ಶುಭಮನ್ ಗಿಲ್ ಶತಕ ಸಿಡಿಸಿದರೂ ಈ ಒಂದು ಕಾರಣಕ್ಕೆ ಬೇಸರ ಹೊರ ಹಾಕಿದ ನಾಸರ್ ಹುಸೇನ್!
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಶುಭಮನ್ ಗಿಲ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವ ಬಗ್ಗೆ ಇಂಗ್ಲೆಂಡ್ ಮಾಜಿ ನಾಯಕ ನಾಸರ್ ಹುಸೇನ್ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಬೇಕೆಂದು ಅವರು ಸಲಹೆ ನೀಡಿದ್ದಾರೆ. ಇದೀಗ ನಾಲ್ಕನೇ ಕ್ರಮಾಂಕದಲ್ಲಿ ಎರಡು ಶತಕ ಸಿಡಿಸುವ ಮೂಲಕ ಭರ್ಜರಿ ಆರಂಭ ಪಡೆದಿದ್ದಾರೆ.

ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಆಡಬೇಕೆಂದ ನಾಸರ್ ಹುಸೇನ್.

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ವಿರುದ್ಧ ಪ್ರಸ್ತುತ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ(IND vs ENG) ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿರುವ ಬಗ್ಗೆ ಆಂಗ್ಲರ ಮಾಜಿ ನಾಯಕ ನಾಸರ್ ಹುಸೇನ್ (Nasser Hussain) ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಅವರು ಮೂರನೇ ಕ್ರಮಾಂಕದಲ್ಲಿಯೇ ಮುಂದುವರಿಯಬೇಕಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಂದ ಹಾಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಮೂರು ಇನಿಂಗ್ಸ್‌ಗಳಿಂದ ಗಿಲ್ ಎರಡು ಶತಕಗಳನ್ನು ಬಾರಿಸಿದ್ದಾರೆ. ಆ ಮೂಲಕ ನಾಲ್ಕನೇ ಕ್ರಮಾಂಕದಲ್ಲಿ ಅವರು ಶುಭಾರಂಭ ಕಂಡಿದ್ದಾರೆ.
ಚೇತೇಶ್ವರ್ ಪೂಜಾರ ಭಾರತ ತಂಡದಿಂದ ಹೊರಬಿದ್ದ ಬಳಿಕ ಶುಭಮನ್ ಗಿಲ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸಲಾಗಿತ್ತು. ಆದರೆ, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶುಭಮನ್ ಗಿಲ್‌ಗೆ ಟೆಸ್ಟ್ ನಾಯಕತ್ವ ನೀಡುವ ಜೊತೆಗೆ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಲಾಗುತ್ತಿದೆ. ಅದರಂತೆ ಅವರು ಎರಡು ಶತಕಗಳನ್ನು ಬಾರಿಸುವ ಮೂಲಕ ಅವರು ನಾಲ್ಕನೇ ಕ್ರಮಾಂಕದಲ್ಲಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಲೀಡ್ಸ್ ಟೆಸ್ಟ್ ಪ್ರಥಮ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಇವರು, ಇದೀಗ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿಯೂ ಅಜೇಯ ಶತಕ ಬಾರಿಸಿದ್ದಾರೆ.
IND vs ENG: ʻಎಜ್‌ಬಾಸ್ಟನ್ ಸ್ಟೇಡಿಯಂ ಬೌಂಡರಿ ಚಿಕ್ಕದುʼ-ಸ್ಟೀವನ್ ಫಿನ್ ಆರೋಪ!
