Viral Video: ವಡಾಪಾವ್ ತಿಂದ ಹಾಂಗ್‌ಕಾಂಗ್ ಯುವತಿಯ ರಿಯಾಕ್ಷನ್ ಹೇಗಿತ್ತು? ಈ ವಿಡಿಯೊ ನೋಡಿ
ಕಂಟೆಂಟ್ ಕ್ರಿಯೇಟರ್ ನಿಕ್ ಗೆಳೆತಿ ಹಾಂಗ್ ಕಾಂಗ್ ಮೂಲದ ಕ್ಯಾರಿ ಮೊದಲ ಬಾರಿಗೆ ವಡಾ ಪಾವ್ ತಿಂದ ವಿಡಿಯೊವೊಂದು ವೈರಲ್ ಆಗಿದೆ. ಅವಳು ಬೀದಿ ಬದಿಯ ವ್ಯಾಪಾರಿಯ ಬಳಿ ಮರಾಠಿಯಲ್ಲಿ ವಡಾಪಾವ್ ಆರ್ಡರ್ ಮಾಡಿ ತಿಂದಿದ್ದಾಳೆ. ಈ ಫುಡ್ ಬಹಳ ಇಷ್ಟವಾಗಿದೆ ಎಂದು ಹೇಳಿದ್ದಾಳೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ಮುಂಬೈ: ಬೇಲ್ ಪುರಿ, ಪಾನಿ ಪುರಿ,ಮಸಾಲಪುರಿಯಂತಹ ಭಾರತೀಯ ಸ್ಟ್ರೀಟ್ ಫುಡ್‌ಗಳೆಂದರೆ ಸಾಕು ಎಲ್ಲರೂ ಬಾಯಲ್ಲಿ ನೀರೂರಿಸುತ್ತಾರೆ. ಈ ಫುಡ್‌ಗಳಿಗೆ ಸಂಬಂಧಪಟ್ಟ ಅಸಂಖ್ಯಾತ ವೈರಲ್ ವಿಡಿಯೊಗಳು ಸೋಶಿಯಲ್ ಮಿಡಿಯಾಗಳಲ್ಲಿ ಹರಿದಾಡುತ್ತಿರುತ್ತದೆ. ಇತ್ತೀಚೆಗೆ ಕಂಟೆಂಟ್ ಕ್ರಿಯೇಟರ್ ನಿಕ್ ಗೆಳತಿಯೊಬ್ಬಳು ವಡಾಪಾವ್ ತಿಂದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಹಾಂಗ್‌ಕಾಂಗ್ ಮೂಲದ ಕ್ಯಾರಿ ಮೊದಲ ಬಾರಿಗೆ ವಡಾಪಾವ್ ತಿನ್ನುವುದು ವಿಡಿಯೊದಲ್ಲಿ(Viral Video) ಸೆರೆಯಾಗಿದೆ. ಅದು ಅಲ್ಲದೇ, ಹಾಂಗ್‌ಕಾಂಗ್ ಮೂಲದ ಈಕೆ ಮರಾಠಿ ಭಾಷೆಯಲ್ಲಿ ವಡಾಪಾವ್ ಆರ್ಡರ್ ಮಾಡಿದ್ದಾಳೆ. ಆದರೆ ಈಕೆ ಮರಾಠಿ ಮಾತನಾಡಿದ್ದನ್ನು ನೋಡಿ ಕೆಲವು ನೆಟ್ಟಿಗರು ತಮಾಷೆ ಮಾಡಿದ್ದಾರೆ.
