ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayak V Bhat Column: ಇವಿಎಂಗಳು ಶಾಪಮುಕ್ತ ವಾಗುವುದು ಯಾವಾಗ ?

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಮತ್ತು ಕೆಲ ರಾಜ್ಯಗಳ ಉಪಚುನಾವಣಾ ಫಲಿತಾಂಶಗಳ ಕುರಿತು ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾದವು. ಕರ್ನಾಟಕ ಸೇರಿದಂತೆ ಎಲ್ಲ ಕಡೆ ಎನ್‌ಡಿಎ ಪರವಾದ ಅಲೆಯಿದೆ ಎಂದು ಬಹುತೇಕ ಸಮೀಕ್ಷೆಗಳು ಅಭಿಪ್ರಾಯ ಪಟ್ಟವು. ಇವು ಬಿತ್ತರವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮಂತ್ರಿ ಮಹದೇವಪ್ಪನವರು, “ಮತಯಂತ್ರಗಳ (ಇವಿಎಂ) ಮೇಲೆ ಯಾಕೋ ನಮಗೆ ಅನುಮಾನ ಬರ್ತಾ ಇದೆ" ಎನ್ನುತ್ತಾ ಫಲಿತಾಂಶಗಳಿಗೆ ಮೊದಲೇ ಸೋಲಿಗೆ ನಿರೀಕ್ಷಣಾ ಜಾಮೀನು ತೆಗೆದುಕೊಂಡುಬಿಟ್ಟರು.

ವಿದ್ಯಮಾನ

ವಿನಾಯಕ ವೆಂ. ಭಟ್ಟ,

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಮತ್ತು ಕೆಲ ರಾಜ್ಯಗಳ ಉಪಚುನಾವಣಾ ಫಲಿತಾಂಶಗಳ ಕುರಿತು ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾದವು. ಕರ್ನಾಟಕ ಸೇರಿದಂತೆ ಎಲ್ಲ ಕಡೆ ಎನ್‌ಡಿಎ ಪರವಾದ ಅಲೆಯಿದೆ ಎಂದು ಬಹುತೇಕ ಸಮೀಕ್ಷೆಗಳು ಅಭಿಪ್ರಾಯ ಪಟ್ಟವು. ಇವು ಬಿತ್ತರವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮಂತ್ರಿ ಮಹದೇವಪ್ಪನವರು, “ಮತಯಂತ್ರಗಳ (ಇವಿಎಂ) ಮೇಲೆ ಯಾಕೋ ನಮಗೆ ಅನುಮಾನ ಬರ್ತಾ ಇದೆ" ಎನ್ನುತ್ತಾ ಫಲಿತಾಂಶಗಳಿಗೆ ಮೊದ ಲೇ ಸೋಲಿಗೆ ನಿರೀಕ್ಷಣಾ ಜಾಮೀನು ತೆಗೆದುಕೊಂಡುಬಿಟ್ಟರು.

ಒಂದೊಮ್ಮೆ ಸಮೀಕ್ಷೆಯಂತೆ ಕಾಂಗ್ರೆಸ್ ಸೋತರೆ, “ನಾನು ಮೊದಲೇ ಹೇಳಿಲ್ಲವೇ? ಜನಾಭಿಪ್ರಾಯ ನಮ್ಮ ಕಡೆಗೇ ಇತ್ತು, ಆದರೆ ಮತಯಂತ್ರಗಳ ಟ್ಯಾಂಪರಿಂಗ್ ಕಾರಣ ನಾವು ಸೋಲನುಭವಿಸ ಬೇಕಾಯಿತು" ಎನ್ನುವುದು ಅವರ ಆಲೋಚನೆಯಾಗಿತ್ತು. ಆದರೆ ಅದೃಷ್ಟವಶಾತ್, ರಾಜ್ಯದ ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿತು. ಈಗ ಮತಯಂತ್ರಗಳ ದುರುಪ ಯೋಗದ ಕುರಿತು ಮಹದೇವಪ್ಪನವರ ಮಾತೇ ಇಲ್ಲ! ಈ ಬಾರಿ ಎಲ್ಲ ಸರಿಯಿತ್ತು ಅಂತ ಕಾಣುತ್ತದೆ.

