚುತ್ತಿರುವ ಸಂಚಾರಿ ದಟ್ಟಣೆ, ಅತಿ ವೇಗದ ಚಾಲನೆ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅವರ ಮಾರ್ಗದರ್ಶನದಲ್ಲಿ ನಗರ ಸಂಚಾರಿ ಠಾಣೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

"ಹರ್ ಘರ್ ತಿರಂಗಾ-ಹರ್ ಮನ್ ತಿರಂಗಾ"ಕ್ಕೆ ಪ್ರೇರಣೆಯಾದ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ

ದೆಹಲಿಯಲ್ಲಿ ರಕ್ಷಣಾ ಸಿಬ್ಬಂದಿ ಜತೆ ಸೇರಿ ಸಚಿವರಿಂದ ಧ್ವಜಾರೋಹಣ

ದೆಹಲಿಯ ಗೃಹ ಕಚೇರಿಯಲ್ಲಿ ಸಚಿವರು ರಕ್ಷಣಾ ಸಿಬ್ಬಂದಿ ಮತ್ತು ಸಹೋದ್ಯೋಗಿಗಳ ಜತೆ ಸೇರಿ ಧ್ವಜಾರೋಹಣ ನೆರವೇರಿಸಿದರೆ, ಹುಬ್ಬಳ್ಳಿ ಕಚೇರಿಯಲ್ಲಿ 'ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಗೌರವ, ಸಮಾನ ಅವಕಾಶ ಲಭಿಸಬೇಕೆಂಬ ಆಶಯ-ಸಂದೇಶದೊಂದಿಗೆ ಸವಿತಾ ಸಮಾಜ, ಹಡಪದ ಸಮಾಜದ ಮುಖಂಡರಿಂದಲೇ ಧ್ವಜಾರೋಹಣ ನೆರವೇರಿಸಿ ಪ್ರೇರಣೆಯಾದರು.

MLA K N Rajanna: ದೇಶದ ಯುವಶಕ್ತಿ ದುಶ್ಚಟಗಳಿಗೆ ಬಲಿಯಾಗದೆ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಾಗಿದೆ: ಶಾಸಕ ಕೆ.ಎನ್.ರಾಜಣ್ಣ

ದೇಶದ ಯುವಶಕ್ತಿ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕಾಗಿದೆ

ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ರಾಷ್ಟ್ರಧ್ವಜ ಧ್ವಜ ರೋಹಣ ನೆರವೇರಿಸಿ ತಮ್ಮ ಸಂದೇಶ ದಲ್ಲಿ ಮಾತನಾಡಿ 2047 ರ ಹೊತ್ತಿಗೆ ಯುವಕರಿಂದ ವಿಕಸಿತ ಭಾರತ ನಿರ್ಮಾಣದ ಕನಸನ್ನು ದೇಶ ಹೊಂದಿದೆ.. ಭಾರತದಲ್ಲಿ, 37 ಕೋಟಿಗೂ ಅಧಿಕ ಯುವಕರಿದ್ದಾರೆ.‌ ಯುವಕರ ವಿಶೇಷ ಶಕ್ತಿ ಸಾಮರ್ಥ್ಯ ಮಾಹಿತಿ, ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶಿಷ್ಟವಾದ ಪ್ರತಿಭೆಯ ಮೂಲಕ ಹೆಸರು ಮಾಡಿದ್ದಾರೆ ಎಂದರು

D.S. Malagi: ಆದಿ ಜಾಂಬವ ಸಮಾಜದ ಹಿರಿಯ ಮುಖಂಡ ಡಿ.ಎಸ್. ಮಾಳಗಿ ನಿಧನ

ಆದಿ ಜಾಂಬವ ಸಮಾಜದ ಹಿರಿಯ ಮುಖಂಡ ಡಿ.ಎಸ್. ಮಾಳಗಿ ನಿಧನ

ಸವಣೂರು ತಾಲ್ಲೂಕಿನ ತೇವರಮೆಳ್ಳಿಹಳ್ಳಿ ಗ್ರಾಮದವರಾದ ಡಿ.ಎಸ್. ಮಾಳಗಿ ಅವರು ಆದಿ ಜಾಂಬವ ಹಾಗೂ ಶೋಷಿತ ಸಮುದಾಯದ ಹಕ್ಕುಗಳಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಿಕೊಂಡು ಬಂದಿದ್ದರು. ರಾಜ್ಯ ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು, ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಗತಿಗೆ ಒತ್ತು ನೀಡಿದ್ದರು

ಮುಂಗಾರು ಬೆಳೆಗೆ ಭದ್ರೆ ಹರಿದು ಬರುವಳೇ?

