Akanksha Puri: ವೈರಲ್ ಆಯ್ತು ಲಕ್ಷ್ಮೀ ಕೃಷ್ಣ ಡಿಸೈನ್ ಮಾಡಿದ ನಟಿ ಆಕಾಂಕ್ಷ ಪುರಿಯ ಸ್ಪೆಷಲ್ ಡ್ರೆಸ್
ಕರ್ನಾಟಕದ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮೀ ಕೃಷ್ಣ ಡಿಸೈನ್ ಮಾಡಿರುವ ಬಾಲಿವುಡ್ ಬೆಡಗಿ, ಹಿಂದಿ ಬಿಗ್‌ಬಾಸ್ ಮಾಜಿ ಕಂಟೆಸ್ಟಂಟ್ ಆಕಾಂಕ್ಷ ಪುರಿಯ ಬಾಡಿಕಾನ್ ಟ್ಯೂಬ್ ಡ್ರೆಸ್ ವೈರಲ್ ಆಗಿದೆ. ಇದ್ಯಾವ ಬಗೆಯ ಡ್ರೆಸ್? ವಿಶೇಷತೆ ಏನು ? ಖುದ್ದು ಡಿಸೈನರ್ ವಿಶ್ವವಾಣಿ ನ್ಯೂಸ್‌ಗೆ ವಿವರಿಸಿದ್ದಾರೆ.

ಚಿತ್ರಗಳು: ಆಕಾಂಕ್ಷಾ ಪುರಿ, ಬಾಲಿವುಡ್ ನಟಿ.

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬಾಲಿವುಡ್‌ನ ಗ್ಲಾಮರಸ್ ಬೆಡಗಿ ಅಕಾಂಕ್ಷ ಪುರಿ (Akanksha Puri) ಧರಿಸಿದ ಬಾಡಿಕಾನ್ ಟ್ಯೂಬ್ ಡ್ರೆಸ್ ವೈರಲ್ ಆಗಿದೆ. ಅಂದಹಾಗೆ, ಈ ಔಟ್‌ಫಿಟ್ ಡಿಸೈನ್ ಮಾಡಿರುವುದು ಬೇರ್ಯಾರು ಅಲ್ಲ! ಕನ್ನಡತಿ, ಸೆಲೆಬ್ರೆಟಿ ಡಿಸೈನರ್ ಲಕ್ಷ್ಮೀ ಕೃಷ್ಣ. ಹೌದು, ಸ್ಥಳೀಯ ಸೆಲೆಬ್ರೆಟಿ ಡಿಸೈನರ್ ಲಕ್ಷ್ಮೀ ಕೃಷ್ಣ, ಈ ವಿಶೇಷ ಡಿಸೈನರ್‌ವೇರ್ ಸಿದ್ಧಪಡಿಸಿದ್ದಾರೆ. ಆವಾರ್ಡ್ ಸಮಾರಂಭದ ರೆಡ್ ಕಾರ್ಪೆಟ್‌ನಲ್ಲಿ ಇದನ್ನು ಧರಿಸಿ ಹೆಜ್ಜೆ ಹಾಕಿದ, ಬಿಗ್‌ಬಾಸ್ ಮಾಜಿ ಕಂಟೆಸ್ಟಂಟ್ ಹಾಗೂ ನಟಿ ಅಕಾಂಕ್ಷ ಪುರಿಯ ಫೋಟೋಗಳು ಇದೀಗ ಫ್ಯಾಷನ್ ಲೋಕದಲ್ಲಿ ವೈರಲ್ ಆಗಿವೆ.
ಇದ್ಯಾವ ಬಗೆಯ ಡ್ರೆಸ್?
ಅಂದಹಾಗೆ, ಬೋಲ್ಡ್ ಪಿಂಕ್ ಶೇಡ್‌ನ ಬಾಡಿಕಾನ್ ಟ್ಯೂಬ್ ಡ್ರೆಸ್ ಇದಾಗಿದೆ. ಸ್ಪಾಂಡೆಕ್ಸ್ ಸ್ಕೂಬಾ ಮೆಟೀರಿಯಲ್‌ನಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ನೆಕ್ಲೈನ್‌ಗೆ ಆಂಗ್ಲ ಭಾಷೆಯ ಅಕ್ಷರ W ಶೇಪ್ ನೀಡಲಾಗಿದೆ. ಹಾಫ್ ಹಾರ್ಟ್ ಕಟ್ ಶೇಪ್‌ನಂತೆಯೂ ಬಿಂಬಿಸಲಾಗಿದೆ.
ಅಕಾಂಕ್ಷ ಪುರಿ ಅವರ ಇನ್‌ಸ್ಟಾಗ್ರಾಮ್ ಪೋಸ್ಟ್:
ಇವನಿಂಗ್ ಪಾರ್ಟಿ ಡ್ರೆಸ್ ಥೀಮ್
ಡಿಸೈನರ್ ಲಕ್ಷ್ಮೀ ಕೃಷ್ಣ ಪ್ರಕಾರ, ಈ ಉಡುಗೆಗೆ ವಿಶೇಷ ವಿನ್ಯಾಸ ಮಾಡಲಾಗಿದೆ. ಅವರು ಹೇಳುವಂತೆ, ಈ ಡ್ರೆಸ್‌ನಲ್ಲಿ ಹೂಗಳು ಹೊರಗಡೆ ಚಾಚಿದಂತೆ ಡಿಸೈನ್ ಮಾಡಲಾಗಿದೆ. ಇದಕ್ಕಾಗಿ ಸಾಕಷ್ಟು ಸೂಕ್ಷ್ಮವಾಗಿ ಕಲಾತ್ಮಕವಾಗಿ ವಿನ್ಯಾಸ ಮಾಡಲಾಗಿದೆ. ಇದೊಂದು ರೆಡ್ ಕಾರ್ಪೆಟ್ ಡ್ರೆಸ್ ಆಗಿದ್ದು, ಇವನಿಂಗ್ ಪಾರ್ಟಿಗಳಿಗೆ ಹೇಳಿ ಮಾಡಿಸಿದಂತಿದೆ. ನೋಡಲು ಅತ್ಯಾಕರ್ಷಕವಾಗಿ ಕಾಣಿಸುವ ಈ ಬಾಡಿಕಾನ್ ಗೌನ್ ನಟಿ ಆಕಾಂಕ್ಷ ಅವರಿಗೆ ಹೇಳಿ ಮಾಡಿಸಿದಂತಿದೆ ಎಂದಿದ್ದಾರೆ.
ಖುಷಿಯ ವಿಚಾರವೆಂದರೇ, ಆಕಾಂಕ್ಷ ಧರಿಸಿದ್ದ, ಈ ಔಟ್‌ಫಿಟ್‌ನ ರೀಲ್ಸ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಮೂರೂವರೆ ಸಾವಿರಕ್ಕೂ ಹೆಚ್ಚು ರೀಲ್ಸ್ ರೂಪದಲ್ಲಿ ಹರಿದಾಟಿದೆ. ಮಿಲಿಯನ್‌ಗಟ್ಟಲೆ ವ್ಯೂವ್ಸ್ ಪಡೆದಿದೆ ಎಂದು ಹೇಳಿದ್ದಾರೆ.

