Adnan Sami: ಅನಕ್ಷರಸ್ಥ ಮೂರ್ಖ... ಪಾಕಿಸ್ತಾನದ ಮಾಜಿ ಸಚಿವನ ವಿರುದ್ಧ ಗಾಯಕ ಅದ್ನಾನ್ ಸಮಿ ಗರಂ
Singer Adnan Sami:ಪಹಲ್ಗಾಮ್ ಉಗ್ರರರ ದಾಳಿ ಬೆನ್ನಲ್ಲೇ ದೇಶದಲ್ಲಿ ನೆಲೆಸಿರುವ ಪಾಕ್ ಪ್ರಜೆಗಳನ್ನು ಹೊರದಬ್ಬಲು ಭಾರತ ಸರ್ಕಾರ ಆದೇಶ ಹೊರಡಿಸಿದೆ. ಈ ನಡುವೆ ಪಾಕ್ ಮೂಲದ ಗಾಯಕ ಹಾಡುಗಾರ ಅದ್ನಾನ್ ಸಮಿ ಬಗ್ಗೆ ಬಹಳ ಚರ್ಚೆಗಳು ನಡೆಯುತ್ತಿವೆ. ಇದರ ಬೆನ್ನಲ್ಲೇ ಅದ್ನಾನ್ ಸಮಿ ತಮ್ಮ ಪೌರತ್ವ ಪ್ರಶ್ನಿಸಿದ ಪಾಕಿಸ್ತಾನದ ಮಾಜಿ ಸಚಿವನ ವಿರುದ್ಧ ಫುಲ್ ಗರಂ ಆಗಿದ್ದಾರೆ.


ಮುಂಬೈ: ಖ್ಯಾತ ಗಾಯಕ ಅದ್ನಾನ್ ಸಮಿ(Singer Adnan Sami) ಯಾರಿಗೆ ಗೊತ್ತಿಲ್ಲ ಹೇಳಿ. ಹಾಡಿನ ಮೂಲಕ ಅವರೆಷ್ಟು ಪರಿಚಿತರೋ ಅದಕ್ಕಿಂತ ಹೆಚ್ಚು ಪಾಕ್ ತೊರೆದು ಭಾರತದಲ್ಲಿ ನೆಲೆಸಿ ಇದೀಗ ಇಲ್ಲಿಯ ಪ್ರಜೆಯೇ ಆಗಿರುವ ಅವರು ಜನಜನಿತರು. ಇದೀಗ ಪಹಲ್ಗಾಮ್ ಉಗ್ರರ ದಾಳಿ ಬಳಿಕ ಪಾಕ್ ಪ್ರಜೆಗಳನ್ನು ತಕ್ಷಣ ಭಾರತ ಬಿಟ್ಟು ತೊಲುಗುವಂತೆ ಸರ್ಕಾರ ಆದೇಶಿಸಿರುವ ಬೆನ್ನಲ್ಲೇ ಅದ್ನಾನ್ ಸಮಿ ಬಗ್ಗೆಯೂ ಹತ್ತು ಹಲವು ಪ್ರಶ್ನೆಗಳು, ಟೀಕೆಗಳು ವ್ಯಕ್ತವಾಗಿವೆ. ಇದೀಗ ಇದೇ ವಿಚಾರವಾಗಿ ಪಾಕ್ ಸಚಿವ ಚೌಧರಿ ಪವಾದ್ ಹುಸೇನ್(Pakistani minister Chaudhry Fawad Hussain) ಮತ್ತು ಅದ್ನಾನ್ ಸಮಿ ನಡುವೆ ವಾಕ್ಸಮರವೇ ನಡೆದಿದೆ. ಅದೂ ಅಲ್ಲದೇ ಫವಾದ್ ಹುಸೇನ್ ಅವರನ್ನು ಅದ್ನಾನ್ ಸಮಿ ಅನಕ್ಷರಸ್ಥ ಮೂರ್ಖ ಎಂದು ಕರೆದಿದ್ದಾರೆ.