ಅಚ್ಚರಿಯೆನ್ನುವಂತೆ ಜಾರ್ಖಂಡ್‌ನಲ್ಲಿ ‘ಇಂಡಿಯ’ ಮೈತ್ರಿಕೂಟವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೂ, ಪ್ರಮುಖ ರಾಜ್ಯವಾದ ಮಹಾರಾಷ್ಟ್ರದಲ್ಲಿ ಮಾತ್ರ ಬಿಜೆಪಿ ನೇತೃತ್ವದ ‘ಮಹಾಯುತಿ’ ಮೈತ್ರಿಕೂಟ ಅಭೂತಪೂರ್ವ ಗೆಲುವು ಸಾಧಿಸಿತು. ಇಲ್ಲಿ ‘ಮಹಾವಿಕಾಸ್ಅಘಾಡಿ’ ಮೈತ್ರಿಕೂಟದ ಹೀನಾಯ ಸೋಲಿಗೆ, ಮಹಾರಾಷ್ಟ್ರದವರೇ ಆಗಿದ್ದ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ರನ್ನು ರಾಹುಲ್ ಗಾಂಧಿಯವರು ಅವಹೇಳನ ಮಾಡಿದ್ದು, ತಮ್ಮ ಭಾಷಣಗಳಲ್ಲಿ ಜಾತಿಗಳಿಗೆ ಇನ್ನಿಲ್ಲದ ಪ್ರಾಧಾನ್ಯ ನೀಡಿದ್ದು, ಅಂಬಾನಿ-ಅದಾನಿಗಳನ್ನು ಅಪರಾಧಿಗಳಂತೆ ಬಿಂಬಿ ಸಿದ್ದು ಮುಂತಾಗಿ ಅವರ ಪ್ರಚಾರ ವೈಖರಿಯೇ ಕಾರಣವೆಂದು ಅವರ ಮಿತ್ರಪಕ್ಷಗಳು ದೂರಲಾ ರಂಭಿಸಿದವು.

ಕಾಂಗ್ರೆಸ್ ನೇತೃತ್ವದಲ್ಲಿ ಮಿತ್ರಕೂಟಕ್ಕೆ ಪದೇ ಪದೆ ಸೋಲಾಗುತ್ತಿರುವುದರಿಂದ, ‘ಇಂಡಿಯ’ ಮೈತ್ರಿಕೂಟವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಮಮತಾ ಬ್ಯಾನರ್ಜಿಯವರಿಗೆ ವಹಿಸ ಬೇಕೆಂದು ಪಶ್ಚಿಮ ಬಂಗಾಳದ ಸಂಸದರೊಬ್ಬರು ಕ್ಯಾತೆ ತೆಗೆದಿದ್ದೂ ಆಯಿತು.ಶರದ್ ಪವಾರ್ ಸೇರಿದಂತೆ, ಮಹಾರಾಷ್ಟ್ರದಲ್ಲಿ ಸೋತ ‘ಇಂಡಿಯ’ ಕೂಟದ ಯಾವ ನಾಯಕನೂ ಇವಿಎಂ ಬಗ್ಗೆ ದೂರಲಿಲ್ಲ. ಅಪರೂಪಕ್ಕೆಂಬಂತೆ ರಾಹುಲರೂ ಚುನಾವಣಾ ಸೋಲಿನ ಕುರಿತು ಪ್ರತಿಕ್ರಿಯಿಸದೆ ಮೌನಕ್ಕೆ ಶರಣಾದರು. ಆದರೆ, ಕರ್ನಾಟಕದ ಗೃಹಮಂತ್ರಿ ಡಾ. ಜಿ.ಪರಮೇಶ್ವರ್ ಅವರು ಸ್ವಯಂ ಸ್ಪೂರ್ತಿಯಿಂದ ಮಹಾರಾಷ್ಟ್ರ ಚುನಾವಣಾ ಸೋಲನ್ನು ಪರಾಮರ್ಶಿಸಿ, “ಸೋಲಿಗೆ ಇವಿಎಂಗಳೇ ಕಾರಣ" ಎಂದುಬಿಟ್ಟರು. ಪತ್ರಕರ್ತರು ಸುಮ್ಮನಿರಬೇಕಲ್ಲ, “ಹಾಗಾದರೆ, ಜಾರ್ಖಂಡ್‌ನಲ್ಲಿ ‘ಇಂಡಿ ಯ’ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಅಽಕಾರಕ್ಕೆ ಬಂತಲ್ಲಾ!

