ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕರ್ನಾಟಕ

ಬೆಳಿಗ್ಗೆ 10 ಗಂಟೆಯಾದ್ರೂ ಇಡೀ ಆಫೀಸ್‌ ಖಾಲಿ-ಖಾಲಿ; ಬೆಂಗಳೂರಿನ ಟ್ರಾಫಿಕ್‌ ಕುರಿತು ಸ್ಟಾರ್ಟ್‌ ಅಪ್‌ ಫೌಂಡರ್‌ ಹೇಳಿದ್ದೇನು?

ಬೆಂಗಳೂರಿನ ಟ್ರಾಫಿಕ್‌ ಕುರಿತು ಸ್ಟಾರ್ಟ್‌ ಅಪ್‌ ಫೌಂಡರ್‌ ಹೇಳಿದ್ದೇನು?

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಟ್ರಾಫಿಕ್‌ ಬಗ್ಗೆ ದಿನೇ ದಿನೇ ದೂರು ಕೇಳಿ ಬರುತ್ತಿರುತ್ತವೆ. ಇದೀಗ ಕಂಪನಿ ಬಾಸ್‌ ಒಬ್ಬರು ಹಂಚಿಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಟ್ರಾಫಿಕ್‌ನಿಂದಾಗಿ ಬೆಳಿಗ್ಗೆ 10. 15 ಆದರೂ ಇನ್ನೂ ಯಾರೂ ಕಚೇರಿ ತಲುಪಿಲ್ಲ ಎಂಬ ಶೀರ್ಷಿಕೆಯಡಿ ಅವರು ಫೋಟೋವನ್ನು ಹಂಚಿಕೊಂಡಿದ್ದಾರೆ.

ಹನೂರು ಎನ್‌ಕೌಂಟರ್‌ ಕೇಸ್‌: "ಅರಣ್ಯಾಧಿಕಾರಿಗಳೇ ಮೊದಲು ಗುಂಡು ಹಾರಿಸಿದ್ದು", ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿದ 4 ನೇ ವ್ಯಕ್ತಿ!

ಹನೂರು ಎನ್‌ಕೌಂಟರ್‌: ವಿಡಿಯೋ ಮಾಡಿ ಹೇಳಿಕೆ ನೀಡಿದ 4 ನೇ ವ್ಯಕ್ತಿ!

Hanur Encounter Case: ಹನೂರು ವಲಯದ ಕಾಡಿನಲ್ಲಿ ಆ.15ರಂದು ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ಮೃತಪಟ್ಟಿದ್ದರು. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಕೇಸ್‌ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಸ್ಥಳದಿಂದ ಪರಾರಿಯಾಗಿದ್ದ ಮಹಿಮಾ ದಾಸ್ ಅಜ್ಞಾತ ಸ್ಥಳದಿಂದ ವೀಡಿಯೊ ಬಿಡುಗಡೆ ಮಾಡಿ, ತನಗೆ ಜೀವ ಭಯವಿದೆ ಮತ್ತು ರಕ್ಷಣೆ ಬೇಕು ಎಂದು ಹೇಳಿಕೊಂಡಿದ್ದಾರೆ.

ರಾಜಣ್ಣ ಕೆ.ಆರ್. ನಾಮನಿರ್ದೇಶನ ರದ್ದು: ಚಿಮುಲ್ ಆಡಳಿತ ಮಂಡಳಿಗೆ ಯಲುವಳ್ಳಿ ಎನ್. ರಮೇಶ್ ನೇಮಕ

ರಾಜಣ್ಣ ಕೆ.ಆರ್. ನಾಮನಿರ್ದೇಶನ ರದ್ದು

ಈ ಕುರಿತು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯು ಆಗಸ್ಟ್ 18, 2026ರಂದು ಅಧಿಸೂಚನೆ ಹೊರಡಿಸಿದೆ. ಫೆಬ್ರವರಿ 5, 2026ರಂದು ಹೊರಡಿಸಿದ್ದ ಸರ್ಕಾರದ ಅಧಿಸೂಚನೆಯಂತೆ ಚಿಮುಲ್ ಆಡಳಿತ ಮಂಡಳಿಗೆ ಚಿಕ್ಕಬಳ್ಳಾಪುರ ತಾಲೂಕಿನ ಕಾಕಲಚಿಂತ ಗ್ರಾಮದ ಕೆ.ಆರ್. ರಾಜಣ್ಣ ಅವರನ್ನು ನಾಮನಿರ್ದೇಶನ ಮಾಡಲಾಗಿತ್ತು. ಇದೀಗ ಆ ನಾಮನಿರ್ದೇಶನವನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಿ ಸರ್ಕಾರ ಆದೇಶಿಸಿದೆ