ಪಾಕಿಸ್ತಾನಿ ನಾಗರಿಕರು ಆದಷ್ಟು ಶೀಘ್ರವೇ ಪಾಕಿಸ್ತಾನ ತೊರೆದು ಹೋಗುವುದು ಖಚಿತಪಡಿಸಿಕೊಳ್ಳುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಗಳಿಗೆ ಸೂಚನೆ ನೀಡಿದ್ದಾರೆ. ಏಪ್ರಿಲ್ 27 ರ ಗಡುವನ್ನು ಮೀರಿ ಯಾವುದೇ ಪಾಕಿಸ್ತಾನಿ ನಾಗರಿಕರು ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳುವುದು ಆಯಾಯ ರಾಜ್ಯಗಳ ಕರ್ತವ್ಯ ಎಂದು ಎಲ್ಲಾ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ವೈದ್ಯಕೀಯ ವೀಸಾ ಹೊಂದಿರುವವರು ಏಪ್ರಿಲ್ 29 ರೊಳಗೆ ದೇಶ ಬಿಡಲು ತಿಳಿಸಲಾಗಿದೆ. ಇದರ ಬೆನ್ನಲ್ಲೇ ಫವಾದ್ ಹುಸೇನ್, ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಅದ್ನಾನ್ ಸಮಿ ಕಥೆ ಏನು ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಬಹಳ ಕಟುವಾಗಿ ಉತ್ತರಿಸಿದ ಅದ್ನಾನ್ ಸಮಿ ಈ ಅನಕ್ಷರಸ್ಥ ಮೂರ್ಖನಿಗೆ ಯಾರು ಹೇಳುವುದು ಎಂದು ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Bhagya Lakshmi Serial: ಕೈ ತುತ್ತಿಗೆ ಲೈಸನ್ಸ್ ಸಿಕ್ಕಿದ ಖುಷಿಯಲ್ಲಿ ಭಾಗ್ಯ ಸಖತ್ ಡ್ಯಾನ್ಸ್: ವೈರಲ್ ಆಗ್ತಿದೆ ವಿಡಿಯೋ
ಇದು ಇಲ್ಲಿಗೆ ಮುಗಿಯಲಿಲ್ಲ ತಮ್ಮ ಟ್ವೀಟ್‌ನಲ್ಲಿ ಫವಾದ್ ಹುಸೇನ್, ಅದ್ನಾನ್ ಸಮಿಯವರನ್ನು ಲಾಹೋರ್ ಮೂಲದ ಸಿಂಗರ್ ಎಂದು ಕರೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ, ಸಮಿ, ನಾನು ಪೇಶಾವರ ಮೂಲದವನು, ಲಾಹೋರ್‌ನವನು ಅಲ್ಲ..ನೀವು ಸಚಿವರಾಗಿದ್ದವರು. ನೀವು ಮಾಹಿತಿ ಸಚಿವರಾಗಿದ್ದವರು. ಆದರೆ ನಿಮಗೆ ಕನಿಷ್ಟ ಜ್ಞಾನವೂ ಇಲ್ಲ... ಎಂದು ಟೀಕಿಸಿದ್ದಾರೆ.
ಅದ್ನಾನ್ ಸಮಿ 2016 ರಲ್ಲಿ ಭಾರತೀಯ ಪೌರತ್ವವನ್ನು ಪಡೆದು ತಮ್ಮ ಕುಟುಂಬದೊಂದಿಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಹಿಂದಿನ ಸಂದರ್ಶನಗಳಲ್ಲಿ, ಭಾರತೀಯ ಪೌರತ್ವ ಪಡೆಯಲು 18 ವರ್ಷಗಳು ಹೇಗೆ ಬೇಕಾಯಿತು ಮತ್ತು ತಾನು "ಒಂದೂವರೆ ವರ್ಷಗಳ ಕಾಲ ದೇಶವಿಲ್ಲದೆ ಇದ್ದೆ" ಎಂದು ಸಮಿ ಬಹಿರಂಗಪಡಿಸಿದ್ದರು. ಪಾಕಿಸ್ತಾನದಲ್ಲಿ ತನಗೆ ಬೆದರಿಕೆ ಇದೆ ಎಂದು ಅವರು ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.