Viral Video: ಸಿಕ್ಕಾಪಟ್ಟೆ ವೈರಲ್ ಆಯ್ತು ಈ ದಂಪತಿಯ ಹನಿಮೂನ್ ವಿಡಿಯೊ
ಮದುವೆ ನಂತರ ಚಂದನ್-ಅಂಜಲಿ ದಂಪತಿ ಮನಾಲಿಗೆ ಹನಿಮೂನ್‍ಗೆ ಹೋಗಿದ್ದು, ಅಲ್ಲಿ ಚಂದನ್ ತನ್ನ ಪತ್ನಿಗೆ ದುಬಾರಿ ಐಫೋನ್ ನೀಡಿದ್ದಾನೆ. ದಂಪತಿ ತಮ್ಮ ಹನಿಮೂನ್‍ನ ಈ ಮಧುರ ಕ್ಷಣವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ಈಗ ನೆಟ್ಟಿಗರ ಗಮನ ಸೆಳೆದು ಸಿಕ್ಕಾಪಟ್ಟೆ ವೈರಲ್ ಆಗಿದೆ.


ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಮದುವೆಯಿಂದ ಹಿಡಿದು ಫಸ್ಟ್‌ನೈಟ್‌ನವರೆಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ. ಈ ಹಿಂದೆ ಹನಿಮೂನ್‍ಗೆ ಸಂಬಂಧಪಟ್ಟ ಹಲವಾರು ವಿಡಿಯೊಗಳು ವೈರಲ್ ಆಗಿದ್ದವು. ಅದೇರೀತಿ ಇಲ್ಲೊಂದು ದಂಪತಿ ತಮ್ಮ ಹನಿಮೂನ್(Honeymoon)ನಲ್ಲಿ ನಡೆದ ಘಟನೆಯೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದು ಈಗ ನೆಟ್ಟಿಗರ ಗಮನ ಸೆಳೆದು ಸಿಕ್ಕಾಪಟ್ಟೆ ವೈರಲ್ (Viral News) ಆಗಿದೆ. ವೈರಲ್ ವಿಡಿಯೊದಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ಹನಿಮೂನ್ ಉಡುಗೊರೆಯಾಗಿ ಐಫೋನ್ ನೀಡುತ್ತಿರುವ ದೃಶ್ಯ ಸೆರೆಯಾಗಿದೆ.
ಈ ವಿಡಿಯೊದಲ್ಲಿ, ಹೂವುಗಳಿಂದ ಅಲಂಕರಿಸಲ್ಪಟ್ಟ ಬೆಡ್ ಮೇಲೆ ಪತ್ನಿ ಅಂಜಲಿ ಕುಳಿತಿದ್ದಾಗ ಪತಿ ಚಂದನ್ ಗಿಫ್ಟ್ ಬಾಕ್ಸ್‌ವೊಂದನ್ನು ಆಕೆಗೆ ನೀಡಿದ್ದಾನೆ. ಆಕೆ ಆ ಬಾಕ್ಸ್ ತೆಗೆದು ನೋಡಿದಾಗ ಅದರೊಳಗೆ ದುಬಾರಿ ಸ್ಮಾರ್ಟ್‌ಫೋನ್ ನೋಡಿ ಆಕೆ ಶಾಕ್ ಆಗಿದ್ದಾಳೆ. ಗಂಡನ ಈ ಸರ್‌ಪ್ರೈಸ್ ಗಿಫ್ಟ್ ನೋಡಿ ಹೆಂಡತಿ ಫುಲ್ ಖುಷಿಯಾಗಿದ್ದಾಳೆ.
ವಿಡಿಯೊ ಇಲ್ಲಿದೆ ನೋಡಿ...
ಈ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೊ ಲಕ್ಷಾಂತರ ವ್ಯೂವ್ಸ್ ಮತ್ತು ಸಾವಿರಾರು ಲೈಕ್‌ಗಳನ್ನು ಗಳಿಸಿದೆ. ಹಲವರು ವರನ ರೊಮ್ಯಾಂಟಿಕ್ ನಡೆಯನ್ನು ಹೊಗಳಿ ಅಂಜಲಿಯನ್ನು ಅದೃಷ್ಟಶಾಲಿ ಎಂದು ಕರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಫೋಟೋಗೆ ಪೋಸ್ ಕೊಡುತ್ತಿದ್ದ ಭಾರತೀಯ ಪ್ರವಾಸಿಗನ ಮೇಲೆ ಹುಲಿ ದಾಳಿ; ವಿಡಿಯೋ ವೈರಲ್
ದಂಪತಿಯ ಹನಿಮೂನ್ ಸಂಬಂಧಪಟ್ಟ ವಿಡಿಯೊ ವೈರಲ್ ಆಗಿದ್ದು ಇದೇ ಮೊದಲಲ್ಲ. ಈ ಹಿಂದೆ ಡಿಜಿಟಲ್ ಕ್ರಿಯೇಟರ್ ಅರುಶಿ ಮತ್ತು ರಾಹುಲ್ ತಮ್ಮ ಮೊದಲ ರಾತ್ರಿಯ ಖಾಸಗಿ ಕ್ಷಣಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದು ಎಲ್ಲರ ಗಮನಸೆಳೆದು ವೈರಲ್ ಆಗಿತ್ತು. ವಿಡಿಯೊದಲ್ಲಿ ಆತ ತನ್ನ ಹೆಂಡತಿಯ ಮದುವೆಯ ಆಭರಣಗಳನ್ನು ಒಂದೊಂದೇ ತೆಗೆಯಲು ಸಹಾಯ ಮಾಡಿದ ವಿಡಿಯೊ ವೈರಲ್ ಆಗಿತ್ತು.ಇದನ್ನು ನೋಡಿ ನೆಟ್ಟಿಗರು ದಂಪತಿಯ ವಿರುದ್ಧ ಕಿಡಿಕಾರಿದ್ದರು.