ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madenuru Manu: ಮಿಂಚುಗೆ ಮೋಸ ಮಾಡಲ್ಲ, ಚೆನ್ನಾಗಿ ನೋಡಿಕೊಳ್ತೀನಿ ಎಂದ ಮಡೆನೂರ್ ಮನು

Madenuru Manu: ನಟ ಮಡೆನೂರು ಮನು ವಿರುದ್ಧ ಅತ್ಯಾಚಾರ, ಬಲವಂತದ ಗರ್ಭಪಾತ, ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಕಿರುತೆರೆ ನಟಿಯೊಬ್ಬರು ಆರೋಪಿಸಿದ್ದರು. ಈ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಮಿಂಚುಗೆ ಮೋಸ ಮಾಡಲ್ಲ, ಚೆನ್ನಾಗಿ ನೋಡಿಕೊಳ್ತೀನಿ ಎಂದ ಮಡೆನೂರ್ ಮನು

Profile Prabhakara R May 22, 2025 3:00 PM

ಬೆಂಗಳೂರು: ಅತ್ಯಾಚಾರ, ಬಲವಂತದ ಗರ್ಭಪಾತದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ‘ಕಾಮಿಡಿ ಕಿಲಾಡಿಗಳು’ ಶೋ ಖ್ಯಾತಿಯ ನಟ ಮಡೆನೂರು ಮನು (Madenuru Manu) ಮಾತನಾಡಿರುವ ಹಳೆಯ ವಿಡಿಯೋವೊಂಡು ವೈರಲ್‌ ಆಗಿದೆ. ಮಿಂಚುಗೆ ನಾನು ಯಾವತ್ತೂ ಮೋಸ ಮಾಡಲ್ಲ, ಜೀವನಪೂರ್ತಿ ಅವಳನ್ನು ಚೆನ್ನಾಗಿ ನೋಡಿಕೊಳ್ತೀನಿ ಎಂಬ ಗ್ಯಾರಂಟಿ ಕೊಡ್ತೀನಿ ಎಂದು ವಿಡಿಯೋ ಮೂಲಕ ಮಡೆನೂರ್ ಮನು ಹೇಳಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

ನಟನ ವಿರುದ್ಧ ಕೇಸ್‌ ದಾಖಲಾದ ಬೆನ್ನಲ್ಲೇ ಹಳೆಯ ವಿಡಿಯೋಗಳು ಹೊರಗೆ ಬರುತ್ತಿವೆ. ಸದ್ಯ ವೈರಲ್‌ ಆಗಿರುವ ವಿಡಿಯೋದಲ್ಲಿ, ನಾನು ನಿನಗೆ ಮೋಸ ಮಾಡಲ್ಲ, ಅಂದುಕೊಂಡಂತೆ ನೋಡಿಕೊಳ್ಳುವೆ ಎಂದು ಮನು ಹೇಳಿದ್ದಾರೆ.

ನಟ ಮಡೆನೂರು ಮನು (Madenuru Manu) ವಿರುದ್ಧ ಕಿರುತೆರೆ ನಟಿಯೊಬ್ಬರು ಅತ್ಯಾಚಾರ(Physical Abuse), ಬಲವಂತದ ಗರ್ಭಪಾತ (Abortion) , ಹಲ್ಲೆ (Assault) ಹಾಗೂ ಕೊಲೆ ಬೆದರಿಕೆಯ ದೂರು ಹೊರಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಕಿರುತೆರೆ ನಟಿ ಇವರ ವಿರುದ್ಧ ಹಲವು ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದು, ಮಡೆನೂರು ಮನುವಿಗೆ ಬಂಧನದ ಭೀತಿ ಎದುರಾಗಿದೆ.

‘ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಎಲ್ಲರನ್ನೂ ನಗಿಸಿ ಮಡೆನೂರು ಮನು ಫೇಮಸ್ ಆಗಿದ್ದರು. ‘ಕುಲದಲ್ಲಿ ಕೀಳ್ಯಾವುದೋ’ ಚಿತ್ರದ ನಾಯಕನಾಗಿ ಮಡೆನೂರು ಮನು ಅವರು ನಟಿಸಿದ್ದಾರೆ. ಈ ಚಿತ್ರ ಮೇ 23ರಂದು ಬಿಡುಗಡೆ ಆಗುತ್ತಿದ್ದು, ಅದಕ್ಕೂ ಮುನ್ನ ಅವರ ವಿರುದ್ಧ ಈ ರೀತಿಯ ಗಂಭೀರ ಆರೋಪ ದಾಖಲಾಗಿದೆ.