ಮುಂಗಾರು ಬೆಳೆಗೆ ಭದ್ರೆ ಹರಿದು ಬರುವಳೇ?

ಭತ್ತದ ಬೆಳೆಗೆ ನೀರು ಕೊಟ್ಟರೆ ಬೇಸಿಗೆಗೆ ತೊಂದರೆಯಾಗುತ್ತದೆ. ಅಲ್ಲದೆ, ಈಗಾಗಲೇ ನಾಟಿ ಮಾಡುವ ಸಮಯದಲ್ಲಿ ವಿಳಂಬವಾಗಿದೆ. ಹಾಗಾಗಿ, ನೀರು ಹರಿಸುವುದು ಬೇಡ. ಜತೆಗೆ, ಮಳೆಯ ಕೊರತೆ ಮುಂದುವರಿದು, ಜಲಾಶಯಕ್ಕೆ ಸಾಕಷ್ಟು ಒಳ ಹರಿವು ಬರದೇ ಇದ್ದರೆ ಬೇಸಿಗೆಗೆ ಹನಿ ನೀರಿಗೂ ತಾತ್ವರ ವಾಗಲಿದೆ. ಆದ್ದರಿಂದ ನೀರು ಹರಿಸಬಾರದು ಎಂದು ಕೆಲ ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ.

ಕಾಡುಗಳ್ಳರ ಮೇಲೆ ಮೇಲೆ ಅರಣ್ಯ ಸಿಬ್ಬಂದಿ ಗುಂಡಿನ ದಾಳಿ; ಮೂವರು ಸಾವು

ಕಾಡುಗಳ್ಳರ ಮೇಲೆ ಮೇಲೆ ಅರಣ್ಯ ಸಿಬ್ಬಂದಿ ಗುಂಡಿನ ದಾಳಿ; ಮೂವರು ಸಾವು

Chamarajanagar News: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಶಂಕಿತ ಬೇಟೆಗಾರರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

15 ಸಾವಿರ ಹೊಸ ಬಸ್ ಖರೀದಿಗೆ ಚಾಲನೆ: ಬೈರತಿ ಸುರೇಶ್

ಚಿಕ್ಕಬಳ್ಳಾಪುರದಲ್ಲಿ ಧ್ವಜಾರೋಹಣ ನೆರವೇರಿಸಿದ ಸಾರಿಗೆ ಸಚಿವರು

ರಾಜ್ಯದ ಗ್ರಾಮಾಂತರ ಪ್ರದೇಶಗಳೂ ಸೇರಿ ಸಾರಿಗೆ ವ್ಯವಸ್ಥೆ ವಂಚಿತ ಪ್ರದೇಶಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಸ್ವಾಮ್ಯದ ನಾಲ್ಕು ಸಾರಿಗೆ ನಿಗಮಗಳ ಮೂಲಕ ಸುಮಾರು 15 ಸಾವಿರ ಹೊಸ ಬಸ್ ಗಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ (Byrati Suresh)ತಿಳಿಸಿದ್ದಾರೆ.

ಭೂ ಒತ್ತುವರಿ ತೆರವು, ಬದ್ಧತೆ ಮೆರೆದ ಡಾ.ಪ್ರತಿಭಾ

ಭೂ ಒತ್ತುವರಿ ತೆರವು, ಬದ್ಧತೆ ಮೆರೆದ ಡಾ.ಪ್ರತಿಭಾ

ಜಮೀನು ಒತ್ತುವರಿ ತೆರವು ಸಂಬಂಧ ಪ್ರಕರಣ ದಾಖಲಿಸುವುದು ಕೇವಲ ನಾಲ್ಕು ದಿನ ಮಾತ್ರ. ನಂತರ ಎಲ್ಲವೂ ಮೌನ ವಾಗಲಿದೆ ಎಂದು ಲಘುವಾಗಿ ಮಾತನಾಡಿದವರೇ ಹೆಚ್ಚು. ಆದರೆ ಈಗ ಹಾಗೆ ಮಾತನಾಡಿದವರೆಲ್ಲರೂ ಅಚ್ಚರಿಪಡುವ ರೀತಿ ಸರಕಾರಿ ಜಮೀನು ಅತಿಕ್ರಮಣ ಮಾಡುವವರಲ್ಲಿ ನಡುಕ ಹುಟ್ಟಿಸಿ ಯಾರ ಟೀಕೆಗೂ ಅಥವಾ ಹೊಗಳಿಕೆಗೂ ಲಕ್ಷ್ಯ ನೀಡದೆ ಒತ್ತುವರಿ ತೆರವನ್ನು ಅತ್ಯಂತ ಧೈರ್ಯದಿಂದ ನಡೆಸುತ್ತಿದ್ದಾರೆ

ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ ರಿಲೀಸ್‌; ಜಮೀರ್‌ ಬದಲು ರಿಜ್ವಾನ್‌ಗೆ ಅವಕಾಶ

ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ ರಿಲೀಸ್‌ ಮಾಡಿದ ಸರ್ಕಾರ

District in-Charge Ministers List: ಸಚಿವ ಜಮೀರ್ ಅಹ್ಮದ್‌ ವಿಜಯನಗರ ಜಿಲ್ಲಾ ಉಸ್ತುವಾರಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಜವಾಬ್ದಾರಿ ಬೇಡ ಎಂಬ ಚರ್ಚೆಯ ಬೆನ್ನಲ್ಲೇ ಇದೀಗ ಸರ್ಕಾರ ಜಿಲ್ಲಾವಾರು ಹೊಸ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್‌ ಮಾಡಿದೆ.

Varamahalakshmi festival gift: ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಕೊಡುಗೆ

ಸಾರಿಗೆ ನೌಕರರಿಗೆ ವರಮಹಾಲಕ್ಷ್ಮಿ ಹಬ್ಬದ ಕೊಡುಗೆ

ರಾಜ್ಯ ಸರ್ಕಾರ 2025 ರಲ್ಲಿ ವೇತನ ಪರಿಷ್ಕರಣೆ ಮಾಡಿದ್ದರಿಂದ 1221 ಕೋಟಿ ರೂಪಾಯಿಗಳನ್ನು ನೌಕರ ರಿಗೆ ಪಾವತಿಸಬೇಕಿದ್ದು, ಅದರಲ್ಲಿ 450 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದೆ. ಇನ್ನೂ 821 ಕೋಟಿ ರೂಪಾಯಿಗಳು ಬಾಕಿ ಇದ್ದ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು, ತಕ್ಷಣವೇ 170 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.

ಮಹಿಳಾ ಸೇವಾ ಸಮಾಜದಲ್ಲಿ ಪಾರಂಪರಿಕ ಶೈಕ್ಷಣಿಕ ಮೌಲ್ಯ ಮತ್ತು ಆಧುನಿಕ ವಿಜ್ಞಾನದ ಸಮ್ಮಿಲನ

ಮಹಿಳಾ ಸೇವಾ ಸಮಾಜದಲ್ಲಿ ಆಧುನಿಕ ವಿಜ್ಞಾನದ ಸಮ್ಮಿಲನ

ವಿಜ್ಞಾನ ಕಲಿಕೆಯನ್ನು ಹೆಚ್ಚು ಕ್ರಿಯಾಶೀಲ ಹಾಗೂ ಆಕರ್ಷಕವಾಗಿಸಲು 'ಸೈಕ್ರಾಫ್ಟ್' ಸಂಸ್ಥೆ ತಯಾರಿಸಿದ ವಿಶೇಷ ವಿಜ್ಞಾನ ಪ್ರಯೋಗ ಕಿಟ್‌ಗಳನ್ನು ಪರಿಚಯಿಸಿರುವುದು ಇಲ್ಲಿನ ಪ್ರಮುಖ ಯೋಜನೆಯಾಗಿದೆ. 1974 ರ ಎಸ್‌ಎಸ್‌ಎಲ್‌ಸಿ ತರಗತಿಯ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲಾ ಜೀವನದ 50 ವರ್ಷಗಳ ನೆನಪಿಗಾಗಿ (ಸುವರ್ಣ ಮಹೋತ್ಸವ), ತಮ್ಮ ಸಂಸ್ಥೆಗೆ ಈ ಕಿಟ್‌ಗಳನ್ನು ನೀಡಿದರು.

