ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಗಣಿಗಾರಿಕೆ, ಅಕ್ರಮ ವಿರುದ್ಧ ಹೋರಾಟ ; ಮಂಚೇನಹಳ್ಳಿ ಬಂದ್ ಯಶಸ್ವಿ

ಮಂಚೇನಹಳ್ಳಿ ತಾಲ್ಲೂಕಿನ ವಿವಿದೆಡೆಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಅಕ್ರಮ ಕ್ವಾರಿಗಳಿಂದಾಗಿ ಸರ್ಕಾರಿ ಭೂಮಿ ಮತ್ತು ಪರಿಸರಕ್ಕೆ ಧಕ್ಕೆಯಾಗುತ್ತಿದೆ. ರೈತರ ಬದುಕಿಗೆ ಮಾರಕ ವಾಗುತ್ತಿದೆ ಎಂಬುದಾಗಿ ರೈತ ಸಂಘದ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದರು. ಪಟ್ಟಣದ ಗಣೇಶ ದೇವಾಲಯದ ಆವರಣದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖಂಡರು ಮಾತನಾಡಿದರು

ಅಕ್ರಮ ಗಣಿಗಾರಿಕೆ ಸಂಸ್ಕೃತಿಯ ಕಿತ್ತಸೆಯಲು ಜಿಲ್ಲಾಡಳಿತಕ್ಕೆ ಆಗ್ರಹ

ರೈತಸಂಘದ ಮುಖಂಡರು ಅಕ್ರಮಗಣಿಗಾರಿಕೆ ಸಂಸ್ಕೃತಿಯನ್ನು ಬೇರು ಸಮೇತ ಕಿತ್ತೆಸೆಯಬೇಕು ಎಂದು ಜಿಲ್ಲಾಡಳಿತ ಹಾಗೂ ಸರಕಾರವನ್ನು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರು.

Profile Ashok Nayak Apr 28, 2025 11:13 PM

ಮಂಚೇನಹಳ್ಳಿ ; ಜಿಲ್ಲೆಯಲ್ಲಿ ತಲೆಯೆತ್ತಿರುವ ಕಲ್ಲುಗಣಿಗಾರಿಕೆ,ಪರಿಣಾಮವಾಗಿ ನಡೆಯುತ್ತಿರುವ ರೌಡಿವರ್ತನೆಯನ್ನು ಬೇರುಸಹಿತ ಕಿತ್ತಸೆಯಬೇಕು. ಇಲ್ಲವಾದಲ್ಲಿ ರೈತಾಪಿ ವರ್ಗಕ್ಕೆ ಉಳಿಗಾಲ ವಿರುವುದಿಲ್ಲ ಎಂದು ರೈತಸಂಘದ ಮುಖಂಡರು ಜಿಲ್ಲಾಡಳಿತ ಮತ್ತು ಸರಕಾರವನ್ನು ಆಗ್ರಹಿಸಿ ದರು. ಪಟ್ಟಣದಲ್ಲಿ ಸೋಮವಾರ  ಕಲ್ಲು ಗಣಿಗಾರಿಕೆ ಮತ್ತು ಅಕ್ರಮದಾರಿ ವಿರೋಧಿ ಸಮಿತಿ ಯಿಂದ ನಡೆದ ಸ್ವಯಂ ಪ್ರೇರಿತ ಬಂದ್‌ಗೆ ಉದ್ದೇಶಿಸಿ ಮುಖಂಡರು ಮಾತನಾಡಿದರು.

ಬಂದ್‌ಗೆ ಬಾರೀ ಜನಬೆಂಬಲ ವ್ಯಕ್ತವಾಗಿತ್ತು. ಸಾರ್ವಜನಿಕರು, ರೈತರು, ಸರ್ವಪಕ್ಷಗಳ ಮುಖಂಡರು, ವರ್ತಕರು, ರೈತಸಂಘದ ಮುಖಂಡರು ಸಹಕರಿಸಿದ ಪರಿಣಾಮ ಮಂಚೇನಹಳ್ಳಿ ಬಂದ್ ಸಂಪೂ ರ್ಣ ಯಶಸ್ವಿಯಾಗಿದೆ. ಸ್ವಯಂ ಪ್ರೇರಿತ ಬಂದ್ ಕಾರಣವಾಗಿ ಮಂಚೇನಹಳ್ಳಿ ತಾಲೂಕು ಕೇಂದ್ರ ದಲ್ಲಿ ಎಲ್ಲಾ ಅಂಗಡಿ ಮುಂಗಟ್ಟೆಗಳನ್ನು ಮುಚ್ಚಲಾಗಿತ್ತು.

