ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲಾಸ್‌ ವೇಗಾಸ್‌ನಲ್ಲಿ ನಡೆದ ACBSP ವಾರ್ಷಿಕ ಜಾಗತಿಕ ಸಮ್ಮೇಳನ: 2025ರಲ್ಲಿ ಭಾರತಕ್ಕೆ ಶೈಕ್ಷಣಿಕ ನಾಯಕತ್ವದ ಬಲ

ಜಾಗತಿಕ ಸಮ್ಮೇಳನವು ಗುಣಮಟ್ಟದ ಮಾನದಂಡಗಳನ್ನು ಮುಂದುವರಿಸುವುದು, ಜಾಗತಿಕ ಸಹ ಯೋಗ ಮತ್ತು ವ್ಯವಹಾರ ಶಿಕ್ಷಣದಲ್ಲಿ ನಾವೀನ್ಯತೆ ಕುರಿತು ಸಂವಾದಕ್ಕೆ ವೇದಿಕೆಯಾಗಿ ಕಾರ್ಯನಿರ್ವ ಹಿಸಿತು. ಸಮ್ಮೇಳನವು ಶೈಕ್ಷಣಿಕ ಶ್ರೇಷ್ಠತೆ, ಮಾನ್ಯತೆ – ಮಹತ್ವ, ಮಾನದಂಡಗಳು ಮತ್ತು ವಿಧಾನಗಳು, ನಾಯಕತ್ವ, ತಂತ್ರಜ್ಞಾನ-ಚಾಲಿತ ಪರಿವರ್ತನೆ ಮತ್ತು ವ್ಯವಹಾರ ಶಿಕ್ಷಣದಲ್ಲಿ ಸುಸ್ಥಿರ ಅಭ್ಯಾಸಗಳ ಕುರಿತು ಪ್ರಮುಖ ಅಧಿವೇಶನಗಳನ್ನು ಒಳಗೊಂಡಿತ್ತು.

ಲಾಸ್‌ ವೇಗಾಸ್‌ನಲ್ಲಿ ACBSP ವಾರ್ಷಿಕ ಜಾಗತಿಕ ಸಮ್ಮೇಳನ

Profile Ashok Nayak Jul 2, 2025 10:31 PM

ಅಮೆರಿಕದ ಲಾಸ್‌ ವೇಗಾಸ್‌ನಲ್ಲಿ ಜೂನ್‌ 18 ರಿಂದ ಜೂನ್‌ 21, 2025 ರವರೆಗೆ ನಡೆದ ವ್ಯಾಪಾರ ಶಾಲೆಗಳು ಮತ್ತು ಕಾರ್ಯಕ್ರಮಗಳ ಮಾನ್ಯತೆ ಮಂಡಳಿಯ (ಅಕ್ಕ್ರೆಡಿಟೇಷನ್‌ ಕೌನ್ಸಿಲ್‌ ಫಾರ್‌ ಬಿಸಿನೆಸ್‌ ಸ್ಕೂಲ್ಸ್‌ ಅಂಡ್‌ ಪ್ರೋಗ್ರಾಮ್ಸ್‌ - ACBSP) ವಾರ್ಷಿಕ ಜಾಗತಿಕ ಸಮ್ಮೇಳನವು ಜಗತ್ತಿ ನಾದ್ಯಂತ ACBSP ಯ 11 ಪ್ರದೇಶಗಳ ಶೈಕ್ಷಣಿಕ ನಾಯಕರು ಮತ್ತು ಸಂಸ್ಥೆಗಳ ಸಕ್ರಿಯ ಭಾಗವಹಿಸುವಿಕೆಗೆ ಸಾಕ್ಷಿಯಾಯಿತು. ಸಮ್ಮೇಳನದ ವಿಷಯ “ಗಡಿಯುದ್ದಕ್ಕೂ ಸೇತುವೆಗಳು: ಶೈಕ್ಷಣಿಕ ಮತ್ತು ವೃತ್ತಿಪರ ಯಶಸ್ಸಿಗೆ ಸಹಯೋಗದ ಕಾರ್ಯತಂತ್ರಗಳು” ಆಗಿತ್ತು.