ತಂತ್ರಜ್ಞಾನ ಬಳಸಿ ಆದರೆ ವಿವೇಕವನ್ನು ಕಳೆದುಕೊಳ್ಳಬೇಡಿ: ಉಪನ್ಯಾಸಕ ಮುನಿರಾಜು ಎಂ ಅರಿಕೆರೆ

ತಂತ್ರಜ್ಞಾನ ಬಳಸಿ ಆದರೆ ವಿವೇಕವನ್ನು ಕಳೆದುಕೊಳ್ಳಬೇಡಿ

ಇಂದು ಯುವಕರ ಮುಂದೆ ಉದ್ಯೋಗದ ವಿಚಾರದಲ್ಲಿ ಸಾಕಷ್ಟು ಸವಾಲುಗಳಿರುವಂತೆ ಸ್ಪರ್ಧೆ ಹೆಚ್ಚಾಗಿದೆ. ಹೊಸ ತಂತ್ರಜ್ಞಾನಗಳು ಬರುತ್ತಿರುವಂತೆ ಕೆಲಸಗಳ ಸ್ವರೂಪವೂ ಬದಲಾಗುತ್ತಿದೆ. ಆದ್ದರಿಂದ ಕೇವಲ ಪದವಿ ಸಾಕಾಗುವುದಿಲ್ಲ.ಅದಕ್ಕೆ ತಕ್ಕ ಕೌಶಲ್ಯ ಬೇಕು. ಕಲಿಯುವ ಮನಸ್ಸು ಬೇಕು. ಹೊಸದನ್ನು ಸ್ವೀಕರಿಸುವ ಸಾಮರ್ಥ್ಯ ಬೇಕು.ಕೌಶಲ್ಯಕ್ಕಿಂತಲೂ ಮುಖ್ಯವಾದುದು ನಿಷ್ಠೆ ಯಾಗಿದೆ

Chikkaballapur News: ಬರದ ಹೊಡೆತಕ್ಕೆ ರೈತ ಸಂಘ ಆಕ್ರೋಶ; ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಎಕೆಆರ್‌ಎಸ್ ಆಗ್ರಹ

ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲು ಎಕೆಆರ್‌ಎಸ್ ಆಗ್ರಹ

ಜಿಲ್ಲೆಯನ್ನು ಕೂಡಲೇ ಬರಪೀಡಿತ ಎಂದು ಘೋಷಿಸಿ, ರೈತರ ಎಲ್ಲ ರೀತಿಯ ಸಾಲ ಮನ್ನಾ ಹಾಗೂ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ನೂರಾರು ರೈತರು ಮಂಗಳವಾರ ಜಿಲ್ಲಾಡಳಿತ ಭವನದ ಎದುರು ಮೂರು ಗಂಟೆಗಳ ಕಾಲ ಧರಣಿ ನಡೆಸಿದರು.

ಮೈಸೂರು ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಭಿಮನ್ಯುವಿಗೆ ನಿವೃತ್ತಿ, ಭೀಮನಿಗೂ ಮಿಸ್‌ ಆಯ್ತಾ ಚಾನ್ಸ್‌?

ಮೈಸೂರು ದಸರಾ ಗಜಪಡೆ ಪಟ್ಟಿ ಬಿಡುಗಡೆ: ಅಭಿಮನ್ಯುವಿಗೆ ನಿವೃತ್ತಿ

Dussehra Jambu Savari 2026: ದಸರಾ ಮಹೋತ್ಸವ ಅಂಗವಾಗಿ ದಸರಾ ಗಜಪಡೆಯ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಅಭಿಮನ್ಯು ಆನೆಗೆ ವಿರಾಮ ನೀಡಿ ಹೊಸ ನಾಯಕತ್ವಕ್ಕೆ ಅರಣ್ಯ ಇಲಾಖೆ ಮಣೆ ಹಾಕಿದೆ. ಅರ್ಜುನನ ಬಳಿಕ ಅಭಿಮನ್ಯು ತಂಡವನ್ನು ಮುನ್ನಡೆಸಿದ್ದ. 60 ವರ್ಷ ಮೀರಿದ ಹಿನ್ನಲೆಯಲ್ಲಿ ಈ ಬಾರಿ ಅಭಿಮನ್ಯುಗೆ ವಿಶ್ರಾಂತಿ ನೀಡಲಾಗಿದೆ.