ಅಲ್ಲಿ ಇವಿಎಂಗಳು ಸರಿಯಾಗಿ ಕಾರ್ಯನಿರ್ವಹಿಸಿವೆ ಅಂತ ಅರ್ಥವಾ?" ಎಂದು ಪ್ರಶ್ನಿಸಿದ್ದಕ್ಕೆ, “ನೋಡೀ, ಇವಿಎಂಗಳನ್ನು ಟ್ಯಾಂಪರ್ ಮಾಡುವುದರಲ್ಲಿ ಬಿಜೆಪಿಯವರು ನಿಸ್ಸೀಮರಿದ್ದಾರೆ. ಸಂಶಯ ಬರದಿರಲಿ ಎಂಬ ಕಾರಣಕ್ಕೆ ಸಣ್ಣ ರಾಜ್ಯಗಳನ್ನು ವಿಪಕ್ಷಗಳಿಗೆ ಬಿಟ್ಟುಕೊಟ್ಟು, ದೊಡ್ಡ ರಾಜ್ಯಗಳನ್ನು ತಾವೇ ಉಳಿಸಿಕೊಳ್ಳುವ ಹಾಗೆ ಯೋಜನೆ ಹಾಕಿ ಇವಿಎಂಗಳನ್ನು ಬಳಸಿಕೊಳ್ಳುತ್ತಾರೆ.

ಹಾಗಾಗಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿರುವವರೆಗೆ, ಅಲ್ಲಿ ಮತ್ತು ಪ್ರಮುಖ ರಾಜ್ಯಗಳಲ್ಲಿ ವಿರೋಧಿಗಳ ಗೆಲುವು ಕನಸಿನ ಮಾತು" ಎನ್ನುವ ಬಾಲಿಶ ಹೇಳಿಕೆ ಕೊಟ್ಟು ನಗೆಗೀಡಾದರು ಜಿ.ಪರಮೇಶ್ವರ್. ಕುಣಿಯಲು ಬಾರದವರು ‘ನೆಲವೇ ಡೊಂಕು’ ಎಂದಂತಿತ್ತು ಈ ಹೇಳಿಕೆಯ ಪರಿ! ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ, “ಇವಿಎಂ ಬದಲಿಗೆ ಮೊದಲಿನಂತೆ ಮತಪತ್ರದ ಮೂಲಕ ಚುನಾವಣೆ ನಡೆಸುವಂತೆ ಸರಕಾರವನ್ನು ಆಗ್ರಹಿ ಸಲು ‘ಭಾರತ್ ಜೋಡೋ’ ಮಾದರಿಯಲ್ಲಿ ರಾಷ್ಟ್ರಾದ್ಯಂತ ಆಂದೋಲನ ನಡೆಸುತ್ತೇವೆ"ಎನ್ನುವ ಮೂಲಕ ವಿಡಂಬನೆಗೊಳಗಾದರು.