ಜಾಗತಿಕ ಸಮ್ಮೇಳನವು ಗುಣಮಟ್ಟದ ಮಾನದಂಡಗಳನ್ನು ಮುಂದುವರಿಸುವುದು, ಜಾಗತಿಕ ಸಹಯೋಗ ಮತ್ತು ವ್ಯವಹಾರ ಶಿಕ್ಷಣದಲ್ಲಿ ನಾವೀನ್ಯತೆ ಕುರಿತು ಸಂವಾದಕ್ಕೆ ವೇದಿಕೆಯಾಗಿ ಕಾರ್ಯನಿರ್ವಹಿಸಿತು. ಸಮ್ಮೇಳನವು ಶೈಕ್ಷಣಿಕ ಶ್ರೇಷ್ಠತೆ, ಮಾನ್ಯತೆ – ಮಹತ್ವ, ಮಾನದಂಡಗಳು ಮತ್ತು ವಿಧಾನಗಳು, ನಾಯಕತ್ವ, ತಂತ್ರಜ್ಞಾನ-ಚಾಲಿತ ಪರಿವರ್ತನೆ ಮತ್ತು ವ್ಯವಹಾರ ಶಿಕ್ಷಣದಲ್ಲಿ ಸುಸ್ಥಿರ ಅಭ್ಯಾಸಗಳ ಕುರಿತು ಪ್ರಮುಖ ಅಧಿವೇಶನಗಳನ್ನು ಒಳಗೊಂಡಿತ್ತು.

ಈ ಪ್ರತಿಷ್ಠಿತ ವೇದಿಕೆಯಲ್ಲಿ ಮುಂಬೈನ ಪ್ರಿನ್ಸಿಪಲ್‌ ಎಲ್.‌ ಎನ್.‌ ವೆಲಿಂಗ್ಕರ್‌ ಇನ್ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌ ಡೆವೆಲಪ್‌ಮೆಂಟ್‌ ಅಂಡ್‌ ರಿಸರ್ಚ್‌ (ವೀಸ್ಕೂಲ್)‌ ನ ಗ್ರೂಪ್‌ ಡೈರೆಕ್ಟರ್‌ ಪ್ರೊ. ಡಾ. ಉದಯ್‌ ಸಾಳುಂಖೆ ಅವರು ಭಾರತ, ಕಾಂಬೋಡಿಯಾ, ವಿಯೆಟ್ನಾಂ, ಬರ್ಮಾ, ನೇಪಾಳ, ಥೈಲ್ಯಾಂಡ್‌, ಮಲೇಷ್ಯಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಸಿಂಗಾಪುರ ಸೇರಿದಂತೆ 16 ದೇಶಗಳ ಸದಸ್ಯ ಸಂಸ್ಥೆಗಳನ್ನು ಒಳಗೊಂಡ ಪ್ರದೇಶ-10 ರ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿ ದ್ದಾರೆ.

ಇದನ್ನೂ ಓದಿ: Roopa Gururaj Column: ಸಂತೋಷವಾಗಿರಲು ಏನು ಮಾಡಬೇಕು ?

ಪ್ರೊ.ಸಾಳುಂಖೆ ಅವರ ಆಯ್ಕೆಯು ಜಾಗತಿಕ ಶಿಕ್ಷಣ ಪರಿಸರ ವ್ಯವಸ್ಥೆಯಲ್ಲಿ ಭಾರತದ ಬೆಳೆಯು ತ್ತಿರುವ ಶೈಕ್ಷಣಿಕ ನಾಯಕತ್ವ ಮತ್ತು ನಿರ್ವಹಣಾ ಶಿಕ್ಷಣದಲ್ಲಿನ ಶ್ರೇಷ್ಠತೆಗೆ ಅವರು ಹೊಂದಿರುವ ದೀರ್ಘಕಾಲದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಇದು ಅಂತರರಾಷ್ಟ್ರೀಯ ಶಿಕ್ಷಣ ಪಾಲುದಾರಿಕೆ ಗಳು ಮತ್ತು ಮಾನ್ಯತೆ ಉಪಕ್ರಮಗಳಿಗೆ ಭಾರತವನ್ನು ಪ್ರಮುಖ ತಾಣವನ್ನಾಗಿ ಮಾಡಲು ನಡೆಯುತ್ತಿರುವ ಪ್ರಯತ್ನಗಳೊಂದಿಗೆ ಹೊಂದಿಕೆಯಾಗುತ್ತದೆ.

