Viral News: ಅರೇಂಜ್ ಮ್ಯಾರೇಜ್ ಧಿಕ್ಕರಿಸಿ ಮನೆಬಿಟ್ಟು ಓಡಿ ಹೋಗಿದ್ದವಳ ಯಶೋಗಾಥೆ ಇದೀಗ ಎಲ್ಲೆಡೆ ಫುಲ್ ವೈರಲ್
ಯುಎಸ್ ಮೂಲದ ಭಾರತೀಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಝರ್ನಾ ಗರ್ಗ್ ಇತ್ತೀಚೆಗೆ ತನ್ನ ಆತ್ಮಚರಿತ್ರೆಯನ್ನು ಪ್ರಚಾರ ಮಾಡುವಾಗ ತನ್ನ ಜೀವನದ ವೈಫಲ್ಯಗಳು ಮತ್ತು ಯಶಸ್ಸಿನ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾಳೆ. ಇದು ಈಗ ವೈರಲ್(Viral News) ಆಗಿದೆ.


ವಾಷಿಂಗ್ಟನ್: ಯುಎಸ್ ಮೂಲದ ಭಾರತೀಯ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಝರ್ನಾ ಗರ್ಗ್ ಅವಳ ಆತ್ಮಚರಿತ್ರೆ 'ದಿಸ್ ಅಮೆರಿಕನ್ ವುಮನ್: ಎ ಒನ್-ಇನ್-ಎ-ಬಿಲಿಯನ್ ಮೆಮೊಯಿರ್' ಎಂದು ಹೆಸರಿಡಲಾಗಿದ್ದು, ಇದು ಏಪ್ರಿಲ್ 29 ರ ಮಂಗಳವಾರ ಬಿಡುಗಡೆಯಾಗಲಿದೆ. ಇತ್ತೀಚೆಗೆ ಅವಳು ತನ್ನ ಆತ್ಮಚರಿತ್ರೆಯನ್ನು ಪ್ರಚಾರ ಮಾಡುವಾಗ ತನ್ನ ಜೀವನದ ವೈಫಲ್ಯಗಳು ಮತ್ತು ಯಶಸ್ಸಿನ ಬಗ್ಗೆ ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾಳೆ. ಇದರಲ್ಲಿ ಅವಳು ಆ್ಯರೇಂಜ್ ಮ್ಯಾರೇಜ್‍ನಿಂದ ತಪ್ಪಿಸಿಕೊಂಡಿರುವುದು, ತನ್ನ ಶ್ರೀಮಂತ ತಂದೆಯಿಂದ ದೂರವಾಗಿರುವುದು, ಅಮೆರಿಕಕ್ಕೆ ಬಂದಿದ್ದು, ಮದುವೆಯಾಗಿದ್ದು, ಮಕ್ಕಳನ್ನು ಬೆಳೆಸಿದ್ದು ಮತ್ತು ಕೊನೆಯಲ್ಲಿ ಸ್ಟ್ಯಾಂಡಪ್ ಕಾಮಿಡಿಯನ್ ಆಗಿ ತನ್ನ ವೃತ್ತಿಜೀವನವನ್ನು ಶುರು ಮಾಡಿದ್ದರ ಬಗ್ಗೆ ಹಂಚಿಕೊಂಡಿದ್ದಾಳೆ. ತನ್ನ 18 ವಿಫಲ ವ್ಯಾಪಾರ, ಪತಿ ಉದ್ಯೋಗ ಕಳೆದುಕೊಂಡಿದ್ದು, ಮತ್ತು ಮನೆಯಿಲ್ಲದೆ ನಡೆಸಿದ ಒದ್ದಾಟ, ದಾರಿಯುದ್ದಕ್ಕೂ ಅವಳು ಎದುರಿಸಿದ ಹೋರಾಟಗಳ ಬಗ್ಗೆಯೂ ತಿಳಿಸಿದ್ದಾಳೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.