ಈ ಮಧ್ಯೆ, ಇದೇ ವಿಷಯದ ಕುರಿತು ತೆಲಂಗಾಣದ ಪೌಲ್ ಎನ್ನುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿತ್ತು. “ಇವಿಎಂ ಬರುವುದಕ್ಕಿಂತ ಮುಂಚೆ ಭಾರತದಲ್ಲಿ ಚುನಾವಣಾ ಅಕ್ರಮಗಳು ಯಾವ ಪ್ರಮಾಣದಲ್ಲಿ ನಡೆಯುತ್ತಿದ್ದವು ಎಂಬ ಅರಿವು ನ್ಯಾಯಾಲಯಕ್ಕಿದೆ. ಒಂದೊಮ್ಮೆ ಮತ್ತೆ ಮತಪತ್ರದ ಮೂಲಕ ಚುನಾವಣೆ ನಡೆಯುವಂತಾದರೆ, ಎಲ್ಲವೂ ಸರಿಯಾಗಿ ನಡೆಯಲಿದೆ ಎಂಬ ಭರವಸೆಯನ್ನಂತೂ ಯಾರೂ ಕೊಡಲಾರರು. ಹಾಗಾಗಿ, ಭಾರತದ ಚುನಾವಣಾ ಸುಧಾರಣೆಗಳನ್ನುಹಿಂದೆಳೆಯುವ ಯಾವುದೇ ಪ್ರಸ್ತಾವನೆಯನ್ನು ತಂದು ನ್ಯಾಯಾಲಯದ ಸಮಯವನ್ನು ವ್ಯರ್ಥಮಾಡಬೇಡಿ" ಎಂಬ ತೀಕ್ಷ್ಣ ಸಂದೇಶ ನೀಡುವ ಮೂಲಕ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿತು. ಇವಿಎಂ ಬಳಕೆಯ ವಿರುದ್ಧ ವಿವಿಧ ರಾಜ್ಯಗಳ ಉಚ್ಚ ನ್ಯಾಯಾಲಯಗಳಲ್ಲಿ ಮತ್ತುಭಾರತದ ಸುಪ್ರೀಂಕೋರ್ಟ್‌ನಲ್ಲಿ ಈ ಮೊದಲೂ ಹಲವು ಪ್ರಕರಣಗಳು ದಾಖಲಾಗಿದ್ದಿದೆ. ಅವು ಇಂಥ ಪ್ರಕರಣಗಳನ್ನು ವಜಾಗೊಳಿಸಿ ಚುನಾವಣಾ ಆಯೋಗದ ಪರವಾಗಿ ತೀರ್ಪು ನೀಡಿದ್ದಿದೆ.

ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡುವ ಪಕ್ಷಗಳು ತಮ್ಮ ವೈಫಲ್ಯವನ್ನು ಇವಿಎಂ ಮೇಲೆ ಹೊರಿಸುವುದು ಇದೇ ಮೊದಲೇನಲ್ಲ. “ಇವಿಎಂ ವಂಚನೆಯಿಂದಾಗಿ ಲೋಕಸಭಾ ಚುನಾವಣೆಯಲ್ಲಿ ಯುಪಿಎ ಒಕ್ಕೂಟ ಗೆದ್ದಿದೆ" ಎಂದು ೨೦೦೯ರಲ್ಲಿ ಬಿಜೆಪಿ ಹೇಳಿಕೊಂಡಿತ್ತು. “ಚುನಾವಣಾಆಯೋಗವು ಇವಿಎಂನಿಂದ ಸಾಂಪ್ರದಾಯಿಕ ಮತಪತ್ರ ವ್ಯವಸ್ಥೆಗೆ ಹಿಂದಿರುಗಬೇಕು" ಎಂದು ಬಿಜೆಪಿ ನಾಯಕ ಆಡ್ವಾಣಿಯವರೂ ಆಗ ಆಗ್ರಹಿಸಿದ್ದರು.

