ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Terrorist Attack: ಅಲ್ ಖೈದಾ ಉಗ್ರರ ಮೇಲೆ ಡೆಡ್ಲಿ ಅಟ್ಯಾಕ್‌; 3 ಭಾರತೀಯರ ಕಿಡ್ನ್ಯಾಪ್‌

ಪಶ್ಚಿಮ ಆಫ್ರಿಕಾದ ದೇಶದ ವಿವಿಧ ಭಾಗಗಳಲ್ಲಿ ಸರಣಿ ಭಯೋತ್ಪಾದಕ ದಾಳಿಗಳು ನಡೆಯುತ್ತಿವೆ. ಇದೀಗ ಮಾಲಿಯಲ್ಲಿ ಮೂವರು ಭಾರತೀಯ ಪ್ರಜೆಗಳನ್ನು ಉಗ್ರರು ಅಪಹರಿಸಿದ್ದಾರೆ. ಅಪಹರಣದ ಬಗ್ಗೆ ಭಾರತ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತೀಯರನ್ನು ಅಪಹರಿಸಿದ ಒಂದು ದಿನದ ನಂತರ, ನವದೆಹಲಿ ಬುಧವಾರ ಮಾಲಿ ಸರ್ಕಾರವನ್ನು ಅವರ "ಸುರಕ್ಷಿತ ಮತ್ತು ತ್ವರಿತ" ಬಿಡುಗಡೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿತು.

ಅಲ್ ಖೈದಾ ಅಂಗಸಂಸ್ಥೆಯಿಂದ 3 ಭಾರತೀಯರ ಅಪಹರಣ

Profile Vishakha Bhat Jul 3, 2025 8:43 AM

ಮಾಲಿ: ಪಶ್ಚಿಮ ಆಫ್ರಿಕಾದ ದೇಶದ ವಿವಿಧ ಭಾಗಗಳಲ್ಲಿ ಸರಣಿ ಭಯೋತ್ಪಾದಕ ದಾಳಿಗಳು (Terrorist Attack) ನಡೆಯುತ್ತಿವೆ. ಇದೀಗ ಮಾಲಿಯಲ್ಲಿ ಮೂವರು ಭಾರತೀಯ ಪ್ರಜೆಗಳನ್ನು ಉಗ್ರರು ಅಪಹರಿಸಿದ್ದಾರೆ. ಅಪಹರಣದ ಬಗ್ಗೆ ಭಾರತ ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತೀಯರನ್ನು ಅಪಹರಿಸಿದ ಒಂದು ದಿನದ ನಂತರ, ನವದೆಹಲಿ ಬುಧವಾರ ಮಾಲಿ ಸರ್ಕಾರವನ್ನು ಅವರ "ಸುರಕ್ಷಿತ ಮತ್ತು ತ್ವರಿತ" ಬಿಡುಗಡೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿತು.

ಕೇಯ್ಸ್‌ನಲ್ಲಿರುವ ಡೈಮಂಡ್ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರ ಅಪಹರಣದ ಬಗ್ಗೆ ವಿದೇಶಾಂಗ ಸಚಿವಾಲಯ (MEA) ತನ್ನ ತೀವ್ರ ಕಳವಳ ವ್ಯಕ್ತಪಡಿಸಿದೆ. ಜುಲೈ 1 ರಂದು ಈ ಘಟನೆ ನಡೆದಿದ್ದು, ಶಸ್ತ್ರಸಜ್ಜಿತ ದಾಳಿಕೋರರ ಗುಂಪೊಂದು ಕಾರ್ಖಾನೆ ಆವರಣದಲ್ಲಿ ಭಯೋತ್ಪಾದಕ ದಾಳಿ ನಡೆಸಿ ಮೂವರು ಭಾರತೀಯ ಪ್ರಜೆಗಳನ್ನು ಬಲವಂತವಾಗಿ ಒತ್ತೆಯಾಳುಗಳಾಗಿ ಇರಿಸಿಕೊಂಡಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.

ಮಾಲಿಯಾದ್ಯಂತ ಮಂಗಳವಾರ ನಡೆದ ಭಯೋತ್ಪಾದಕ ದಾಳಿಗಳ ಹೊಣೆಯನ್ನು ಅಲ್-ಖೈದಾ ಅಂಗಸಂಸ್ಥೆ ಜಮಾತ್ ನುಸ್ರತ್ ಅಲ್-ಇಸ್ಲಾಂ ವಾಲ್-ಮುಸ್ಲಿಮಿನ್ (ಜೆಎನ್‌ಐಎಂ) ಹೊತ್ತುಕೊಂಡಿದೆ. ಬಮಾಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸಂಬಂಧಿತ ಅಧಿಕಾರಿಗಳು, ಸ್ಥಳೀಯ ಕಾನೂನು ಜಾರಿ ಸಂಸ್ಥೆಗಳು ಹಾಗೂ ಡೈಮಂಡ್ ಸಿಮೆಂಟ್ ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ನಿಕಟ ಮತ್ತು ನಿರಂತರ ಸಂವಹನದಲ್ಲಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: ಕೆನಡಾದಲ್ಲಿ ಬಿಷ್ಣೋಯ್ ಗ್ಯಾಂಗ್‌ಗೆ ಶೀಘ್ರದಲ್ಲೇ ಭಯೋತ್ಪಾದಕ ಸಂಘಟನೆ ಪಟ್ಟ?

ಸಚಿವಾಲಯದ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಮತ್ತು ಭಾರತೀಯ ಪ್ರಜೆಗಳ ಸುರಕ್ಷಿತ ಬಿಡುಗಡೆಗೆ ಅನುಕೂಲವಾಗುವಂತೆ ವಿವಿಧ ಹಂತಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಾಲಿಯಲ್ಲಿ ವಾಸಿಸುತ್ತಿರುವ ಎಲ್ಲಾ ಭಾರತೀಯರು ಅತ್ಯಂತ ಜಾಗರೂಕರಾಗಿರಿ. ಅಗತ್ಯ ಸಹಾಯಕ್ಕಾಗಿ ಬಮಾಕೊದಲ್ಲಿರುವ ರಾಯಭಾರ ಕಚೇರಿಯೊಂದಿಗೆ ನಿಕಟ ಸಂಪರ್ಕದಲ್ಲಿರಿ ಎಂದು ವಿದೇಶಾಂಗ ಸಚಿವಾಲಯ ಸಲಹೆ ನೀಡಿದೆ. ಸಚಿವಾಲಯವು ಭಾರತೀಯರಿಗೆ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುವುದಾಗಿ ಮತ್ತು "ಅಪಹರಣಕ್ಕೊಳಗಾದ ಭಾರತೀಯ ಪ್ರಜೆಗಳ ಸುರಕ್ಷಿತ ಮರಳುವಿಕೆಯನ್ನು ಆದಷ್ಟು ಬೇಗ ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ" ಎಂದು ತಿಳಿಸಿದೆ.