Gold House: ಇದು ಅಂತಿಂಥಾ ಮನೆಯಲ್ಲ... ಬಂಗಾರದ ಬಂಗಲೆ! ಭಾರೀ ವೈರಲಾಗ್ತಿದ್ದಂತೆ ಈ ವಿಡಿಯೊ
Gold House: ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಒಂದು ಮಹಲಿದ್ದು, ಈ ಮನೆಯಲ್ಲಿ ಅಪರೂಪದ ಐಷಾರಾಮಿ ಕಾರುಗಳ ಸಂಗ್ರಹವೂ ಇದೆ. ಸರ್ಕಾರಿ ಗುತ್ತಿಗೆದಾರ ಅನೂಪ್ ಅಗರ್ವಾಲ್ ಅವರು ಇದರ ಮಾಲೀಕರಾಗಿದ್ದಾರೆ. ಸಾರಸ್ವತ್ ಅನೂಪ್ ಅವರ ಅನುಮತಿ ಪಡೆದು ಈ ವಿಡಿಯೋ ಮಾಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬರೀ ಟೀಕೆಗೆ ಗ್ರಾಸವಾಗಿದೆ. ಅದಕ್ಕೆ ಕಾರಣ ಇಲ್ಲಿದೆ

ಚಿನ್ನದ ಮನೆ

ಇಂದೋರ್: ಭಾರತದಲ್ಲಿನ ವಿಶಿಷ್ಟ ಮನೆಗಳನ್ನು ಹೋಂ ಟೂರ್ ಮಾಡುವ ಮೂಲಕ ಹೆಸರುವಾಸಿಯಾಗಿರುವ ಇನ್‌ಸ್ಟಾಗ್ರಾಂ ಇನ್ಫ್ಲುಯೆನ್ಸರ್ ಪ್ರಿಯಮ್ ಸಾರಸ್ವತ್ (Priyam Saraswat) ಇತ್ತೀಚೆಗೆ ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿರುವ (Indore) ಒಂದು ಮಹಲಿಗೆ ಭೇಟಿ ನೀಡಿದ್ದರು. ಈ ಮನೆಯನ್ನು ಕಂಡು ಎಲ್ಲರು ಅಚ್ಚರಿಗೊಂಡಿದ್ದರು. ಅದಕ್ಕೂ ಕಾರಣ ಇದ್ದು, ಬಹುತೇಕ ಆ ಮನೆ 24 ಕ್ಯಾರೆಟ್ ಚಿನ್ನದಿಂದ (24 Carat Gold) ಈ ಮನೆಯನ್ನು ವಿನ್ಯಾಸಗೊಳಿಸಲಾಗಿದೆ. ಈ ವೀಡಿಯೊದಲ್ಲಿ ಮನೆಯಲ್ಲಿನ ಮೂಲೆ ಮೂಲೆಯನ್ನು ತೋರಿಸಿದ್ದು, ಗೋಡೆಗಳು, ಮನೆಯ ಹಾಲ್ ಮತ್ತು ಸ್ವಿಚ್‌ಬೋರ್ಡ್‌ಗಳನ್ನು ಸಹ ಚಿನ್ನದಿಂದ ಲೇಪಿಸಲಾಗಿರುವ ಕೊಠಡಿಗಳನ್ನು ಅವರು ತೋರಿಸಿದ್ದಾರೆ.
ಈ ಮನೆಯಲ್ಲಿ ಅಪರೂಪದ ಐಷಾರಾಮಿ ಕಾರುಗಳ ಸಂಗ್ರಹವೂ ಇದ್ದು, ಸರ್ಕಾರಿ ಗುತ್ತಿಗೆದಾರ ಅನೂಪ್ ಅಗರ್ವಾಲ್ ಅವರು ಇದರ ಮಾಲೀಕರಾಗಿದ್ದಾರೆ. ಸಾರಸ್ವತ್ ಅನೂಪ್ ಅವರ ಅನುಮತಿ ಪಡೆದು ಈ ವಿಡಿಯೋ ಮಾಡಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಬರೀ ಟೀಕೆಗೆ ಗ್ರಾಸವಾಗಿದೆ.
