ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DC vs GT: ಡೆಲ್ಲಿ-ಗುಜರಾತ್‌ ನಡುವಣ ಪಂದ್ಯದ ದಾಖಲೆ ಪಟ್ಟಿ ಹೀಗಿದೆ

ಐಪಿಎಲ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೆ.ಎಲ್‌.ರಾಹುಲ್ 4ನೇ ಸ್ಥಾನಕ್ಕೇರಿದ್ದಾರೆ. ಅವರು 5 ಶತಕ ಬಾರಿಸಿದ್ದಾರೆ. 8 ಶತಕ ಬಾರಿಸಿರುವ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, 7 ಶತಕ ಬಾರಿಸಿದ ಜೋಸ್‌ ಬಟ್ಲರ್‌ 2ನೇ ಸ್ಥಾನದಲ್ಲಿದ್ದಾರೆ. 6 ಶತಕ ಸಿಡಿಸಿರುವ ಕ್ರಿಸ್‌ ಗೇಲ್‌ 3ನೇ ಸ್ಥಾನ ಪಡೆದಿದ್ದಾರೆ.

ಡೆಲ್ಲಿ-ಗುಜರಾತ್‌ ನಡುವಣ ಪಂದ್ಯದ ದಾಖಲೆ ಪಟ್ಟಿ ಹೀಗಿದೆ

Profile Abhilash BC May 19, 2025 10:48 AM

ನವದೆಹಲಿ: ಭಾನುವಾರ ಇಲ್ಲಿನ ಅರುಣ್‌ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಐಪಿಎಲ್‌ನ(IPL 2025) ಗುಜರಾತ್‌ ಟೈಟಾನ್ಸ್‌(DC vs GT) ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ಬೃಹತ್‌ ಮೊತ್ತದ ಮೇಲಾಟದಲ್ಲಿ ಹಲವು ದಾಖಲೆ ನಿರ್ಮಾಣವಾಗಿದೆ. ಈ ದಾಖಲೆಗಳ ಪಟ್ಟಿ ಹೀಗಿದೆ.

ಐಪಿಎಲ್‌ನಲ್ಲಿ ಅತ್ಯಧಿಕ ಆರಂಭಿಕ ಜತೆಯಾಟ

ಸುದರ್ಶನ್‌ ಮತ್ತು ಶುಭಮನ್‌ ಗಿಲ್‌ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ಅತ್ಯಧಿಕ ಆರಂಭಿಕ ಜತೆಯಾಟ ನಡೆಸಿದ ಜೋಡಿ ಎನಿಸಿತು. ಈ ಹಿಂದೆ 2024ರಲ್ಲಿ ಈ ಜೋಡಿ ಚೆನ್ನೈ ವಿರುದ್ಧ 210 ರನ್‌ ಜತೆಯಾಟ ನಡೆಸಿತ್ತು. 2022ರಲ್ಲಿ ರಾಹುಲ್ ಮತ್ತು ಡಿ ಕಾಕ್ ಜೋಡಿ ಕೆಕೆಆರ್‌ ವಿರುದ್ಧ ಅಜೇಯ 210 ಬಾರಿಸಿದ್ದು ದಾಖಲೆ.

210* - ಕೆಎಲ್ ರಾಹುಲ್ & ಡಿ ಕಾಕ್ (ಎಲ್‌ಎಸ್‌ಜಿ) vs ಕೆಕೆಆರ್, 2022

210 - ಶುಭ್‌ಮನ್ ಗಿಲ್ & ಸಾಯಿ ಸುದರ್ಶನ್ vs ಸಿಎಸ್‌ಕೆ, 2024

205* - ಶುಭ್‌ಮನ್ ಗಿಲ್ & ಸಾಯಿ ಸುದರ್ಶನ್ vs ಡೆಲ್ಲಿ, 2025*

185 - ಜಾನಿ ಬೈರ್‌ಸ್ಟೊ & ಡೇವಿಡ್ ವಾರ್ನರ್ vs ಆರ್‌ಸಿಬಿ, 2019

ಐಪಿಎಲ್ ಆವೃತಿಯಲ್ಲಿ ಭಾರತೀಯ ಜೋಡಿಯಿಂದ ಅತಿ ಹೆಚ್ಚು ರನ್

839 - ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ (GT, 2025)*

744 - ಶಿಖರ್ ಧವನ್ ಮತ್ತು ಪೃಥ್ವಿ ಶಾ (DC, 2021)

671 - ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ (PBKS, 2020)

602 - ಮಯಾಂಕ್ ಅಗರ್ವಾಲ್ ಮತ್ತು ಕೆಎಲ್ ರಾಹುಲ್ (PBKS, 2021)

601 - ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ (RCB, 2021)

ರಾಹುಲ್‌ ಶತಕ ದಾಖಲೆ

ಐಪಿಎಲ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೆ.ಎಲ್‌.ರಾಹುಲ್ 4ನೇ ಸ್ಥಾನಕ್ಕೇರಿದ್ದಾರೆ. ಅವರು 5 ಶತಕ ಬಾರಿಸಿದ್ದಾರೆ. 8 ಶತಕ ಬಾರಿಸಿರುವ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿದ್ದರೆ, 7 ಶತಕ ಬಾರಿಸಿದ ಜೋಸ್‌ ಬಟ್ಲರ್‌ 2ನೇ ಸ್ಥಾನದಲ್ಲಿದ್ದಾರೆ. 6 ಶತಕ ಸಿಡಿಸಿರುವ ಕ್ರಿಸ್‌ ಗೇಲ್‌ 3ನೇ ಸ್ಥಾನ ಪಡೆದಿದ್ದಾರೆ.

ಇದನ್ನೂ ಓದಿ IPL 2025: ಐದನೇ ಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿದ ಕೆಎಲ್‌ ರಾಹುಲ್‌!

ಸಾಯಿ ಸುದರ್ಶನ್‌-ಶುಭಮನ್‌ ಗಿಲ್‌ ಟಿ20ಯಲ್ಲಿ ಯಶಸ್ವಿಯಾಗಿ 200 ಪ್ಲಸ್‌ ಚೇಸಿಂಗ್‌ ನಡೆಸಿದ ಆರಂಭಿಕ ಜೋಡಿ ಎನಿಸಿತು. ಈ ಮೂಲಕ ಪಾಕಿಸ್ತಾನದ ಬಾಬರ್‌ ಅಜಂ-ಮೊಹಮ್ಮದ್‌ ರಿಜ್ವಾನ್‌(203)ದಾಖಲೆಯನ್ನು ಸರಿಗಟ್ಟಿದರು.