Viral News: ಸಿಂಪಲ್ ಪ್ರಶ್ನೆಗೆ ಉತ್ತರಿಸಲಾಗದೆ ಲಕ್ಷಾಂತರ ರೂ.ಯ ಕೆಲಸ ಕಳೆದುಕೊಂಡ ಅಭ್ಯರ್ಥಿ; ಪ್ರಶ್ನೆ ಏನಾಗಿತ್ತು?
ಐಟಿ ಕಂಪನಿಯೊಂದರ ಇಂಟರ್ವ್ಯೂನಲ್ಲಿ ಸಂದರ್ಶನಕಾರರು ಕೇಳಿದ ಸರಳ ಪ್ರಶ್ನೆಗೆ ಉತ್ತರಿಸಲಾಗದೆ ಅಭ್ಯರ್ಥಿಯೊಬ್ಬ ವಾರ್ಷಿಕ 40 ಲಕ್ಷ ರೂಪಾಯಿ ಮೌಲ್ಯದ ಕೆಲಸವನ್ನು ಕಳೆದುಕೊಂಡಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral News) ಆಗಿದ್ದು, ಈ ವಿಶಿಷ್ಟ ಕಾರಣವನ್ನು ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.


ಬೆಂಗಳೂರು: ಐಟಿ ಕಂಪನಿಯೊಂದರ ಸಂದರ್ಶನ (Interview)ದಲ್ಲಿ ಸಂದರ್ಶನಕಾರರು ಅಸಾಮಾನ್ಯ ಕಾರಣವನ್ನು ಹೇಳಿ ಅಭ್ಯರ್ಥಿಯನ್ನು ರಿಜಿಕ್ಟ್ ಮಾಡಿದ್ದು, ಇದರಿಂದ ಆ ಅಭ್ಯರ್ಥಿಯು ವಾರ್ಷಿಕ 40 ಲಕ್ಷ ರೂಪಾಯಿ ಸಂಬಳದ ಕೆಲಸವನ್ನು ಕಳೆದುಕೊಂಡಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral News) ಆಗಿದೆ. ಸಂದರ್ಶನದ ವೇಳೆ ಕೇಳಿದ ಪ್ರಶ್ನೆಯೇನು, ಯಾಕೆ ಆತನನ್ನು ರಿಜೆಕ್ಟ್ ಮಾಡಲಾಯಿತು ಎಂಬಿತ್ಯಾದಿ ಮಾಹಿತಿ ಇಲ್ಲಿದೆ ನೋಡಿ.
ಪೋಸ್ಟ್ ಪ್ರಕಾರ, ಬೆಂಗಳೂರಿನ ಐಟಿ ಕಂಪನಿಯೊಂದರ ಪ್ರಾಡಕ್ಟ್ ಮ್ಯಾನೇಜರ್ ಹುದ್ದೆಗೆ ನೇಮಕಾತಿ ನಡೆಸಲಾಗಿತ್ತು. ಈ ಹುದ್ದೆಗೆ ಹಲವು ಅಭ್ಯರ್ಥಿಗಳು ಬಂದಿದ್ದರು. ಅದರಲ್ಲಿ ಒಬ್ಬ ಅಭ್ಯರ್ಥಿಯ ಉತ್ತರ ತುಂಬಾ ಭಿನ್ನವಾಗಿತ್ತು, ಈ ಕಾರಣದಿಂದಾಗಿ ಆತ ತನ್ನ ಕೆಲಸವನ್ನು ಕಳೆದುಕೊಂಡಿದ್ದಾನೆ. ಸಂದರ್ಶನಕಾರರು ಅಭ್ಯರ್ಥಿಗೆ "ಬೆಂಗಳೂರಿನಲ್ಲಿ ವರ್ಷಕ್ಕೆ ಎಷ್ಟು ದಿನ ಛತ್ರಿ ಒಯ್ಯಬೇಕು?" ಎಂಬ ಒಂದು ಸರಳ ಪ್ರಶ್ನೆಯನ್ನು ಕೇಳಿದ್ದಾರೆ.
ಆದರೆ ಈ ಅಭ್ಯರ್ಥಿಯು ಆ ಪ್ರಶ್ನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾನೆ. ಅಭ್ಯರ್ಥಿಯು ನೋಟ್ಪ್ಯಾಡ್ ತೆಗೆದು ಮಳೆಯ ಪ್ರವೃತ್ತಿಗಳು, ಹಿಂದಿನ ವರ್ಷಗಳ ದತ್ತಾಂಶ, ಮಾನ್ಸೂನ್ನ ಸಮಯದ ಬಗ್ಗೆಲ್ಲಾ ವಿವರಿಸಿದ್ದಾನೆೆ. ಆದರೆ ಸಂದರ್ಶನಕಾರರು "ಬೆಂಗಳೂರು ಕೇವಲ ಮಳೆಯ ಪ್ರಮಾಣವನ್ನು ಲೆಕ್ಕಹಾಕುವ ಸಾಮಾನ್ಯ ನಗರವಲ್ಲ" ಎಂದು ಹೇಳಿ ಅವನ ಉತ್ತರವನ್ನು ರಿಜೆಕ್ಟ್ ಮಾಡಿದ್ದಾರೆ.
