ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Indian Currency: ಕರೆನ್ಸಿ ನೋಟುಗಳನ್ನು ಮಾಡಲು ಕಾಗದ ಅಲ್ಲ, ಈ ವಸ್ತುವಿನಿಂದ ತಯಾರಿಸೋದು ಅಂದ್ರೆ ನಂಬ್ತೀರಾ...?

Indian Currency: ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ ನೋಟುಗಳನ್ನು ಶೇ.100ರಷ್ಟು ಶುದ್ಧ ಹತ್ತಿಯಿಂದ ತಯಾರಿಸಲಾಗುತ್ತದೆ. ಇದೇ ಕಾರಣದಿಂದ ನೋಟುಗಳು ದೀರ್ಘ ಕಾಲ ಬಾಳುತ್ತವೆ. ಆದರೆ ಈ ವಿಷಯ ಹಲವರಿಗೆ ಗೊತ್ತಿಲ್ಲ.. ಒಂದು ವೇಳೆ ನಿಮಗೂ ಕೂಡ ಯಾರಾದ್ರೂ ಬಂದು ನೋಟುಗಳನ್ನು ಯಾವುದರಿಂದ ತಯಾರಿಸುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದರೆ ಬಹುತೇಕ ಮಂದಿ ಉತ್ತರ ಕಾಗದ ಆಗಿರುತ್ತದೆ. ಆದರೆ ನೋಟು ಕಾಗದದಿಂದ ಅಲ್ಲ, ಹತ್ತಿಯಿಂದ ಮಾಡುತ್ತಾರೆ ಎಂದರೆ ಆಶ್ಚರ್ಯವಾಗೋದು ಸುಳ್ಳಲ್ಲ.

ಭಾರತದ ಕರೆನ್ಸಿ ನೋಟುಗಳು ತಯಾರಾಗೋದು ಹೇಗೆ ಗೊತ್ತಾ..?

Profile Sushmitha Jain Jul 3, 2025 11:23 AM

ನವದೆಹಲಿ: ನಾವು ದಿನನಿತ್ಯ ಕರೆನ್ಸಿ ನೋಟುಗಳನ್ನು (Currency Notes) ಬಳಸುತ್ತೇವೆ, ಆದರೆ ಅವು ಯಾವ ವಸ್ತುವಿನಿಂದ ತಯಾರಾಗಿವೆ ಎಂಬುದು ತುಂಬಾ ಜನಕ್ಕೆ ಗೊತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಡಿಜಿಟಲ್ ಪಾವತಿ (Digital Payment) ಜನಪ್ರಿಯವಾಗಿದ್ದರೂ, ರಸ್ತೆ ಬದಿಯ ಅಂಗಡಿಗಳಿಂದ ಹಿಡಿದು ದೊಡ್ಡ ಚಿಲ್ಲರೆ ಅಂಗಡಿಗಳವರೆಗೆ ನಗದು (Cash) ಇನ್ನೂ ಪ್ರಧಾನವಾಗಿದೆ. 10, 100, 500 ರೂಪಾಯಿ ಅಥವಾ ಈಗ ಚಲಾವಣೆಯಿಂದ ತೆಗೆದು ಹಾಕಲಾದ 2000 ರೂ. ನೋಟುಗಳು ಯಾವ ವಸ್ತುವಿನಿಂದ ತಯಾರಾಗಿವೆ ಎಂದು ಹಲವರಿಗೆ ಗೊತ್ತೇ ಇಲ್ಲ.

ಕ್ವೋರಾ ಸಾಮಾಜಿಕ ಜಾಲತಾಣದ ಮೂಲಕ ಇತ್ತೀಚೆಗೆ ಈ ಪ್ರಶ್ನೆ ಮುನ್ನಲೆಗೆ ಬಂದಿದ್ದು. “ಭಾರತೀಯ ಕರೆನ್ಸಿ ನೋಟುಗಳ ತಯಾರಿಕೆಗೆ ಬಳಸುವ ಕಾಗದ ಯಾವುದು? ಎಂಬ ವಿಷಯ ಚರ್ಚೆಗೆ ಗ್ರಾಸವಾಗಿದೆ. ಹಲವಾರು ಜನರು ನೋಟುಗಳನ್ನು ಸಾಮಾನ್ಯ ಕಾಗದಿಂದ ಅಂದುಕೊಂಡಿದ್ದಾರೆ, ಆದರೆ ಆಸಲಿ ವಿಷಯ ಬೇರೇಯೇ ಇದೆ. ಹಾಗಾದ್ರೆ ನೋಟುಗಳು ತಯಾರಾಗೋದು ಹೇಗೆ..? ಅದರ ವಿನ್ಯಾಸ ಮಾಡೋದು ಯಾರು..? ಎಂಬಿತ್ಯಾದಿ ಮಾಹಿತಿ ಇಲ್ಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯ ಪ್ರಕಾರ ನೋಟುಗಳನ್ನು ಶೇ.100ರಷ್ಟು ಶುದ್ಧ ಹತ್ತಿಯಿಂದ ತಯಾರಿಸಲಾಗುತ್ತದೆ. ಇದೇ ಕಾರಣದಿಂದ ನೋಟುಗಳು ದೀರ್ಘ ಕಾಲ ಬಾಳುತ್ತವೆ. ಆದರೆ ಈ ವಿಷಯ ಹಲವರಿಗೆ ಗೊತ್ತಿಲ್ಲ.. ಒಂದು ವೇಳೆ ನಿಮಗೂ ಕೂಡ ಯಾರಾದ್ರೂ ಬಂದು ನೋಟುಗಳನ್ನು ಯಾವುದರಿಂದ ತಯಾರಿಸುತ್ತಾರೆ ಎಂಬ ಪ್ರಶ್ನೆಯನ್ನು ಕೇಳಿದರೆ ಬಹುತೇಕ ಮಂದಿ ಉತ್ತರ ಕಾಗದ ಆಗಿರುತ್ತದೆ. ಆದರೆ ನೋಟು ಕಾಗದದಿಂದ ಅಲ್ಲ, ಹತ್ತಿಯಿಂದ ಮಾಡುತ್ತಾರೆ ಎಂದರೆ ಆಶ್ಚರ್ಯವಾಗೋದು ಸುಳ್ಳಲ್ಲ.

