ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Joe Biden:ನಾನು ಮೊದಲೇ ಹೇಳಿದ್ದೆ...... ಬೈಡನ್‌ 2 ತಿಂಗಳಲ್ಲಿ ಸಾಯುತ್ತಾರೆ; ಟ್ರಂಪ್‌ ಸ್ನೇಹಿತೆಯಿಂದ ಇದೆಂತ ಹೇಳಿಕೆ!

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಂಡಿರವುದನ್ನು ಅವರ ಕಚೇರಿ ಅಧಿಕೃತವಾಗಿ ಪ್ರಕಟಿಸಿದೆ. ಇದೀಗ ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಆತ್ಮೀಯರೊಬ್ಬರು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ.

ಬೈಡನ್‌ 2 ತಿಂಗಳಲ್ಲಿ ಸಾಯುತ್ತಾರೆ; ಟ್ರಂಪ್‌ ಸ್ನೇಹಿತೆಯಿಂದ ಇದೆಂತ ಹೇಳಿಕೆ!

Profile Vishakha Bhat May 19, 2025 8:57 AM

ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡನ್ (Joe Biden) ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಂಡಿರವುದನ್ನು ಅವರ ಕಚೇರಿ ಅಧಿಕೃತವಾಗಿ ಪ್ರಕಟಿಸಿದೆ. ಇದೀಗ ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ( Donald Trump) ಅವರ ಆತ್ಮೀಯರೊಬ್ಬರು ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ. MAGA ಪ್ರಭಾವಿ ಲಾರಾ ಲೂಮರ್ ಅವರು ಭಾನುವಾರ, ಕಳೆದ ವರ್ಷ ಮಾಜಿ ಅಧ್ಯಕ್ಷ ಜೋ ಬಿಡೆನ್ ಅವರ 'ಟರ್ಮಿನಲ್ ಅನಾರೋಗ್ಯ'ದ ಬಗ್ಗೆ ಪೋಸ್ಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಬೈಡನ್‌ ಇನ್ನು ಹೆಚ್ಚು ಕಾಲ ಉಳಿಯುವುದಿಲ್ಲ ಎಂಬರ್ಥದಲ್ಲಿ ಅವರು ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದರು.

ಬಹಳಷ್ಟು ಜನರು ನನ್ನ ಕ್ಷಮೆಯಾಚಿಸಬೇಕಾಗಿದೆ. ಕಳೆದ ಜುಲೈನಲ್ಲಿ ಬೈಡನ್‌ಗೆ ಕ್ಯಾನ್ಸರ್ ಇದೆ ಎಂದು ನಾನು ಹೇಳಿದ್ದೆ. ಆಗ ಎಲ್ಲರೂ ನನ್ನ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದರು. ಸರಣಿ ಪೋಸ್ಟ್‌ಗಳಲ್ಲಿ, ಲೂಮರ್, " ಜೋ ಬಿಡೆನ್ ಸ್ವಲ್ಪ ಸಮಯದಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು" ಮತ್ತು "ಕಳೆದ ಜುಲೈನಲ್ಲಿ ಅವರು ಕೊನೆಯ ಹಂತದಲ್ಲಿದ್ದರು, ಆಗ ಕಮಲಾ ಹ್ಯಾರಿಸ್ ಅಧಿಕಾರ ವಹಿಸಿಕೊಂಡರು ಎಂದು ಹೇಳಿದ್ದಾರೆ. ಜೂನ್ 2024 ರಲ್ಲಿ ಪೋಸ್ಟ್‌ನಲ್ಲಿ , ಲೂಮರ್, ಜೋ ಬೈಡನ್‌ ಸಾಯುತ್ತಿದ್ದಾರೆ" ಎಂದು ಹೇಳಿಕೊಂಡಿದ್ದರು. "ವೈದ್ಯಕೀಯ ತುರ್ತುಸ್ಥಿತಿಯ ಬಗ್ಗೆ ನಾನು ಸರಿಯಾಗಿದ್ದೆ... ಮತ್ತು ಅವರು ಸತ್ತಾಗ ನಾನು ಸರಿ ಎಂದು ಸಾಬೀತಾಗುತ್ತದೆ ಎಂದು ಲಾರಾ ಹೇಳಿದ್ದರು.

ಇದೀಗ ಬೈಡನ್‌ ಅವರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಕಾಣಿಸಿಕೊಂಡಿದೆ. ಮೂತ್ರನಾಳದ ರೋಗಲಕ್ಷಣಗಳು ಕಳೆದ ವಾರ ಪತ್ತೆಯಾದ ಬೆನ್ನಲ್ಲೇ ವೈದ್ಯರು ತೀವ್ರ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ್ದರು. ಅವರ ಜನನೇಂದ್ರಿಯ ಗ್ರಂಥಿಯಲ್ಲಿ ಸಣ್ಣ ಗಂಟು ದೈಹಿಕ ತಪಾಸಣೆ ವೇಳೆ ಕಂಡುಬಂದಿತ್ತು. ಇದರಿಂದಾಗಿ ಹೆಚ್ಚಿನ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಶುಕ್ರವಾರ ಪ್ರಾಸ್ಟೇಟ್ ಕ್ಯಾನ್ಸರ್ ಇರುವುದನ್ನು ವೈದ್ಯರ ಪತ್ತೆ ಮಾಡಿದ್ದು, ಇದರ ಕಣಗಳು ಈಗಾಗಲೇ ಎಲುಬುಗಳಿಗೂ ಹರಡಿವೆ ಎಂದು ತಿಳಿದುಬಂದಿದೆ.

ಈ ಸುದ್ದಿಯನ್ನೂ ಓದಿ: Modi-Trump Meet: 5ನೇ ಜನರೇಷನ್‌ ಜೆಟ್‌, ಮಿಷನ್‌ 500, ಮುಂಬೈ ದಾಳಿ ರೂವಾರಿಯ ಗಡಿಪಾರು; ಟ್ರಂಪ್‌-ಮೋದಿ ಒಪ್ಪಂದಗಳ ಲಿಸ್ಟ್‌ ಇಲ್ಲಿದೆ

ಪ್ರಾಸ್ಟೇಟ್ ಗಂಟು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೀವ್ರ ವೈದ್ಯಕೀಯ ತಪಾಸಣೆಗೆ ಬೈಡನ್ ಒಳಗಾಗಿದ್ದಾರೆ ಎಂದು ನ್ಯೂಯಾರ್ಕ್ ಟೈಮ್ಸ್ ಮತ್ತು ಎಬಿಸಿ ನ್ಯೂಸ್ ಈ ಮೊದಲು ವರದಿ ಮಾಡಿತ್ತು. ಶುಕ್ರವಾರ ಅವರು ಫಿಲಿಡೆಲ್ಫಿಯಾ ಆಸ್ಪತ್ರೆಯಲ್ಲಿ ಸಮಗ್ರ ತಪಾಸಣೆ ಮಾಡಿಸಿಕೊಂಡರು ಎಂದು ಎನ್ ವೈಟಿ ವಿವರಿಸಿದೆ.