ಇಲ್ಲಿ ಮಳೆ ಎಷ್ಟು ಅನಿರೀಕ್ಷಿತವಾಗಿ ಬರುತ್ತದೆ ಎಂದರೆ ಜನರಿಗೆ ಛತ್ರಿ ಯಾವಾಗ ತೆಗೆದುಕೊಳ್ಳಬೇಕೆಂಬುದೇ ತಿಳಿಯುವುದಿಲ್ಲ. ಇಲ್ಲಿ ಜನರು ಬಿಸಿಲಿನಲ್ಲಿಯೂ ಸಹ ಛತ್ರಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ಏಕೆಂದರೆ ಇದ್ದಕ್ಕಿದ್ದಂತೆ ಮಳೆ ಬರಬಹುದು. ಅಭ್ಯರ್ಥಿಯ ಲೆಕ್ಕಾಚಾರಗಳು ಚೆನ್ನಾಗಿವೆ ಆದರೆ ಬೆಂಗಳೂರನ್ನು ಅರ್ಥಮಾಡಿಕೊಳ್ಳಲು ಅವನು ಪ್ರಯತ್ನಿಸಲಿಲ್ಲ ಎಂದಿದ್ದಾರೆ ಸಂದರ್ಶನಕಾರರು. ಬೆಂಗಳೂರು ವಿಶಿಷ್ಟ ಹವಾಮಾನ ಪರಿಸ್ಥಿತಿಗಳಿಂದ ತುಂಬಿರುವ ನಗರ. ಅದನ್ನು ಕೇವಲ ಅಂಕಿಅಂಶಗಳಿಗೆ ಸೀಮಿತಗೊಳಿಸುವುದು ತಪ್ಪು ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಕಂತೆ ಕಂತೆ ಹಣವನ್ನು ಕಿಟಕಿಯಿಂದ ಎಸೆದ ಎಂಜಿನಿಯರ್; ವಿಡಿಯೊ ಫುಲ್ ವೈರಲ್; ಅಷ್ಟಕ್ಕೂ ಆಗಿದ್ದೇನು?
ಇತ್ತೀಚೆಗೆ, ಬೆಂಗಳೂರಿನಲ್ಲಿ ಮೇ ತಿಂಗಳಲ್ಲಿ ಇದುವರೆಗಿನ ಅತಿ ಹೆಚ್ಚು ಮಳೆಯಾಗಿದೆ. ಮೇ 1ರಿಂದ ಮೇ 26ರವರೆಗೆ ಒಟ್ಟು 307.9 ಮಿಮೀ ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ (IMD) ತಿಳಿಸಿದೆ. ಇದು ಮೇ 2023 ರಲ್ಲಿ ದಾಖಲಾಗಿದ್ದ 305.4 ಮಿಮೀ ಹಿಂದಿನ ದಾಖಲೆಯನ್ನು ಮುರಿಯುತ್ತದೆ. ಮೇ 31ರವರೆಗೆ ಮಧ್ಯಮ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಇದಕ್ಕೂ ಮುನ್ನ, ಐಎಂಡಿ ದತ್ತಾಂಶವು ಮೇ 2022ರಲ್ಲಿ 270.4 ಮಿಮೀ ಮಳೆಯೊಂದಿಗೆ ದಾಖಲೆಯನ್ನು ಹೊಂದಿದ್ದು, ನಂತರ ಮೇ 2017ರಲ್ಲಿ 241.9 ಮಿಮೀ ಮತ್ತು ಮೇ 2018ರಲ್ಲಿ 239.8 ಮಿಮೀ ಮಳೆಯಾಗಿದೆ ಎಂದು ತೋರಿಸಿದೆ. ಅದಕ್ಕಾಗಿಯೇ ಇಲ್ಲಿ ಮಳೆಗಾಲವನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಇದರಿಂದಾಗಿ ನೇಮಕಾತಿದಾರರು ಅಭ್ಯರ್ಥಿಯನ್ನು ಕೆಲಸದಿಂದ ತಿರಸ್ಕರಿಸಿದ್ದಾರೆ.