ವರ್ಷಪೂರ್ತಿ ಒಂದಲ್ಲಾ ಒಂದು ಕಡೆ ಚುನಾವಣೆ ನಡೆಯುತ್ತಲೇ ಇರುವ ಭಾರತದಲ್ಲಿ, ಸದಾ ಏರುತ್ತಿರುವ ಚುನಾವಣಾ ವೆಚ್ಚಗಳಿಗೆ ಕಡಿವಾಣ ಹಾಕಲೆಂದು ಮತ್ತು ಇತರ ಆಡಳಿತಾತ್ಮಕ ಕಾರಣಗಳಿಂದಾಗಿ, ಎಲ್ಲ ಪಕ್ಷಗಳ ಮತ್ತು ತಜ್ಞರ ಅಭಿಪ್ರಾಯ ಪಡೆದೇ ಇವಿಎಂ ಅನ್ನು ಪರಿಚಯಿಸ ಲಾಗಿತ್ತು. ಸಾರ್ವಜನಿಕ ಸ್ವಾಮ್ಯದ ‘ಇಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ’ ಮತ್ತು ‘ಭಾರತ್‌ ಇಲೆಕ್ಟ್ರಾನಿಕ್ಸ್’ ಅಭಿವೃದ್ಧಿಪಡಿಸಿದ ಇವಿಎಂಗಳನ್ನು ೧೯೯೦ರ ದಶಕದ ಉತ್ತರಾರ್ಧದಲ್ಲಿ ಚುನಾವಣೆಗಳಲ್ಲಿ ಹಂತಹಂತವಾಗಿ ಪರಿಚಯಿಸಲಾಯಿತು. ೨೦೦೦ನೇ ಇಸವಿಯಿಂದೀಚೆಗೆ ೪ ಲೋಕಸಭೆ ಮತ್ತು ೧೨೨ ರಾಜ್ಯ ವಿಧಾನಸಭಾ ಚುನಾವಣೆಗಳನ್ನು ಇವಿಎಂ ಮೂಲಕವೇ ನಡೆಸಲಾಗಿದೆ.ಭಾರತದಲ್ಲಿ ಇವಿಎಂ ಬಳಕೆಯ ಪರಿಕಲ್ಪನೆ ಶುರುವಾಗಿದ್ದು ೧೯೭೭ರಲ್ಲಿ ಆದರೂ, ಮೇ ೧೯೮೨ರಲ್ಲಿ ಕೇರಳದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಇವಿಎಂ ಬಳಕೆಯಾಯಿತು. ಆದಾಗ್ಯೂ, ಅದರ ಬಳಕೆ ಯನ್ನು ಸೂಚಿಸುವ ನಿರ್ದಿಷ್ಟ ಕಾನೂನಿನ ಅನುಪಸ್ಥಿತಿಯಿಂದಾಗಿ ಸುಪ್ರೀಂಕೋರ್ಟ್ ಆ ಚುನಾವಣೆಯನ್ನು ರದ್ದುಗೊಳಿಸುವಂತಾಯಿತು. ತರುವಾಯ ೧೯೮೯ರಲ್ಲಿ, ಇವಿಎಂ ಬಳಕೆಗೆ ಅವಕಾಶ ಕಲ್ಪಿಸಲು ‘ಪ್ರಜಾಪ್ರತಿನಿಧಿ ಕಾಯ್ದೆ, ೧೯೫೧’ಕ್ಕೆ ತಿದ್ದುಪಡಿ ತರಲಾಯಿತು. ೧೯೯೮ರಲ್ಲಿ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ದೆಹಲಿ ರಾಜ್ಯಗಳಲ್ಲಿಹರಡಿರುವ ೨೫ ವಿಧಾನಸಭಾ ಕ್ಷೇತ್ರಗಳಲ್ಲಿ ಇವನ್ನು ಪ್ರಾಯೋಗಿಕವಾಗಿ ಬಳಸಲಾಯಿತು. ೧೯೯೯ರಲ್ಲಿ ೪೫ ಸಂಸದೀಯ ಕ್ಷೇತ್ರಗಳಿಗೆ, -ಬ್ರವರಿ ೨೦೦೦ದಲ್ಲಿ ಹರಿಯಾಣ ವಿಧಾನಸಭಾ ಚುನಾವಣೆಯ ಕೆಲ ಕ್ಷೇತ್ರಗಳಿಗೆ ಇವಿಎಂ ಬಳಕೆಯನ್ನು ವಿಸ್ತರಿಸಲಾಯಿತು. ಮೇ ೨೦೦೧ರಲ್ಲಿ,ತಮಿಳುನಾಡು, ಕೇರಳ, ಪುದುಚೇರಿ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಇವಿಎಂಗಳನ್ನು ಬಳಸಲಾಯಿತು. ಅಂದಿನಿಂದ ಪ್ರತಿ ರಾಜ್ಯ ವಿಧಾನಸಭಾ ಚುನಾವಣೆಗೆ ಆಯೋಗವು ಇವಿಎಂಗಳನ್ನು ಬಳಸುತ್ತಾ ಬಂದಿದೆ.