ಈ ಸುದ್ದಿಯನ್ನು ಓದಿ: Viral Video: ಶಾಲೆಯಿಂದ ತಪ್ಪಿಸಿಕೊಂಡು ಓಡಿದ ಪುಟ್ಟ ಬಾಲಕ; ನಮ್ಮ ಬಾಲ್ಯ ನೆನಪಿಸುವ ವಿಡಿಯೊ ನೋಡಿ

ಹತ್ತಿಯಿಂದ ತಯಾರಿಸಲು ಕಾರಣವೇನು..?

ನೋಟುಗಳ ತಯಾರಿಸಲು ಹತ್ತಿ ಬಳಸಲು ಒಂದು ಕಾರಣ ಕೂಡ ಇದ್ದು, ಹತ್ತಿ, ಕಾಗದದಕ್ಕಿಂತ ಗಟ್ಟಿಯಾಗಿರುತ್ತದೆ. ಹೀಗಾಗಿ ಅದು ಬೇಗನೆ ಹರಿಯುವುದಿಲ್ಲ. ಭಾರತ ಅಷ್ಟೇ ಅಲ್ಲ ಹಲವು ದೇಶಗಳಲ್ಲಿ ನೋಟುಗಳ ತಯಾರಿಕೆಗೆ ಹತ್ತಿಯನ್ನು ಬಳಸುತ್ತಾರೆ.

ನೋಟುಗಳ ತಯಾರಿಕೆಗೆ ಈ ವಸ್ತುಗಳನ್ನು ಬಳಸುತ್ತಾರೆ...?

ಹತ್ತಿಯಲ್ಲಿ ಫೈಬರ್ ಲಿನೆನ್ ಎಂಬ ಫೈಬರ್ ಅಂಶವಿದ್ದು, ಹತ್ತಿಯ ಜೊತೆಯಲ್ಲಿ, ಗ್ಯಾಟ್ಲಿನ್ ಹಾಗೂ ಅಡೆಸಿವ್ಸ್ ಹೆಸರಿನ ದ್ರಾವಣಗಳನ್ನು ನೋಟುಗಳನ್ನು ತಯಾರಿಸುವಾಗ ಬಳಸಲಾಗುತ್ತದೆ. ಇವು ನೋಟುಗಳ ಬಾಳಿಕೆಯನ್ನು ಹೆಚ್ಚಿಸಲಿದ್ದು, ಭಾರತೀಯ ನೋಟುಗಳು ಅತ್ಯಂತ ಭದ್ರತಾ ಲಕ್ಷಣಗಳನ್ನು ಹೊಂದಿದೆ. ಪರಿಣಾಮ ನಕಲಿ ನೋಟುಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯವಾಗಲಿದ್ದು, ನಕಲಿ ನೋಟುಗಳ ಚಲಾವಣೆಯನ್ನು ಸುಲಭವಾಗಿ ನಿಯಂತ್ರಿಸಬಹುದು.

ಇನ್ನು ಭಾರತದಂತೆ, ಅಮೆರಿಕದಂತಹ ದೇಶಗಳು ಶೇ.75 ಹತ್ತಿ ಮತ್ತು ಶೇ.25 ಲಿನಿನ್‌ನಿಂದ ನೋಟುಗಳನ್ನು ತಯಾರಿಸುತ್ತವೆ. ಹತ್ತಿ ಆಧಾರಿತ ನೋಟುಗಳು ಕಡಿಮೆ ವೆಚ್ಚದಲ್ಲಿ, ಬಾಳಿಕೆಯೊಂದಿಗೆ, ಮತ್ತು ಪರಿಸರದ ಮಾಲಿನ್ಯವನ್ನು ತಡೆಯುತ್ತದೆ. ಹಾಗಾಗಿ ನೋಟುಗಳು ಕೇವಲ ಪಾವತಿಯ ಸಾಧನವಲ್ಲ, ದೇಶದ ಆರ್ಥಿಕ ಸ್ಥಿರತೆ ಮತ್ತು ಭದ್ರತೆಯ ಆಧಾರವಾಗಿವೆ.