ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Book Release: ಮೇ 4ರಂದು ಬೆಂಗಳೂರಿನಲ್ಲಿ ʼಮೌಲ್ಯಗಳ ಸರದಾರ ಡಾ.ರಾಜ್‌ಕುಮಾರ್‌ʼ ಕೃತಿ ಲೋಕಾರ್ಪಣೆ

Book Release: ಸ್ನೇಹ ಬುಕ್‌ ಹೌಸ್‌ ಪ್ರಕಾಶನದ, ಹಿರಿಯ ಲೇಖಕ ಡಾ.ಕೆ.ನಟರಾಜ್‌ ರಚಿಸಿರುವ ʼಮೌಲ್ಯಗಳ ಸರದಾರ ಡಾ. ರಾಜ್‌ಕುಮಾರ್‌ʼ (ಡಾ. ರಾಜ್‌ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳು) ಕೃತಿಯ ಲೋಕಾರ್ಪಣೆ ಸಮಾರಂಭವನ್ನು ಬೆಂಗಳೂರು ನಗರದ ಎನ್‌.ಆರ್‌. ಕಾಲೋನಿಯಲ್ಲಿರುವ ಡಾ.ಸಿ. ಅಶ್ವತ್ಥ್‌ ಕಲಾಭವನದಲ್ಲಿ ಮೇ 4ರಂದು ಭಾನುವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ನಾಳೆ ಬೆಂಗಳೂರಿನಲ್ಲಿ ʼಮೌಲ್ಯಗಳ ಸರದಾರ ಡಾ.ರಾಜ್‌ಕುಮಾರ್‌ʼ ಕೃತಿ ಲೋಕಾರ್ಪಣೆ

Profile Siddalinga Swamy May 2, 2025 9:17 PM

ಬೆಂಗಳೂರು: ಸ್ನೇಹ ಬುಕ್‌ ಹೌಸ್‌ ಪ್ರಕಾಶನದ, ಹಿರಿಯ ಲೇಖಕ ಡಾ.ಕೆ. ನಟರಾಜ್‌ ರಚಿಸಿರುವ ʼಮೌಲ್ಯಗಳ ಸರದಾರ ಡಾ. ರಾಜ್‌ಕುಮಾರ್‌ʼ (ಡಾ. ರಾಜ್‌ ಚಿತ್ರಗಳಲ್ಲಿ ಸಾಮಾಜಿಕ ಮೌಲ್ಯಗಳು) ಕೃತಿಯ ಲೋಕಾರ್ಪಣೆ (Book Release) ಸಮಾರಂಭವನ್ನು ಬೆಂಗಳೂರು ನಗರದ ಎನ್‌.ಆರ್‌. ಕಾಲೋನಿಯಲ್ಲಿರುವ ಡಾ.ಸಿ. ಅಶ್ವತ್ಥ್‌ ಕಲಾಭವನದಲ್ಲಿ ಮೇ 4ರಂದು ಭಾನುವಾರ ಸಂಜೆ 5 ಗಂಟೆಗೆ ಏರ್ಪಡಿಸಲಾಗಿದೆ. ಸ್ನೇಹ ಬುಕ್‌ ಹೌಸ್‌ ಮತ್ತು ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್‌ ಅಭಿಮಾನಿ ಸಂಘಗಳ ಒಕ್ಕೂಟದ ಸಹಯೋಗದಲ್ಲಿ ಆಯೋಜಿಸಲಾಗಿದ್ದು, ನಾಡಿನ ಹಿರಿಯ ವಿದ್ವಾಂಸ ಡಾ. ಅರಳುಮಲ್ಲಿಗೆ ಪಾರ್ಥಸಾರಥಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ.

ಅಖಿಲ ಕರ್ನಾಟಕ ಡಾ. ರಾಜ್‌ಕುಮಾರ್‌ ಅಭಿಮಾನಿ ಸಂಘಗಳ ಒಕ್ಕೂಟದ ಗೌರವ ಅಧ್ಯಕ್ಷ ಎನ್‌.ಆರ್‌. ರಮೇಶ್‌ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಹೇಶ್‌ ಜೋಶಿ, ವರನಟ ಡಾ.ರಾಜ್‌ಕುಮಾರ್‌ ಅವರ ಪುತ್ರಿ ಪೂರ್ಣಿಮಾ ರಾಮ್‌ಕುಮಾರ್‌ ಪಾಲ್ಗೊಳ್ಳುವರು. ಲೇಖಕ ಡಾ.ಕೆ. ನಟರಾಜ್‌ ಉಪಸ್ಥಿತರಿರುವರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ, ಚಿಂತಕ ಶ್ರೀನಿವಾಸ್‌ ಕಪ್ಪಣ್ಣ, ಲೇಖಕರಾದ ಹಾಲುಜೇನು ರಾಮ್‌ಕುಮಾರ್‌, ಎಸ್‌.ಕೆ. ಉಮೇಶ್‌, ಹಿರಿಯ ಲೇಖಕ ಕೆ.ವಿ. ಲಕ್ಷ್ಮಣಮೂರ್ತಿ ಹಾಗೂ ರಂಗಸ್ವಾಮಿ ಎಚ್‌. ಅವರಿಗೆ ಮೌಲ್ಯಗಳ ಸರದಾರ ಡಾ.ರಾಜ್‌ಕುಮಾರ್‌ ಗೌರವ ಪುರಸ್ಕಾರ ನೀಡಿ, ಗೌರವಿಸಲಾಗುವುದು ಎಂದು ಪ್ರಕಾಶಕ ಕೆ.ಬಿ. ಪರಶಿವಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ | Union Bank Recruitment 2025: ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿದೆ 500 ಹುದ್ದೆ; ಹೀಗೆ ಅಪ್ಲೈ ಮಾಡಿ