ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Assaulting: ಒತ್ತೆಯಾಳಾಗಿ ಇರಿಸಿ ಅಪ್ರಾಪ್ತ ಮಗನ ಮೇಲೆ ಲೈಂಗಿಕ ದೌರ್ಜನ್ಯ- ಅತ್ತಿಗೆ ವಿರುದ್ಧ ಮಹಿಳೆ ದೂರು

ಉತ್ತರ ಪ್ರದೇಶದ ಅಲಿಗಢದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಆತನ ಚಿಕ್ಕಮ್ಮ ಅಂದರೆ ಬಾಲಕನ ತಾಯಿಯ ಅತ್ತಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಾಲಕನ ತಾಯಿ ಅಕರಾಬಾದ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಎಸ್‌ಎಸ್‌ಪಿ ಕಚೇರಿಗೆ ಸೋಮವಾರ ದೂರು ನೀಡಿದ್ದಾರೆ. ತಮ್ಮ ಮನೆಯ ಸಮೀಪದಲ್ಲೇ ವಾಸವಾಗಿರುವ ಅತ್ತಿಗೆಯು ತನ್ನ ಅಪ್ರಾಪ್ತ ಮಗನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅವನಿಗೆ ಮಾದಕ ದ್ರವ್ಯ ನೀಡಿ ಅವನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಮಗನಿಗೆ ಲೈಂಗಿಕ ಕಿರುಕುಳ; ಅತ್ತಿಗೆ ವಿರುದ್ಧ ನಾದಿನಿ ದೂರು

ಲಖನೌ: ಮನೆ ಸಮೀಪದಲ್ಲೇ ವಾಸವಾಗಿರುವ ಅತ್ತಿಗೆಯು ಕೆಲಸ ಕೊಡಿಸುವುದಾಗಿ ತನ್ನ ಅಪ್ರಾಪ್ತ ಮಗನನ್ನು ಕರೆದುಕೊಂಡು ಹೋಗಿ ಒತ್ತೆಯಾಳಾಗಿ ಇರಿಸಿಕೊಂಡು ಮಾದಕ ದ್ರವ್ಯ (Narcotics) ನೀಡಿ ಲೈಂಗಿಕ ದೌರ್ಜನ್ಯ (Physical Assault) ಎಸಗಿದ್ದಾಳೆ. ಇದನ್ನು ತಾನು ವಿರೋಧಿಸಿದಾಗ ಬಾಲಕನನ್ನು ಜೈಲಿಗೆ ಕಳುಹಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾಳೆ. ಆಕೆಯಿಂದ ತನ್ನ ಮಗನನ್ನು ರಕ್ಷಿಸಿ ಎಂದು ಮಹಿಳೆಯೊಬ್ಬರು ಉತ್ತರ ಪ್ರದೇಶದ (Uttar Pradesh) ಅಕರಾಬಾದ್ ಪೊಲೀಸ್ ಠಾಣೆ (Akarabad Police Station) ಪ್ರದೇಶದ ಎಸ್‌ಎಸ್‌ಪಿ ಕಚೇರಿಗೆ (SSP Office) ದೂರು ನೀಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಅಲಿಗಢದಲ್ಲಿ ಅಪ್ರಾಪ್ತ ಬಾಲಕನ ಮೇಲೆ ಆತನ ಚಿಕ್ಕಮ್ಮ ಅಂದರೆ ಬಾಲಕನ ತಾಯಿಯ ಅತ್ತಿಗೆ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಬಾಲಕನ ತಾಯಿ ಅಕರಾಬಾದ್ ಪೊಲೀಸ್ ಠಾಣೆ ಪ್ರದೇಶದಲ್ಲಿರುವ ಎಸ್‌ಎಸ್‌ಪಿ ಕಚೇರಿಗೆ ಸೋಮವಾರ ದೂರು ನೀಡಿದ್ದಾರೆ.

ತಮ್ಮ ಮನೆಯ ಸಮೀಪದಲ್ಲೇ ವಾಸವಾಗಿರುವ ಅತ್ತಿಗೆಯು ತನ್ನ ಅಪ್ರಾಪ್ತ ಮಗನನ್ನು ಒತ್ತೆಯಾಳಾಗಿ ಇಟ್ಟುಕೊಂಡು ಅವನಿಗೆ ಮಾದಕ ದ್ರವ್ಯ ನೀಡಿ ಅವನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾಳೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ವಿಷಯ ತಿಳಿದು ಇದನ್ನು ನಾನು ವಿರೋಧಿಸಿದಾಗ ಆಕೆ ಸುಳ್ಳು ದೂರು ನೀಡಿ ಮಗನನ್ನು ಜೈಲಿಗೆ ಕಳುಹಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿರುವುದಾಗಿ ಮಹಿಳೆ ಆರೋಪಿಸಿದ್ದಾರೆ.

ತನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದು, ತಾನು ಕಷ್ಟಪಟ್ಟು ಮನೆ ವೆಚ್ಚವನ್ನು ನಿರ್ವಹಿಸುತ್ತಿದ್ದೇನೆ. ಅತ್ತಿಗೆಯ ಪತಿ ಸೌದಿ ಅರೇಬಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ. ಅತ್ತಿಗೆಯು ಹೆಚ್ಚಾಗಿ ಮುಂಬೈನಲ್ಲಿ ನೆಲೆಸಿದ್ದಾಳೆ. ತನ್ನ ಅಪ್ರಾಪ್ತ ಮಗನಿಗೆ ಕೆಲಸ ಕೊಡಿಸುವುದಾಗಿ ಹೇಳಿ ಕಳೆದ ವರ್ಷ ಮೇ 24 ಮುಂಬೈಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಆತನಿಗೆ ಮಾದಕ ದ್ರವ್ಯ ನೀಡಿ ಮಂಚಕ್ಕೆ ಕಟ್ಟಿ ಹಾಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ಎಸ್‌ಎಸ್‌ಪಿ ಕಚೇರಿಗೆ ಮಹಿಳೆ ಬರೆದಿರುವ ದೂರಿನ ಪತ್ರದಲ್ಲಿ ತಿಳಿಸಿದ್ದಾಳೆ.

ನೆರೆಹೊರೆಯಲ್ಲಿ ವಾಸವಿರುವ ಅತ್ತಿಗೆ ತನ್ನ ಅಪ್ರಾಪ್ತ ಮಗನನ್ನು ಒತ್ತೆಯಾಳಾಗಿಟ್ಟುಕೊಂಡು ಅವನಿಗೆ ಮಾದಕ ದ್ರವ್ಯವನ್ನು ನೀಡುತ್ತಿದ್ದಾಳೆ. ಈ ಬಗ್ಗೆ ತಾನು ವಿರೋಧಿಸಿದ್ದಕ್ಕೆ ಆತನನ್ನು ಜೈಲಿಗೆ ಕಳುಹಿಸಿ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ. ತನ್ನ ಅಪ್ರಾಪ್ತ ಮಗನ ಜೊತೆ ಬಲವಂತವಾಗಿ ದೈಹಿಕ ಸಂಬಂಧ ನಡೆಸುತ್ತಿದ್ದಾಳೆ ಎಂದು ಮಹಿಳೆ ತಿಳಿಸಿದ್ದಾರೆ.

ಇದನ್ನೂ ಓದಿ: Physical Assaulting: ಮತ್ತು ಬರುವ ಮಾತ್ರೆಗಳನ್ನು ನೀಡಿ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ -ಶಿಕ್ಷಕಿ ಅರೆಸ್ಟ್

ಭಯಭೀತನಾಗಿದ್ದ ಮಗ ಒಮ್ಮೆ ಅಲ್ಲಿಂದ ಓಡಿಹೋಗಲು ಪ್ರಯತ್ನಿಸಿದನು. ಆದರೆ ಆತನನ್ನು ಮತ್ತೆ ಹಿಡಿದ ಆಕೆ ಕ್ರೂರವಾಗಿ ಥಳಿಸಿ ಕೂಡಿ ಹಾಕಿದ್ದಾಳೆ. ಈ ಬಗ್ಗೆ ಜೂನ್ 3 ರಂದು ಮಗ ಫೋನ್‌ ಮಾಡಿ ವಿಷಯ ತಿಳಿಸಿದ್ದರಿಂದ ಕೂಡಲೇ ತಾನು ಮುಂಬೈಗೆ ಹೋಗಿ ಮಗನನ್ನು ಬಿಡಿಸಿ ಬರಲು ಪ್ರಯತ್ನಿಸಿದೆ. ಆದರೆ ಸಾಧ್ಯವಾಗಿಲ್ಲ ಎಂದು ಯುಪಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿರುವ ಮಹಿಳೆ ಹೇಗಾದರೂ ಮಾಡಿ ತನ್ನ ಮಗುವನ್ನು ಉಳಿಸುವಂತೆ ಮನವಿ ಮಾಡಿದ್ದಾಳೆ ಎನ್ನಲಾಗಿದೆ.