ಮಾಜಿ ಶಿಕ್ಷಣ ಸಚಿವ, ಹಿರಿಯ ಬಿಜೆಪಿ ನಾಯಕ ಬಿ.ಸಿ. ನಾಗೇಶ್ ನಿಧನ

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ

BC Nagesh: ಬಿಜೆಪಿ ನಾಯಕ, ಮಾಜಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅಸೌಖ್ಯದಿಂದ ಮಂಗಳವಾರ ಬೆಂಗಳೂರಿನಲ್ಲಿ ನಿಧನ ಹೊಂದಿದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬುಧವಾರ (ಆಗಸ್ಟ್‌ 19) ತಿಪಟೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ.

ಸೃಷ್ಟಿಯ ವೈವಿಧ್ಯತೆಯೇ ಅದ್ಭುತ, ಎಲ್ಲೆಡೆ ಸಮಾನತೆ ಹುಡುಕುವುದು ಮೂರ್ಖತನ: ರಾಘವೇಶ್ವರ ಶ್ರೀ

ಹಸಿವು, ಆಹಾರವೇ ಜೀವಿಯ ಸರ್ವಸ್ವ: ರಾಘವೇಶ್ವರ ಶ್ರೀ

Sri Raghaveshwara Bharathi Swamiji: ಎಲ್ಲ ಕಡೆಯಲ್ಲೂ ಸಮಾನತೆಯನ್ನು ಹುಡುಕುವುದು ಮೂರ್ಖತನವಾಗುತ್ತದೆ. ಸೃಷ್ಟಿಯೆಂಬುದು ವೈವಿಧ್ಯತೆಯಾಗಿದ್ದು, ಮುಕ್ತಿಯಲ್ಲಿ ಮಾತ್ರ ಏಕತೆಯನ್ನು ಕಾಣಬಹುದು. ಕೈ ಇರುವಷ್ಟು ಉದ್ದ ಮೂಗಿಲ್ಲ. ಹಾಗಾಗಿ ಎಲ್ಲೆಡೆ ಸಮಾನತೆಯನ್ನು ಹುಡುಕಲಾಗದು. ದೇಹದಲ್ಲೂ ಎಲ್ಲವೂ ಸಮಾನವಾಗಿರಲು ಸಾಧ್ಯವಿಲ್ಲ. ಆಯಾಯ ಧಾತುಗಳು ಎಷ್ಟಿರಬೇಕೋ ಅಷ್ಟಿರಬೇಕು. ಇದು ಸೃಷ್ಟಿಯ ಅದ್ಭುತ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ತಿಳಿಸಿದ್ದಾರೆ.

ʼʼಬೆಂಗಳೂರಿನ ಜನ ಪ್ರತಿಭಾವಂತರು; ಪ್ರಯಾಣ ಮಾತ್ರ ಆರೋಗ್ಯವನ್ನೇ ಕೆಡಿಸಿತುʼʼ: ಸಿಲಿಕಾನ್‌ ಸಿಟಿಯ ಬಗ್ಗೆ ದೆಹಲಿಯ ಉದ್ಯಮಿ ಹೇಳಿದ್ದೇನು?

ಬೆಂಗಳೂರಿನ ಪ್ರತಿಭೆಗಳನ್ನು ಮುಕ್ತ ಕಂಠದಿಂದ ಹೊಗಳಿದ ದೆಹಲಿ ಉದ್ಯಮಿ

Viral News: ಖ್ಯಾತ ಮಹಿಳಾ ಉದ್ಯಮಿಯೊಬ್ಬರು ಸಿಲಿಕಾನ್ ಸಿಟಿ ಬೆಂಗಳೂರಿನ ಪ್ರತಿಭೆಗಳನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ಬೆಂಗಳೂರಿನ ಉದ್ಯಮಿಗಳು, ಉತ್ಪನ್ನ ವ್ಯವಸ್ಥಾಪಕರು ಮತ್ತು ತಂತ್ರಜ್ಞಾನ ವೃತ್ತಿಪರರ ಶ್ರಮ ಅದ್ಭುತವಾದುದು. ಆದರೆ ಇಲ್ಲಿನ ದೈನಂದಿನ ಸಂಚಾರ ಹಾಗೂ ಟ್ರಾಫಿಕ್ ತಮ್ಮ ಆರೋಗ್ಯವನ್ನೇ ಹಾಳುಗೆಡವಿದೆ ಎಂದು ಹೇಳಿಕೊಂಡಿದ್ದಾರೆ.

