ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Physical Assault: ಕೋಲ್ಕತ್ತಾ ಅತ್ಯಾಚಾರ ಆರೋಪಿ ಮನೋಜಿತ್ ಮಿಶ್ರಾ ವಕೀಲ ಸದಸ್ಯತ್ವ ರದ್ದು

ಕಾನೂನು ವಿಶ್ವವಿದ್ಯಾಲಯದ ಅತ್ಯಾಚಾರ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಮನೋಜಿತ್‌ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು, ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್ ಬುಧವಾರ ಮನೋಜಿತ್ ಮಿಶ್ರಾ ಪರವಾನಗಿಯನ್ನು ರದ್ದುಗೊಳಿಸಿ, ಆತ ವಕೀಲರಾಗಿ ಅಭ್ಯಾಸ ಮಾಡುವುದನ್ನು ನಿಷೇಧಿಸಿದೆ.

ಅತ್ಯಾಚಾರ ಆರೋಪಿ ಮನೋಜಿತ್ ಮಿಶ್ರಾ ವಕೀಲ ಸದಸ್ಯತ್ವ ರದ್ದು

Profile Vishakha Bhat Jul 3, 2025 3:01 PM

ಕೊಲ್ಕತ್ತಾ: ಕಾನೂನು ವಿಶ್ವವಿದ್ಯಾಲಯದ ಅತ್ಯಾಚಾರ (Physical Assault) ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ. ಮನೋಜಿತ್‌ ಮಿಶ್ರಾ ಪ್ರಮುಖ ಆರೋಪಿಯಾಗಿದ್ದು, ಪಶ್ಚಿಮ ಬಂಗಾಳ ಬಾರ್ ಕೌನ್ಸಿಲ್ ಬುಧವಾರ ಮನೋಜಿತ್ ಮಿಶ್ರಾ ಪರವಾನಗಿಯನ್ನು ರದ್ದುಗೊಳಿಸಿ, ಆತ ವಕೀಲರಾಗಿ ಅಭ್ಯಾಸ ಮಾಡುವುದನ್ನು ನಿಷೇಧಿಸಿದೆ. ಘಟನೆಯ ಕುರಿತು ಔಪಚಾರಿಕ ದೂರು ಸ್ವೀಕರಿಸಿದ ಏಳು ದಿನಗಳ ನಂತರ ಬಾರ್ ಕೌನ್ಸಿಲ್ ಕ್ರಮ ಕೈಗೊಂಡಿತು. ಜುಲೈ 2 ರಂದು ನಡೆದ ಬಂಗಾಳ ಬಾರ್ ಕೌನ್ಸಿಲ್ ಸಭೆಯ ನಂತರ, ಮಿಶ್ರಾ ಹೆಸರನ್ನು ವಕೀಲರ ಪಟ್ಟಿಯಿಂದ ತೆಗೆದುಹಾಕಲಾಗುವುದು ಮತ್ತು ನಿರ್ಧಾರವನ್ನು ಕೇಂದ್ರ ಬಾರ್ ಕೌನ್ಸಿಲ್‌ಗೆ ತಿಳಿಸಲಾಗುವುದು ಎಂದು ನಿರ್ಧರಿಸಲಾಯಿತು.

ದಕ್ಷಿಣ ಕೋಲ್ಕತ್ತಾ ಕಾನೂನು ಕಾಲೇಜಿನಲ್ಲಿ ನಡೆದ ಅತ್ಯಾಚಾರ ಪ್ರಕರಣವು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಗುಪ್ತಚರ ಇಲಾಖೆಯ ನೆರವಿನೊಂದಿಗೆ ಕೋಲ್ಕತ್ತಾ ಪೊಲೀಸರ ವಿಶೇಷ ತನಿಖಾ ತಂಡ (SIT) ಈ ಬಗ್ಗೆ ಸಮಗ್ರ ತನಿಖೆ ನಡೆಸಿದೆ. ಘಟನೆಗೆ ಸಂಬಂಧಿಸಿದಂತೆ ಮಿಶ್ರಾ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಹೆಚ್ಚುವರಿಯಾಗಿ, ಪ್ರಕರಣವನ್ನು ಕೋಲ್ಕತ್ತಾ ಪೊಲೀಸರ ಪತ್ತೇದಾರಿ ಇಲಾಖೆ ವಹಿಸಿಕೊಂಡಿದೆ.

