British Pakistanis: ಶೇ. 37ರಷ್ಟು ಬ್ರಿಟಿಷ್ ಪಾಕಿಸ್ತಾನಿಗಳು ಸೋದರ ಸಂಬಂಧಿಗಳನ್ನೇ ಮದುವೆಯಾಗಿದ್ದಾರೆ; ಭಾರತದಲ್ಲೂ ಇದು ಕಾನೂನುಬದ್ಧವೇ?
ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಒಂದು ಶತಮಾನಗಳಷ್ಟು ಹಳೆಯ ಸಾಮಾಜಿಕ ಸಂಪ್ರದಾಯ ಗಟ್ಟಿಯಾಗಿ ಉಳಿದಿದೆ. ಇದು ಸಾರ್ವಜನಿಕ ಆರೋಗ್ಯದ ಬಗ್ಗೆ ಹೊಸ ಪ್ರಶ್ನೆಗಳನ್ನು ಎತ್ತಿದೆ. ವರದಿಯ ಪ್ರಕಾರ, ಬ್ರಿಟನ್‌ನಲ್ಲಿ ವಿವಾಹಿತ ಬ್ರಿಟೀಷ್-ಪಾಕಿಸ್ತಾನಿ ವಲಸಿಗರಲ್ಲಿ 37% ಜನರು ಮೊದಲ ಸೋದರ ಸಂಬಂಧಿಗಳಾಗಿದ್ದಾರೆ.

ಸಾಂದರ್ಭಿಕ ಚಿತ್ರ

ಲಂಡನ್: ಅಭಿವೃದ್ಧಿ ಹೊಂದಿದ ರಾಷ್ಟ್ರದಲ್ಲಿ ಒಂದು ಶತಮಾನಗಳಷ್ಟು ಹಳೆಯ ಸಾಮಾಜಿಕ ಸಂಪ್ರದಾಯ (Social Tradition) ಗಟ್ಟಿಯಾಗಿ ಉಳಿದಿದೆ ಎಂದರೆ ನಂಬುತ್ತೀರಾ? ಇದು ಸಾರ್ವಜನಿಕ ಆರೋಗ್ಯದ ಬಗ್ಗೆ ಹೊಸ ಪ್ರಶ್ನೆಗಳನ್ನು ಎತ್ತಿದೆ. ಹೌದು, ವರದಿಯ ಪ್ರಕಾರ ಬ್ರಿಟನ್‌ನಲ್ಲಿ ವಿವಾಹಿತ ಬ್ರಿಟೀಷ್-ಪಾಕಿಸ್ತಾನಿ (British-Pakistanis) ವಲಸಿಗರಲ್ಲಿ ಶೇ. 37ರಷ್ಟು ಜನರು ಮೊದಲ ಸೋದರ ಸಂಬಂಧಿಗಳಾಗಿದ್ದಾರೆ (Cousins). ಆದರೆ ಬ್ರಿಟಿಷ್ ದಂಪತಿಯಲ್ಲಿ ಈ ಪ್ರಮಾಣ ಶೇ. 1ಕ್ಕಿಂತ ಕಡಿಮೆ ಇದೆ. ಇಂಗ್ಲೆಂಡ್‌ನ ವೆಸ್ಟ್ ಯಾರ್ಕ್‌ಶೈರ್‌ನ 13,500 ಕುಟುಂಬಗಳ ಆರೋಗ್ಯ ವಿಧಾನಗಳನ್ನು ಗಮನಿಸಿದ ಬಾರ್ನ್ ಇನ್ ಬ್ರಾಡ್‌ಫರ್ಡ್ (Born in Bradford) ಅಧ್ಯಯನವು ಈ ಮಾಹಿತಿ ಹಂಚಿಕೊಂಡಿದೆ.