SIR: ಕರ್ನಾಟಕದ ಮೊದಲ ಕರಡು ಮತದಾರರ ಪಟ್ಟಿಯಿಂದ ಬರೋಬ್ಬರಿ 1.08 ಕೋಟಿ ಮಂದಿಯ ಹೆಸರು ಡಿಲೀಟ್‌?

ಮತದಾರರ ಪಟ್ಟಿಯಿಂದ 1.08 ಕೋಟಿ ಮಂದಿ ಹೊರಗುಳಿಯುವ ಸಾಧ್ಯತೆ

ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಅಡಿಯಲ್ಲಿ ಮೊದಲ ಕರಡು ಮತದಾರರ ಪಟ್ಟಿಯಿಂದ ಸುಮಾರು 1.08 ಕೋಟಿ ಮತದಾರರು ಹೊರಗುಳಿಯುವ ಸಾಧ್ಯತೆಯಿದೆ. ಜೂನ್ 30ರಂದು ಆರಂಭವಾದ ಎಸ್‌ಐಆರ್ ಕಾರ್ಯದಲ್ಲಿ ಬೂತ್ ಮಟ್ಟದ ಅಧಿಕಾರಿಗಳು ಕರ್ನಾಟಕದಾದ್ಯಂತ ಮನೆ-ಮನೆಗೆ ಭೇಟಿ ನೀಡುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಹಾವೇರಿ ಜಿಲ್ಲೆಯಾದ್ಯಂತ ಶೇಕಡಾ 43ರಷ್ಟು ಮಳೆ ಕೊರತೆ; 2,058 ಕೆರೆಗಳಲ್ಲಿ 14 ಮಾತ್ರ ಭರ್ತಿ: ಕಂಗಾಲಾದ ರೈತರು

ಹಾವೇರಿ ಜಿಲ್ಲೆಯಾದ್ಯಂತ ಶೇಕಡಾ 43ರಷ್ಟು ಮಳೆ ಕೊರತೆ

Haveri News: ಹಾವೇರಿ ಜಿಲ್ಲೆಯಾದ್ಯಂತ ವಾಡಿಕೆಗಿಂತ ಶೇ. 43.15ರಷ್ಟು ಮಳೆ ಕೊರತೆ ದಾಖಲಾಗಿರುವುದು ಬರದ ಛಾಯೆ ಮತ್ತಷ್ಟು ಗಾಢವಾಗುವ ಮುನ್ಸೂಚನೆ ನೀಡಿದೆ. ಜಿಲ್ಲೆಯ 2,058 ಕೆರೆಗಳ ಪೈಕಿ ಕೇವಲ 14 ಕೆರೆಗಳು ಮಾತ್ರ ಸಂಪೂರ್ಣ ಭರ್ತಿಯಾಗಿದ್ದು, ಬಹುತೇಕ ಕೆರೆಗಳು ನೀರಿನ ಕೊರತೆಯಿಂದ ಬಳಲುತ್ತಿವೆ.

ಕನಿಷ್ಠ ವೇತನ, ಸೇವಾ ಭದ್ರತೆಗೆ ಆಗ್ರಹ; ತುಮಕೂರಿನಲ್ಲಿ ಹೊರಗುತ್ತಿಗೆ ನೌಕರರ ಪ್ರತಿಭಟನೆ

ಸೇವಾ ಭದ್ರತೆಗೆ ಆಗ್ರಹಿಸಿ ತುಮಕೂರಿನಲ್ಲಿ ಹೊರಗುತ್ತಿಗೆ ನೌಕರರ ಪ್ರತಿಭಟನೆ

Tumkur News: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಕನಿಷ್ಠ ವೇತನ ಜಾರಿಗೊಳಿಸಬೇಕು ಹಾಗೂ ಸೇವಾ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿ ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ʼʼಕುಮಾರಸ್ವಾಮಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಯೋಜನೆ ಮುಂದುವರಿಸುತ್ತೇವೆʼʼ: ಅಚ್ಚರಿಯ ಹೇಳಿಕೆ ನೀಡಿದ ಡಿ.ಕೆ. ಶಿವಕುಮಾರ್‌