೨೦೦೪ರ ಲೋಕಸಭಾ ಚುನಾವಣೆಯಲ್ಲಿ ದೇಶದ ಎಲ್ಲಾ ೫೪೩ ಕ್ಷೇತ್ರಗಳಲ್ಲಿ ಮೊದಲ ಬಾರಿಗೆ ಇವಿಎಂಗಳನ್ನು ಬಳಸಲಾಯಿತು. ೨೦೧೦ರಲ್ಲಿ, ರಾಜಕೀಯ ಪಕ್ಷಗಳೊಂದಿಗೆ ಸಮಾಲೋಚಿಸಿದ ನಂತರ ಚುನಾವಣಾ ಆಯೋಗವು, ಪಾರದರ್ಶಕತೆಯ ಮಾನದಂಡವಾಗಿ ಇವಿಎಂಗಳಲ್ಲಿ ‘ಮತದಾರರ ಪರಿಶೀಲಿಸಿದ ಪೇಪರ್ ಆಡಿಟ್ ಟ್ರಯಲ್’ (PಅS) ಕಾರ್ಯಸಾಧ್ಯತೆಯ ಅಧ್ಯಯನಕ್ಕೆ ಪರಿಣತ ತಾಂತ್ರಿಕ ಸಮಿತಿಯನ್ನುನೇಮಿಸಿತು. ಯಾವ ಪಕ್ಷಕ್ಕೆ ಮತ ಹಾಕಲಾಗಿದೆಯೋ ಅದರ ಚಿಹ್ನೆಯನ್ನು ಒಳಗೊಂಡಿರುವ ಮುದ್ರಿತ ಕಾಗದವನ್ನು ಮತದಾರರಿಗೆ ಪ್ರದರ್ಶಿಸುವ ಸಾಧ್ಯತೆಯ ಪರಿಶೀಲನಾ ಕಾರ್ಯವನ್ನು ಈ ಸಮಿತಿಗೆ ವಹಿಸಲಾಯಿತು. ಸಮಿತಿಯ ಶಿಫಾರಸಿನ ಆಧಾರದ ಮೇಲೆ PಅS ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಯಿತು.

ಇವಿಎಂ ಟ್ಯಾಂಪರಿಂಗ್ ಸಾಧ್ಯತೆಯನ್ನು ಚುನಾವಣಾ ಆಯೋಗದವರು ಮತ್ತು ಇವಿಎಂ ತಯಾರಕರು ಸತತವಾಗಿ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಪ್ರೋಗ್ರಾಮಿಂಗ್ ಅನ್ನು ಸುರಕ್ಷಿತ ಉತ್ಪಾದನಾ ಸೌಲಭ್ಯದಲ್ಲಿ ಮಾಡಲಾಗಿರುವುದರಿಂದ ಯಂತ್ರಗಳು ‘ಟ್ಯಾಂಪರ್-ಪ್ರೂಫ್’ ಆಗಿವೆಯೆಂದು ಅವರು ಪದೇಪದೆ ಸಮರ್ಥಿಸಿಕೊಂಡಿದ್ದಾರೆ. ಮೊದಲಿದ್ದ ಮತಪತ್ರಗಳಿಗೆ ಹೋಲಿಸಿದರೆ, ಇವಿಎಂ ಬಳಕೆಯಾದಾಗಿನಿಂದ ಸಣ್ಣ ಸಣ್ಣ ರಾಜಕೀಯ ಪಕ್ಷಗಳ ಮತಗಳಿಕೆಯಲ್ಲಿ ಮತ್ತು ರಾಜಕೀಯ ಸ್ಪರ್ಧೆಯಲ್ಲಿ ಹೆಚ್ಚಳವಾಗಿರುವುದು ಮುಂತಾದ ಅನೇಕ ಪ್ರಯೋಜನಗಳನ್ನುತಜ್ಞರ ವರದಿಗಳು ಸಾರುತ್ತವೆ. ಯಂತ್ರಗಳ ವಿನ್ಯಾಸವು ಮತಗಟ್ಟೆಯನ್ನು ವಶಪಡಿಸಿಕೊಳ್ಳುವ ಸಾಧ್ಯತೆಯನ್ನು ಸಂಪೂರ್ಣವಾಗಿ ನಿವಾರಿಸಿದೆ ಎನ್ನುತ್ತಾರೆ ತಜ್ಞರು.

