ಸ್ವೆಟ್ ಅಂಡ್ ಕಾಂಕ್ರೀಟ್ 2025: ಬಿಸಿಯ ಒತ್ತಡಕ್ಕೆ ಸಮುದಾಯ-ಕೇಂದ್ರಿತ ಪ್ರತಿಕ್ರಿಯೆ ನೀಡಲು ಗಮನ ಸೆಳೆಯಲಿರುವ ಪ್ರದರ್ಶನ
ಬಾಧಿತ ಸಮುದಾಯಗಳನ್ನು ಸಂವಹನಕ್ಕೆ ತರುವ ಮೂಲಕ ಸ್ಥಳೀಯ ಮತ್ತು ರಾಷ್ಟ್ರೀಯ ಗಮನ ಸೆಳೆಯುವುದಾಗಿದೆ. ಎರಡು ದಿನಗಳು ನಡೆಯುವ ಈ ಕಾರ್ಯ ಕ್ರಮವು ಪ್ರಶಸ್ತಿ-ಪುರಸ್ಕೃತ ಹೀಟ್ ಶೆಲ್ಟರ್ ಸಂಹವನೀಯ ಪ್ರವಾಸಗಳು, ಧ್ವನಿ-ದೃಶ್ಯ ಪ್ರದರ್ಶನ, ತಜ್ಞರ ಚರ್ಚೆಗಳು, ಕಲಾಕೃತಿಗಳು ಮತ್ತು ಸಮುದಾಯ ಸಕ್ರಿಯತೆ ಮೂಲಕ ಹಲವು ವಲಯಗಳ ನಡುವೆ ಸಂವಹನ ಮತ್ತು ನಗರದ ಭವಿಷ್ಯತ್ತಿಗೆ ಸಮುದಾಯವನ್ನು ತೊಡಗಿಸಿಕೊಳ್ಳುವ ಕ್ರಿಯಾತ್ಮಕ ಪರಿಹಾರಗಳಿಗೆ ವೇಗ ವರ್ಧನೆ ನೀಡುವ ಉದ್ದೇಶ ಹೊಂದಿದೆ


ಬೆಂಗಳೂರು: ಭಾರತವು ಉಷ್ಣತೆಗಳ ಹೆಚ್ಚಳ ಮತ್ತು ತೀವ್ರ ಬಿಸಿ ಗಾಳಿಗೆ ತತ್ತರಿಸುತ್ತಿದ್ದಂತೆ ಇದನ್ನು ನಿಭಾಯಿಸಲು ಮುಖ್ಯವಾಗಿ ಅನೌಪಚಾರಿಕ ಕಾರ್ಮಿಕರು ಮತ್ತು ಸಮುದಾಯಗಳು ವಾಸಿಸು ತ್ತಿರುವ ಅನೌಪಚಾರಿಕ ವಸತಿಗಳಲ್ಲಿ ಪರಿಹಾರ-ಕೇಂದ್ರಿತ ಕಾರ್ಯತಂತ್ರಗಳ ಕುರಿತು ಸಂವಹನ ಹೆಚ್ಚಾಗುತ್ತಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ಬೆಂಗಳೂರಿನಲ್ಲಿ ಭಾರತದ ಅತ್ಯಂತ ಪ್ರಮುಖ ನಗರದ ಸವಾಲುಗಳಲ್ಲಿ ಒಂದಾದ ಬಿಸಿಯ ಒತ್ತಡವನ್ನು ನಿಭಾಯಿಸಲು ಮತ್ತು ದುರ್ಬಲ ವರ್ಗಗಳ ಮೇಲೆ ಅದರ ಪರಿಣಾಮವನ್ನು ಎದುರಿಸಲು ಉದ್ದೇಶಿಸಿದ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಯುತ್ತಿದೆ. ಪರ್ಪಸ್ ನಡೆಸುತ್ತಿರುವ ಪೀಪಲ್ ಫರ್ಸ್ಟ್ ಸಿಟೀಸ್ ಆಯೋಜಿಸಿರುವ ಈ ಎರಡು ದಿನಗಳ ಕಾರ್ಯ ಕ್ರಮವು ಮೇ.29-30ರಂದು ಬೆಂಗಳೂರಿನ ಸಭಾ ಸ್ಪೇಸ್ ನಲ್ಲಿ ನಡೆಯಲಿದೆ.