ವೈರಲ್ ಆದ ವಿಡಿಯೊದಲ್ಲಿ, ಭಾರತೀಯ ನಿಕ್ ಮತ್ತು ಹಾಂಗ್ ಕಾಂಗ್ ಮೂಲದ ಕ್ಯಾರಿ, ಇಬ್ಬರು ಸ್ನೇಹಿತರೊಂದಿಗೆ ಮುಂಬೈನ ರಸ್ತೆ ಬದಿಯ ತಿನ್ನುವುದು ವಿಡಿಯೊದಲ್ಲಿ ಸೆರೆಯಾಗಿದೆ. ಕ್ಯಾರಿ ಮರಾಠಿ ಭಾಷೆಯಲ್ಲಿಯೇ ವಡಾ ಪಾವ್ ಅನ್ನು ಆರ್ಡರ್ ಮಾಡಿದ್ದಾಳೆ. ಹಾಗೇ ವಡಾ ಪಾವ್‌ನ ರುಚಿ ನೋಡಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ 7.1 ಮಿಲಿಯನ್ ವ್ಯೂವ್ಸ್ ಗಳಿಸಿದೆ. ಅನೇಕ ಜನರುಈ ವಿಡಿಯೊಗೆ ಪ್ರತಿಕ್ರಿಯಿಸಿದ್ದಾರೆ. ಕ್ಯಾರಿಯ ಮರಾಠಿ ಮಾತನಾಡುವ ಪ್ರಯತ್ನವನ್ನು ಹಲವಾರು ಜನರು "ಉತ್ತಮ” ಎಂದು ಹೊಗಳಿದ್ದಾರೆ. "ಅವಳು ಪ್ರೀತಿಗಾಗಿ ಭಾಷೆಗಳನ್ನು ಕಲಿಯುತ್ತಿದ್ದಾಳೆ- ಅದು ಎಷ್ಟು ಉತ್ತಮವಾಗಿದೆ?" ಎಂದು ಒಬ್ಬರು ಬರೆದಿದ್ದಾರೆ. ಕೆಲವರು ಅವಳು ಮರಾಠಿ ಮಾತನಾಡುವುದನ್ನು ತಮಾಷೆ ಮಾಡಿದ್ದಾರೆ. ಇನ್ನೂ ಕೆಲವರು ವಿದೇಶಿಯರು ಭಾರತೀಯ ಆಹಾರವನ್ನು ಹೇಗೆ ಪ್ರೀತಿಸುತ್ತಾರೆ ಎಂಬುದನ್ನು ವಿವರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕೋಣೆಯಲ್ಲಿ ಪಟಾಕಿ ಸಿಡಿಸಿ ಫುಟ್ಬಾಲ್ ಆಡಿದ ಹುಡುಗರು; ಮುಂದೇನಾಯ್ತು ವಿಡಿಯೊ ನೋಡಿ
ಕೆಲವು ದಿನಗಳ ಹಿಂದೆ, ಹಂಗೇರಿಯ ಬುಡಾಪೆಸ್ಟ್‍ನಲ್ಲಿ ವಿದೇಶಿ ವಿದ್ಯಾರ್ಥಿಗಳು ಮೊದಲ ಬಾರಿಗೆ ಪಾನಿ ಪೂರಿಗಳನ್ನು ತಿಂದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ತ್ವರಿತವಾಗಿ 5.9 ಮಿಲಿಯನ್ ವ್ಯೂವ್ಸ್ ಗಳಿಸಿತ್ತು ಬುಡಾಪೆಸ್ಟ್‌ನಲ್ಲಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ವಿಶ್ವವಿದ್ಯಾಲಯದ ಅಂತರರಾಷ್ಟ್ರೀಯ ದಿನಾಚರಣೆಯ ವಿಡಿಯೊವನ್ನು ಹಂಚಿಕೊಂಡಿದ್ದನು. ಈ ವಿಡಿಯೊದಲ್ಲಿ, ಹಲವಾರು ವಿದೇಶಿ ವಿದ್ಯಾರ್ಥಿಗಳಿದ್ದು, ಅವರು ಪಾನಿಪುರಿಯನ್ನು ತಿನ್ನುವುದು ರೆಕಾರ್ಡ್ ಆಗಿತ್ತು. ಮತ್ತು ಅವರು ಪಾನಿಪುರಿಯನ್ನು ಬಹಳ ಇಷ್ಟಪಟ್ಟಿದ್ದಾರೆ.