ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sourav Ganguly: ಪಾಕ್‌ ಜತೆಗಿನ ಎಲ್ಲಾ ಕ್ರಿಕೆಟ್ ಸಂಬಂಧ ಕೊನೆಗೊಳಿಸಬೇಕು: ಗಂಗೂಲಿ ಆಗ್ರಹ

ಪ್ರತಿ ವರ್ಷವೂ ಭಾರತದ ನೆಲದಲ್ಲಿ ಏನಾದರೂ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಅದನ್ನು ಇನ್ನು ಮುಂದೆ ಸಹಿಸಬಾರದು. ಶೇಕಡಾ 100 ರಷ್ಟು ಪಾಕಿಸ್ತಾನದೊಂದಿಗಿನ ಎಲ್ಲ ಕ್ರೀಡಾ ಸಂಬಂಧವನ್ನು ನಿಲ್ಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಆಗ್ರಹಿಸಿದ್ದಾರೆ.

ಪಾಕ್‌ ಜತೆಗಿನ ಎಲ್ಲಾ ಕ್ರಿಕೆಟ್ ಸಂಬಂಧ ಕೊನೆಗೊಳಿಸಬೇಕು: ಗಂಗೂಲಿ ಆಗ್ರಹ

Profile Abhilash BC Apr 26, 2025 1:35 PM

ನವದೆಹಲಿ: ಮಂಗಳವಾರ ಏಪ್ರಿಲ್ 22 ರಂದು ಕಾಶ್ಮೀರ ಕಣಿವೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ(pahalgam attack) ನಂತರ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ(Sourav Ganguly) ಪಾಕಿಸ್ತಾನಕ್ಕೆ ಕಠಿಣ ಸಂದೇಶ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಗಂಗೂಲಿ, ಭಾರತ ಪಾಕಿಸ್ತಾನದೊಂದಿಗಿನ ಎಲ್ಲಾ ಕ್ರಿಕೆಟ್ ಸಂಬಂಧಗಳನ್ನು ನಿಲ್ಲಿಸಬೇಕು ಮತ್ತು ಐಸಿಸಿ ಮತ್ತು ಏಷ್ಯನ್ ಟೂರ್ನಿಗಳಲ್ಲಿಯೂ ಪಾಕ್‌(INd vs PAK) ವಿರುದ್ಧ ಆಡಬಾರದು ಎಂದು ಹೇಳಿದ್ದಾರೆ.

ಎರಡೂ ದೇಶಗಳ ನಡುವಿನ ಕ್ರಿಕೆಟ್ ಸಂಬಂಧಗಳ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಮಾಜಿ ಅಧ್ಯಕ್ಷ ಗಂಗೂಲಿ, ಪ್ರತಿ ವರ್ಷವೂ ಭಾರತದ ನೆಲದಲ್ಲಿ ಏನಾದರೂ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿದ್ದು, ಅದನ್ನು ಇನ್ನು ಮುಂದೆ ಸಹಿಸಬಾರದು. ಶೇಕಡಾ 100 ರಷ್ಟು ಪಾಕಿಸ್ತಾನದೊಂದಿಗಿನ ಎಲ್ಲ ಕ್ರೀಡಾ ಸಂಬಂಧವನ್ನು ನಿಲ್ಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಭಯೋತ್ಪಾದನೆಯನ್ನು ಸಹಿಸಲು ಸಾಧ್ಯವಿಲ್ಲ ಎಂದು ಸೌರವ್ ಗಂಗೂಲಿ ಸುದ್ದಿಗಾರರಿಗೆ ತಿಳಿಸಿದರು. ಏಪ್ರಿಲ್ 22 ರಂದು ಪಹಲ್ಗಾಮ್‌ನ ಬೈಸರನ್ ಹುಲ್ಲುಗಾವಲುಗಳಲ್ಲಿ ಐದರಿಂದ ಆರು ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಕೊಂದು ಹಾಕಿದ್ದರು.

ಭವಿಷ್ಯದ ಐಸಿಸಿ ಟೂರ್ನಿಯಲ್ಲಿ ಭಾರತ ಮತ್ತು-ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿ(IND vs PAK World Cup Group Stage) ಇರುವುದು ಬೇಡ ಎಂದು ಬಿಸಿಸಿಐ(BCCI) ಐಸಿಸಿಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ. ಹೀಗಾಗಿ ಮುಂಬರುವ ವಿಶ್ವಕಪ್ ಕೂಟದಲ್ಲಿ ಭಾರತ ಪಾಕಿಸ್ಥಾನ ಪಂದ್ಯಗಳ ಮೇಲೆ ಪಹಲ್ಗಾಮ್‌ನ ಉಗ್ರರ ದಾಳಿಯ ಕರಿನೆರಳು ಬಿದ್ದಿದ್ದು, ಈ ಸಂಬಂಧವಾಗಿ, ಬಿಸಿಸಿಐ ಮತ್ತು ಭಾರತ ಸರಕಾರ ಯಾವ ನಿಲುವನ್ನು ತಳೆಯಲಿದೆ ಎಂಬ ಕುತೂಹಲ ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳಲ್ಲಿ ಮೂಡಿದೆ.

ಇದನ್ನೂ ಓದಿ IPL 2025: ಮತ್ತೆ ಕೆಕೆಆರ್‌ ತಂಡ ಸೇರಿದ ಉಮ್ರಾನ್‌ ಮಲಿಕ್‌

ದಾಳಿಕೋರರ ಪತ್ತೆಗಾಗಿ ಭದ್ರತಾ ಸಿಬ್ಬಂದಿ ಆರಂಭಿಸಿರುವ ಶೋಧ ಕಾರ್ಯ 4ನೇ ದಿನಕ್ಕೆ ಕಾಲಿಟ್ಟಿದ್ದು, ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಮನೆಮನೆಗೆ ತೆರಳಿ ಹುಡುಕಾಟ ನಡೆಸಲಾಗುತ್ತಿದೆ. ಪುಲ್ವಾಮಾದಲ್ಲಿ 4 ಉಗ್ರರ ಓಡಾಟ ಕಂಡುಬಂದ ಶಂಕೆ ಇದ್ದು, ಪುಲ್ವಾಮಾ, ಬಂಡಿಪೋರ, ಕಿಶ್ತ್ವಾರ್‌, ಶೋಪಿಯಾನ್‌ನಲ್ಲಿ ಭದ್ರತಾ ಸಿಬ್ಬಂದಿ ಪ್ರತಿ ಮನೆಗೆ ತೆರಳಿ ಕೋಣೆಕೋಣೆಗಳಲ್ಲಿ ಉಗ್ರರಿಗಾಗಿ ಶೋಧ ನಡೆಸಿದ್ದಾರೆ.