"ನನ್ನ ವಿಫಲತೆಯ ಬಳಿಕ ನಾನು ರಾತ್ರೋರಾತ್ರಿ ಹೇಗೆ ಯಶಸ್ವಿಯಾದೆ " ಎಂಬುದರ ಬಗ್ಗೆ ಗರ್ಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾಳೆ. ಅವಳ ಈ ಪೋಸ್ಟ್‌ಗೆ 4,000 ಕ್ಕೂ ಹೆಚ್ಚು ಲೈಕ್‍ಗಳು ಮತ್ತು ಅನೇಕ ಕಾಮೆಂಟ್‍ಗಳು ಬಂದಿವೆ. " ನೀವು ಅನೇಕರಿಗೆ ಸ್ಫೂರ್ತಿ" ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಇನ್ನೊಬ್ಬರು ಏಪ್ರಿಲ್ 29 ರ ಮಂಗಳವಾರ ಬರುವ ಅವಳ ಆತ್ಮಚರಿತ್ರೆಯನ್ನು ಉಲ್ಲೇಖಿಸಿ, "ನನ್ನ ಪ್ರತಿಗಾಗಿ ಕಾಯುತ್ತಿದ್ದೇನೆ" ಎಂದು ಹೇಳಿದ್ದಾರೆ."ನಾನು ನಿಮಗಾಗಿ ಒಳ್ಳೆಯದನ್ನೇ ಬಯಸುತ್ತೇನೆ, ಮತ್ತು ನಾನು ನಿಮ್ಮನ್ನು ವೈಯಕ್ತಿಕವಾಗಿ ತಿಳಿದಿಲ್ಲ! ಈಗ ಪುಸ್ತಕವನ್ನು ಆರ್ಡರ್ ಮಾಡುತ್ತಿದ್ದೇನೆ. ಪ್ರೀತಿ ಮತ್ತು ಶುಭ ಹಾರೈಕೆಗಳನ್ನು ಕಳುಹಿಸುತ್ತಿದ್ದೇನೆ" ಎಂದು ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ."ನೀವು ಎಲ್ಲರಿಗೂ ಸ್ಫೂರ್ತಿ. ನೀವು ಎಲ್ಲರ ಮನಸ್ಸನ್ನು ಗೆದ್ದಿದ್ದೀರಿ ಎಂದು ಇನ್ನೊಬ್ಬ ನೆಟ್ಟಿಗರು ಹೇಳಿದ್ದಾರೆ.
ಇನ್ನು ಗರ್ಗ್ ಕೇವಲ ಎರಡು ವರ್ಷಗಳಲ್ಲಿ 18 ವ್ಯವಹಾರಗಳನ್ನು ಮಾಡಿದ್ದಾಳೆ ಎಂಬ ವಿಷಯ ತಿಳಿದು ಕೆಲವರು ಶಾಕ್ ಆಗಿದ್ದಾರೆ."ನೀವು 2 ವರ್ಷಗಳಲ್ಲಿ 18 ವ್ಯವಹಾರಗಳನ್ನು ನಡೆಸಲು ಹೇಗೆ ಸಾಧ್ಯವಾಯಿತು?!” ಎಂದು ಕೇಳಿದ್ದಾರೆ. ಕೆಲವು ನೆಟ್ಟಿಗರು ಅವಳಿಗೆ ಪ್ರೀತಿ ಮತ್ತು ಬೆಂಬಲವನ್ನು ನೀಡಿದ್ದಾರೆ. "ನಿಮ್ಮನ್ನು ಮತ್ತು ನಿಮ್ಮ ಬೃಹತ್ ಸಾಧನೆಗಳನ್ನು ಪ್ರೀತಿಸುತ್ತೇನೆ. ನೀವು ನಮ್ಮೆಲ್ಲರಿಗೂ ಸ್ಫೂರ್ತಿ ನೀಡುತ್ತೀರಿ!" ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ವಡಾಪಾವ್ ತಿಂದ ಹಾಂಗ್‌ಕಾಂಗ್ ಯುವತಿಯ ರಿಯಾಕ್ಷನ್ ಹೇಗಿತ್ತು? ಈ ವಿಡಿಯೊ ನೋಡಿ
ಝರ್ನಾ ಗರ್ಗ್ ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ತನ್ನ ತೂಕವನ್ನು ನಿಯಂತ್ರಿಸಲು ಬಳಸಿದ ಔಷಧಿಗಳ ಬಗ್ಗೆ ಚರ್ಚಿಸಿದ್ದಳು.ಹಾಗೇ ತನ್ನ ಫ್ಯಾನ್ಸ್‌ಗೆ ಧನ್ಯವಾದ ಹೇಳುವಾಗ, ಯಾರಿಗೂ ಉತ್ತರಿಸಬೇಕಾಗಿಲ್ಲ ಎಂದು ತನ್ನ ಮಾತಿನಲ್ಲಿಯೇ ಟೀಕಾಕಾರರಿಗೆ ಬಿಸಿಮುಟ್ಟಿಸಿದ್ದಾಳೆ.