ಎಚ್‌ಡಿಕೆ, ಬಿಎಸ್‌ವೈ, ಬೊಮ್ಮಾಯಿ ಅವರ ಆಲೋಚನೆ ಮುಂದುವರಿಸುತ್ತೇವೆ: ಡಿಕೆಶಿ

CM DK Shivakumar: ನಮ್ಮದು ಸಿದ್ದರಾಮಯ್ಯ ಅವರ ಸರ್ಕಾರದ ಮುಂದುವರಿದ ಭಾಗ. ಹೊಸ ಆಲೋಚನೆ ಹೊಂದಿದ್ದೇವೆ. ಈ ಹಿಂದೆ ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಅವರ ಆಲೋಚನೆಯನ್ನು ನಾವು ಬಿಡದೆ ಮುಂದುವರಿಸುತ್ತೇವೆ. ಕುಮಾರಸ್ವಾಮಿ ಅವರ ಬಿಡದಿ, ದೇವೇಗೌಡರ ನೈಸ್ ಯೋಜನೆಯನ್ನು ನಾವು ಮುಂದುವರಿಸುತ್ತೇವೆ. ಈ ಯೋಜನೆಗಳಲ್ಲಿ ತಪ್ಪಾಗಿದ್ದರೆ ಸರಿ ಮಾಡೋಣ ಎಂದು ಸಿಎಂ ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ.

Massive fire at a plastic factory: ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಭೀಕರ ಅಗ್ನಿ ಅವಘಡ, ಲಕ್ಷಾಂತರ ರೂ.ಮೌಲ್ಯದ ವಸ್ತುಗಳು ಭಸ್ಮ!

ಟಿಪ್ಪುನಗರ: ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಉರಿದ ಪ್ಲಾಸ್ಟಿಕ್ ಕಾರ್ಖಾನೆ!

ಘಟನೆ ಮಂಗಳವಾರ ಬೆಳಗಿನ ಜಾವ ಸುಮಾರು 6 ಗಂಟೆಯ ಸಮಯದಲ್ಲಿ ಚಿಂತಾಮಣಿ ನಗರದ ಟಿಪ್ಪುನಗರ ಬಡಾವಣೆಯಲ್ಲಿ ಸಂಭವಿಸಿದೆ. ಸದರಿ ಪ್ಲಾಸ್ಟಿಕ್ ಫ್ಯಾಕ್ಟರಿಯು ನಗರದ ಎಂ.ಜಿ. ರಸ್ತೆ ಯಲ್ಲಿರುವ ಫ್ರೆಂಡ್ಸ್ ಇಲಿಯಾಸ್ ಎಂಬುವರಿಗೆ ಸೇರಿದ್ದಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಫ್ಯಾಕ್ಟರಿಗೆ ವ್ಯಾಪಿ ಸಿದ್ದು, ಒಳಗಿದ್ದ ಅಪಾರ ಪ್ರಮಾಣದ ಪ್ಲಾಸ್ಟಿಕ್ ಕಚ್ಚಾ ವಸ್ತುಗಳು ಹಾಗೂ ಯಂತ್ರೋಪಕರಣಗಳು ಸುಟ್ಟು ಕರಕಲಾಗಿವೆ. ಇದರಿಂದ ಮಾಲಿಕರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ED raids in Gauribidanur: ಕೆಪಿಎಸ್ಸಿ ಹಗರಣದ ಆರೋಪ: ಗೌರಿಬಿದನೂರಿನಲ್ಲಿ ಅಭ್ಯರ್ಥಿಯ ತಂದೆ ಮನೆ ಮೇಲೆ ಇ.ಡಿ. ದಾಳಿ