ಚಿತ್ರರಂಗದಲ್ಲಿ ಕೆಲಸ ಮಾಡುವಾಗ ಮಡೆನೂರು ಮನುಗೆ ಕಿರುತೆರೆ ನಟಿ ಪರಿಚಯ ಆಗಿದೆ. ಆ ಬಳಿಕ ಇವರ ಮಧ್ಯೆ ಗೆಳೆತನ ಬೆಳೆದಿದೆ. ಈಗ ‘ನನ್ನ ಮೇಲೆ ಮನು ಅತ್ಯಾಚಾರ ಮಾಡಿದ್ದಾನೆ’ ಎಂದು ನಟಿ ದೂರು ನೀಡಿದ್ದಾರೆ. ಸದ್ಯ ಅನ್ನಪೂರ್ಣೇಶ್ವರಿ ನಗರ ಪೊಲೀಸರಿಂದ ಮನುಗಾಗಿ ಹುಡುಕಾಟ ನಡೆದಿದೆ. ‘ಕುಲದಲ್ಲಿ ಕೀಳ್ಯಾವುದೋ’ ಸಿನಿಮಾ ಮೂಲಕ ಹೀರೋ ಆಗುವುದರಲ್ಲಿದ್ದ ಮನುವಿಗೆ ಸಿನಿಮಾ ರಿಲೀಸ್ ಸಂದರ್ಭದಲ್ಲೇ ಗಂಭೀರ ಆರೋಪ ಎದುರಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ?

ದೂರು ನೀಡಿದ ಈ ಯುವತಿಗೆ ಬಾಡಿಗೆ ಮನೆಯನ್ನು ನಾಗರಭಾವಿಯಲ್ಲಿ ಮನುವೇ ಹುಡುಕಿಕೊಟ್ಟಿದ್ದ. 2018 ರಿಂದಲೂ ಮನುವಿಗೆ ಈಕೆಯ ಪರಿಚಯ ಇತ್ತು ಎಂದು ಗೊತ್ತಾಗಿದೆ. ಮನುಗೆ ಮದುವೆ ಆಗಿ ಒಂದು ಮಗು ಕೂಡ ಇದೆ.

"ನಾವು ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೆವು. ಮೊದಲಿಗೆ ಪರಿಚಯ ಆಗಿ ಸ್ನೇಹ ಬೆಳೆದಿತ್ತು. 29/11/2022 ರಂದು ಶಿವಮೊಗ್ಗದ ಶಿಕಾರಿಪುರದ ಕಾರ್ಯಕ್ರಮಕ್ಕೆ ಹೋಗಿದ್ದೆವು. ಅಲ್ಲಿ ಒಂದು ಹಾಸ್ಯ ಕಾರ್ಯಕ್ರಮ‌ ಮಾಡಿದ್ದರು. ಕಾರ್ಯಕ್ರಮದ ಬಳಿಕ ಸಂಭಾವನೆ ನೀಡುವ ನೆಪದಲ್ಲಿ ರೂಂಗೆ ಕರೆಸಿಕೊಂಡಿದ್ದರು. ಬಳಿಕ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ. ಇದಾದ ಬಳಿಕ 2022ರ ಡಿಸೆಂಬರ್ 3ರಂದು ಮನೆಗೆ ಬಂದು ಬಲವಂತವಾಗಿ ತಾಳಿ ಕಟ್ಟಿರುತ್ತಾರೆ. ಬಳಿಕ ಹಲವು ಬಾರಿ ನನ್ನನ್ನು ಅತ್ಯಾಚಾರ ಮಾಡಿರುತ್ತಾರೆ. ಬಳಿಕ ನಾನು ಗರ್ಭಿಣಿ ಕೂಡ ಆಗಿರುತ್ತೇನೆ. ಮನು ಗರ್ಭಪಾತ ಆಗುವ ಮಾತ್ರೆ ನೀಡಿದ್ದರು. ಇದಾದ ಬಳಿಕವೂ ಮತ್ತೊಮ್ಮೆ ಗರ್ಭಿಣಿ ಆಗಿದ್ದೆ. ಎರಡನೇ ಬಾರಿಯೂ ಗರ್ಭಪಾತ ಮಾಡಿಸಿದ್ದರು" ಎಂದು ದೂರಲಾಗಿದೆ.

"ಬಾಡಿಗೆ ಮನೆಯಲ್ಲಿ ಹಲವು ಬಾರಿ ಲೈಂಗಿಕವಾಗಿ ನನ್ನನ್ನು ಬಳಸಿಕೊಂಡಿದ್ದಾರೆ. ಪೋನ್‌ನಲ್ಲಿ ಅದರ ವೀಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದರು. ಈ ವಿಚಾರ ಯಾರಿಗಾದ್ರೂ ಹೇಳಿದ್ರೆ ಕೊಲೆ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದಾರೆ. ಜೊತೆಗೆ ನಾನು ಲಕ್ಷಾಂತರ ರೂಪಾಯಿ ಹಣ ಕೂಡ ಅವರಿಗೆ ಕೊಟ್ಟಿರುತ್ತೇನೆ. ಈತನ ವಿರುದ್ಧ ಕಾನೂನು ಕ್ರಮ ಜರುಗಿಸಿ" ಎಂದು ದೂರಿನಲ್ಲಿ ನಟಿ ಉಲ್ಲೇಖಿಸಿದ್ದಾಳೆ.

ಈ ಸುದ್ದಿಯನ್ನೂ ಓದಿ | Madenuru Manu: ಅತ್ಯಾಚಾರ, ಗರ್ಭಪಾತ, ಹಲ್ಲೆ, ಕೊಲೆ ಬೆದರಿಕೆ: ನಟ ಮಡೆನೂರು ಮನು ಮೇಲೆ ನಟಿ ದೂರು