2047ರ ವೇಳೆಗೆ ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಗುರಿ; ಸಿಎಂ ಡಿಕೆ ಶಿವಕುಮಾರ್‌

ಕರ್ನಾಟಕವನ್ನು 3 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಗುರಿ; ಸಿಎಂ

ದೇಶದ ಸ್ವಾತಂತ್ರ್ಯದ 80ನೇ ವರ್ಷಾಚರಣೆಯ ಸಂದರ್ಭದಲ್ಲಿ ರಾಜ್ಯದ ಜನತೆಗೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌ ಶುಭಾಶಯ ಕೋರಿದ್ದಾರೆ, ಈ ಕುರಿತು ಮಾತನಾಡಿದ ಸಿಎಂ, ಸಮಾನತೆ, ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಆಧಾರವಾಗಿಟ್ಟುಕೊಂಡು ಕರ್ನಾಟಕವನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪವನ್ನು ವ್ಯಕ್ತಪಡಿಸಿದರು.

‌ಆರಂಭದಲ್ಲೇ ವಿವಾದದ ಕಿಡಿ ಹೊತ್ತಿಸಿದ ಜಮೀರ್

ಆರಂಭದಲ್ಲೇ ವಿವಾದದ ಕಿಡಿ ಹೊತ್ತಿಸಿದ ಜಮೀರ್

ಪಾಕ್ ಪರ ಘೋಷಣೆ ಕೂಗಿದರೂ ಸುಮ್ಮನಿದ್ರಿ. ಧ್ವಜಾರೋಹಣಕ್ಕೆ ಒಬ್ಬ ಸಚಿವ ಹೋಗಲ್ಲ ಅಂದ್ರೂ ಸುಮ್ಮನೆ ಇರುತ್ತೀರಾ? ಎಂದು ಸಚಿವ ಜಮೀರ್ ವಿರುದ್ಧ ಸುನೀಲ್ ಕುಮಾರ್ ವಾಗ್ದಾಳಿ ನಡೆಸಿದರು. ಸಚಿವ ಜಮೀರ್ ಪರ ಡಿಸಿಎಂ ಜಿ.ಪರಮೇಶ್ವರ್ ಸ್ಪಷ್ಟನೆಗೆ ಪ್ರಯತ್ನಿಸುತ್ತಾ, ಸಚಿವ ಜಮೀರ್ ಮನವಿ ಕೊಟ್ಟಿರುವುದು ಬೇರೆ ಜಿಲ್ಲಾ ಉಸ್ತುವಾರಿ ಕೊಡಿ ಅಂತ. ಇದರಲ್ಲಿ ಬೇರೇನು ಇಲ್ಲ ಎಂದು ಸಮರ್ಥಿಸಿ ಕೊಂಡರು. ಇದಕ್ಕೆ ಆಕ್ಷೇಪಿಸಿದ ಸುನಿಲ್ ಕುಮಾರ್, ನೀವು ಸುಮ್ಮನೆ ಸಮರ್ಥನೆ ಮಾಡಬೇಡಿ. ರಾಷ್ಟ್ರ ಧ್ವಜ ಹಾರಿಸಲು ಸಮಯ ಇಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.

ವಿಧಾನಸಭಾಧ್ಯಕ್ಷರಾಗಿ ರೋಣ ಶಾಸಕ ಜಿ.ಎಸ್.ಪಾಟೀಲ್ ಅವಿರೋಧ ಆಯ್ಕೆ, ಮೇಲ್ಮನೆ ನೂತನ ಸಭಾಪತಿಯಾಗಿ ಸಲೀಂ ಆಯ್ಕೆ

ವಿಧಾನಸಭಾಧ್ಯಕ್ಷರಾಗಿ ರೋಣ ಶಾಸಕ ಜಿ.ಎಸ್.ಪಾಟೀಲ್ ಅವಿರೋಧ ಆಯ್ಕೆ

ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಶಾಸಕರ ಗೈರಿನ ನಡುವೆಯೇ ಜಿ.ಎಸ್.ಪಾಟೀಲ್ ಅವರು ಸಭಾಧ್ಯಕ್ಷರಾಗಿ ಆಯ್ಕೆಯಾದರು. ಇನ್ನು ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್‌ನ ಹಿರಿಯ ಸದಸ್ಯ ಸಲೀಂ ಅಹ್ಮದ್ ಅವರು ಬಿಜೆಪಿಯ ಪಿ.ಎಚ್.ಪೂಜಾರ್ ಅವರನ್ನು ಎಂಟು ಮತಗಳ ಅಂತರದಿಂದ ಸೋಲಿಸಿ ಮೇಲ್ಮ ನೆಯ ನೂತನ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಸಲೀಂ ಅಹ್ಮದ್ ಪರ 38 ಮತಗಳು ಚಲಾವಣೆಯಾದರೆ, ಪೂಜಾರ್ ಪರ 30 ಮತಗಳು ಬಂದವು.