ಅಗರ್ವಾಲ್ ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ನೆಟ್ಟಿಗರು ಆರೋಪಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಸರಸ್ವತ್ ವಿಡಿಯೋವನ್ನು ಡಿಲೀಟ್ ಮಾಡಿದ್ದು, ಕೇರಳ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದೆ "ನಮ್ಮ ಹೆದ್ದಾರಿಗಳು ಕುಸಿಯುತ್ತಿವೆ, ಸೇತುವೆಗಳು ನದಿಗೆ ಬೀಳುತ್ತಿವೆ. ಇದಕ್ಕೆ ಉತ್ತರ ಇಲ್ಲಿದೆ. ಇಂದೋರ್‌ನ ಸರ್ಕಾರಿ ಗುತ್ತಿಗೆದಾರನ ಮನೆಯಲ್ಲಿ ಸ್ವಿಚ್‌ಗಳು ಚಿನ್ನದಿಂದ ಮಾಡಲ್ಪಟ್ಟಿವೆ. ಗೋಶಾಲೆ ನಿರ್ಮಿಸಿ ಇಡಿ ತಪಾಸಣೆಯಿಂದ ತಪ್ಪಿಸಿಕೊಂಡಿದ್ದಾರೆ" ಎಂದು ಕಿಡಿಕಾರಿದ್ದಾರೆ.
Why are our highways collapsing, bridges falling into the river?
— Congress Kerala (@INCKerala) June 30, 2025
Find the answers here. The Govt contractor from Indore has built a house where taps and switches are made of gold. He has ED proofed himself by building a Gau Shala in his house.
People who wanted to ED to raid… pic.twitter.com/lZ3rpkBYYg
ಈ ಸುದ್ದಿಯನ್ನೂ ಓದಿ: Viral Video: Viral Video: ಪುಣೆಗೆ ಹೊರಟಿದ್ದ ವಿಮಾನದಲ್ಲಿ ತಪ್ಪಿದ ದುರಂತ; ಗಾಳಿಗೆ ಹಾರಿ ಬಿದ್ದ ಕಿಟಕಿಯ ಚೌಕಟ್ಟು, ವಿಡಿಯೋ ನೋಡಿ
ಈ ವಿಡಿಯೋಗೆ ಹಲವರು ಕಮೆಂಟ್ ಮಾಡಿದ್ದು, ಈಗ ಇಡಿ, ಐಟಿ ಈ ಮನೆಯ ಮೇಲೆ ದಾಳಿ ನಡೆಸುತ್ತದೆಯೇ? ಎಂದು ಒಬ್ಬರು ಪ್ರಶ್ನಿಸಿದರೆ, ಕಠಿಣ ಕೆಲಸದಿಂದ 40 ಲಕ್ಷ ಗಳಿಸಿದ ಪಾನಿಪುರಿ ವ್ಯಾಪಾರಿಯ ಮೇಲೆ ಮಾತ್ರ ತನಿಖೆ ಎಂದು ಮತ್ತೊಬ್ಬರು ಕಿಡಿಕಾರಿದ್ದಾರೆ. "ಇಡಿ ಏಕೆ ಏನೂ ಮಾಡುತ್ತಿಲ್ಲ? ಈ ವ್ಯಕ್ತಿ ಮತ್ತು ಅವರ ಸಿಎಂ ಸಂಪರ್ಕಗಳನ್ನು ತಕ್ಷಣ ತನಿಖೆ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಆ ಗೋಶಾಲೆಯನ್ನು ಖಂಡಿತವಾಗಿಯೂ ವಿಡಿಯೋಗಾಗಿ ನಿರ್ಮಿಸಲಾಗಿದೆ, ಖಂಡಿತವಾಗಿಯೂ ತಾತ್ಕಾಲಿಕವಾದದ್ದು ಎಂದು ಮತ್ತೊಬ್ಬರು ಹೇಳಿದ್ದಾರೆ.
ಇನ್ನು ಈ ಮನೆಯಲ್ಲಿ ಗೋಶಾಲೆಯನ್ನು ಒಳಗೊಂಡಂತೆ ಅವರ ಗ್ಯಾರೇಜ್‌ನಲ್ಲಿ 1936ರ ವಿಂಟೇಜ್ ಮರ್ಸಿಡಿಸ್ ಸೇರಿ . ರೇಂಜ್ ರೋವರ್, ಬಿಎಂಡ್ಬ್ಯೂ ಸೇರಿ ಹಲವು ಐಷಾರಾಮಿ ಕಾರುಗಳ ಸಂಗ್ರಹವಿದ್ದು, ಅನೂಪ್ “ನಿಜವಾದ ಚಿನ್ನ” ಎಂದು ತಿಳಿಸಿದ್ದಾರೆ. ಅಲ್ಲದೇ ಇಂದೋರ್ ನಲ್ಲಿ ಯಾವುದೇ ಹೊಸ ಐಷಾರಾಮಿ ಕಾರು ಬಂದರೆ ಮೊದಲ ಕಾರು ಖರೀದಿಸುವ ಸಾಮರ್ಥ್ಯ ಈ ವ್ಯಕ್ತಿಗಿದೆ.