ಕೆಪಿಎಸ್ಸಿ ಹಗರಣದ ಆರೋಪ: ಗೌರಿಬಿದನೂರಿನಲ್ಲಿ ಇ.ಡಿ. ದಾಳಿ

ಕೆಪಿಎಸ್ಸಿ ಪರೀಕ್ಷೆಯಲ್ಲಿ ರಾಮಕೃಷ್ಣಪ್ಪ ಅವರ ಪುತ್ರ ಲೋಕೇಶ್ ಅವರು ರಾಜ್ಯಕ್ಕೆ 27ನೇ ಶ್ರೇಣಿ ಪಡೆದಿರುವ ಹಿನ್ನೆಲೆಯಲ್ಲಿ ಈ ಪರಿಶೀಲನೆ ನಡೆದಿದೆ ಎನ್ನಲಾಗಿದೆ. ಬೆಳಿಗ್ಗೆ ಸುಮಾರು 7 ಗಂಟೆಗೆ ಮನೆಗೆ ಆಗಮಿಸಿದ ಇ.ಡಿ. ಅಧಿಕಾರಿಗಳು ವಿವಿಧ ದಾಖಲೆಗಳು ಹಾಗೂ ಸಂಬಂಧಿತ ಮಾಹಿತಿಗಳನ್ನು ಪರಿಶೀಲಿಸಿದ್ದು, ಸತತ ಏಳೆಂಟು ಗಂಟೆಗಳಿಗೂ ಹೆಚ್ಚು ಕಾಲ ತನಿಖೆ ಮುಂದುವರಿದಿದೆ.

ʼʼಜೀವ ಭಯವಿದೆʼʼ: ಹನೂರು ಶೂಟೌಟ್‌ ವೇಳೆ ಪರಾರಿಯಾಗಿದ್ದ 4ನೇ ಆರೋಪಿ ಪ್ರತ್ಯಕ್ಷ; ಅಜ್ಞಾತ ಸ್ಥಳದಿಂದ ವಿಡಿಯೊ ಮಾಡಿ ಹೇಳಿದ್ದೇನು?

ಹನೂರು ಶೂಟೌಟ್‌ ವೇಳೆ ಪರಾರಿಯಾಗಿದ್ದ 4ನೇ ಆರೋಪಿ ಪ್ರತ್ಯಕ್ಷ

Hanur Encounter: ಚಾಮರಾಜನಗರ ಜಿಲ್ಲೆಯ ಹನೂರು ಅರಣ್ಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡಿನ ದಾಳಿ ವೇಳೆ ಪರಾರಿಯಾಗಿದ್ದ ನಾಲ್ಕನೇ ಆರೋಪಿ ಮಹಿಮಾ ದಾಸ್ ಇದೀಗ ಅಜ್ಞಾತ ಸ್ಥಳದಿಂದ ವಿಡಿಯೊ ಹರಿಯಬಿಟ್ಟಿದ್ದಾನೆ. ಜತೆಗೆ ತನಗೆ ಜೀವ ಬೆದರಿಕೆ ಇದೆ ಎಂದಿದ್ದಾನೆ.

Chinthamani News: ಕೋಮು ಸೌಹಾರ್ದತೆಗೆ ಮಾದರಿಯಾಗಲಿ ಮುರುಗಮಲ್ಲ ಉರುಸ್: ಅಧಿಕಾರಿಗಳ ಸಮ್ಮುಖದಲ್ಲಿ ಶಾಂತಿ ಸಭೆ

ಮುರುಗಮಲ್ಲ ಉರುಸ್‌ಗೆ ಸಕಲ ಸಿದ್ಧತೆ: ಕಮಿಟಿ ಸಭೆ ಯಶಸ್ವಿ

ಆಗಮಿಸುವ ಭಕ್ತಾದಿಗಳಿಗೆ ಶುದ್ಧ ಕುಡಿಯುವ ನೀರು, ಸಾರ್ವಜನಿಕ ಶೌಚಾಲಯ ಹಾಗೂ ಪಾರ್ಕಿಂಗ್ ವ್ಯವಸ್ಥೆ ಒದಗಿಸಬೇಕು. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಹಾಗೂ ಕಾಣೆ ಯಾದ ಮಕ್ಕಳು ಅಥವಾ ವಸ್ತುಗಳ ಕುರಿತು ಮಾಹಿತಿ ನೀಡಲು ಧ್ವನಿವರ್ಧಕಗಳ ಸೌಲಭ್ಯವನ್ನು ಸದಾ ಸಿದ್ಧವಾಗಿಟ್ಟುಕೊಳ್ಳಬೇಕು.