Suspected Terrorist: ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ; ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ!

ಭಯೋತ್ಪಾದಕರ ಜತೆ ಸಂಪರ್ಕ; ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ!

Bengaluru News: ‌ಪಶ್ಚಿಮ ಬಂಗಾಳದ ಉತ್ತರ ಪರಗಣ ಮೂಲದ ಶಂಕಿತ ಉಗ್ರನನ್ನು ಖಚಿತ ಮಾಹಿತಿ ಆಧರಿಸಿ ಡಿಸಿಪಿ ನಾರಾಯಣ್‌ ನೇತೃತ್ವದ ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. ಈ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಜಠರಾಗ್ನಿಯೇ ದೈವಿಕ ಶಕ್ತಿ; ಆಹಾರ ಸೇವಿಸುವಾಗಿನ ಭಾವವೇ ಮನಸ್ಸಿಗೆ ಆಧಾರ: ರಾಘವೇಶ್ವರ ಭಾರತೀ ಶ್ರೀ

ಆಹಾರ ಸೇವಿಸುವಾಗಿನ ಭಾವವೇ ಮನಸ್ಸಿಗೆ ಆಧಾರ: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ಹಸಿವು ಎಂಬುದು ಸಾಕ್ಷಾತ್ ಪರಮಾತ್ಮನೇ ಆಗಿದ್ದು, ಜಠರಾಗ್ನಿಯು ಪಿತ್ತರೂಪದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಅದರ ಮೂಲ ಸ್ವರೂಪ ದೈವಿಕವಾಗಿದೆ. ಜಠರಾಗ್ನಿಯು ಜೀವಶಕ್ತಿಯ ಕೇಂದ್ರವಾಗಿದ್ದು, ಈ ಕುರಿತಾಗಿ ಶೃತಿಸ್ಮೃತಿಗಳ ಉಲ್ಲೇಖಗಳಿವೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

Ricky Kej: ಸದ್ಗುರುಗಳ ನೇತೃತ್ವದ ಸಾಯಿ ಸಿಂಫೋನಿ ಆರ್ಕೆಸ್ಟ್ರಾದೊಂದಿಗೆ ಸಹಯೋಗ ವಹಿಸುವೆ: ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ರಿಕಿ ಕೇಜ್

ಸಾಯಿ ಸಿಂಫೋನಿ ಆರ್ಕೆಸ್ಟ್ರಾದೊಂದಿಗೆ ಸಹಯೋಗ ವಹಿಸುವೆ: ರಿಕಿ ಕೇಜ್

sai symphony orchestra: ನೂರು ಕೋಟಿಗೂ ಹೆಚ್ಚು ಜನರಿರುವ ಭಾರತದಲ್ಲಿ ಒಂದೇ ಒಂದು ಸಿಂಫೋನಿ ಆರ್ಕೆಸ್ಟ್ರಾ ಇದೆ. ಅದು ಸಾಯಿ ಸಿಂಫೋನಿ ಆರ್ಕೆಸ್ಟ್ರಾ. ನಮ್ಮ ಜನರು ಇದರ ಮಹತ್ವ ಅರಿಯಬೇಕು ಎಂದು ಖ್ಯಾತ ಸಂಗೀತ ಕಲಾವಿದ ಹಾಗೂ ಹಲವು ಬಾರಿ ಗ್ರ್ಯಾಮಿ ಪ್ರಶಸ್ತಿ ಪಡೆದಿರುವ ರಿಕಿ ಕೇಜ್ ಕಿವಿಮಾತು ಹೇಳಿದ್ದಾರೆ.