ತಮ್ಮ ಸ್ವೀಕಾರ ಭಾಷಣದಲ್ಲಿ ಪ್ರೊ. ಡಾ. ಸಾಲುಂಖೆ ಅವರು ಪ್ರದೇಶ 10 ರಲ್ಲಿರುವ ಸಂಸ್ಥೆಗಳ ಭಾಗವಹಿಸುವಿಕೆ ಮತ್ತು ಸಹಯೋಗವನ್ನು ವಿಸ್ತರಿಸುವ ಸಲುವಾಗಿ ತಮಗಿರುವ ಬದ್ಧತೆಯ ಬಗ್ಗೆ ಒತ್ತಿ ಹೇಳಿದರು ಮತ್ತು ಪ್ರದೇಶ 10 ರ ಉಪಕ್ರಮಗಳನ್ನು ಮುನ್ನಡೆಸಲು ಭಾರತಕ್ಕೆ ನೀಡಲಾದ ಅವಕಾಶವನ್ನು ಸ್ವೀಕರಿಸಿದರು. ಸಮ್ಮೇಳನದಲ್ಲಿ ಅವರು “ದಿ ACBSP-AIMS ಸ್ಟ್ರಾಟೆಜಿಕ್‌ ಕೊಲ್ಲಾಬ ರೇಶನ್‌ ಟ್ರಾನ್ಸ್‌ಫಾರ್ಮಿಂಗ್‌ ಗ್ಲೋಬಲ್‌ ಬಿಸಿನೆಸ್‌ ಎಜುಕೇಶನ್”‌ ಎಂಬ ಶೀರ್ಷಿಕೆಯ ಅಧಿವೇಶನ ವನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿ ಶ್ರೀ. ಮೋದಿಯವರು ಜನಪ್ರಿಯಗೊಳಿಸಿದ ಮಹಾ ಉಪನಿಷತ್‌ನಂತಹ ಪ್ರಾಚೀನ ಭಾರತೀಯ ಪಠ್ಯಗಳಲ್ಲಿ ಉಲ್ಲೇಖಿಸಲಾದ ವಸುದೈವ ಕುಟುಂಬಕಮ್ (वसुदैव कुटुंबकम) ‌ ಪರಿಕಲ್ಪನೆಯ ಬಗ್ಗೆ ಮತ್ತು ಅದು ಭಾರತವನ್ನು ವಿಶ್ವ ಗುರುವಾಗಿ (विश्व गुरु) ಪರಿವರ್ತಿಸುವ ಮತ್ತು ಜಗತ್ತಿಗೆ ಮಾನವ ಬಂಡವಾಳವನ್ನು ಒದಗಿಸಲು ಹೇಗೆ ಸೂಕ್ತ ಸ್ಥಾನದಲ್ಲಿದೆ ಎಂಬುದರ ಬಗ್ಗೆ ಅವರು ವಿವರಿಸಿದರು. ಅಂತರರಾಷ್ಟ್ರೀಯ ಸಂಸ್ಥೆಗಳೊಂದಿ ಗಿನ ಸಹಯೋಗವು ಭಾರತವು ತನ್ನ ಸರಿಯಾದ ಸ್ಥಾನವನ್ನು ಪಡೆದುಕೊಳ್ಳುವುದನ್ನು ಸಾಧಿಸಲು ಮತ್ತು ಮಹಾರಾಷ್ಟ್ರ ರಾಜ್ಯಕ್ಕೂ ಗೋಚರತೆಯನ್ನು ಒದಗಿಸಲು ಸಹಾಯ ಮಾಡುತ್ತದೆ.

ಇದಲ್ಲದೆ, ಪ್ರೊ. ಡಾ. ಉದಯ್‌ ಸಾಲುಂಖೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿ ಫಡ್ನವೀಸ್‌ ಅವರ ಬಲವಾದ ನಾಯಕತ್ವ ಮತ್ತು ಉಪಕ್ರಮದ ಬಗ್ಗೆ ಉಲ್ಲೇಖಿಸುತ್ತಾ ಇತ್ತೀಚಿನ “ಮುಂಬೈ ರೈಸಿಂಗ್:‌ ಅಂತರರಾಷ್ಟ್ರೀಯ ಶಿಕ್ಷಣ ನಗರವನ್ನು ರಚಿಸುವುದು” ಕಾರ್ಯಕ್ರಮವನ್ನು ಕಲಿಕೆ ಮತ್ತು ನಾವೀನ್ಯತೆಗಾಗಿ ಜಾಗತಿಕ ಕೇಂದ್ರವಾಗಬೇಕೆಂಬ ಭಾರತದ ಆಕಾಂಕ್ಷೆಯೊಂದಿಗೆ ಹೊಂದಿಕೆ ಯಾಗುವ ಒಂದು ಸ್ಮರಣೀಯ ಉಪಕ್ರಮ ಎಂದು ಹೇಳಿದರು.

ಹೊಸದಾಗಿ ಸೇರ್ಪಡೆಗೊಂಡಿರುವ ತಮ್ಮ ಪಾತ್ರದಲ್ಲಿ, ಪ್ರೊ.ಡಾ.ಸಾಲುಂಖೆ ಅವರು ಅಂತರ ರಾಷ್ಟ್ರೀಯ ಮಾನದಂಡಗಳೊಂದಿಗೆ ಪ್ರದೇಶದ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಮತ್ತು ದಕ್ಷಿಣ ಏಷ್ಯಾದ ಒಳಗೆ ಮತ್ತು ಅದರಾಚೆಗೆ ಆಳವಾದ ಸಹಯೋಗಗಳನ್ನು ಬೆಳೆಸಲು ಸಹಾಯ ಮಾಡುತ್ತಾರೆ. ಕೈಗಾರಿಕೆ ಮತ್ತು ಶಿಕ್ಷಣ ನೀತಿಯಲ್ಲಿ ವ್ಯಾಪಕ ಅನುಭವವನ್ನು ಹೊಂದಿರುವುದರ ಜೊತೆಗೆ ಶೈಕ್ಷಣಿಕ ಶ್ರೇಷ್ಠತೆ ಮತ್ತು ನಾಯಕತ್ವ ಅಭಿವೃದ್ಧಿಯ ಬೆಂಬಲಿಸುವ ಪ್ರೊ. ಡಾ. ಉದಯ್‌ ಸಾಲುಂಖೆ ಅವರ ACBSP – ಪ್ರದೇಶ 10 ರ ಅಧ್ಯಕ್ಷತೆಯು ಅವರ ಒಳನೋಟಗಳು, ಭಾರತ, ಪ್ರದೇಶ 10 ದೇಶಗಳು ಮತ್ತು ಅದರಾಚೆಗಿನ ನಿರ್ವಹಣಾ ಶಿಕ್ಷಣದ ಭವಿಷ್ಯದ ಕುರಿತು ಚರ್ಚೆಗಳನ್ನು ರೂಪಿಸುತ್ತವೆ.

ತನ್ನ ಮೂಲ ತತ್ವಶಾಸ್ತ್ರಕ್ಕೆ ಅನುಗುಣವಾಗಿ, ACBSP ವಾರ್ಷಿಕ ಜಾಗತಿಕ ಸಮ್ಮೇಳನ 2025 ವಿಶ್ವಾ ದ್ಯಂತ ತನ್ನ ಸದಸ್ಯ ಸಂಸ್ಥೆಗಳಲ್ಲಿ ನಿರಂತರ ಸುಧಾರಣೆ, ತೊಡಗಿಕೊಳ್ಳುವಿಕೆ ಮತ್ತು ಶೈಕ್ಷಣಿಕ ಶ್ರೇಷ್ಠತೆಗೆ ತಾನು ಹೊಂದಿರುವ ಬದ್ಧತೆಯನ್ನು ಪುನರುಚ್ಚರಿಸಿದೆ.

ಈ ಸಂದರ್ಭದಲ್ಲಿ ACBSP ಪ್ರದೇಶ 10 ರ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ, ಪ್ರೊ. ಡಾ. ಉದಯ್‌ ಸಾಳುಂಖೆ ಅವರು, “ಇಂದಿನ ಕ್ರಿಯಾತ್ಮಕ ಶಿಕ್ಷಣ ಲ್ಯಾಂಡ್‌ಸ್ಕೇಪ್‌ (ಚಿತ್ರಣ) ಅನ್ನು ಮುನ್ನಡೆಸುವಲ್ಲಿ ಬೆಳವಣಿಗೆಯ ಮನಸ್ಥಿತಿ, ಸಾಂಸ್ಥಿಕ ಚುರುಕುತನ ಮತ್ತು ಸ್ಪಷ್ಟವಾದ ದೃಷ್ಟಿ ಅತ್ಯಗತ್ಯವಾಗಿದೆ. ACBSP ಪ್ರದೇಶ 10 ರ ಅಧ್ಯಕ್ಷರಾಗಿ, ನಾವೀನ್ಯತೆಯನ್ನು ಬೆಳೆಸಲು, ಗುಣಮಟ್ಟದ ಮಾನದಂಡಗಳನ್ನು ಎತ್ತಿ ಹಿಡಿಯಲು ಮತ್ತು ಜಾಗತಿಕ ವ್ಯಾಪಾರ ಶಿಕ್ಷಣಕ್ಕೆ ನಮ್ಮ ಪ್ರದೇಶವನ್ನು ಪ್ರಮುಖ ಕೊಡುಗೆದಾರರನ್ನಾಗಿ ಮಾಡಲು ದಕ್ಷಿಣ ಏಷ್ಯಾದ್ಯಂತ ಗೆಳೆಯರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ. ವ್ಯಾಪಾರ ಶಿಕ್ಷಣದಲ್ಲಿ ನಾವೀನ್ಯತೆ, ತೊಡಗಿಕೊಳ್ಳು ವಿಕೆ ಮತ್ತು ಹಂಚಿಕೊಂಡ ಕಲಿಕೆಯನ್ನು ಬೆಂಬಲಿಸಲು ಸಂಸ್ಥೆಗಳಾದ್ಯಂತ ಸೇತುವೆಗಳನ್ನು ನಿರ್ಮಿಸುವಲ್ಲಿ ನಾನು ಹೆಚ್ಚಿನ ಸಾಮರ್ಥ್ಯವನ್ನು ನೋಡುತ್ತಿದ್ದೇನೆ” ಎಂದು ಹೇಳಿದರು.

ACBSP ಬಗ್ಗೆ: ವ್ಯಾಪಾರ ಶಾಲೆಗಳು ಮತ್ತು ಕಾರ್ಯಕ್ರಮಗಳಿಗಾಗಿ ಮಾನ್ಯತೆ ಮಂಡಳಿಯು (ACBSP) ವ್ಯಾಪಾರ ಶಿಕ್ಷಕರ ಜಾಗತಿಕ ಸಮುದಾಯ ಮತ್ತು ಜಾಗತಿಕ ಮಾನ್ಯತೆ ನೀಡುವ ಸಂಸ್ಥೆಯಾಗಿದ್ದು, ವಿವಿಧ ಹಂತಗಳಲ್ಲಿ ವ್ಯಾಪಾರ ಶಿಕ್ಷಣ ಕಾರ್ಯಕ್ರಮಗಳ ಮೇಲೆ ಗಮನವನ್ನು ಹರಿಸುತ್ತದೆ. 1200+ ಕ್ಕೂ ಹೆಚ್ಚು ಸದಸ್ಯ ಕ್ಯಾಂಪಸ್‌ಗಳನ್ನು ಹೊಂದಿರುವ 60 ದೇಶಗಳಲ್ಲಿ ತನ್ನ ಉಪಸ್ಥಿತಿಯೊಂದಿಗೆ ACBSP ನಿರಂತರ ಸುಧಾರಣೆಯನ್ನು ಉತ್ತೇಜಿಸುವ ಮತ್ತು ವ್ಯವಹಾರ ಶಿಕ್ಷಣದಲ್ಲಿ ಶ್ರೇಷ್ಠತೆಯನ್ನು ಗುರುತಿಸುವ ಗುರಿಯನ್ನು ಹೊಂದಿದೆ.