ಆಕಾಂಕ್ಷ ಡಿಸೈನರ್‌ವೇರ್ ಲವ್
ಆಕಾಂಕ್ಷ ಪುರಿ ಮೊದಲಿನಿಂದಲೂ ಯೂನಿಕ್ ಫ್ಯಾಷನ್‌ವೇರ್ ಆಯ್ಕೆ ಮಾಡುವ ನಟಿ. ಪ್ರತಿ ಬಾರಿಯೂ ಇವರು ಧರಿಸುವ ಔಟ್‌ಫಿಟ್‌ಗಳು ವೈರಲ್ ಆಗುತ್ತವೆ. ಸಾಕಷ್ಟು ಫ್ಯಾಷನ್ ಮ್ಯಾಗಜೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತವೆ. ಈ ಬಾರಿ ಡಿಸೈನರ್ ಲಕ್ಷ್ಮೀ ಕೃಷ್ಣ ಅವರ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವುದು ಅವರಿಗೂ ಖುಷಿ ಕೊಟ್ಟಿದೆ.
ಡಿಸೈನರ್‌ವೇರ್ ಬಗ್ಗೆ ಆಕಾಂಕ್ಷ ಖುಷಿ
ಯೂನಿಕ್ ಡಿಸೈನ್ ಹೊಂದಿರುವ ಈ ಡ್ರೆಸ್ ನನಗೆ ಪ್ರಿಯವಾಗಿದೆ. ಇಂತಹ ಡಿಸೈನ್ಗಳು ಎಂತವರನ್ನು ಸೆಳೆಯುತ್ತವೆ. ಲಕ್ಷ್ಮಿ ಕೃಷ್ಣ ಬೆಸ್ಟ್ ಡಿಸೈನರ್ ಎಂದು ಆಕಾಂಕ್ಷ ಹೊಗಳಿದ್ದಾರೆ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)