ಕಥೆ ಹೇಳುವುದು, ವಿನ್ಯಾಸದ ಆವಿಷ್ಕಾರ ಮತ್ತು ಸಮುದಾಯದ ಸಕ್ರಿಯತೆಯೊಂದಿಗೆ ನಡೆಯುವ `ಸ್ವೆಟ್ ಅಂಡ್ ಕಾಂಕ್ರೀಟ್’ ಬಿಸಿಯಿಂದ ಅತ್ಯಂತ ಹೆಚ್ಚು ಸಂಕಷ್ಟಕ್ಕೆ ಒಳಗಾದವರ ಕುರಿತು ಗಮನ ಸೆಳೆಯುವ ಉದ್ದೇಶ ಹೊಂದಿದೆ. ಬಾಧಿತ ಸಮುದಾಯಗಳನ್ನು ಸಂವಹನಕ್ಕೆ ತರುವ ಮೂಲಕ ಸ್ಥಳೀಯ ಮತ್ತು ರಾಷ್ಟ್ರೀಯ ಗಮನ ಸೆಳೆಯುವುದಾಗಿದೆ. ಎರಡು ದಿನಗಳು ನಡೆಯುವ ಈ ಕಾರ್ಯ ಕ್ರಮವು ಪ್ರಶಸ್ತಿ-ಪುರಸ್ಕೃತ ಹೀಟ್ ಶೆಲ್ಟರ್ ಸಂಹವನೀಯ ಪ್ರವಾಸಗಳು, ಧ್ವನಿ-ದೃಶ್ಯ ಪ್ರದರ್ಶನ, ತಜ್ಞರ ಚರ್ಚೆಗಳು, ಕಲಾಕೃತಿಗಳು ಮತ್ತು ಸಮುದಾಯ ಸಕ್ರಿಯತೆ ಮೂಲಕ ಹಲವು ವಲಯಗಳ ನಡುವೆ ಸಂವಹನ ಮತ್ತು ನಗರದ ಭವಿಷ್ಯತ್ತಿಗೆ ಸಮುದಾಯವನ್ನು ತೊಡಗಿಸಿಕೊಳ್ಳುವ ಕ್ರಿಯಾತ್ಮಕ ಪರಿಹಾರಗಳಿಗೆ ವೇಗ ವರ್ಧನೆ ನೀಡುವ ಉದ್ದೇಶ ಹೊಂದಿದೆ.
ಇದನ್ನೂ ಓದಿ: Vishweshwar Bhat Column: ಇದು ಭಾಗ್ಯ..ಇದು ಭಾಗ್ಯ !
ಪೀಪಲ್ ಫರ್ಸ್ಟ್ ಸಿಟೀಸ್ ತಂಡವು ಮತ್ತು ವಿನ್ಯಾಸಕರು ಮೊಟ್ಟ ಮೊದಲ ಬಾರಿಗೆ ಈ ವಿನ್ಯಾಸಕ್ಕೆ ಜೀವ ತುಂಬಿದ್ದು ಸಮುದಾಯ ಸದಸ್ಯರು ಮತ್ತು ಅನೌಪಚಾರಿಕ ಕಾರ್ಮಿಕರನ್ನು ಆಹ್ವಾನಿಸಿ ಸಾರ್ವಜನಿಕ ಮತ್ತು ಖಾಸಗಿ ವಲಯದ ಸಹಯೋಗಗಲ್ಲಿ ಅನುಷ್ಠಾನಕ್ಕೆ ಸಹಯೋಗವನ್ನು ಉತ್ತೇಜಿಸಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಧ್ವನಿ-ದೃಶ್ಯ ಆಧರಿತ ಕಥೆ ಹೇಳುವಿಕೆಯಿಂದ ಬಹು ಮಾಧ್ಯಮ ಪ್ರದರ್ಶನ ವನ್ನುಕೂಡ ಒಳಗೊಂಡಿದ್ದು ಅದು ಅಪಾರವಾಗಿ ಬಿಸಿಗೆ ಒಡ್ಡಿಕೊಂಡವರ ವಾಸ್ತವಗಳನ್ನು ಬಿಂಬಿಸಿದವು. ತಜ್ಞರ ಎರಡು ಚರ್ಚೆಗಳು ಅನೌಪಚಾರಿಕ ಮತ್ತು ಔಪಚಾರಿಕ ವಸತಿಗಳಲ್ಲಿ ವಾಸಿಸುವ ಸಮುದಾಯಗಳನ್ನು ಸಮಾನವಾಗಿ ಬಾಧಿಸುತ್ತವೆ ಎನ್ನುವುದನ್ನು ತೋರಿಸಿದವು.
ಇದರ ಉದ್ದೇಶ ನಿರ್ಧಾರ ಕೈಗೊಳ್ಳುವವರು, ಅಭಿಪ್ರಾಯ ರೂಪಿಸುವ ಪ್ರಮುಖರು ಮತ್ತು ಸ್ಥಳೀಯ ಸಮುದಾಯದ ಸದಸ್ಯರನ್ನು ಈ ಕುರಿತು ಚರ್ಚೆಗಳನ್ನು ಉತ್ತೇಜಿಸುವುದಾಗಿತ್ತು.