ಮಿಶ್ರಾ ತೃಣಮೂಲ ಕಾಂಗ್ರೆಸ್ ವಿದ್ಯಾರ್ಥಿ ಪರಿಷತ್ತಿನಲ್ಲಿ (TMCP) ಪ್ರಮುಖ ಹುದ್ದೆಯನ್ನು ಹೊಂದಿದ್ದ. ಅಲಿಪೋರ್ ನ್ಯಾಯಾಲಯದಲ್ಲಿ ವಕೀಲರಾಗಿ ಅಭ್ಯಾಸ ಮಾಡುತ್ತಿದ್ದ. ಬಾರ್ ಕೌನ್ಸಿಲ್‌ನ ನಿರ್ಧಾರವನ್ನು ಈ ದುಷ್ಕೃತ್ಯದ ವಿರುದ್ಧ ಬಲವಾದ ನಿಲುವು ಎಂದು ಹೇಳಿದೆ. ಮಿಶ್ರಾ ಇನ್ನು ಮುಂದೆ ರಾಜ್ಯದ ಯಾವುದೇ ನ್ಯಾಯಾಲಯದಲ್ಲಿ ಕಕ್ಷಿದಾರರನ್ನು ಪ್ರತಿನಿಧಿಸಲು ಸಾಧ್ಯವಾಗುವುದಿಲ್ಲ. ಇದಕ್ಕೂ ಮೊದಲು ಮಂಗಳವಾರ, ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜಿನ ಆಡಳಿತ ಮಂಡಳಿಯು ಮೊನೊಜಿತ್ ಮಿಶ್ರಾನನ್ನು ತಾತ್ಕಾಲಿಕ ಹುದ್ದೆಯಿಂದ ಹೊರಹಾಕಿತ್ತು ಮತ್ತು ಇಬ್ಬರೂ ವಿದ್ಯಾರ್ಥಿಗಳನ್ನು ಸಹ ಕಾಲೇಜಿನಿಂದ ಹೊರಹಾಕಲಾಗಿತ್ತು.

ಈ ಸುದ್ದಿಯನ್ನೂ ಓದಿ: Physical Assault: ಇದು ಅತ್ಯಾಚಾರವಲ್ಲ, ಆರೋಪಿ ಕತ್ತಲ್ಲಿದೆ ಲವ್‌ ಬೈಟ್ಸ್‌; ಹೊಸ ಬಾಂಬ್‌ ಸಿಡಿಸಿದ ಮೋನೋಜಿತ್ ಪರ ವಕೀಲ

ಹಿರಿಯ ವಿದ್ಯಾರ್ಥಿನಿಯೊಬ್ಬರು ಮೊನೊಜಿತ್ ಮಿಶ್ರಾ ಬಗೆಗಿನ ಭಯಾನಕ ಕೃತ್ಯಗಳನ್ನು ವಿವರಿಸಿದ್ದಾರೆ. ಆತನ ಬಗ್ಗೆ ಎಷ್ಟು ಭಯ ಇತ್ತೆಂದರೆ ಆತ ಎದುರಾಗುತ್ತಾನೆ ಎನ್ನುವ ಕಾರಣಕ್ಕೆ ಹಲವು ವಿದ್ಯಾರ್ಥಿನಿಯರು ಕೆಲವು ತರಗತಿಗಳನ್ನು ತಪ್ಪಿಸಿಕೊಳ್ಳುತ್ತಿದ್ದರಂತೆ. ಇದೇ ಕಾಲೇಜಿನಲ್ಲಿ ಕಲಿತಿದ್ದ 31 ವರ್ಷದ ಮಿಶ್ರಾ ಕೆಲವು ಸಮಯಗಳ ಹಿಂದೆ ಗುತ್ತಿಗೆ ಉದ್ಯೋಗಿಯಾಗಿ ಮರಳಿದ್ದ. "ಕ್ಯಾಂಪಸ್‌ನಲ್ಲಿ ಬೆದರಿಕೆಯ ವಾತಾವರಣವಿತ್ತು. ಆತ ವಿದ್ಯಾರ್ಥಿನಿಯರ ಫೋಟೊಗಳನ್ನು ಕ್ಲಿಕ್ಕಿಸಿ, ಅವುಗಳನ್ನು ಮಾರ್ಫ್ ಮಾಡಿ ವ್ಯಾಟ್ಸ್‌ಆ್ಯಪ್‌ ಗುಂಪುಗಳಿಗೆ ಶೇರ್‌ ಮಾಡುತ್ತಿದ್ದ. ಕೆಲವರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆತನ ಬಗ್ಗೆ ಭಯ ಎಷ್ಟಿತ್ತು ಎಂದರೆ ವಿದ್ಯಾರ್ಥಿನಿಯರು ತರಗತಿಗಳಿಗೆ ಹಾಜರಾಗಲು ಹೆದರುತ್ತಿದ್ದರು" ಎಂದು ಅವರು ವಿವರಿಸಿದ್ದಾರೆ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದೆ.