Chikkanayakanahalli News: ನವೋದಯ ಪದವಿ ಕಾಲೇಜಿನಲ್ಲಿ ಸಮಾರೋಪ ಸಮಾರಂಭ: ವಿದ್ಯಾರ್ಥಿಗಳ ಬೆಳವಣಿಗೆಗೆ ಜ್ಞಾನ ಅಗತ್ಯ - ಶ್ರೀ ಬಿ.ಕೆ. ಚಂದ್ರಶೇಖರ್
ತಮ್ಮ ಓದುತ್ತಿರುವ ವಿಭಾಗದ ಬಗ್ಗೆ ಯಾರೂ ಕೀಳರಿಮೆ ಬೆಳೆಸಿಕೊಳ್ಳದೆ, ತಮ್ಮ ಕಾರ್ಯಕ್ಷೇತ್ರದಲ್ಲಿ ಶ್ರಮ ಮತ್ತು ಏಕಾಗ್ರತೆಯಿಂದ ಮುಂದುವರೆಯಬೇಕು ಎಂದು ಶ್ರೀ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳು ಸದಾ ಹೊಸ ಆಲೋಚನೆಗಳನ್ನು ರೂಢಿಸಿಕೊಂಡರೆ, ಭವಿಷ್ಯದಲ್ಲಿ ಉತ್ತಮ ಗುರಿ ತಲುಪಲು ಸಾಧ್ಯ


ಚಿಕ್ಕನಾಯಕನಹಳ್ಳಿ : ಪದವಿ ವಿದ್ಯಾರ್ಥಿಗಳ ಬೆಳವಣಿಗೆಗೆ ಜ್ಞಾನ ಅತ್ಯಂತ ಮುಖ್ಯ ಎಂದು ನವೋದಯ ವಿದ್ಯಾ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಬಿ.ಕೆ. ಚಂದ್ರಶೇಖರ್ ಅವರು ಅಭಿಪ್ರಾ ಯಪಟ್ಟರು. ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಸಮಾರೋಪ ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಮಾಜದಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ಯಿಂದ ಹೆಜ್ಜೆ ಇಟ್ಟಾಗ ಮಾತ್ರ ಕಲಿಕೆಗೆ ನಿಜವಾದ ಅರ್ಥ ದೊರೆಯುತ್ತದೆ ಎಂದರು.
ತಮ್ಮ ಓದುತ್ತಿರುವ ವಿಭಾಗದ ಬಗ್ಗೆ ಯಾರೂ ಕೀಳರಿಮೆ ಬೆಳೆಸಿಕೊಳ್ಳದೆ, ತಮ್ಮ ಕಾರ್ಯಕ್ಷೇತ್ರದಲ್ಲಿ ಶ್ರಮ ಮತ್ತು ಏಕಾಗ್ರತೆಯಿಂದ ಮುಂದುವರೆಯಬೇಕು ಎಂದು ಶ್ರೀ ಚಂದ್ರಶೇಖರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ವಿದ್ಯಾರ್ಥಿಗಳು ಸದಾ ಹೊಸ ಆಲೋಚನೆಗಳನ್ನು ರೂಢಿಸಿಕೊಂಡರೆ, ಭವಿಷ್ಯದಲ್ಲಿ ಉತ್ತಮ ಗುರಿ ತಲುಪಲು ಸಾಧ್ಯ. ಕೇವಲ ವಿದ್ಯಾವಂತರಾದರೆ ಸಾಲದು, ಪ್ರಜ್ಞಾವಂತರಾದಾಗ ಮಾತ್ರ ಸಮಾಜಕ್ಕೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಸಮಾರೋಪ ನುಡಿಗಳನ್ನು ಆಡಿದ ತುರುವೇಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾದ ಪ್ರೊ. ಎಸ್.ಎಲ್. ವಿಜಯಕುಮಾರ್ ಮಾತನಾಡಿ, ನವೋದಯ ವಿದ್ಯಾ ಸಂಸ್ಥೆಯು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಇದು ಕೇವಲ ಶಿಕ್ಷಣವನ್ನು ಮಾತ್ರವಲ್ಲದೆ, ಉತ್ತಮ ಮೌಲ್ಯಗಳನ್ನು ಕಲಿಸಿ ಸಮಾಜಕ್ಕೆ ಉತ್ತಮ ಪ್ರಜೆಗಳನ್ನು ರೂಪಿಸುತ್ತಿದೆ ಎಂದು ಶ್ಲಾಘಿಸಿದರು.
ಇದನ್ನೂ ಓದಿ: Chikkaballapur News: ಕೋಟೆ ಬಾಲಕಿಯರ ಶಾಲೆಯಲ್ಲಿ ಸಾರ್ವತ್ರಿಕ ಚುನಾವಣೆಯಂತೆ ಮಕ್ಕಳ ಸಂಸತ್ ಚುನಾವಣೆ
ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಅತ್ಯಂತ ಅವಶ್ಯಕವಾಗಿದ್ದು, ಇವು ನಿಮ್ಮ ಮನಸ್ಸನ್ನು ಉತ್ತಮ ದಾರಿಯತ್ತ ಕೊಂಡೊಯ್ಯಲು ಸಹಕಾರಿ. ಉತ್ತಮ ನಾಯಕತ್ವ ಬೆಳೆ ಸಲು ಎನ್‌ಎಸ್‌ಎಸ್ ಸಹಕಾರಿ ಆಗಿದ್ದು, ಪ್ರತಿಯೊಬ್ಬರೂ ಅದರಲ್ಲಿ ಭಾಗಿಯಾಗಿ ಬೆಳೆಯ ಬೇಕು. ಅಲ್ಲದೆ, ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ಕೊಟ್ಟಾಗ ಕಲಿತ ವಿದ್ಯೆ ಸಾರ್ಥಕವಾಗುತ್ತದೆ, ಆಗ ಮಾತ್ರ ಉತ್ತಮ ಪ್ರಜೆಯಾಗಲು ಸಾಧ್ಯ ಎಂದರು. ವಿದ್ಯಾರ್ಥಿಗಳು ಸಮಾಜದಲ್ಲಿನ ಬಡತನ ಮತ್ತು ಹೋರಾಟದ ನೆಲೆಗಳನ್ನು ಅರ್ಥ ಮಾಡಿಕೊಂಡು ಹೆಜ್ಜೆ ಇಟ್ಟಾಗ ಗುರಿ ತಲುಪಲು ಸಾಧ್ಯ. ತಾವು ಓದಿದ ಕಾಲೇಜಿಗೆ ಸದಾ ಋಣಿಯಾಗಿರಿ. ಹೆತ್ತ ತಾಯಿಯ ಋಣ, ಓದಿಸಿದ ಗುರುವಿನ ಋಣ ಎಂದಿಗೂ ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ಬಹುಮಾನ ವಿತರಿಸಿ ಮಾತನಾಡಿದ ವಿದ್ಯಾ ಸಂಸ್ಥೆಯ ಖಜಾಂಚಿಗಳಾದ ಎನ್.ಎನ್. ಶ್ರೀಧರ್ ಅವರು, ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿ ಯೋಚಿಸಬೇಕು. ಕಲೆ ಮತ್ತು ವಿಜ್ಞಾನ ಒಂದೇ ರೂಪವಾಗಿದ್ದು, ಉತ್ತಮ ಭಾಷಾ ಜ್ಞಾನವನ್ನು ಬೆಳೆಸಿಕೊಂಡು ಸಮಾಜದಲ್ಲಿ ಹೆಜ್ಜೆ ಇಟ್ಟಾಗ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ನವೋದಯ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್. ಮೋಹನ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆಗೆ ಸಂಸ್ಕಾರ ಮುಖ್ಯ. ಈ ಸಂಸ್ಥೆ ಅಂತಹ ಕಾರ್ಯವನ್ನು ಮಾಡುತ್ತಿದೆ ಎಂದರು. ಕಾತ್ರಿಕೇಹಾಳ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಿ.ಶಿವರುದ್ರಯ್ಯ ಮಾತನಾಡಿ, ನವೋದಯ ಕಾಲೇಜು ಗ್ರಾಮೀಣ ಭಾಗದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಬೇಕು ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಡಾ. ರವಿಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ನವೋದಯದ ಬೆಳವಣಿಗೆಗೆ ವಿದ್ಯಾರ್ಥಿಗಳೇ ರಾಯಭಾರಿಗಳು ಎಂದು ಅವರು ಹೇಳಿದರು. ಕುಮಾರಿ ಚಂದ್ರಿಕಾ ಕಾರ್ಯಕ್ರಮ ನಿರೂಪಿಸಿದರೆ, ಬೇಬಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೊ. ಸದಾನಂದ ಸ್ವಾಮಿ, ವಿದ್ಯಾ. ಸಿದ್ದಲಿಂಗಮೂರ್ತಿ ಹಾಗೂ ಸಿಬ್ಬಂದಿಗಳಿದ್ದರು.