ನಾಲ್ಕನೇ ಕ್ರಮಾಂಕದಲ್ಲಿ ಶುಭಮನ್ ಗಿಲ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಹೊರತಾಗಿಯೂ ನಾಸರ್ ಹುಸೇನ್ ಅವರು ಟೀಮ್ ಇಂಡಿಯಾ ನಾಯಕ ಮೂರನೇ ಕ್ರಮಾಂಕದಲ್ಲಿ ಮುಂದುವರಿಯಬೇಕಿತ್ತು ಎಂದು ಆಗ್ರಹಿಸಿದ್ದಾರೆ. ಮೂರನೇ ಕ್ರಮಾಂಕ ಗಿಲ್‌ಗೆ ಸ್ವಾಭವಿಕವಾಗಿ ಸೂಕ್ತವಾಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಕೆಲ ಆಟಗಾರರು ಬ್ಯಾಟಿಂಗ್ ಕ್ರಮಾಂಕಕ್ಕೆ ಸ್ವಾಭವಿಕವಾಗಿದ್ದಾರೆ ಅದರಂತೆ ಶುಭಮನ್ ಗಿಲ್ ಕೂಎ ಸ್ವಾಭವಿಕವಾಗಿ ಮೂರನೇ ಕ್ರಮಾಂಕಕ್ಕೆ ಸೂಕ್ತರಾಗಲಿದ್ದಾರೆ," ಎಂದು ನಾಸರ್ ಹುಸೇನ್ ಸ್ಕೈ ಸ್ಪೋರ್ಟ್ಸ್‌ನಲ್ಲಿ ಮಾತನಾಡುವಾಗ ಈ ರೀತಿ ತಿಳಿಸಿದ್ದಾರೆ.
IND vs ENG: ಕುಲ್ದೀಪ್ ಯಾದವ್‌ರನ್ನು ಆಯ್ಕೆ ಮಾಡದ ಬಗ್ಗೆ ಸುನೀಲ್ ಗವಾಸ್ಕರ್ ಅಸಮಾಧಾನ!
"ಶುಭಮನ್ ಗಿಲ್ ಈಗ ಏನು ಮಾಡುತ್ತಿದ್ದಾರೆ, ಜೋ ರೂಟ್ ಅವರು ಇಂಗ್ಲೆಂಡ್ ತಂಡದ ಪರ ಆಡಿದ್ದಾರೆ. ಜೋ ರೂಟ್ ಅವರನ್ನು ಬಿಟ್ಟರೆ ಮೂರನೇ ಕ್ರಮಾಂಕದಲ್ಲಿ ಆಡಬಲ್ಲ ಆಟಗಾರರು ಕಡಿಮೆ ಇದ್ದಾರೆಂದು ನಾನು ಭಾವಿಸುತ್ತೇನೆ. ನಾಲ್ಕನೇ ಕ್ರಮಾಂಕದಲ್ಲಿ ಆಡಬಲ್ಲ ಅತ್ಯುತ್ತಮ ಆಟಗಾರರು ಇದ್ದಾರೆ. ಆದರೆ, ನನ್ನ ಪ್ರಕಾರ ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಆಡಬೇಕು. ಇವರಿಗೆ ಈಗಾಗಲೇ ನಾಯಕತ್ವದ ಒತ್ತಡವಿದೆ. ಅದರಲ್ಲಿಯೂ ತವರಿನ ಹೊರಗಡೆ ಅಂಗಣದಲ್ಲಿ ಚೆಂಡು ಸ್ವಲ್ಪ ಒಳಗಡೆ ಬರುತ್ತದೆ ಹಾಗೂ ಇನ್ನೂ ಕೆಲ ಸಮಯ ಚೆಂಡು ಹೊರಗಡೆ ಹೋಗುತ್ತದೆ. ಈ ಒತ್ತಡದ ನಡುವೆ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ," ಎಂದು ಇಂಗ್ಲೆಂಡ್ ಮಾಜಿ ನಾಯಕ ಹೇಳಿದ್ದಾರೆ.
ದೊಡ್ಡ ಮೊತ್ತದತ್ತ ಭಾರತ ತಂಡ
ಬುಧವಾರ ಆರಂಭಗೊಂಡಿದ್ದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಶುಭಮನ್ ಗಿಲ್ ಶತಕ ಹಾಗೂ ಯಶಸ್ವಿ ಜೈಸ್ವಾ,ಲ್ ಅರ್ಧಶತಕದ ಬಲದಿಂದ 85 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 310 ರನ್ ಗಳನ್ನು ಕಲೆ ಹಾಕಿದೆ. ಎರಡನೇ ದಿನದಾಟದಲ್ಲಿ ಗಿಲ್ ಹಾಗೂ ರವೀಂದ್ರ ಜಡೇಜಾ (41 ರನ್) ಮುಂದುವರಿಯಲಿದ್ದಾರೆ.