ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಮದುಮಗ ಧರಿಸಿದ್ದ ದಿರಿಸನ್ನು ಕಂಡು ಈ ಅಜ್ಜಿಯ ರಿಯಾಕ್ಷನ್‌ ನೋಡಿ- ವಿಡಿಯೊ ಇದೆ

ಐರಿಶ್ ಯುವಕನೊಬ್ಬ ಭಾರತೀಯ ಯುವತಿಯೊಬ್ಬಳನ್ನು ಮದುವೆಯಾಗಲು ಚಿನ್ನದ ಕಸೂತಿ ಮಾಡಿದ ಶೇರ್ವಾನಿ ಮತ್ತು ಅದಕ್ಕೆ ಹೊಂದಿಕೆಯಾಗುವ ಪ್ಯಾಂಟ್ ಧರಿಸಿ ಸಖತ್‌ ಆಗಿ ಮಿಂಚಿದ್ದಾನೆ. ಅವನ ಈ ಸಾಂಪ್ರದಾಯಿಕ ಲುಕ್‌ ನೋಡಿ ಅವನ ಕುಟುಂಬಸ್ಥರು ಹಾಗೂ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಮದುಮಗ ಧರಿಸಿದ್ದ ದಿರಿಸನ್ನು ಕಂಡು ಈ ಅಜ್ಜಿಯ ರಿಯಾಕ್ಷನ್‌ ನೋಡಿ

Profile pavithra May 30, 2025 12:34 PM

ನವದೆಹಲಿ: ವಿದೇಶಿಗರು ಭಾರತೀಯ ಯುವಕರು ಅಥವಾ ಯುವತಿಯರನ್ನು ಮದುವೆಯಾಗುವುದು, ಭಾರತದ ಸಂಸ್ಕೃತಿಯನ್ನು ಅನುಸರಿಸುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಬಿಟ್ಟಿದೆ. ಸೋಶಿಯಲ್ ಮಿಡಿಯಾದಲ್ಲಿ ಅದೆಷ್ಟೋ ಜೋಡಿಗಳ ಫೋಟೊ, ವಿಡಿಯೊಗಳು ವೈರಲ್ ಆಗಿತ್ತು. ಇದೀಗ ಐರಿಶ್ ಯುವಕನೊಬ್ಬ ಭಾರತೀಯ ಯುವತಿಯನ್ನು ಮದುವೆಯಾಗಲು ಸಾಂಪ್ರದಾಯಿಕ ಧಿರಿಸಿನಲ್ಲಿ ಮಿಂಚಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ. ನೆಟ್ಟಿಗರು ಕೂಡ ಇವನ ಡ್ರೆಸಿಂಗ್‌ ಸ್ಟೈಲ್‌ ನೋಡಿ ಫುಲ್‌ ಫಿದಾ ಆಗಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ವರನು ತನ್ನ ಸ್ನೇಹಿತನ ಜೊತೆ ಕಾರಿಡಾರ್ ಮೂಲಕ ನಡೆದುಕೊಂಡು ಹೋಗುವುದನ್ನು ಸೆರೆಹಿಡಿಯಲಾಗಿದೆ. ವರನು ಚಿನ್ನದ ಕಸೂತಿ ಮಾಡಿದ ಶೇರ್ವಾನಿ ಮತ್ತು ಅದಕ್ಕೆ ಹೊಂದಿಕೆಯಾಗುವ ಪ್ಯಾಂಟ್ ಧರಿಸಿದ್ದಾನೆ. ಇವನನ್ನು ನೋಡಿದ ಮನೆಯವರು ಖುಷಿಯಾಗಿ ಚಪ್ಪಾಳೆ ತಟ್ಟಿ ಹೊಗಳಿಕೆಯ ಸುರಿಮಳೆ ಸುರಿಸಿದ್ದಾರೆ. ಅಜ್ಜಿಯೊಬ್ಬಳು ಈತನನ್ನು ರಾಜಕುಮಾರನಿಗೆ ಹೋಲಿಸಿದ್ದಾಳಂತೆ.

ವಿಡಿಯೊ ಇಲ್ಲಿದೆ ನೋಡಿ...

ಸೋಶಿಯಲ್ ಮೀಡಿಯಾ ನೆಟ್ಟಿಗರು ಕೂಡ ವಿದೇಶಿ ವರನನ್ನು ಭಾರತೀಯ ಮದುವೆ ಡ್ರೆಸ್‍ನಲ್ಲಿ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನೆಟ್ಟಿಗರೊಬ್ಬರು, "ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ, ಈ ಚಿನ್ನದ ಬಣ್ಣ ನಿಮ್ಮ ಮೈ ಬಣ್ಣಕ್ಕೆ ಸರಿಯಾಗಿ ಹೊಂದಿಕೆಯಾಗುತ್ತಿದೆ" ಎಂದಿದ್ದಾರೆ. "ಭಾರತೀಯ ಸಾಂಪ್ರದಾಯಿಕ ಉಡುಗೆ ಯಾವಾಗಲೂ ಚೆನ್ನಾಗಿಯೇ ಇರುತ್ತದೆ" ಎಂದು ಮತ್ತೊಬ್ಬರು ತಿಳಿಸಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ 4.2 ಮಿಲಿಯನ್‌ಗಿಂತಲೂ ಹೆಚ್ಚು ವ್ಯೂವ್ಸ್ ಗಳಿಸಿದೆ.

ವಿದೇಶಿಗರು ಭಾರತೀಯರ ಮದುವೆ ಡ್ರೆಸ್‍ನಲ್ಲಿ ಮಿಂಚಿದ್ದು ಇದೇ ಮೊದಲಲ್ಲ. ಈ ಹಿಂದೆ ಹನ್ನಾ ರೋಜರ್ಸ್ (31) ಎಂಬ ವಿದೇಶಿ ಮಹಿಳೆ ಸಾಂಪ್ರದಾಯಿಕ ಭಾರತೀಯ ಮದುವೆಯ ಡ್ರೆಸ್‍ ಅನ್ನು ಧರಿಸಿ ತನ್ನ ಕುಟುಂಬಸ್ಥರು ಮತ್ತು ಸ್ನೇಹಿತರಿಗೆ ತೋರಿಸಿದ್ದಳು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ 12 ಮಿಲಿಯನ್ ವ್ಯೂವ್ಸ್ ಗಳಿಸಿತ್ತು.

ಈ ಸುದ್ದಿಯನ್ನೂ ಓದಿ:Viral Video: ಹೈಹೀಲ್ಸ್ ಧರಿಸಿ ಓಡಾಡಿದ ಗೋಲ್ಡನ್ ರಿಟ್ರೈವರ್; ಮಾಲೀಕರ ಮೇಲೆ ಕಿಡಿಕಾರಿದ ನೆಟ್ಟಿಗರು

ಲಾಸ್ ಏಂಜಲೀಸ್‌ನಲ್ಲಿ ನೆಲೆಸಿರುವ ರೋಜರ್ಸ್, ಜೈಪುರದ ಜೈ ಮಹಲ್ ಅರಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ವಿಧುರ್ ಗೋಯಲ್ ಕೈ ಹಿಡಿದಿದ್ದಳು ಕೆಂಪು ಲೆಹಂಗಾದಲ್ಲಿ ಆಕೆ ಸಖತ್‌ ಆಗಿ ಮಿಂಚಿದ್ದಳು.