ಸಾಂಸ್ಕೃತಿಕ ಸಂಪ್ರದಾಯದ ಪರಿಣಾಮ
ದಕ್ಷಿಣ ಏಷ್ಯಾದ ಸಾಂಸ್ಕೃತಿಕ ಮಾನದಂಡಗಳಲ್ಲಿ ಬೇರೂರಿರುವ ಈ ಆಚರಣೆಯಿಂದ ಜನ್ಮಜಾತ ಕಾಯಿಲೆಗಳ ಅಪಾಯ ಗಣನೀಯವಾಗಿ ಹೆಚ್ಚುತ್ತದೆ ಎಂದು ಅಧ್ಯಯನ ಹೇಳಿದೆ. ಇಂಗ್ಲೆಂಡ್‌ನ ಒಟ್ಟಾರೆ ಜನ್ಮ ದೋಷಗಳ ಅಪಾಯ ಕಡಿಮೆಯಾದರೂ, ಈ ಸಂಪ್ರದಾಯವು ಆನುವಂಶಿಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
ಭಾರತದಲ್ಲಿ ಸೋದರ ಸಂಬಂಧಿ ಮದುವೆ
ಭಾರತದಲ್ಲಿ ಈ ಸಂಪ್ರದಾಯದ ಮೊದಲಿನಿಂದಲೂ ಇದೆ. ಆದರೆ ಉತ್ತರ ಭಾರತದ ಹಿಂದೂ ಸಮುದಾಯಗಳಲ್ಲಿ, 1955ರ ಹಿಂದೂ ಮದುವೆ ಕಾಯಿದೆಯ ಆಧಾರದ ಮೇಲೆ, ಒಂದೇ ಗೋತ್ರ (ಕುಲ) ಅಥವಾ ಸಪಿಂಡ ಸಂಬಂಧಗಳ (ತಂದೆಯ ಕಡೆ ಐದು ತಲೆಮಾರುಗಳು, ತಾಯಿಯ ಕಡೆ ಮೂರು ತಲೆಮಾರುಗಳು) ಒಳಗಿನ ಮದುವೆಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದರೆ ದಕ್ಷಿಣ ಭಾರತದಲ್ಲಿ, ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ತೆಲಂಗಾಣದಂತಹ ರಾಜ್ಯಗಳಲ್ಲಿ, ಸೋದರಸಂಬಂಧಿಗಳ ಮದುವೆಗಳು, ವಿಶೇಷವಾಗಿ ಒಬ್ಬ ವ್ಯಕ್ತಿಯು ತನ್ನ ತಾಯಿಯ ಸಹೋದರನ ಮಗಳನ್ನು ಮದುವೆಯಾಗುವುದು ಕಾನೂನುಬದ್ಧವಾಗಿರುವುದು ಮಾತ್ರವಲ್ಲ ಆಚರಣೆಯೂ ಆಗಿದೆ.
ಈ ಸುದ್ದಿಯನ್ನು ಓದಿ: Viral Video: ಶಾಲೆಯಿಂದ ತಪ್ಪಿಸಿಕೊಂಡು ಓಡಿದ ಪುಟ್ಟ ಬಾಲಕ; ನಮ್ಮ ಬಾಲ್ಯ ನೆನಪಿಸುವ ವಿಡಿಯೊ ನೋಡಿ
ವಿಶೇಷ ಮದುವೆ ಕಾಯಿದೆ
ಭಾರತದ ಜಾತ್ಯತೀತ ಕಾನೂನು ವ್ಯವಸ್ಥೆಯು ವಿಶೇಷ ಮದುವೆ ಕಾಯಿದೆಯಡಿ ಧಾರ್ಮಿಕ ಅಥವಾ ಸಾಂಪ್ರದಾಯಿಕ ಗಡಿಗಳಿಂದ ಹೊರಗಿರುವ ದಂಪತಿಗೆ ಮದುವೆಯ ಅವಕಾಶ ಒದಗಿಸುತ್ತದೆ. ಈ ಕಾಯಿದೆಯಡಿ, ಕಾನೂನಿನ "ನಿಷೇಧಿತ ಸಂಬಂಧಗಳ" ಪಟ್ಟಿಯಲ್ಲಿ ಸೇರದಿರುವುದರಿಂದ ಆಪ್ತ ಸಂಬಂಧಿಗಳ ನಡುವಿನ ಮದುವೆಯೂ ಕಾನೂನುಬದ್ಧವಾಗಿದೆ.
ಸಾಂಸ್ಕೃತಿಕ ಮತ್ತು ಆರೋಗ್ಯದ ಸಂಘರ್ಷ
ಬ್ರಿಟನ್ ಮತ್ತು ಭಾರತದಲ್ಲಿ ಸೋದರಸಂಬಂಧಿ ಮದುವೆಗಳು ಸಂಕೀರ್ಣ ಸ್ಥಾನವನ್ನು ಹೊಂದಿವೆ. ಕೆಲವರಿಗೆ ಸಂಪ್ರದಾಯವಾಗಿ ಮೌಲ್ಯಯುತವಾದರೆ, ಇತರರಿಗೆ ಸಾರ್ವಜನಿಕ ಆರೋಗ್ಯದ ಕಾಳಜಿಯಾಗಿದೆ.