ವಿರೋಧ ಪಕ್ಷದ ಧಿಕ್ಕಾರ ಆಳವಾದ ಗಾಯ ಮಾಡಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್‌

ವಿರೋಧ ಪಕ್ಷದ ಧಿಕ್ಕಾರ ಆಳವಾದ ಗಾಯ ಮಾಡಿದೆ ಎಂದ ಸಿಎಂ ಡಿ.ಕೆ. ಶಿವಕುಮಾರ್‌

CM DK Shivakumar: ನನಗೆ ಅಶ್ವಥ್ ನಾರಾಯಣ್, ವಿಜಯೇಂದ್ರ ಅವರ ತಂಡದ ಮೇಲೆ ಬಹಳ ಬೇಜಾರಾಗಿದೆ. ಎರಡು ಮೂರು ದಿನ ಕುಳಿತುಕೊಂಡು ನಾನು ಹೇಳುವುದನ್ನು ಕೇಳಿ ಎಂದು ಹೇಳಿದ್ದೇನೆ. ಆದರೂ ಸದನಕ್ಕೆ ಬರುತ್ತಿದ್ದಂತೆ ಧಿಕ್ಕಾರ ಎಂದು ಕೂಗಿ ನನ್ನ ಮನಸ್ಸಿಗೆ ಆಳವಾದ ಗಾಯ ಮಾಡಿದ್ದೀರಿ. ಈ ವಿಚಾರ ನನಗೆ ನಾಟಿದೆ ಎಂದು ಸಿಎಂ‌ ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.

BHIM QR ಮತ್ತು ಸೌಂಡ್ ಬಾಕ್ಸ್ ಅನ್ನು ಉತ್ತೇಜಿಸಲು ಕೆನರಾ ಬ್ಯಾಂಕ್‌ನ ಶಿವಮೊಗ್ಗ ವಲಯದಿಂದ ವ್ಯಾಪಾರಿಗಳ ಸಂಪರ್ಕ ಅಭಿಯಾನ

ಕೆನರಾ ಬ್ಯಾಂಕ್‌ನ ಶಿವಮೊಗ್ಗ ವಲಯದಿಂದ ವ್ಯಾಪಾರಿಗಳ ಸಂಪರ್ಕ ಅಭಿಯಾನ

ಮಣಿಪಾಲ ವೃತ್ತದ (Circle) ಪ್ರಧಾನ ವ್ಯವಸ್ಥಾಪಕರು ಮತ್ತು ವೃತ್ತ ಕಚೇರಿಯ ಮುಖ್ಯಸ್ಥ ಎಚ್. ಕೆ. ಗಂಗಾಧರ್ ಅವರ ಮಾರ್ಗದರ್ಶನದಲ್ಲಿ, ಕೆನರಾ ಬ್ಯಾಂಕ್‌ನ ಶಿವಮೊಗ್ಗ ವಲಯವು ತನ್ನ BHIM QR ಮತ್ತು ಹೊಸದಾಗಿ ಪರಿಚಯಿಸಲಾದ 'ಸೌಂಡ್ ಬಾಕ್ಸ್' (Sound Box) ಸೇವೆಗಳನ್ನು ಉತ್ತೇಜಿಸಲು ವ್ಯಾಪಾರಿಗಳೊಂದಿಗೆ ವ್ಯಾಪಕ ಸಂಪರ್ಕ ಸಾಧಿಸುವ ಅಭಿಯಾನ ನಡೆಸಿತು.

ಭಾರತ–ದಕ್ಷಿಣ ಆಫ್ರಿಕಾ ಬಲಿಷ್ಠ ಪಾಲುದಾರಿಕೆಗೆ ಒತ್ತು: BRICS ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾದ ಸಚಿವೆ ಭೇಟಿ

ಭಾರತ–ದಕ್ಷಿಣ ಆಫ್ರಿಕಾ ಬಲಿಷ್ಠ ಪಾಲುದಾರಿಕೆಗೆ ಒತ್ತು

ದಕ್ಷಿಣ ಆಫ್ರಿಕಾದ ಪ್ರವಾಸೋದ್ಯಮ ಸಚಿವೆ ಪ್ಯಾಟ್ರಿಷಿಯಾ ಡಿ ಲಿಲ್ಲೆ ಅವರು, ಭಾರತದ 2026ರ BRICS ಅಧ್ಯಕ್ಷತೆಯ ಅಡಿಯಲ್ಲಿ ಭಾರತ ಆಯೋಜಿಸುತ್ತಿರುವ BRICS ಪ್ರವಾಸೋದ್ಯಮ ಸಚಿವರ ಸಭೆಯಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಲು ಆ.21 ಮತ್ತು 22ರಂದು ಜೈಪುರಕ್ಕೆ ಭೇಟಿ ನೀಡಲಿದ್ದಾರೆ.

ಬೆಂಗಳೂರು ಅಭಿವೃದ್ಧಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು? ಮೋದಿ, ವಾಜಪೇಯಿ ಮಾತುಗಳನ್ನು ಉಲ್ಲೇಖಿಸಿದ ಸಿಎಂ Video

ಮೋದಿ, ವಾಜಪೇಯಿ ಮಾತುಗಳನ್ನು ಉಲ್ಲೇಖಿಸಿದ ಸಿಎಂ ಡಿಕೆಶಿ

CM D.K. Shivakumar: ರಾಜ್ಯ ರಾಜಧಾನಿ ಬೆಂಗಳೂರು ನಗರ ಹಾಗೂ ಕರ್ನಾಟಕದ ಅಭಿವೃದ್ಧಿ, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಮಾತುಕತೆ ಮತ್ತು ಹಳೆಯ ಘಟನೆಗಳ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ ಅವರು ಸದನದಲ್ಲಿ ಮಾತನಾಡಿದ್ದಾರೆ. ಮುಂದಿನ 25 ವರ್ಷಗಳಲ್ಲಿ ಬೆಂಗಳೂರು ಮತ್ತು ಕರ್ನಾಟಕದ ಬೆಳವಣಿಗೆಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ಕರೆ ನೀಡಿದ್ದಾರೆ.

Bengaluru Power Cut: ನಾಳೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

ನಾಳೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್‌ ವ್ಯತ್ಯಯ

Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಾಹಣಾ ಕಾಮಗಾರಿ ಹಿನ್ನೆಲೆಯಲ್ಲಿ 66/11 ಕೆ.ವಿ. ಅರೆಹಳ್ಳಿ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಆ.19ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ  ಶಿವಶಂಕರಪ್ಪ ಸಾಹುಕಾರ್‌ ಮರುನೇಮಕಕ್ಕೆ ಹೈಕೋರ್ಟ್‌ ಸೂಚನೆ

ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌ ಮರುನೇಮಕ

Shivashankarappa Sahukar: ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್‌ ಅವರಿಗೆ ಹೂಕೋರ್ಟ್‌ನಿಂದ ರಿಲೀಫ್‌ ಸಿಕ್ಕಿದ್ದು, 7 ದಿನಗಳಲ್ಲಿ ಮರುನೇಮಕ ಮಾಡುವಂತೆ ನ್ಯಾ.ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಮಹತ್ವದ ಆದೇಶ ನೀಡಿದೆ.

ಬೆಂಗಳೂರು ಡಬಲ್‌ ಮರ್ಡರ್‌ ಮಿಸ್ಟ್ರಿ ಕಹಾನಿಗೆ ಕ್ಲೈಮ್ಯಾಕ್ಸ್‌; ಪ್ರಿಯಕರನ ಜತೆ ಸೇರಿ ಪತಿ, ಪುತ್ರನನ್ನೇ ಕೊಂದ ಕಿʼಲೇಡಿʼ ಅರೆಸ್ಟ್‌

ಪ್ರಿಯಕರನ ಜತೆ ಸೇರಿ ಪತಿ, ಪುತ್ರನನ್ನೇ ಕೊಂದ ಮಹಿಳೆ ಅರೆಸ್ಟ್‌

Bengaluru News: ಬೆಂಗಳೂರಿನ ಚಿಕ್ಕಬಾವಣಾವರದ ಮನೆಯೊಂದರಲ್ಲಿ ಮೃತಪಟ್ಟ ಟೆಕ್ಕಿ ಮತ್ತು ಅವರ 5 ವರ್ಷದ ಪುತ್ರನ ನಿಗೂಢ ಸಾವಿನ ರಹಸ್ಯ ಬಯಲಾಗಿದೆ. ಮೃತರನ್ನು ಅಭಿನವ್‌ (38) ಹಾಗೂ ಅವರ ಪುತ್ರ ಯದುವೀರ್‌ (5) ಎಂದು ಗುರುತಿಸಲಾಗಿದೆ. ಅಭಿನವ್‌ ಅವರ ಪತ್ನಿ ಹರಿಣಿಯೇ ಈ ಹತ್ಯೆ ಮಾಡಿದ್ದಾಳೆ ಎನ್ನುವುದು ತಿಳಿದು ಬಂದಿದೆ.

Loading...