ಇದನ್ನೂ ಓದಿ: Chikkaballapur News: ಬಾಗೇಪಲ್ಲಿ ಕಾಶ್ಮೀರದ ಗುಂಡಿನ ದಾಳಿ; ಹುತಾತ್ಮರಿಗೆ ಶ್ರದ್ಧಾಂಜಲಿ

ಮಂಚೇನಹಳ್ಳಿ ತಾಲ್ಲೂಕಿನ ವಿವಿದೆಡೆಗಳಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ಮತ್ತು ಅಕ್ರಮ ಕ್ವಾರಿಗಳಿಂದಾಗಿ ಸರ್ಕಾರಿ ಭೂಮಿ ಮತ್ತು ಪರಿಸರಕ್ಕೆ ಧಕ್ಕೆಯಾಗುತ್ತಿದೆ. ರೈತರ ಬದುಕಿಗೆ ಮಾರಕವಾಗುತ್ತಿದೆ ಎಂಬುದಾಗಿ ರೈತ ಸಂಘದ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದರು. ಪಟ್ಟಣದ ಗಣೇಶ ದೇವಾಲಯದ ಆವರಣದಲ್ಲಿ ನಡೆದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮುಖಂಡರು ಮಾತನಾಡಿದರು.

ಏಪ್ರಿಲ್ ೨೩ ರಂದು ಮಂಚೇನಹಳ್ಳಿ ಸಮೀಪದ ಕನಗಾನಕೊಪ್ಪ ಗ್ರಾಮದ ಬಳಿ ಕಲ್ಲು ಗಣಿಗಾರಿಕೆ ಗಾಗಿ ಗಣಿ ಮಾಲೀಕರು ನಿರ್ಮಿಸುತ್ತಿದ್ದ ಅಕ್ರಮ ದಾರಿಯನ್ನು ತಡೆಯಲು ಮುಂದಾದ ರೈತರ ವಿರುದ್ಧ ಬಂದೂಕು ಬಳಸಿ ಗುಂಡು ಹಾರಿಸಿರುವವರ ವಿರುದ್ಧ ಕ್ರಮವಹಿಸಬೇಕು. ಕೂಡಲೇ ಅಧಿಕಾರಿಗಳು ಕಲ್ಲು ಗಣಿಗಾರಿಕೆಯ ಅನುಮತಿಯನ್ನು ರದ್ದು ಮಾಡುವಂತೆ ಆಗ್ರಹಿಸಿ ಶಾಂತ ರೀತಿಯಲ್ಲಿ ಹೋರಾಟ ಮಾಡಿದರು.

ಹೋರಾಟದಲ್ಲಿ ಹೋರಾಟಗಾರರಾದ ಆರ್.ಆಂಜನೇಯರೆಡ್ಡಿ, ಚಾಮರಸ ಮಾಲೀಪಾಟೀಲ್, ಅನಸೂಯಮ್ಮ, ಎಂ.ಆರ್.ಲಕ್ಷ್ಮಿನಾರಾಯಣ, ಜಿ.ವಿ.ಲೋಕೇಶ್ ಗೌಡ, ಸುಷ್ಮಾ ಶ್ರೀನಿವಾಸ್, ಪಿ.ಎನ್.ಪ್ರಕಾಶ್, ಜಿ.ವಿ.ಹನುಮೇಗೌಡ, ಸುಬ್ಬಾರೆಡ್ಡಿ, ಜಿ.ಆರ್.ರಾಜಶೇಖರ್, ಪಿ.ಎನ್.ಜಗನ್ನಾಥ್, ನಾರಾಯಣಸ್ವಾಮಿ, ಕೆ.ವಿ.ಹನುಮಪ್ಪರೆಡ್ಡಿ, ಸಂದೀಪರೆಡ್ಡಿ, ಎಚ್.ಸಿ.ನಾರಾಯಣಗೌಡ, ಕೆ.ಪ್ರಭಾ, ಸೇರಿದಂತೆ ಅನೇಕರು ಭಾಗಿಯಾಗಿದ್ದರು.