ಹಾಗಾಗಿ, ಚುನಾವಣಾ ವಂಚನೆಗಳಲ್ಲಿ ಗಣನೀಯ ಇಳಿಕೆಯಾಗುವುದಕ್ಕೆ ಇವಿಎಂ ಬಳಕೆಯು ಕಾರಣವಾಯಿತು ಎಂಬುದನ್ನು ಅವರ ವಿಶ್ಲೇಷಣೆ ತೋರಿಸುತ್ತದೆ. ಹೊಸ ತಂತ್ರಜ್ಞಾನದ ಪರಿಚಯವು ಮಹಿಳೆಯರ ಹಾಗೂ ಪರಿಶಿಷ್ಟ ಜಾತಿಗಳು-ಬುಡಕಟ್ಟುಗಳಿಗೆ ಸೇರಿದ ಮತದಾರರ ಭಾಗವಹಿಸುವಿಕೆಯ ಹೆಚ್ಚಳಕ್ಕೆ ಕಾರಣವಾಗಿ ಒಟ್ಟಾರೆ ಚುನಾವಣಾ ಪ್ರಕ್ರಿಯೆಯು ಹೆಚ್ಚು ಸ್ಪರ್ಧಾತ್ಮಕವಾಯಿತು ಎನ್ನುವವರಿ ದ್ದಾರೆ. ಮಾತ್ರವಲ್ಲದೆ, ಇಲೆಕ್ಟ್ರಾನಿಕ್ ಮತದಾನವು ಮಾನ್ಯವಾಗುವ ಮತಗಳ ಸಂಖ್ಯೆಯನ್ನು ಹೆಚ್ಚಿಸುವ ಅತ್ಯಂತ ಸೂಕ್ತ ಮಾರ್ಗವಾಗಿದೆ. ಇವಿಎಂ ಪರಿಚಯದ ನಂತರ ಭಾರತದಲ್ಲಿ ಚುನಾವಣಾ ಅಪರಾಧ ಪ್ರಕರಣಗಳಲ್ಲಿ ಗಮನಾರ್ಹ ಇಳಿಕೆಯಾಗಿದೆ ಎನ್ನುವುದನ್ನಂತೂ ಒಪ್ಪಲೇಬೇಕು.

ಮೊದಲೆಲ್ಲಾ ಸಾವಿರಾರು ಬೂತ್‌ಗಳಲ್ಲಿ ಮರುಮತದಾನ ನಡೆಯುತ್ತಿತ್ತು, ಈಗ ಅದು ಬಹುತೇಕ ಶೂನ್ಯವೆಂತಲೇ ಹೇಳಬೇಕು. “೭೦ ಕೋಟಿಗೂ ಹೆಚ್ಚಿನ ಮತಗಳನ್ನು ಒಂದೇ ದಿನದಲ್ಲಿ ಎಣಿಸಿ ಮುಗಿಸುವ ಭಾರತದ ಮುಂದೆ, ತಂತ್ರಜ್ಞಾನದ ಬಳಕೆಯಲ್ಲಿ ಮುಂಚೂಣಿಯಲ್ಲಿರುವ ನಮ್ಮ ಕ್ಯಾಲಿ-ರ್ನಿಯಾದಂಥ ಒಂದು ರಾಜ್ಯದ ಮತಗಳ ಎಣಿಕೆಯನ್ನು ಪೂರ್ಣಮಾಡಿ ಮುಗಿಸಲಾಗಲಿಲ್ಲವಲ್ಲಾ" ಎಂದು ಅಮೆರಿಕದ ಎಲಾನ್ ಮಸ್ಕ್‌ ರಂಥವರೂ ಭಾರತದ ಸಾಧನೆಯನ್ನು ಪ್ರಶಂಸಿಸಿದ್ದಾರೆ. ಇಷ್ಟೆಲ್ಲಾ ಪ್ರಯೋಜನಗಳು ನಮ್ಮ ಕಣ್ಣ ಮುಂದಿದ್ದರೂ, ನಮ್ಮ ಚುನಾವಣಾ ಪ್ರಕ್ರಿಯೆಯನ್ನು ಇತರ ಮುಂದುವರಿದ ದೇಶಗಳು ಕೊಂಡಾಡುತ್ತಿದ್ದರೂ, ನಮ್ಮದೇ ಕೆಲ ರಾಜಕೀಯ ಪಕ್ಷಗಳು ಮಾತ್ರ ಈ ತಂತ್ರಜ್ಞಾನವನ್ನು ಅನುಮಾನದಿಂದ ನೋಡುತ್ತಿರುವುದೇಕೆ ಎಂಬುದೇ ಅರ್ಥವಾಗುತ್ತಿಲ್ಲ.