ನೂತನ ಪೆಟ್ರೋಲ್ ಬಂಕ್‌ಗೆ ಭೇಟಿ ನೀಡಿ ಶುಭ ಹಾರೈಸಿದ ಗೋದಾನಿ ಹರೀಶ್ ಕೆ.ರೆಡ್ಡಿ

ನೂತನ ಪೆಟ್ರೋಲ್ ಬಂಕ್‌ಗೆ ಭೇಟಿ ನೀಡಿ ಶುಭ ಹಾರೈಸಿದ ಹರೀಶ್ ಕೆ.ರೆಡ್ಡಿ

ಹುನೆಗಲ್ ಸಮೀಪ ನೂತನವಾಗಿ ಆರಂಭಗೊಂಡಿರುವ ಪೆಟ್ರೋಲ್ ಬಂಕ್‌ಗೆ ಶ್ರೀ ಹರಿಕೃಷ್ಣ ಫೌಂಡೇಶನ್ ಅಧ್ಯಕ್ಷ ಹಾಗೂ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮುಖಂಡ ಗೋದಾನಿ ಹರೀಶ್ ಕೆ.ರೆಡ್ಡಿ ಅವರು ಭೇಟಿ ನೀಡಿ, ಸಂಸ್ಥೆಯ ಮಾಲೀಕರಾದ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗೇಶ್ ಹಾಗೂ ಅವರ ಸಹೋದರ ಎಸ್.ಎ.ಟಿ. ನಾರಾಯಣಸ್ವಾಮಿ ಅವರಿಗೆ ಶುಭ ಹಾರೈಸಿದರು.

ನೈಜಿರಿಯಾದ ಕತ್ತಲಲ್ಲಿ ಕಾರಿನ ಬಾಗಿಲು ಬಡಿದ ಮಕ್ಕಳು ಇಂದು ವೈದ್ಯರು: ಸದ್ಗುರು ಶ್ರೀ ಮಧುಸೂದನ ಸಾಯಿ

ನಮ್ಮ ಸೇವೆಗೆ ದೇಶ ಅಥವಾ ಭಾಷೆಯ ಗಡಿಗಳು ಇಲ್ಲ: ಶ್ರೀ ಮಧುಸೂದನ ಸಾಯಿ

Sadguru Sri Madhusudan Sai: "ಒನ್ ವರ್ಲ್ಡ್ ಒನ್ ಫ್ಯಾಮಿಲಿ" ಎನ್ನುವುದು ನಮಗೆ ಹೊಸ ವಿಚಾರವಲ್ಲ. "ವಸುಧೈವ ಕುಟುಂಬಕಂ" ಎನ್ನುವ ನಮ್ಮ ಋಷಿಗಳ ಆಶಯವು ಅದೇ ಆಗಿದೆ. ಒಮ್ಮೆ ನಮ್ಮ ಮನಸ್ಸಿನಲ್ಲಿ ಈ ಭಾವನೆ ಬಂದುಬಿಟ್ಟರೆ ಜಗತ್ತಿನಲ್ಲಿ ಯಾರೂ ನಮಗೆ ಸಂಬಂಧಪಡದವರು ಎನ್ನಿಸುವುದಿಲ್ಲ. ಎಲ್ಲರ ಕಷ್ಟಗಳಿಗೂ ಸ್ಪಂದಿಸುವ ಮನೋಭಾವ ಬಂದುಬಿಡುತ್ತದೆ ಎಂದು "ಒನ್ ವಲ್ಡ್ ಒನ್ ಫ್ಯಾಮಿಲಿ ಮಿಷನ್" ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.

Chikkaballapur News: ಕಚೇರಿ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಿಇಒ ಡಾ.ನವೀನ್ ಭಟ್

ಕಚೇರಿ ಕಟ್ಟಡ ಕಾಮಗಾರಿ ಪರಿಶೀಲಿಸಿದ ಸಿಇಒ ಡಾ.ನವೀನ್ ಭಟ್

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ನವೀನ್ ಭಟ್, ಭಾ.ಆ.ಸೇ., ಅವರು ಶುಕ್ರವಾರ ಚಿಕ್ಕಬಳ್ಳಾಪುರ ತಾಲ್ಲೂಕಿನ ತಿಪ್ಪೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಹಾಗೂ ಸಹಾಯಕ ನಿರ್ದೇಶಕರ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ ಯನ್ನು ವೀಕ್ಷಿಸಿ ಪರಿಶೀಲಿಸಿದರು

Pramod Muthalik: ವಾಪಸಂದ್ರ ಮೂಲ ಮಠ ಅತಿಕ್ರಮಣ ಆರೋಪ: ತೆರವುಗೊಳಿಸಿ ಕ್ರಮಕ್ಕೆ ಪ್ರಮೋದ್ ಮುತಾಲಿಕ್ ಆಗ್ರಹ

ಅತಿಕ್ರಮಣ ಆರೋಪ: ತೆರವುಗೊಳಿಸಿ ಕ್ರಮಕ್ಕೆ ಪ್ರಮೋದ್ ಮುತಾಲಿಕ್ ಆಗ್ರಹ

ಮೂಲ ಮಠವು ಕೊಂಡಲಯ್ಯ ಹಾಗೂ ನಿಡುಮಾಮಡಯ್ಯ ಜಂಗಮಾದಿಗಳಿಗೆ ಸೇರಿದ್ದು, ಅವರ ಲಿಂಗೈಕ್ಯದ ಬಳಿಕ ಸರ್ಕಾರದ ಅಧೀನಕ್ಕೆ ಬಂದಿದ್ದು, ಮಠಕ್ಕೆ ಸಂಬಂಧಿಸಿದ ದಾಖಲೆಗಳು ಮುಜರಾಯಿ ಇಲಾಖೆಯಲ್ಲಿವೆ ಎಂದು ತಿಳಿಸಿದರು. ಆದರೆ, 2007ರ ಬಳಿಕ ಬಾಗೇಪಲ್ಲಿ ತಾಲೂಕಿನ ಗೂಳೂರು ಮಠದವರು ವಾಪಸಂದ್ರ ಜಂಗಮ ಮಠಕ್ಕೆ ಅತಿಕ್ರಮವಾಗಿ ಪ್ರವೇಶಿಸಿದ್ದಾರೆ

Gauribidanur News: ಓಂ ಶಕ್ತಿ ದೇವಾಲಯದಲ್ಲಿ ಆಷಾಢ ಅಮಾವಾಸ್ಯೆ: ಭಕ್ತಿಭಾವದಿಂದ ಅಂಬಲಿ ಕಲಶೋತ್ಸವ

ಓಂ ಶಕ್ತಿ ದೇವಾಲಯದಲ್ಲಿ ಆಷಾಢ ಅಮಾವಾಸ್ಯೆ

ಮುಂಜಾನೆಯಿಂದಲೇ ದೇವಾಲಯದಲ್ಲಿ ಹೋಮ, ಹವನ ಸೇರಿದಂತೆ ವಿವಿಧ ದೇವತಾ ಕಾರ್ಯ ಗಳು ಜರುಗಿದವು. ನೂರಾರು ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿ, ಕುಂಕುಮಾ ರ್ಚನೆ ಹಾಗೂ ದೀಪ ಬೆಳಗಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು. ಇದೇ ಸಂದರ್ಭದಲ್ಲಿ ಅಂಬಳಿ ಕಲಶೋತ್ಸವ ಭಕ್ತಿಭಾವದಿಂದ ನೆರವೇರಿತು.

Rapido Cab Service: ಕರ್ನಾಟಕದಲ್ಲಿ ಕ್ಯಾಬ್ ಸೇವೆ ನೀಡಲು ರ‍್ಯಾಪಿಡೋಗೆ ಸರ್ಕಾರದಿಂದ ಪರವಾನಗಿ

ಕರ್ನಾಟಕದಲ್ಲಿ ಕ್ಯಾಬ್ ಸೇವೆ ನೀಡಲು ರ‍್ಯಾಪಿಡೋಗೆ ಸರ್ಕಾರದಿಂದ ಪರವಾನಗಿ

ರ‍್ಯಾಪಿಡೋ ಸೇವೆಯನ್ನು ನಿರ್ವಹಿಸುವ ರೋಪೆನ್ ಟ್ರಾನ್ಸ್‌ಪೋರ್ಟೇಶನ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಹೊಸ ಪರವಾನಗಿಯಿಂದ ರಾಜ್ಯದಲ್ಲಿ ತನ್ನ ಕ್ಯಾಬ್ ಕಾರ್ಯಾಚರಣೆಗೆ ನಿಯಂತ್ರಣಾತ್ಮಕ ಸ್ಪಷ್ಟತೆ ದೊರೆತಿದೆ ಎಂದು ತಿಳಿಸಿದೆ. 2015ರಲ್ಲಿ ಆರಂಭವಾದ ರ‍್ಯಾಪಿಡೋ ಸದ್ಯ ದೇಶದ 400ಕ್ಕೂ ಹೆಚ್ಚು ನಗರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

Loading...