ಒಂದೆಡೆ, ಚುನಾವಣಾ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಲು ‘ಒಂದು ದೇಶ, ಒಂದು ಚುನಾವಣೆ’ ಕುರಿತು ದೇಶದಲ್ಲಿ ಚರ್ಚೆಗಳು ನಡೆಯುತ್ತಿದ್ದರೆ ಮತ್ತು ಮತದಾನದ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಲು ಮನೆಯಲ್ಲಿ ಅಥವಾ ಕಚೇರಿಗಳಲ್ಲಿದ್ದುಕೊಂಡೇ ಮತಹಾಕುವ ಸುಲಭದ ವ್ಯವಸ್ಥೆಗಳ ಜಾರಿಗೆ ಚಿಂತನೆ ನಡೆಯುತ್ತಿದ್ದರೆ, ಇನ್ನೊಂದೆಡೆ ಕೆಲವರು ಇರುವ ಸುಧಾರಿತ ವ್ಯವಸ್ಥೆಯನ್ನೂ ಹಿಂದಿನತಲೆಮಾರಿಗೆ ಕೊಂಡೊಯ್ಯುವ ಯತ್ನದಲ್ಲಿರುವುದು ಅಚ್ಚರಿಯ ಸಂಗತಿ. ಇವಿಎಂ, ಗುರುತಿನ ಚೀಟಿ ಮುಂತಾದ ಕ್ರಾಂತಿಕಾರಕ ಮತ್ತು ಸ್ವಾಗತಾರ್ಹ ಬದಲಾವಣೆಗಳನ್ನು ಭಾರತೀಯ ಚುನಾವಣಾ ವ್ಯವಸ್ಥೆಯಲ್ಲಿ ಜಾರಿಗೆ ತಂದ ಕಾಂಗ್ರೆಸ್ ಪಕ್ಷವೇ ಇಂದು ಅವುಗಳ ವಿರುದ್ಧ ಮಾತನಾಡುತ್ತಿರುವುದು ಸಖೇದಾಶ್ಚರ್ಯವನ್ನು ಉಂಟುಮಾಡುತ್ತಿದೆ. ಹಾಗೊಮ್ಮೆ ಇವಿಎಂಗಳ ಸರ್ವನಿಯಂತ್ರಣವೂ ಬಿಜೆಪಿಯ ಕೈಯಲ್ಲೇ ಇದೆ ಅಂತಾದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಬೇಕಿತ್ತು,

ರಾಹುಲ್ ಗಾಂಧಿಯವರು ೨ ಕಡೆ ಗೆಲ್ಲಲು ಸಾಧ್ಯವಾಗಬಾರದಿತ್ತು, ಸೋತು ಸುಣ್ಣವಾಗಿದ್ದ ಕಾಂಗ್ರೆಸ್‌ಗೆ ೯೯ ಸ್ಥಾನ ಬರಬಾರದಿತ್ತು ಮತ್ತು

ಅಧಿಕಾರದಲ್ಲಿದ್ದ ಬಿಜೆಪಿ ಕರ್ನಾಟಕದಂಥ ಶ್ರೀಮಂತ ರಾಜ್ಯವನ್ನು ಕಳೆದುಕೊಳ್ಳಬಾರದಿತ್ತು ಅಲ್ಲವೇ? ೨೦೦೪ರಿಂದ ಕಾಂಗ್ರೆಸ್‌ಗೆ ದಕ್ಕಿದ್ದಚುನಾವಣಾ ಗೆಲುವುಗಳು ಇವಿಎಂ ಟ್ಯಾಂಪರಿಂಗ್ ಮೂಲಕವೇ ಸಾಽಸಿದ್ದೇ? ಎಂಬೆಲ್ಲಾ ಪ್ರಶ್ನೆಗಳಿಗೆ ಕಾಂಗ್ರೆಸ್ ಸೇರಿದಂತೆ ಇವಿಎಂಗಳ ಬಗ್ಗೆ ಸಂಶಯಿಸುವವರೇ ಉತ್ತರಿಸಬೇಕಿದೆ.

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)

ಇದನ್ನೂ ಓದಿ: